Ind vs Aus 2nd ODI: ರೋಹಿತ್ ರಿಟರ್ನ್; ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆ ಸಾಧ್ಯತೆ!
Ind vs Aus 2nd ODI: ಇಂಡೋ- ಆಸಿಸ್ 2ನೇ ODI ಫೈಟ್ಗೆ ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಮೈದಾನ ಸಜ್ಜಾಗಿದೆ. ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದ್ದರೆ, ಮೆನ್-ಇನ್-ಬ್ಲೂಗೆ ತಿರುಗೇಟು ನೀಡಲು ಆಸ್ಟ್ರೇಲಿಯಾ ಪ್ಲಾನ್ ಹಾಕಿಕೊಂಡಿದೆ.
ಆಸ್ಟ್ರೇಲಿಯಾ (Australia) ವಿರುದ್ಧ ಮೊದಲ ಏಕದಿನದಲ್ಲಿ ರೋಚಕ ಗೆಲುವು ದಾಖಲಿಸಿದ್ದ ಭಾರತ ತಂಡ (Team India), 2ನೇ ಪಂದ್ಯದಲ್ಲೂ ಅದೇ ವಿಶ್ವಾಸದಲ್ಲಿ ಕಣಕ್ಕಿಳಿಯಲು ರೆಡಿಯಾಗಿದೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಭಾನುವಾರ (ಮಾರ್ಚ್ 19ರಂದು) ನಡೆಯುವ 2ನೇ ಏಕದಿನಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಗೆದ್ದು ಸರಣಿ ಜಯಿಸುವ ವಿಶ್ವಾಸದಲ್ಲಿ ಭಾರತ ಇದೆ.
ಟ್ರೆಂಡಿಂಗ್ ಸುದ್ದಿ
ಇಂಡೋ- ಆಸಿಸ್ 2ನೇ ODI ಫೈಟ್ಗೆ ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಮೈದಾನ ಸಜ್ಜಾಗಿದೆ. ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದ್ದರೆ, ಮೆನ್-ಇನ್-ಬ್ಲೂಗೆ ತಿರುಗೇಟು ನೀಡಲು ಆಸ್ಟ್ರೇಲಿಯಾ ಪ್ಲಾನ್ ಹಾಕಿಕೊಂಡಿದೆ. ಆಸಿಸ್ಗೆ ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿಯಲ್ಲೂ ಮುಖಭಂಗ ಮಾಡಲು ಸಜ್ಜಾಗಿರುವ ಮೆನ್ ಇನ್ ಬ್ಲೂ, ತಂಡದಲ್ಲಿ ಪ್ರಮುಖ ಬದಲಾವಣೆಗೂ ಮುಂದಾಗಿದೆ.
ರೋಹಿತ್ ರಿಟರ್ನ್, ಇಶಾನ್ಗೆ ಕೊಕ್!
ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ (Rohit Sharma) 2ನೇ ಏಕದಿನಕ್ಕೆ ಮರಳಿದ್ದಾರೆ. ಹಾಗಾಗಿ ರೋಹಿತ್ ಅಲಭ್ಯತೆಯಲ್ಲಿ ಅವಕಾಶ ಪಡೆದಿದ್ದ ಇಶಾನ್ ಕಿಶನ್ಗೆ (Ishan Kishan) ನಾಳೆಯ ಪಂದ್ಯದಲ್ಲಿ ಕೊಕ್ ನೀಡುವುದು ಖಚಿತ. ಮೊದಲ ಪಂದ್ಯದಲ್ಲಿ ಇಶಾನ್ 3 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದೀಗ ಹಿಟ್ಮ್ಯಾನ್ ರಿಟರ್ನ್ ಆಗಿದ್ದು, ಶುಭ್ಮನ್ ಗಿಲ್ (Shubman Gill) ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಸೂರ್ಯಕುಮಾರ್ಗೆ ಟೆಸ್ಟಿಂಗ್ ಟೈಮ್.!
ಟಿ20 ಕ್ರಿಕೆಟ್ನಲ್ಲಿ ರನ್ ಪರ್ವ ಸೃಷ್ಟಿಸಿರುವ ಸೂರ್ಯಕುಮಾರ್ (Suryakumar Yadav), ಏಕದಿನದಲ್ಲಿ ಮಾತ್ರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಅವಕಾಶ ಪಡೆದ ಸೂರ್ಯ, ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ಗೆ ಬಲಿಯಾದ್ರು. ಏಕದಿನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕು ಅಂದರೆ ರನ್ ಮಳೆ ಹರಿಸಲೇಬೇಕು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಶಾರ್ದೂಲ್ ಜಾಗಕ್ಕೆ ಅಕ್ಷರ್ ಸಾಧ್ಯತೆ?
ಆಲ್ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಅವರನ್ನು 2ನೇ ಏಕದಿನ ಪಂದ್ಯದಲ್ಲಿ ಕೊಕ್ ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲರಾದ ಶಾರ್ದೂಲ್, ಜಾಗಕ್ಕೆ ಭರ್ಜರಿ ಫಾರ್ಮ್ನಲ್ಲಿರುವ ಅಕ್ಷರ್ ಪಟೇಲ್ (Axar Patel) ಅವರನ್ನು ಕರೆ ತರುವ ಪ್ಲಾನ್ ಹಾಕಿಕೊಂಡಿದೆ ಟೀಮ್ ಮ್ಯಾನೇಜ್ಮೆಂಟ್. ಜೊತೆ ಶಮಿ ಮತ್ತು ಸಿರಾಜ್ ಖಡಕ್ ಬೌಲಿಂಗ್ ತಂಡದ ಬಲ ಹೆಚ್ಚಿಸಿದರೆ, ಕುಲ್ದೀಪ್ ಯಾದವ್ ದುಬಾರಿ ಬೌಲಿಂಗ್ ಹಿನ್ನಡೆ ಕಾರಣವಾಗಿತ್ತು. ಕುಲ್ದೀಪ್ ಸ್ಥಾನಕ್ಕೆ ಯಜುವೇಂದ್ರ ಚಹಲ್ ಅಥವಾ ಡೆತ್ ಓವರ್ಗಳಲ್ಲಿ ಬೌಲಿಂಗ್ ಬಲ ಹೆಚ್ಚಿಸಲು ಮತ್ತೊಬ್ಬ ವೇಗಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ.
ಸತತ 8ನೇ ಸರಣಿ ಮೇಲೆ ಕಣ್ಣು
2ನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕರಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾನುವಾರ ಕೂಡ ಪಂದ್ಯ ಗೆದ್ದರೆ ತವರಿನಲ್ಲಿ ಸತತ 8 ಏಕದಿನ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತ ಏಕದಿನ ಸರಣಿ ಸೋತಿತ್ತು.
ಭಾರತ ಏಕದಿನ ತಂಡ:
ಶುಭಮನ್ ಗಿಲ್, ರೋಹಿತ್ ಶರ್ಮಾ (ನಾಯಕ) ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕತ್.