ಕನ್ನಡ ಸುದ್ದಿ  /  ಕ್ರೀಡೆ  /  World Boxing Rankings: ವಿಶ್ವ ಬಾಕ್ಸಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ನೆಗೆದ ಭಾರತ; ನಮ್ಮ ಬಾಕ್ಸರ್‌ಗಳ ಸಾಧನೆ ಅನಂತ

world boxing rankings: ವಿಶ್ವ ಬಾಕ್ಸಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ನೆಗೆದ ಭಾರತ; ನಮ್ಮ ಬಾಕ್ಸರ್‌ಗಳ ಸಾಧನೆ ಅನಂತ

ಭಾರತವು ಅಮೆರಿಕ ಮತ್ತು ಕ್ಯೂಬಾದಂತಹ ಅಗ್ರ ಬಾಕ್ಸಿಂಗ್ ಶಕ್ತಿಕೇಂದ್ರಗಳನ್ನು ಮೀರಿಸಿ ಮೂರನೇ ಸ್ಥಾನದಲ್ಲಿ ಮಿಂಚುತ್ತಿದೆ. ಪ್ರಸ್ತುತ ಶ್ರೇಯಾಂಕದಲ್ಲಿ ಯುಎಸ್‌ಎ ನಾಲ್ಕನೇ ಸ್ಥಾನದಲ್ಲಿದ್ದರೆ, ಕ್ಯೂಬಾ ಒಂಬತ್ತನೇ ಸ್ಥಾನದಲ್ಲಿದೆ.

ಅಜಯ್ ಸಿಂಗ್, ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ (ಎಡ)
ಅಜಯ್ ಸಿಂಗ್, ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ (ಎಡ)

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌(IBA), ವಿಶ್ವ ಬಾಕ್ಸಿಂಗ್‌ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತವು ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಜಾಗತಿಕ ಬಾಕ್ಸಿಂಗ್‌ನಲ್ಲಿ ತ್ವರಿತ ಪ್ರಗತಿ ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ(BFI)ವು ಅಥ್ಲೀಟ್‌ಗಳಿಗೆ ನೀಡಿದ ಬೆಂಬಲ ಮತ್ತು ದೇಶದ ಬಾಕ್ಸರ್‌ಗಳ ಅಸಾಧಾರಣ ಪ್ರದರ್ಶನದಿಂದಾಗಿ, ಭಾರತವು 36,300 ಶ್ರೇಯಾಂಕಗಳನ್ನು ಗಳಿಸಿದೆ. ಈ ಪಟ್ಟಿಯಲ್ಲಿ ಕಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಭಾರತಕ್ಕಿಂತ ಮುಂದಿನ ಸ್ಥಾನದಲ್ಲಿವೆ. 48100 ಅಂಕಗಳೊಂದಿಗೆ ಕಜಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, 37600 ಶ್ರೇಯಾಂಕಗಳೊಂದಿಗೆ ಉಜ್ಬೇಕಿಸ್ತಾನ ಎರಡನೇ ಸ್ಥಾನದಲ್ಲಿದೆ.

ಭಾರತವು ಅಮೆರಿಕ ಮತ್ತು ಕ್ಯೂಬಾದಂತಹ ಅಗ್ರ ಬಾಕ್ಸಿಂಗ್ ಶಕ್ತಿಕೇಂದ್ರಗಳನ್ನು ಮೀರಿಸಿ ಮೂರನೇ ಸ್ಥಾನದಲ್ಲಿ ಮಿಂಚುತ್ತಿದೆ. ಪ್ರಸ್ತುತ ಶ್ರೇಯಾಂಕದಲ್ಲಿ ಯುಎಸ್‌ಎ ನಾಲ್ಕನೇ ಸ್ಥಾನದಲ್ಲಿದ್ದರೆ, ಕ್ಯೂಬಾ ಒಂಬತ್ತನೇ ಸ್ಥಾನದಲ್ಲಿದೆ.

“ಭಾರತ ದೇಶ, ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ, ನಮ್ಮ ದೇಶದ ಬಾಕ್ಸರ್‌ಗಳು ಮತ್ತು ಎಲ್ಲಾ ಅಭಿಮಾನಿಗಳಿಗೆ ಇದೊಂದು ಪ್ರಮುಖ ಕ್ಷಣವಾಗಿದೆ. ದೇಶವು ಒಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಕೆಲವು ವರ್ಷಗಳ ಹಿಂದೆ 44ನೇ ಸ್ಥಾನದಲ್ಲಿದ್ದ ಭಾರತ, ಈಗ ಮೂರನೇ ಸ್ಥಾನದಲ್ಲಿ ಬಂದು ಕುಳಿತಿದೆ. ಭಾರತೀಯ ಬಾಕ್ಸಿಂಗ್ ಭಾರಿ ಎತ್ತರಕ್ಕೆ ಏರುತ್ತಿದೆ. ಭಾರತವನ್ನು ಬಾಕ್ಸಿಂಗ್ ಶಕ್ತಿಕೇಂದ್ರವನ್ನಾಗಿ ಮಾಡುವ ಧ್ಯೇಯವನ್ನು ಪೂರೈಸಲು BFI ನಿರಂತರ ಶ್ರಮಿಸುತ್ತಿದೆ. ಅಲ್ಲದೆ ಇದು ಎಲ್ಲಾ ವಯೋಮಾನದ ಆಟಗಾರರಿಗೆ ಉತ್ತಮ ಸೌಲಭ್ಯಗಳನ್ನು ಖಾತ್ರಿಪಡಿಸಿದೆ. ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು, ವಿದೇಶಿ ಎಕ್ಸ್‌ಪೋಸರ್ ಟ್ರಿಪ್‌ಗಳು ಮತ್ತು ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತಿದೆ. ಈ ಶ್ರೇಯಾಂಕವು ಬಾಕ್ಸಿಂಗ್ ರಾಷ್ಟ್ರವಾಗಿ ಭಾರತದ ತ್ವರಿತ ಬೆಳವಣಿಗೆಯನ್ನು ಸೂಚಿಸುತ್ತದೆ,” ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತವು ಅದ್ಭುತ ಪ್ರದರ್ಶನ ನೀಡಿದೆ. ಅಲ್ಲದೆ ಅಗ್ರ 5 ದೇಶಗಳ ಪಟ್ಟಿಯಲ್ಲಿ ಸತತವಾಗಿ ಸ್ಥಾನ ಗಳಿಸುವುದರೊಂದಿಗೆ ಭಾರತೀಯ ಬಾಕ್ಸಿಂಗ್ ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಕಳೆದ ಎರಡು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ, ಭಾರತೀಯ ಬಾಕ್ಸರ್‌ಗಳು ಬರೋಬ್ಬರಿ 16 ಪದಕಗಳನ್ನು ಗೆದ್ದಿದ್ದಾರೆ. ಇನ್ನೂ ವಿಶೇಷವಾಗಿ, ಕಳೆದ 2008 ರಿಂದ ಭಾರತೀಯ ಬಾಕ್ಸರ್‌ಗಳು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 140 ಪದಕಗಳನ್ನು ದೇಶಕ್ಕೆ ತಂದಿದ್ದಾರೆ.

2016ರಿಂದ, ಭಾರತೀಯ ಬಾಕ್ಸರ್‌ಗಳು ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ 16 ಎಲೈಟ್ ವರ್ಲ್ಡ್ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಬಿಎಫ್‌ಐಯು ದೇಶದಲ್ಲಿ ಹಲವಾರು ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದೇ ವೇಳೆ ಮುಂದಿನ ಮಾರ್ಚ್ 15 ರಿಂದ 26ರವರೆಗೆ, ಮೂರನೇ ಬಾರಿಗೆ ಪ್ರತಿಷ್ಠಿತ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ಭಾರತ ಸಿದ್ಧತೆ ನಡೆಸುತ್ತಿದೆ.

“ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸುವುದು ಕ್ರೀಡೆಯ ದೇಶೀಯ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಲ್ಲದೆ ಇಂತಹ ಕ್ರೀಡಾಕೂಟಗಳು, ಮುಂದಿನ ಪೀಳಿಗೆಯ ಜನರು ಈ ಆಟವನ್ನು ಆಡುವಂತೆ ಪ್ರೇರೇಪಿಸುತ್ತದೆ. 2017ರಲ್ಲಿ ಗುವಾಹಟಿಯಲ್ಲಿ ಯುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಆಯೋಜಿಸಿದ ನಮ್ಮ ಆತಿಥ್ಯದ ಸಾಮರ್ಥ್ಯವನ್ನು ಜಗತ್ತು ಈಗಾಗಲೇ ನೋಡಿದೆ. ಆ ಬಳಿಕ 2018ರಲ್ಲಿ ಎಲೈಟ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ನವದೆಹಲಿಯಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದು, ಇದೀಗ ನಾವು ಮೂರನೇ ವಿಶ್ವ ಎಲೈಟ್ ಮಹಿಳಾ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ಸಿದ್ಧರಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ.

ವಿಭಾಗ