ಆಗಸ್ಟ್ 10ರಂದು ಭಾರತದ ಒಲಿಂಪಿಕ್ಸ್ ವೇಳಾಪಟ್ಟಿ; ಪದಕದ ನಿರೀಕ್ಷೆಯಲ್ಲಿ ಅದಿತಿ ಅಶೋಕ್-ದೀಕ್ಷಾ ದಾಗರ್, ರೀತಿಕಾ ಹೂಡಾ
ಭಾರತವು ಈವರೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 5 ಪದಕಗಳನ್ನು ಮಾತ್ರ ಗೆದ್ದಿದೆ. ಇದರಲ್ಲಿ ನಾಲ್ಕು ಕಂಚು ಹಾಗೂ ಒಂದು ಬೆಳ್ಳಿ ಪದಕ. ಆಗಸ್ಟ್ 10ರ ಶನಿವಾರ, ಇನ್ನೆರಡು ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ.
ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟವು ಕೊನೆಯ ಹಂತಕ್ಕೆ ಬಂದಿದೆ. ಇನ್ನೆರಡು ದಿನಗಳ ಆಟಗಳು ಮಾತ್ರವೇ ಬಾಕಿ ಉಳಿದಿದ್ದು, ಭಾರತ ಈವರೆಗೆ ನಿರೀಕ್ಷೆಯಿಂದ ಕಾಯುತ್ತಿದ್ದ ಪದಕ ಸುತ್ತಿನ ಪಂದ್ಯಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ಆಗಸ್ಟ್ 10ರ ಶುಕ್ರವಾರದಂದು ಭಾರತೀಯರು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಈವೆಂಟ್‌ಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಒಟ್ಟಾರೆಯಾಗಿ ರೋಚಕ ಪದಕ ಸುತ್ತಿನ ಪಂದ್ಯಗಳು ಶನಿವಾರ ನಡೆಯುತ್ತಿದ್ದು, ಭಾರತೀಯರು ಮಾತ್ರ ಎರಡು ಈವೆಂಟ್‌ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದ್ದಾರೆ. ಇಂದು ಮೂವರು ಭಾರತೀಯರು ಮೈದಾನಕ್ಕಿಳಿಯಲಿದ್ದಾರೆ. ದೀಕ್ಷಾ ದಾಗರ್ ಮತ್ತು ಕನ್ನಡತಿ ಅದಿತಿ ಅಶೋಕ್ ಗಾಲ್ಫ್‌ನಲ್ಲಿ ಆಡುತ್ತಿದ್ದು, ರೀತಿಕಾ ಹೂಡಾ ಕುಸ್ತಿಯಲ್ಲಿ ಪದಕದ ನಿರೀಕ್ಷೆ ಹೊಂದಿದ್ದಾರೆ.
ಆಗಸ್ಟ್ 10ರ ಶನಿವಾರದ ಭಾರತದ ವೇಳಾಪಟ್ಟಿ ಹೀಗಿದೆ
ಮಧ್ಯಾಹ್ನ 12:30 : ಗಾಲ್ಫ್ - ಮಹಿಳೆಯರ ವೈಯಕ್ತಿಕ ಸ್ಟ್ರೋಕ್ 4ನೇ ಸುತ್ತಿನಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್. ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಈವರೆಗೆ ಮೂರು ದಿನಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ನಾಲ್ಕನೇ ದಿನವಾದ ಇಂದು (ಅಂತಿಮ ದಿನ) ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಮಧ್ಯಾಹ್ನ 2:30 : ಕುಸ್ತಿ: ಮಹಿಳೆಯರ 76 ಕೆಜಿ ಫ್ರೀಸ್ಟೈಲ್‌ನಲ್ಲಿ ರೀತಿಕಾ ಹೂಡಾ
ಇತರ ಪ್ರಮುಖ ಪದಕ ಸುತ್ತುಗಳು
- ಸಂಜೆ 4:30 : ಪುರುಷರ ವಾಲಿಬಾಲ್ ಫೈನಲ್ - ಫ್ರಾನ್ಸ್ vs ಪೋಲೆಂಡ್
- ಸಂಜೆ 6:30 : ಟೇಬಲ್ ಟೆನ್ನಿಸ್, ಮಹಿಳಾ ತಂಡದ ಚಿನ್ನದ ಪದಕದ ಪಂದ್ಯ - ಚೀನಾ vs ಜಪಾನ್
- ರಾತ್ರಿ 8:30 : ಮಹಿಳೆಯರ ಫುಟ್ಬಾಲ್ ಫೈನಲ್ - ಬ್ರೆಜಿಲ್ vs ಯುಎಸ್‌ಎ
- ರಾತ್ರಿ 10:30 : ಅಥ್ಲೆಟಿಕ್ಸ್, ಪುರುಷರ ಹೈಜಂಪ್ ಫೈನಲ್
- ರಾತ್ರಿ 11:20 : ಅಥ್ಲೆಟಿಕ್ಸ್, ಪುರುಷರ 5000 ಮೀ ಫೈನಲ್
ಇದನ್ನೂ ಓದಿ | ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ; 52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ
- ರಾತ್ರಿ 11:45 : ಅಥ್ಲೆಟಿಕ್ಸ್, ಮಹಿಳೆಯರ 1500 ಮೀ ಫೈನಲ್
- ರಾತ್ರಿ 12:30 : ಅಥ್ಲೆಟಿಕ್ಸ್, ಪುರುಷರ 4x400 ಮೀ ರಿಲೇ ಫೈನಲ್
- ರಾತ್ರಿ 12:44 : ಅಥ್ಲೆಟಿಕ್ಸ್, ಮಹಿಳೆಯರ 4x400 ಮೀ ರಿಲೇ ಫೈನಲ್
- ರಾತ್ರಿ 1:00 : ಬಾಸ್ಕೆಟ್‌ಬಾಲ್, ಪುರುಷರ ಫೈನಲ್ - ಫ್ರಾನ್ಸ್ vs ಯುಎಸ್‌ಎ
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್‌ನಲ್ಲಿ ಲಿಂಗ ವಿವಾದ; ಮಹಿಳಾ ಶಾಟ್‌ಪುಟ್‌ನಲ್ಲಿ ಅಮೆರಿಕದ ತೃತೀಯ ಲಿಂಗಿ ಭಾಗಿ, ವೀಕ್ಷಕ ವಿವರಣೆಕಾರ ಗೊಂದಲ