ಪ್ಯಾರಿಸ್ ಒಲಿಂಪಿಕ್ಸ್ 2024 ಪೂರ್ಣ ವೇಳಾಪಟ್ಟಿ; ಆಟಗಳ ಪಟ್ಟಿ, ದಿನಾಂಕ, ಸಮಯ, ಲೈವ್ ಸ್ಟ್ರೀಮಿಂಗ್ ವಿವರ
India Schedule Paris Olympics : ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟಕ್ಕೆ ಭಾರತ 117 ಸದಸ್ಯರ ಕ್ರೀಡಾಪಟುಗಳ (ಎಲ್ಲಾ ವಿಭಾಗಗಳ) ತಂಡವನ್ನು ಪ್ರಕಟಿಸಲಾಗಿದೆ. ಭಾರತವು ಭಾಗವಹಿಸಲಿರುವ ಎಲ್ಲಾ ವಿಭಾಗಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಚತುರ್ವಾರ್ಷಿಕ ಪಂದ್ಯಾವಳಿಗೆ ಜಗತ್ತೇ ಕಾತರದಿಂದ ಕಾಯುತ್ತಿದೆ. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI)ಜುಲೈ 17ರ ಬುಧವಾರ 117 ಸದಸ್ಯರ ಭಾರತೀಯ ಕ್ರೀಡಾಪಟುಗಳ ಹೆಸರನ್ನು ಪ್ರಕಟಿಸಿದೆ. ಕಳೆದ ಬಾರಿಯ ಕ್ರೀಡಾಕೂಟದಲ್ಲಿ ಏಳು ಪದಕ ಗೆದ್ದಿದ್ದ ಭಾರತ, ಈ ಬಾರಿ ಅವುಗಳ ಸಂಖ್ಯೆ ಹೆಚ್ಚಿಸಲು ಸಜ್ಜಾಗಿದೆ.
ನೀರಜ್ ಚೋಪ್ರಾ, ನಿಖತ್ ಜರೀನ್, ಸಿಫ್ಟ್ ಕೌರ್ ಸಮ್ರಾ ಈ ಮೆಗಾ ಈವೆಂಟ್‌ನಲ್ಲಿ ಕಾಣಿಸುವ ಅಸಾಧಾರಣ ಕ್ರೀಡಾಪಟುಗಳಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಸಂಪೂರ್ಣ ವೇಳಾಪಟ್ಟಿಯನ್ನು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಬಿಡುಗಡೆ ಮಾಡಿದೆ. ಕ್ರೀಡೆಗಳು ಮತ್ತು ದಿನಾಂಕ-ವಾರು ವಿಭಜಿಸಲಾದ ಪೂರ್ಣ ವೇಳಾಪಟ್ಟಿಯ ನೋಟ ಇಲ್ಲಿದೆ. ಉದ್ಘಾಟನಾ ಸಮಾರಂಭಕ್ಕೆ ಒಂದು ದಿನ ಮುನ್ನವೇ ಭಾರತ ಜುಲೈ 25ರಂದು ಅಭಿಯಾನ ಆರಂಭಿಸಲಿದೆ.
ಜುಲೈ 25ರಂದು ಆರ್ಚರಿಯಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ತಮ್ಮ ತಮ್ಮ ಶ್ರೇಯಾಂಕದ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ನಂತರ ಜುಲೈ 27ರ ಶನಿವಾರ ಭಾರತದ ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ, ರೋಯಿಂಗ್, ಶೂಟಿಂಗ್, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್ ತಂಡಗಳು ತಮ್ಮ ತಮ್ಮ ವಿಭಾಗಗಳಲ್ಲಿ ಕಣಕ್ಕಿಳಿಯಲಿವೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಯಾಣವು ಮಹಿಳಾ ಕುಸ್ತಿ ಪಂದ್ಯಗಳೊಂದಿಗೆ ಮುಕ್ತಾಯಗೊಳ್ಳುತ್ತದೆ. ಹೀಗಿದೆ ನೋಡಿ ಸಂಪೂರ್ಣ ವೇಳಾಪಟ್ಟಿ.
ಜುಲೈ 25, ಗುರುವಾರ
ಆರ್ಚರಿ – ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು (ಮಧ್ಯಾಹ್ನ 1ಕ್ಕೆ) ಮತ್ತು ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು
ಜುಲೈ 26, ಶುಕ್ರವಾರ
ಉದ್ಘಾಟನಾ ಸಮಾರಂಭ
ಜುಲೈ 27, ಶನಿವಾರ
ಹಾಕಿ - ಭಾರತ v ನ್ಯೂಜಿಲೆಂಡ್ (ರಾತ್ರಿ 9)
ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗುಂಪು ಹಂತ, ಮಹಿಳೆಯರ ಸಿಂಗಲ್ಸ್ ಗುಂಪು ಹಂತ, ಪುರುಷರ ಡಬಲ್ಸ್ ಗುಂಪು ಹಂತ, ಮಹಿಳೆಯರ ಡಬಲ್ಸ್ ಗುಂಪು ಹಂತ (ಮಧ್ಯಾಹ್ನ 12:50ರ ನಂತರ)
ಬಾಕ್ಸಿಂಗ್ - ಪ್ರಿಲಿಮ್ಸ್ ರೌಂಡ್ ಆಫ್-32 (ರಾತ್ರಿ 7ರ ನಂತರ)
ರೋಯಿಂಗ್ - ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ (ಮಧ್ಯಾಹ್ನ 12:30ರ ನಂತರ)
ಶೂಟಿಂಗ್ - 10ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ, 10ಮೀ ಏರ್ ರೈಫಲ್ ಪದಕ ಪಂದ್ಯಗಳು, 10ಮೀ ಏರ್ ಪಿಸ್ತೂಲ್ ಅರ್ಹತೆ, 10ಮೀ ಏರ್ ಪಿಸ್ತೂಲ್ ಅರ್ಹತೆ (ಮಧ್ಯಾಹ್ನ 12:30ರ ನಂತರ)
ಟೇಬಲ್ ಟೆನಿಸ್ – ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಿಲಿಮ್ಸ್, ರೌಂಡ್ ಆಫ್ 64 ಟೆನಿಸ್ – 1ನೇ ಸುತ್ತಿನ ಪಂದ್ಯಗಳು – ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ (ಮಧ್ಯಾಹ್ನ 3:30ರ ನಂತರ)
ಜುಲೈ 28, ಭಾನುವಾರ
ಆರ್ಚರಿ – ಸುತ್ತು-16ರ ಮಹಿಳಾ ತಂಡ ಫೈನಲ್‌ಗೆ ಪ್ರವೇಶಿಸಲು ಸೆಣಸಾಟ (ಮಧ್ಯಾಹ್ನ 1ಕ್ಕೆ)
ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ರೆಪೆಚೇಜ್ ಸುತ್ತು (ಮಧ್ಯಾಹ್ನ 12ರ ನಂತರ)
ಶೂಟಿಂಗ್ – 10ಮೀ ಏರ್ ರೈಫಲ್ ಮಹಿಳೆಯರ ಅರ್ಹತೆ, 10ಮೀ ಏರ್ ಪಿಸ್ತೂಲ್ ಪುರುಷರ ಫೈನಲ್, 10ಮೀ ಏರ್ ರೈಫಲ್ ಪುರುಷರ ಅರ್ಹತೆ, 10ಮೀ ಏರ್ ಪಿಸ್ತೂಲ್ ಮಹಿಳೆಯರ ಫೈನಲ್ (ಮಧ್ಯಾಹ್ನ 1:06ರ ನಂತರ)
ಈಜು – ಪುರುಷರ 100ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್, ಪುರುಷರ 100ಮೀ ಬ್ಯಾಕ್‌ಸ್ಟ್ರೋಕ್ ಸೆಮಿಫೈನಲ್, ಮಹಿಳೆಯರ 200ಮೀ ಫ್ರೀಸ್ಟೈಲ್ ಹೀಟ್ಸ್, ಮಹಿಳೆಯರ 200ಮೀ ಫ್ರೀಸ್ಟೈಲ್ ಸೆಮಿಫೈನಲ್ (ಮಧ್ಯಾಹ್ನ 2:30ರ ನಂತರ)
ಬ್ಯಾಡ್ಮಿಂಟನ್- ಮಧ್ಯಾಹ್ನ 12:00ರ ನಂತರ
ಬಾಕ್ಸಿಂಗ್ (R32) - ಮಧ್ಯಾಹ್ನ 2:46ರ ನಂತರ
ರೋಯಿಂಗ್ - ಮಧ್ಯಾಹ್ನ 1:06 ನಂತರ
ಟೇಬಲ್ ಟೆನ್ನಿಸ್ (R64) - ಮಧ್ಯಾಹ್ನ 1:30ರ ನಂತರ
ಟೆನಿಸ್ (R1) - ಮಧ್ಯಾಹ್ನ 3:30ರ ನಂತರ
ಜುಲೈ 29, ಸೋಮವಾರ
ಆರ್ಚರಿ – ಸುತ್ತು-16ರ ಪುರುಷರ ತಂಡ ಫೈನಲ್‌ಗೆ ಪ್ರವೇಶಿಸಲು ಕಾದಾಟ (ಮಧ್ಯಾಹ್ನ 1ಕ್ಕೆ)
ಹಾಕಿ - ಭಾರತ ವಿರುದ್ಧ ಅರ್ಜೆಂಟೀನಾ (ಸಂಜೆ 4:15)
ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ಸೆಮಿ-ಫೈನಲ್ ಇ/ಎಫ್ (ಮಧ್ಯಾಹ್ನ 1.00)
ಶೂಟಿಂಗ್ – ಟ್ರ್ಯಾಪ್ ಪುರುಷರ ಅರ್ಹತೆ, 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತೆ, 10 ಮೀ ಏರ್ ರೈಫಲ್ ಮಹಿಳೆಯರ ಫೈನಲ್, 10 ಮೀ ಏರ್ ರೈಫಲ್ ಪುರುಷರ ಫೈನಲ್
ಈಜು – ಪುರುಷರ 100ಮೀ ಬ್ಯಾಕ್‌ಸ್ಟ್ರೋಕ್ ಫೈನಲ್, ಮಹಿಳೆಯರ 200ಮೀ ಫ್ರೀಸ್ಟೈಲ್ ಫೈನಲ್
ಟೇಬಲ್ ಟೆನಿಸ್ – ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್- 64ರ ಸುತ್ತು ಮತ್ತು 32ರ ಟೆನಿಸ್. ಸುತ್ತು-2ನೇ ಸುತ್ತಿನ ಪಂದ್ಯಗಳು (ಮಧ್ಯಾಹ್ನ 1.30ರ ನಂತರ)
ಜುಲೈ 30, ಮಂಗಳವಾರ
ಆರ್ಚರಿ – ಮಹಿಳೆಯರ ವೈಯಕ್ತಿಕ ಸುತ್ತು-64 ಮತ್ತು ಸುತ್ತು-32
ಪುರುಷರ ವೈಯಕ್ತಿಕ ಸುತ್ತು-64 ಮತ್ತು ಸುತ್ತು-32 (ಮಧ್ಯಾಹ್ನ 1.00)
ಈಕ್ವೇಸ್ಟ್ರಿಯನ್ ಅಥವಾ ಕುದುರೆ ಸವಾರಿ - ಡ್ರೆಸ್ಸೇಜ್ ವೈಯಕ್ತಿಕ ದಿನ 1 (ಮಧ್ಯಾಹ್ನ 2.30ರ ನಂತರ)
ಹಾಕಿ - ಭಾರತ ವಿರುದ್ಧ ಐರ್ಲೆಂಡ್ - (ಸಂಜೆ 4:45)
ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ಕ್ವಾರ್ಟರ್ ಫೈನಲ್ಸ್ (ಮಧ್ಯಾಹ್ನ 1:40ರ ನಂತರ)
ಶೂಟಿಂಗ್ – ಟ್ರ್ಯಾಪ್ ಮಹಿಳೆಯರ ಅರ್ಹತೆ–ದಿನ 1,
10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಪದಕ ಪಂದ್ಯಗಳು,
ಟ್ರ್ಯಾಪ್ ಪುರುಷರ ಫೈನಲ್
ಟೆನಿಸ್ - 3ನೇ ಸುತ್ತಿನ ಪಂದ್ಯಗಳು (ಮಧ್ಯಾಹ್ನ 3.30ರ ನಂತರ)
ಜುಲೈ 31, ಬುಧವಾರ
ಬಾಕ್ಸಿಂಗ್ - ಕ್ವಾರ್ಟರ್ ಫೈನಲ್ಸ್ (ಮಧ್ಯಾಹ್ನ 3ರ ನಂತರ)
ಈಕ್ವೆಸ್ಟ್ರಿಯನ್ - ಡ್ರೆಸ್ಸೇಜ್ ವೈಯಕ್ತಿಕ ದಿನ 2 (ಮಧ್ಯಾಹ್ನ 1.30ರ ನಂತರ)
ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ಸೆಮಿಫೈನಲ್ (ಮಧ್ಯಾಹ್ನ 1.30ರ ನಂತರ)
ಶೂಟಿಂಗ್ - 50 ಮೀ ರೈಫಲ್ 3 ಪೋಸ್. ಪುರುಷರ ಅರ್ಹತೆ, ಟ್ರ್ಯಾಪ್ ಮಹಿಳೆಯರ ಫೈನಲ್ (ಮಧ್ಯಾಹ್ನ 1.30ರ ನಂತರ)
ಟೇಬಲ್ ಟೆನಿಸ್ - 16ನೇ ಸುತ್ತು (ಮಧ್ಯಾಹ್ನ 1.30ರ ನಂತರ)
ಟೆನಿಸ್ – ಪುರುಷರ ಡಬಲ್ಸ್ ಸೆಮಿಫೈನಲ್ (ಮಧ್ಯಾಹ್ನ 3.30ರ ನಂತರ)
1 ಆಗಸ್ಟ್, ಗುರುವಾರ
ಅಥ್ಲೆಟಿಕ್ಸ್ - ಪುರುಷರ 20 ಕಿಮೀ ಓಟದ ನಡಿಗೆ, ಮಹಿಳೆಯರ 20 ಕಿಮೀ ಓಟದ ನಡಿಗೆ (ಬೆಳಿಗ್ಗೆ 11ರ ನಂತರ)
ಬ್ಯಾಡ್ಮಿಂಟನ್ – ಪುರುಷರ ಮತ್ತು ಮಹಿಳೆಯರ ಡಬಲ್ಸ್ ಕ್ವಾರ್ಟರ್-ಫೈನಲ್, ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ನ 16ನೇ ಸುತ್ತು ಮಧ್ಯಾಹ್ನ 12ರ ನಂತರ)
ಹಾಕಿ – ಭಾರತ v ಬೆಲ್ಜಿಯಂ – (ಮಧ್ಯಾಹ್ನ 1:30ರ ನಂತರ)
ಗಾಲ್ಫ್ – ಪುರುಷರ ಸುತ್ತು 1 (ಮಧ್ಯಾಹ್ನ 12:30ರ ನಂತರ)
ಜೂಡೋ – ಮಹಿಳೆಯರ 78+ ಕೆಜಿ 32ನೇ ಸುತ್ತಿನಿಂದ ಫೈನಲ್ ತನಕ
ರೋಯಿಂಗ್ – ಪುರುಷರ ಸಿಂಗಲ್ ಸ್ಕಲ್ಸ್ ಸೆಮಿ-ಫೈನಲ್ A/B (ಮಧ್ಯಾಹ್ನ 1:30ರ ನಂತರ)
ಸೈಲಿಂಗ್ – ಪುರುಷರ ಮತ್ತು ಮಹಿಳೆಯರ ಡಿಂಗಿ ಓಟ 1-10 (ಮಧ್ಯಾಹ್ನ 3:30ರ ನಂತರ)
ಶೂಟಿಂಗ್ - 50ಮೀ ರೈಫಲ್ 3 ಪೊಸಿಷನ್ಸ್ ಪುರುಷರ ಫೈನಲ್, 50ಮೀ ರೈಫಲ್ 3 ಪೊಸಿಷನ್ಸ್ ಮಹಿಳಾ ಅರ್ಹತೆ (ಮಧ್ಯಾಹ್ನ 1ರ ನಂತರ)
ಟೇಬಲ್ ಟೆನಿಸ್ - ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್-ಫೈನಲ್ (ಮಧ್ಯಾಹ್ನ 1:30ರ ನಂತರ)
ಟೆನಿಸ್ - ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ (ಮಧ್ಯಾಹ್ನ 3:30ರ ನಂತರ)
2 ಆಗಸ್ಟ್, ಶುಕ್ರವಾರ
ಆರ್ಚರಿ - ಮಿಶ್ರ ತಂಡದ 16ನೇ ಸುತ್ತಿನಿಂದ ಫೈನಲ್ ತನಕ (ಮಧ್ಯಾಹ್ನ 1ರ ನಂತರ)
ಅಥ್ಲೆಟಿಕ್ಸ್ - ಪುರುಷರ ಶಾಟ್ಪುಟ್ ಅರ್ಹತೆ
ಬ್ಯಾಡ್ಮಿಂಟನ್ - ಮಹಿಳೆಯರ ಡಬಲ್ಸ್ ಸೆಮಿಫೈನಲ್, ಪುರುಷರ ಡಬಲ್ಸ್ ಸೆಮಿಫೈನಲ್, ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ (ಮಧ್ಯಾಹ್ನ 12ರ ನಂತರ)
ಹಾಕಿ - ಭಾರತ ಮತ್ತು ಆಸ್ಟ್ರೇಲಿಯಾ - (ಸಂಜೆ 4:45)
ಗಾಲ್ಫ್ – ಪುರುಷರ ರೌಂಡ್ 2 ರೋಯಿಂಗ್- ಪುರುಷರ ಸಿಂಗಲ್ ಸ್ಕಲ್ಸ್ ಫೈನಲ್ಸ್ (ಮಧ್ಯಾಹ್ನ 12.30ರ ನಂತರ)
ಶೂಟಿಂಗ್ – ಸ್ಕೀಟ್ ಪುರುಷರ ಅರ್ಹತೆ – ದಿನ 1
25ಮೀ ಪಿಸ್ತೂಲ್ ಮಹಿಳೆಯರ ಅರ್ಹತಾ ಪಂದ್ಯಗಳು
50ಮೀ ರೈಫಲ್ 3 ಪೊಸಿಷನ್ಸ್ ಮಹಿಳೆಯರ ಫೈನಲ್ (ಮಧ್ಯಾಹ್ನ 12.30ರ ನಂತರ)
ಟೇಬಲ್ ಟೆನ್ನಿಸ್ – ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ (ಮಧ್ಯಾಹ್ನ 1.30ರ ನಂತರ)
ಟೆನಿಸ್ – ಪುರುಷರ ಸಿಂಗಲ್ಸ್ ಸೆಮಿಫೈನಲ್, ಪುರುಷರ ಡಬಲ್ಸ್ ಪದಕ ಪಂದ್ಯಗಳು (ಮಧ್ಯಾಹ್ನ 3.30ರ ನಂತರ)
3 ಆಗಸ್ಟ್, ಶನಿವಾರ
ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನಿಂದ ಫೈನಲ್ ತನಕ
ಅಥ್ಲೆಟಿಕ್ಸ್ - ಪುರುಷರ ಶಾಟ್ ಪುಟ್ ಫೈನಲ್
ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್-ಫೈನಲ್, ಮಹಿಳೆಯರ ಡಬಲ್ಸ್ ಪದಕ ಪಂದ್ಯಗಳು
ಬಾಕ್ಸಿಂಗ್ - ಕ್ವಾರ್ಟರ್ ಫೈನಲ್ಸ್, ಮಹಿಳೆಯರ 60 ಕೆಜಿ - ಸೆಮಿಫೈನಲ್
ಗಾಲ್ಫ್ - ಪುರುಷರ ಸುತ್ತು 3
ಶೂಟಿಂಗ್ – ಸ್ಕೀಟ್ ಪುರುಷರ ಅರ್ಹತೆ – ದಿನ 2, ಸ್ಕೀಟ್ ಮಹಿಳೆಯರ ಅರ್ಹತೆ – ದಿನ 1, 25 ಮೀ ಪಿಸ್ತೂಲ್ ಮಹಿಳೆಯರ ಫೈನಲ್ – ಸ್ಕೀಟ್ ಪುರುಷರ ಫೈನಲ್
ಟೇಬಲ್ ಟೆನ್ನಿಸ್ – ಮಹಿಳೆಯರ ಸಿಂಗಲ್ಸ್ ಪದಕ ಪಂದ್ಯಗಳು
ಟೆನಿಸ್ - ಪುರುಷರ ಸಿಂಗಲ್ಸ್ ಪದಕ ಪಂದ್ಯಗಳು
ಆಗಸ್ಟ್ 4, ಭಾನುವಾರ
ಆರ್ಚರಿ – ಪುರುಷರ ವೈಯಕ್ತಿಕ ಸುತ್ತಿನ 16 ರಿಂದ ಫೈನಲ್‌ಗಳು
ಅಥ್ಲೆಟಿಕ್ಸ್ – ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಸುತ್ತು 1 (ಮಧ್ಯಾಹ್ನ 1:35), ಪುರುಷರ ಲಾಂಗ್ ಜಂಪ್ ಅರ್ಹತೆ
ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್, ಪುರುಷರ ಸಿಂಗಲ್ಸ್ ಸೆಮಿಫೈನಲ್, ಪುರುಷರ ಡಬಲ್ಸ್ ಪದಕ ಪಂದ್ಯಗಳು
ಬಾಕ್ಸಿಂಗ್ - ಸೆಮಿಫೈನಲ್
ಈಕ್ವೆಸ್ಟ್ರಿಯನ್ - ಡ್ರೆಸ್ಸೇಜ್ ಇಂಡಿವಿಜುವಲ್ ಗ್ರ್ಯಾಂಡ್ ಪ್ರಿಕ್ಸ್ ಫ್ರೀಸ್ಟೈಲ್
ಹಾಕಿ – ಪುರುಷರ ಕ್ವಾರ್ಟರ್ ಫೈನಲ್ಸ್ ಗಾಲ್ಫ್- ಪುರುಷರ ಸುತ್ತು 4
ಶೂಟಿಂಗ್ – 25ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಕ್ವಾಲ್-ಹಂತ 1, ಸ್ಕೀಟ್ ಮಹಿಳೆಯರ ಅರ್ಹತೆ – ದಿನ 2, ಸ್ಕೀಟ್ ಮಹಿಳೆಯರ ಫೈನಲ್
ಟೇಬಲ್ ಟೆನ್ನಿಸ್ – ಪುರುಷರ ಸಿಂಗಲ್ಸ್ ಪದಕ ಪಂದ್ಯಗಳು
ಆಗಸ್ಟ್ 5, ಸೋಮವಾರ
ಅಥ್ಲೆಟಿಕ್ಸ್ – ಪುರುಷರ 3000ಮೀ ಸ್ಟೀಪಲ್‌ಚೇಸ್ ರೌಂಡ್ 1, ಮಹಿಳೆಯರ 5000ಮೀ ಫೈನಲ್
ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ ಪದಕ ಪಂದ್ಯಗಳು), ಪುರುಷರ ಸಿಂಗಲ್ಸ್ ಪದಕ ಪಂದ್ಯಗಳು
ಶೂಟಿಂಗ್ – ಸ್ಕೀಟ್ ಮಿಶ್ರ ತಂಡ ಅರ್ಹತೆ, 25 ಮೀ ರಾಪಿಡ್ ಫೈರ್ ಪಿಸ್ತೂಲ್ ಪುರುಷರ ಫೈನಲ್, ಸ್ಕೀಟ್ ಮಿಶ್ರ ತಂಡ ಪದಕದ ಪಂದ್ಯ
ಟೇಬಲ್ ಟೆನ್ನಿಸ್ – 16 ರ ಪುರುಷರ ಮತ್ತು ಮಹಿಳೆಯರ ತಂಡ ರೌಂಡ್
ಕುಸ್ತಿ – ಮಹಿಳೆಯರ 68 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್
ಆಗಸ್ಟ್ 6, ಮಂಗಳವಾರ
ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಥ್ರೋ ಅರ್ಹತೆ, ಮಹಿಳೆಯರ 3000ಮೀ ಸ್ಟೀಪಲ್‌ಚೇಸ್ ಫೈನಲ್, ಪುರುಷರ ಲಾಂಗ್ ಜಂಪ್ ಫೈನಲ್
ಬಾಕ್ಸಿಂಗ್ - ಸೆಮಿಫೈನಲ್, ಮಹಿಳೆಯರ 60 ಕೆಜಿ - ಫೈನಲ್
ಹಾಕಿ - ಪುರುಷರ ಸೆಮಿಫೈನಲ್
ನೌಕಾಯಾನ – ಪುರುಷರ ಮತ್ತು ಮಹಿಳೆಯರ ಡಿಂಗಿ ಪದಕ ಓಟ
ಟೇಬಲ್ ಟೆನಿಸ್ - ಪುರುಷರ ಮತ್ತು ಮಹಿಳೆಯರ ತಂಡ ಕ್ವಾರ್ಟರ್-ಫೈನಲ್
ಕುಸ್ತಿ - ಮಹಿಳೆಯರ 68 ಕೆಜಿ ಸೆಮಿ-ಫೈನಲ್‌ನಿಂದ ಪದಕದ ಪಂದ್ಯಗಳು, ಮಹಿಳೆಯರ 50 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್
ಆಗಸ್ಟ್ 7, ಬುಧವಾರ
ಅಥ್ಲೆಟಿಕ್ಸ್ – ಪುರುಷರ 3000ಮೀ ಸ್ಟೀಪಲ್‌ಚೇಸ್ ಫೈನಲ್, ಮ್ಯಾರಥಾನ್ ಓಟದ ನಡಿಗೆ ಮಿಶ್ರ ರಿಲೇ, ಮಹಿಳೆಯರ 100ಮೀ ಹರ್ಡಲ್ಸ್ ರೌಂಡ್ 1, ಮಹಿಳೆಯರ
ಜಾವೆಲಿನ್ ಥ್ರೋ ಅರ್ಹತೆ, ಪುರುಷರ ಹೈ ಜಂಪ್ ಅರ್ಹತೆ), ಪುರುಷರ ಟ್ರಿಪಲ್ ಜಂಪ್ ಅರ್ಹತೆ
ಬಾಕ್ಸಿಂಗ್ - ಪುರುಷರ 63.5 ಕೆಜಿ, ಪುರುಷರ 80 ಕೆಜಿ ಫೈನಲ್ಸ್
ಗಾಲ್ಫ್ - ಮಹಿಳೆಯರ ಸುತ್ತು 1
ಟೇಬಲ್ ಟೆನ್ನಿಸ್ – ಪುರುಷರ ಮತ್ತು ಮಹಿಳೆಯರ ತಂಡ ಕ್ವಾರ್ಟರ್-ಫೈನಲ್, ಪುರುಷರ ತಂಡ ಸೆಮಿ-ಫೈನಲ್
ವೇಟ್ ಲಿಫ್ಟಿಂಗ್ – ಮಹಿಳೆಯರ 49 ಕೆ.ಜಿ
ಕುಸ್ತಿ - ಮಹಿಳೆಯರ 50 ಕೆಜಿ ಸೆಮಿ-ಫೈನಲ್‌ನಿಂದ ಪದಕದ ಪಂದ್ಯಗಳು, ಮಹಿಳೆಯರ 53 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್
ಆಗಸ್ಟ್ 8, ಗುರುವಾರ
ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಥ್ರೋ ಫೈನಲ್, ಮಹಿಳೆಯರ 100 ಮೀ ಹರ್ಡಲ್ಸ್ ರಿಪೆಚೇಜ್, ಮಹಿಳೆಯರ ಶಾಟ್ ಪುಟ್ ಅರ್ಹತೆ
ಬಾಕ್ಸಿಂಗ್ - ಪುರುಷರ 51 ಕೆಜಿ, ಮಹಿಳೆಯರ 54 ಕೆಜಿ ಫೈನಲ್ಸ್
ಹಾಕಿ - ಪುರುಷರ ಪದಕ ಪಂದ್ಯಗಳು
ಗಾಲ್ಫ್ - ಮಹಿಳೆಯರ ಸುತ್ತು 2
ಟೇಬಲ್ ಟೆನಿಸ್ – ಪುರುಷರ ಮತ್ತು ಮಹಿಳೆಯರ ಸೆಮಿಫೈನಲ್ ಕುಸ್ತಿ- ಮಹಿಳೆಯರ 57 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್, ಮಹಿಳೆಯರ 53 ಕೆಜಿ ಸೆಮಿಫೈನಲ್ ನಿಂದ ಪದಕದ ಪಂದ್ಯಗಳು, ಪುರುಷರ 57 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್
9 ಆಗಸ್ಟ್, ಶುಕ್ರವಾರ
ಅಥ್ಲೆಟಿಕ್ಸ್ – ಮಹಿಳೆಯರ 4x400ಮೀ ರಿಲೇ ರೌಂಡ್ 1, ಪುರುಷರ 4x400ಮೀ ರಿಲೇ ರೌಂಡ್ 1, ಮಹಿಳೆಯರ 100ಮೀ ಹರ್ಡಲ್ಸ್ ಸೆಮಿಫೈನಲ್, ಮಹಿಳೆಯರ ಶಾಟ್ ಪುಟ್ ಫೈನಲ್, ಪುರುಷರ ಟ್ರಿಪಲ್ ಜಂಪ್ ಫೈನಲ್
ಬಾಕ್ಸಿಂಗ್ - ಪುರುಷರ 71 ಕೆಜಿ, ಮಹಿಳೆಯರ 50 ಕೆಜಿ, ಪುರುಷರ 92 ಕೆಜಿ, ಮಹಿಳೆಯರ 66 ಕೆಜಿ ಫೈನಲ್ಸ್
ಗಾಲ್ಫ್ - ಮಹಿಳೆಯರ ಸುತ್ತು 3
ಟೇಬಲ್ ಟೆನ್ನಿಸ್ – ಪುರುಷರ ಮತ್ತು ಮಹಿಳೆಯರ ತಂಡಗಳ ಪದಕದ ಪಂದ್ಯಗಳು
ಕುಸ್ತಿ – ಮಹಿಳೆಯರ 57 ಕೆಜಿ ಸೆಮಿಫೈನಲ್‌ನಿಂದ ಪದಕದ ಪಂದ್ಯಗಳು, ಪುರುಷರ 57 ಕೆಜಿ ಸೆಮಿಫೈನಲ್‌ನಿಂದ ಪದಕದ ಪಂದ್ಯಗಳು, ಮಹಿಳೆಯರ 62 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್‌ಫೈನಲ್
10 ಆಗಸ್ಟ್, ಶನಿವಾರ
ಅಥ್ಲೆಟಿಕ್ಸ್ – ಮಹಿಳೆಯರ 4x400ಮೀ ರಿಲೇ ಫೈನಲ್, ಪುರುಷರ 4x400ಮೀ ರಿಲೇ ಫೈನಲ್, ಮಹಿಳೆಯರ 100ಮೀ ಹರ್ಡಲ್ಸ್ ಫೈನಲ್, ಮಹಿಳೆಯರ ಜಾವೆಲಿನ್ ಥ್ರೋ ಫೈನಲ್, ಪುರುಷರ ಹೈ ಜಂಪ್ ಫೈನಲ್
ಬಾಕ್ಸಿಂಗ್ - ಮಹಿಳೆಯರ 57 ಕೆಜಿ, ಪುರುಷರ 57 ಕೆಜಿ, ಮಹಿಳೆಯರ 75 ಕೆಜಿ, ಪುರುಷರ + 92 ಕೆಜಿ ಫೈನಲ್ಸ್
ಗಾಲ್ಫ್ - ಮಹಿಳೆಯರ ಸುತ್ತು 4
ಟೇಬಲ್ ಟೆನ್ನಿಸ್ – ಪುರುಷರ ಮತ್ತು ಮಹಿಳೆಯರ ತಂಡಗಳ ಪದಕದ ಪಂದ್ಯಗಳು
ಕುಸ್ತಿ – ಮಹಿಳೆಯರ 76 ಕೆಜಿ ರೌಂಡ್ ಆಫ್ 16 ಮತ್ತು ಕ್ವಾರ್ಟರ್-ಫೈನಲ್, ಮಹಿಳೆಯರ 62 ಕೆಜಿ ಸೆಮಿಫೈನಲ್ ಮತ್ತು ಪದಕ ಪಂದ್ಯಗಳು
11 ಆಗಸ್ಟ್, ಭಾನುವಾರ
ಕುಸ್ತಿ – ಮಹಿಳೆಯರ 76 ಕೆಜಿ ಸೆಮಿಫೈನಲ್‌ನಿಂದ ಪದಕದ ಪಂದ್ಯಗಳು
ಆರ್ಚರಿ: ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು (1 pm) ಮತ್ತು ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು
