ಕನ್ನಡ ಸುದ್ದಿ  /  Sports  /  India And Pakistan To Clash On August 28 In Asia Cup

Asia Cup 2022: ಆಗಸ್ಟ್‌ 28ರಂದು ಇಂಡೋ ಪಾಕ್‌ ಕದನ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಆಗಸ್ಟ್‌ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಕಳೆದ ಬಾರಿ ನಡೆದ ವಿಶ್ವಕಪ್‌ ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತ ಸೋತಿದ್ದು, ಇದಕ್ಕೆ ಸೇಡು ತೀರಿಸಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

ಇಂಡೋ-ಪಾಕ್‌ ಕದನಕ್ಕೆ ಕ್ಷಣಗಣನೆ
ಇಂಡೋ-ಪಾಕ್‌ ಕದನಕ್ಕೆ ಕ್ಷಣಗಣನೆ

ಏಷ್ಯಾಕಪ್‌ಗೆ ದಿನಗಣನೆ ಆರಂಭವಾಗಿದೆ. 15ನೇ ಆವೃತ್ತಿಯ ಏಷ್ಯಾಕಪ್‌ ವೇಳಾಪಟ್ಟಿ ಪ್ರಕಟಗೊಂಡಿದ್ದು, ಆಗಸ್ಟ್ 27ರಿಂದ ಪಂದ್ಯ ಆರಂಭಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಈ ಬಾರಿಯ ಪಂದ್ಯಗಳಿಗೆ ಶ್ರಿಲಂಕಾ ಆತಿಥ್ಯ ನೀಡಬೇಕಿತ್ತು. ಆದರೆ ದೇಶದಲ್ಲಿ ಎದುರಾಗಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ, ಅಲ್ಲಿ ನಡೆಯಬೇಕಾಗಿರುವ ಪಂದ್ಯಗಳು ಅರಬ್‌ ರಾಷ್ಟ್ರಗಳಿಗೆ ಶಿಫ್ಟ್‌ ಆಗಿದೆ. ಪಂದ್ಯಗಳು ಯುಎಇಯಲ್ಲಿ ನಡೆದರೂ, ಇದಕ್ಕೆ ಅತಿಥೇಯ ರಾಷ್ಟ್ರ ಶ್ರೀಲಂಕವೇ.

ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಪಂದ್ಯ ದುಬೈನಲ್ಲಿ ನಡೆಯಲಿದೆ. ಇದರ ನಂತರ ಆಗಸ್ಟ್‌ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಎಂದಿನಂತೆ ಈ ಪಂದ್ಯ ವಿಶ್ವದ ಗಮನಸೆಳೆಯಲಿದ್ದು, ಬದ್ಧವೈರಿಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕಳೆದ ಬಾರಿ ನಡೆದ ವಿಶ್ವಕಪ್‌ ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತ ಸೋತಿದ್ದು, ಇದಕ್ಕೆ ಸೇಡು ತೀರಿಸಲು ಭಾರತ ಎದುರು ನೋಡುತ್ತಿದೆ.

ಫೈನಲ್ ಪಂದ್ಯ ಸೇರಿದಂತೆ ಒಟ್ಟು ಹದಿಮೂರು ಪಂದ್ಯಗಳಲ್ಲಿ ಹತ್ತು ಪಂದ್ಯಗಳು ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಳಿದ ಮೂರು ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿದೆ.

ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡವು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಬಿ ಗುಂಪಿನಲ್ಲಿದೆ. ಪ್ರತಿ ಗುಂಪಿನ ಅಗ್ರ-ಎರಡು ತಂಡಗಳು 'ಸೂಪರ್ 4' ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಎರಡನೇ ಸುತ್ತಿನಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ.

ಒಟ್ಟು ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬಿ ಗುಂಪಿನಲ್ಲಿದೆ. ಪ್ರತಿ ತಂಡವು ತನ್ನ ಗುಂಪಿನ ತಂಡದೊಂದಿಗೆ ತಲಾ ಒಂದು ಪಂದ್ಯಗಳಲ್ಲಿ ಆಡಲಿದೆ. ಯುಎಇ, ಕುವೈತ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ದೇಶಗಳು ಅರ್ಹತಾ ಸುತ್ತನ್ನು ಆಡಲಿದೆ. ಇದರಲ್ಲಿ ಅಗ್ರಸ್ಥಾನಿಯಾದ ಎರಡು ತಂಡಗಳು, ಭಾರತ ಇರುವ ಮೊದಲ ಗುಂಪನ್ನು ಸೇರಿಕೊಳ್ಳಲಿದೆ.

ವೇಳಾಪಟ್ಟಿ ಹೀಗಿದೆ

ಗುಂಪು ಎ:

ಆಗಸ್ಟ್ 28 (ದುಬೈ) -ಭಾರತ ಮತ್ತು ಪಾಕಿಸ್ತಾನ

ಆಗಸ್ಟ್ 31 (ದುಬೈ) -ಭಾರತ ಮತ್ತು ಕ್ವಾಲಿಫೈಯರ್

ಸೆಪ್ಟೆಂಬರ್‌ 2 (ಶಾರ್ಜಾ) -ಪಾಕಿಸ್ತಾನ ಮತ್ತು ಕ್ವಾಲಿಫೈಯರ್

ಗುಂಪು ಬಿ

27 ಆಗಸ್ಟ್ -ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ

ಆಗಸ್ಟ್ 30 (ಶಾರ್ಜಾ) -ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ

ಸೆಪ್ಟೆಂಬರ್ 1 (ದುಬೈ) -ಶ್ರೀಲಂಕಾ ಮತ್ತು ಬಾಂಗ್ಲಾದೇಶ

ಸೂಪರ್ 4:

B1 v B2: 3 ಸೆಪ್ಟೆಂಬರ್, ಶಾರ್ಜಾ

A1 v A2: 4 ಸೆಪ್ಟೆಂಬರ್, ದುಬೈ

A1 v B1: 6 ಸೆಪ್ಟೆಂಬರ್, ದುಬೈ

A2 v B2: 7 ಸೆಪ್ಟೆಂಬರ್, ದುಬೈ

A1 v B2: 8 ಸೆಪ್ಟೆಂಬರ್, ದುಬೈ

B1 v A2: 9 ಸೆಪ್ಟೆಂಬರ್, ದುಬೈ

ಫೈನಲ್‌ (ದುಬೈ) -ಸೆಪ್ಟೆಂಬರ್ 11

ಏಷ್ಯಾಕಪ್‌ಗೆ ಪಾಕಿಸ್ತಾನ ತಂಡ ಪ್ರಕಟ

ಬಾಬರ್ ಅಜಾಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್

ವಿಭಾಗ