ಇಂಡಿಯಾ ಓಪನ್ 2025: ಬ್ಯಾಡ್ಮಿಂಟನ್ ಟೂರ್ನಿಯ ವೇಳಾಪಟ್ಟಿ, ಭಾರತೀಯರು ಶಟ್ಲರ್‌ಗಳು ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ 26 ಶಟ್ಲರ್‌ಗಳು ಸ್ಪರ್ಧಿಸುತ್ತಿದ್ದಾರೆ. ಪಿವಿ ಸಿಂಧು, ಲಕ್ಷ್ಯ ಸೇನ್, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಣದಲ್ಲಿರುವ ಭಾರತೀಯ ಸ್ಟಾರ್ ಆಟಗಾರರು. ಇದೇ ವೇಳೆ ವಿಶ್ವದ ನಂ 1 ಆಟಗಾರ ಶಿ ಯುಕಿ ಕೂಡಾ ಭಾಗವಹಿಸುತ್ತಿದ್ದಾರೆ.

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಶೆ ಅನುಭವಿಸಿ ತವರಿಗೆ ಮರಳಿರುವ ಭಾರತೀಯ ಶಟ್ಲರ್‌ಗಳು, ಇಂದಿನಿಂದ ಮತ್ತೊಂದು ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದಾರೆ. ಅದುವೇ ಇಂಡಿಯಾ ಓಪನ್ 2025. ಭಾರತದಲ್ಲಿ ನಡೆಯುವ ಟೂರ್ನಿಯು ಇಂದಿನಿಂದ (ಜನವರಿ 14) ಜನವರಿ 19ರವರೆಗೆ ನವದೆಹಲಿಯ ಕೆ.ಡಿ. ಜಾಧವ್ ಇಂಡೋರ್ ಹಾಲ್‌ನಲ್ಲಿ ನಡೆಯಲಿದೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 750 ಈವೆಂಟ್‌ನಲ್ಲಿ ಭಾರತದ ಅಗ್ರ ಶಟ್ಲರ್‌ಗಳು ಭಾಗಿಯಾಗುತ್ತಿದ್ದಾರೆ. ಇಂಡಿಯಾ ಓಪನ್‌ನ 3ನೇ ಆವೃತ್ತಿ ಇದಾಗಿದ್ದು, ಐದು ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಪುರುಷ ಮತ್ತು ಮಹಿಳಾ ಸಿಂಗಲ್ಸ್ ಹಾಗೂ ಪುರುಷ ಹಾಗೂ ಮಹಿಳಾ ಡಬಲ್ಸ್ ಹಾಗೂ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಂದ್ಯ ನಡೆಯಲಿದೆ.
ಪ್ರಸಕ್ತ ಆವೃತ್ತಿಯ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 750 ಈವೆಂಟ್‌ನಲ್ಲಿ ಆತಿಥೇಯ ಭಾರತದ 26 ಶಟ್ಲರ್‌ಗಳು ಸ್ಪರ್ಧಿಸುತ್ತಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ 5, ಮಹಿಳೆಯರ ಸಿಂಗಲ್ಸ್‌ನಲ್ಲಿ 5, ಪುರುಷರ ಡಬಲ್ಸ್ 2, ಮಹಿಳೆಯರ ಡಬಲ್ಸ್ 10 ಮತ್ತು ಮಿಶ್ರ ಡಬಲ್ಸ್‌ನಲ್ಲಿ 4 ಸ್ಪರ್ಧಿಗಳು ಪಾಲು ಪಡೆಯುತ್ತಿದ್ದಾರೆ.
ಪಿವಿ ಸಿಂಧು, ಲಕ್ಷ್ಯ ಸೇನ್, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಣದಲ್ಲಿರುವ ಸ್ಟಾರ್ ಆಟಗಾರರು. ಒಲಿಂಪಿಕ್ ಚಾಂಪಿಯನ್‌ಗಳಾದ ವಿಕ್ಟರ್ ಆಕ್ಸೆಲ್ಸೆನ್, ಆನ್ ಸೆ ಯಂಗ್ ಮತ್ತು ವಿಶ್ವದ ನಂ 1 ಆಟಗಾರ ಶಿ ಯುಕಿ ಕೂಡಾ ಭಾಗವಹಿಸುತ್ತಿದ್ದು, ಪಂದ್ಯಾವಳಿಯ ರೋಚಕತೆ ಹೆಚ್ಚಿಸಿದೆ.
ಇಂಡಿಯಾ ಓಪನ್ 2025 ವೇಳಾಪಟ್ಟಿ
- ಮೊದಲ ಸುತ್ತು: ಜನವರಿ 14 (ಮಂಗಳವಾರ) - ಬೆಳಿಗ್ಗೆ 9 ಗಂಟೆ
- ಮೊದಲ ಸುತ್ತು: ಜನವರಿ 15 (ಬುಧವಾರ) - ಬೆಳಿಗ್ಗೆ 9 ಗಂಟೆ
- ಎರಡನೇ ಸುತ್ತು: ಜನವರಿ 16 (ಗುರುವಾರ) - ಬೆಳಿಗ್ಗೆ 9 ಗಂಟೆ
- ಕ್ವಾರ್ಟರ್ ಫೈನಲ್: ಜನವರಿ 17 (ಶುಕ್ರವಾರ) - ಮಧ್ಯಾಹ್ನ 12 ಗಂಟೆ
- ಸೆಮಿಫೈನಲ್: ಜನವರಿ 18 (ಶನಿವಾರ) - ಮಧ್ಯಾಹ್ನ 12 ಗಂಟೆ
- ಫೈನಲ್ಸ್: ಜನವರಿ 19 (ಭಾನುವಾರ) - ಮಧ್ಯಾಹ್ನ 12 ಗಂಟೆ
ಭಾರತೀಯ ಸ್ಪರ್ಧಿಗಳು
- ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಎಚ್‌ಎಸ್ ಪ್ರಣಯ್, ಪ್ರಿಯಾಂಶು ರಾಜಾವತ್, ಕಿಡಂಬಿ ಶ್ರೀಕಾಂತ್, ಕಿರಣ್ ಜಾರ್ಜ್
- ಮಹಿಳೆಯರ ಸಿಂಗಲ್ಸ್: ಪಿವಿ ಸಿಂಧು, ಮಾಳವಿಕಾ ಬನ್ಸೋಡ್, ಅನುಪಮಾ ಉಪಾಧ್ಯಾಯ, ಆಕರ್ಷಿ ಕಶ್ಯಪ್, ರಕ್ಷಿತಾ ರಾಮರಾಜ್
- ಪುರುಷರ ಡಬಲ್ಸ್: ಚಿರಾಗ್ ಶೆಟ್ಟಿ/ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಕೆ ಸಾಯಿ ಪ್ರತೀಕ್/ಪೃಥ್ವಿ ಕೆ ರಾಯ್, ಚಯಂಜಿತ್ ಜೋಶಿ/ಮಯಾಂಕ್ ರಾಣಾ
- ಮಹಿಳೆಯರ ಡಬಲ್ಸ್: ಟ್ರೀಸಾ ಜಾಲಿ/ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ/ತನೀಶಾ ಕ್ರಾಸ್ಟೊ, ರುತುಪರ್ಣ ಪಾಂಡಾ/ಶ್ವೇತಪರ್ಣ ಪಾಂಡಾ, ಮಾನಸಾ ರಾವತ್/ಗಾಯತ್ರಿ ರಾವತ್, ಅಶ್ವಿನಿ ಭಟ್/ಶಿಖಾ ಗೌತಮ್, ಸಾಕ್ಷಿ ಗಹ್ಲಾವತ್/ಅಪೂರ್ವಾ ಗಹ್ಲಾವತ್, ಸಾನಿಯಾ ಸಿಕ್ಕಂದರ್/ರಶ್ಮಿ ಗಣೇಶ್, ಮೃಣ್ಮಯಿ ದೇಶಪಾಂಡೆ/ಪ್ರೇರಣಾ ಅಲ್ವೇಕರ್, ಕಾವ್ಯ ಗುಪ್ತಾ/ರಾಧಿಕಾ ಶರ್ಮಾ, ಅಮೃತಾ ಪ್ರಮುತೇಶ್/ಸೋನಾಲಿ ಸಿಂಗ್
- ಮಿಶ್ರ ಡಬಲ್ಸ್: ಧ್ರುವ ಕಪಿಲ/ತನಿಶಾ ಕ್ರಾಸ್ಟೊ, ಕೆ ಸತೀಶ್ ಕುಮಾರ್/ಆದ್ಯ ವರಿಯತ್, ರೋಹನ್ ಕಪೂರ್/ಜಿ ಋತ್ವಿಕಾ ಶಿವಾನಿ, ಆಶಿತ್ ಸೂರ್ಯ/ಅಮೃತ ಪ್ರಮುಥೇಶ್
ಇದನ್ನೂ ಓದಿ | 2025ರ ಕ್ರೀಡಾ ಕ್ಯಾಲೆಂಡರ್: ಚಾಂಪಿಯನ್ಸ್ ಟ್ರೋಫಿ-ಮಹಿಳೆಯರ ವಿಶ್ವಕಪ್‌ನಿಂದ ಕ್ಲಬ್ ವಲ್ಡ್‌ಕಪ್‌ವರೆಗೆ; ವರ್ಷದ ಎಲ್ಲಾ ಕ್ರೀಡಾಕೂಟಗಳ ವಿವರ
ಬಹುಮಾನ ಮೊತ್ತ ಎಷ್ಟು?
ಈ ಬ್ಯಾಡ್ಮಿಂಟನ್ ಪಂದ್ಯಾವಳಿಯು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನ ಭಾಗವಾಗಿದ್ದು, 950,000 ಯುಎಸ್ ಡಾಲರ್ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ. ರೂಪಾಯಿ ಮೌಲ್ಯದಲ್ಲಿ ಇದು 8.22 ಕೋಟಿ ರೂಪಾಯಿ.
ಇಂಡಿಯಾ ಓಪನ್ 2025 ಲೈವ್ ಸ್ಟ್ರೀಮಿಂಗ್
ಇಂಡಿಯಾ ಓಪನ್ 2025ರ ನೇರಪ್ರಸಾರವು ಜನವರಿ 14ರ ಬೆಳಗ್ಗೆ 9 ಗಂಟೆಯಿಂದ ಯೂರೊರ್ಸ್ಪೋರ್ಟ್ ಇಂಡಿಯಾ ಚಾನೆಲ್‌ಗಳಾದ ಯೂರೋಸ್ಪೋರ್ಟ್ ಎಸ್‌ಡಿ ಮತ್ತು ಯೂರೋಸ್ಪೋರ್ಟ್ ಎಚ್‌ಡಿಯಲ್ಲಿ ಲಭ್ಯವಿರುತ್ತದೆ. ಇದೇ ವೇಳೆ ಲೈವ್ ಸ್ಟ್ರೀಮಿಂಗ್ ಡಿಸ್ಕವರಿ+ ಹಾಗೂ ಬಿಡಬ್ಲ್ಯೂಎಫ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುತ್ತದೆ.
