ಕನ್ನಡ ಸುದ್ದಿ  /  Sports  /  India Create History With 100 Medals At Asian Para Games Hangzhou Dilip Mahadu Gavit Athleticss News In Kannada Jra

ಏಷ್ಯನ್‌ ಗೇಮ್ಸ್‌ ಬಳಿಕ ಪ್ಯಾರಾ ಗೇಮ್ಸ್‌ನಲ್ಲೂ ಶತಕ ಸಾಧನೆ; 100 ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

100 medals at Asian Para Games: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು 100 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಶತಕ ಸಾಧನೆ ಮಾಡಿರುವುದು ಇದೇ ಮೊದಲು.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ 100  ಪದಕಗಳನ್ನು ಗೆದ್ದಿದೆ
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ 100 ಪದಕಗಳನ್ನು ಗೆದ್ದಿದೆ

ಇತ್ತೀಚೆಗೆ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಶತಕ ಸಾಧನೆ ಮಾಡಿದ್ದರು. ಇದೀಗ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ (Asian Para Games) ಕೂಡಾ ಭಾರತೀಯ ಅಥ್ಲೀಟ್‌ಗಳು 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತದ ದಿಲೀಪ್ ಮಹಾದು ಗವಿತ್ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತವು ಪದಕ ಗಳಿಕೆಯಲ್ಲಿ ಶತಕ ಸಾಧನೆ ಮಾಡಿದೆ. ಅಲ್ಲದೆ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ಗವಿತ್ ಬಂಗಾರದ ಪದಕ ಗೆದ್ದಿದ್ದಾರೆ. ಅವರು 49.48 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಪ್ರತಿಷ್ಠಿತ ಚಿನ್ನ ಗೆದ್ದರು. ‌

ಇದುವರೆಗಿನ ಉನ್ನತ ಸಾಧನೆ

ಇದೇ ಮೊದಲ ಬಾರಿಗೆ ಭಾರತೀಯ ಪ್ಯಾರಾ ಅಥ್ಲೀಟ್‌ಗಳ ತಂಡವು 100 ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಹೀಗಾಗಿ ಇದು ಭಾರತದ ಅತ್ಯಂತ ಯಶಸ್ವಿ ಪ್ಯಾರಾ ಏಷ್ಯನ್ ಗೇಮ್ಸ್ ಅಭಿಯಾನ. ಭಾರತದ ಒಟ್ಟು ನೂರು ಪದಕ ಗಳಿಕೆಯಲ್ಲಿ 26 ಚಿನ್ನ, 29 ಬೆಳ್ಳಿ ಮತ್ತು 45 ಕಂಚಿನ ಪದಕಗಳು ಸೇರಿವೆ.

2018ರ ಪ್ಯಾರಾ ಗೇಮ್ಸ್‌ನಲ್ಲಿ 72 ಪದಕ

ಈ ಹಿಂದೆ ಜಕಾರ್ತದಲ್ಲಿ ನಡೆದ 2018ರ ಪ್ಯಾರಾ ಗೇಮ್ಸ್‌ನಲ್ಲಿ ಭಾರತವು ಈ ಹಿಂದಿನ ಶ್ರೇಷ್ಠ ಪದಕ ಸಾಧನೆ ಮಾಡಿತ್ತು. ಆಗ 15 ಚಿನ್ನ, 24 ಬೆಳ್ಳಿ ಹಾಗೂ 33 ಕಂಚು ಸೇರಿದಂತೆ ಒಟ್ಟು 72 ಪದಕಗಳನ್ನು ಗೆದ್ದಿತ್ತು. ಇದೀಗ ಆ ದಾಖಲೆಯನ್ನು ಮತ್ತೆ ಬ್ರೇಕ್‌ ಮಾಡಲಾಗಿದೆ.

ಭಾರತೀಯದ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

“ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳು. ಇದು ಅಪ್ರತಿಮ ಸಂತೋಷದ ಕ್ಷಣ. ಈ ಯಶಸ್ಸು ನಮ್ಮ ಕ್ರೀಡಾಪಟುಗಳ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪಕ್ಕೆ ಸಿಕ್ಕ ಪ್ರತಿಫಲ. ಈ ಗಮನಾರ್ಹ ಸಾಧನೆಯಿಂದ ನಮ್ಮ ಹೃದಯ ತುಂಬಿ ಬಂದಿದೆ. ನಮ್ಮ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರೊಂದಿಗೆ ಕೆಲಸ ಮಾಡುವ ಸಂಪೂರ್ಣ ಸಿಬ್ಬಂದಿಗೆ ನನ್ನ ಕೃತಜ್ಞತೆಗಳು. ಈ ವಿಜಯವು ನಮಗೆಲ್ಲರಿಗೂ ಸ್ಫೂರ್ತಿ ತುಂಬುತ್ತದೆ. ನಮ್ಮ ಯುವಕರಿಂದ ಯಾವುದೂ ಅಸಾಧ್ಯವಲ್ಲ ಎಂಬುದನ್ನು ನೆನಪಿಸುತ್ತವೆ” ಎಂದು ಪ್ರಧಾನಿ ಮೋದಿ ಎಕ್ಸ್‌ (ಟ್ವಿಟರ್‌) ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಐಎಎಸ್ ಅಧಿಕಾರಿ; ವೃತ್ತಿಪರ ಶಟ್ಲರ್ ಆಗಿದ್ದೇಗೆ ಸುಹಾಸ್ ಯತಿರಾಜ್?

ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಮತ್ತೊಂದು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅಕ್ಟೋಬರ್​ 27ರಂದು ನಡೆದ ಎಸ್‌ಎಲ್‌4 ವಿಭಾಗದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಪ್ರತಿಭಾವಂತ ಯತಿರಾಜ್‌ ಮಲೇಷ್ಯಾದ ಬುರ್ಹಾನುದ್ದೀನ್‌ ಮೊಹಮ್ಮದ್‌ ಅಮೀನ್‌ ಅವರನ್ನು 21-13, 18-21, 21-9 ಸೆಟ್‌ಗಳಿಂದ ಮಣಿಸಿದ್ದಾರೆ. ಯತಿರಾಜ್ ಅವರು ಉತ್ತರ ಪ್ರದೇಶ ಕೇಡರ್‌ನ 2007ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.