ಕನ್ನಡ ಸುದ್ದಿ  /  Sports  /  India S Interest In 2036 Olympics Hosting Rights Says Sports Minister Anurag Thakur

India look to Host 2036 Olympics: ಭಾರತದಲ್ಲಿ ಒಲಿಂಪಿಕ್ಸ್! 2036ರ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಚಿಂತನೆ!

ಭಾರತದಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆಯೇ? ಇದಕ್ಕಾಗಿ ಪ್ರಯತ್ನಿಸಬಹುದು. ಭಾರತ ಸರ್ಕಾರ 2036 ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸುವ ಆಲೋಚನೆಯಲ್ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

2036ಕ್ಕೆ ಭಾರತದಲ್ಲಿ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ
2036ಕ್ಕೆ ಭಾರತದಲ್ಲಿ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ

ನವದೆಹಲಿ: ಭಾರತದಲ್ಲಿ ಒಲಿಂಪಿಕ್ಸ್.. ಈ ಮಾತು ಕೇಳಲು ಬಹಳ ಉತ್ಸಾಹದಿಂದ ಅನಿಸುತ್ತಿದೆ. ಏಷ್ಯಾ, ಕಾಮನ್‌ವೆಲ್ತ್‌ನಂತಹ ಪ್ರತಿಷ್ಠಾತ್ಮಕ ಕ್ರೀಡೆಗಳಿಗೆ ಆತಿಥ್ಯ ವಹಿಸಿದ್ದ ಭಾರತ, ಇದೀಗ ವಿಶ್ವದ ಬಹುದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವ ಆಸೆ ಹಾಗೆ ಉಳಿದಿದೆ.

ಇದುವರೆಗೆ ನಮ್ಮ ದೇಶದಲ್ಲಿ ಒಂದೇ ಬಾರಿ ಕೂಡ ಒಲಿಂಪಿಕ್ಸ್‌ ನಡೆಯದಿರುವುದು ವಿಪರ್ಯಾಸವೇ ಸರಿ. ಸರ್ಕಾರದ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ.

2036 ಒಲಿಂಪಿಕ್ಸ್‌ನ್ನು ಭಾರತದಲ್ಲಿ ನಡೆಸುವುದಕ್ಕಾಗಿ ಬಿಡ್‌ ಸಲ್ಲಿಸಬೇಕೆಂಬ ಆಲೋಚನೆಯಲ್ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಹಿಂದಿನ ಏಷ್ಯಾ, ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸಿದೆ. ಭಾರತ ತಯಾರಿಕೆಯಿಂದ ಸೇವಾ ಕ್ಷೇತ್ರ ವರೆಗೆ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿ ಇರುವಾಗ ಕ್ರೀಡೆಗಳಲ್ಲಿ ಏಕೆ ಇರಬಾರದು? 2036 ಒಲಿಂಪಿಕ್ಸ್ ಆತಿಥ್ಯ ವಹಿಸಲು ಬಿಡ್ ಸಲ್ಲಿಸಲು ಗಂಭೀರ ಚರ್ಚೆಯಾಗಿದೆ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(IOC) ಈಗಾಗಲೇ 2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳ ಕುರಿತ ಮೊದಲ ಹಂತದ ಚರ್ಚೆಗಳನ್ನು ನಡೆಯುತ್ತಿವೆ. 10 ನಗರಗಳು ಇದಕ್ಕಾಗಿ ಪೈಪೋಟಿ ನೀಡುತ್ತಿವೆ. ಮುಂಬರುವ ಮೂರು ಆವೃತ್ತಿಗಳು ಕ್ರಮವಾಗಿ ಪ್ಯಾರಿಸ್, ಲಾಸ್ ಏಂಜೆಲ್ಸ್, ಬ್ರಿಸ್ಬೆನ್‌ ನಲ್ಲಿ ನಡೆಯಲಿವೆ.

2036 ಸೀಸನ್‌ಗಾಗಿ ಇಂಡೋನೇಷಿಯಾ, ಸೌತ್ ಕೊರಿಯಾ, ಈ ವರ್ಷ ಫಿಫಾ ವರ್ಲ್ಡ್ ಕಪ್ ನಡೆಸಿದ ಕತಾರ್, ಜರ್ಮನಿ ಮುಂತಾದ ದೇಶಗಳು ತೀವ್ರವಾಗಿ ಸ್ಪರ್ಧಿಸುತ್ತಿವೆ. ಆದಾಗ್ಯೂ ಭಾರತದಲ್ಲಿ ಒಲಿಂಪಿಕ್ಸ್ ನಡೆಸುವ ಸಂಬಂಧ ಇಲ್ಲಿನ ಒಲಿಂಪಿಕ್ಸ್‌ ಸಂಸ್ಥೆಯೊಂದಿಗೆ ಭಾರತ ಸರ್ಕಾರವು ಮುಂಬರುವ ವರ್ಷ ಚರ್ಚೆ ನಡೆಸಲಾಗುತ್ತದೆ ಎಂದು ಅನುರಾಗ್ ಠಾಕೂರ್ ಅವರು ಹೇಳಿದರು.

ವಿಶೇಷವಾಗಿ ಒಲಿಂಪಿಕ್ಸ್ ರೂಟ್ ಮ್ಯಾಪ್‌ಗೆ ಸಂಬಂಧಿಸಿದಂತೆ ಚರ್ಚೆಗಳಿಗೆ ಮುಂಬೈನಲ್ಲಿ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಇಂಡಿಯನ್ ಒಲಿಂಪಿಕ್ ಸಂಘಕ್ಕೆ ಭಾರತ ಸರ್ಕಾರದ ಬೆಂಬಲವಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಒಲಿಂಪಿಕ್ಸ್ ಎಲ್ಲಿ ನಡೆಸುತ್ತಾರೆ?

ನವದೆಹಲಿಯಲ್ಲಿ 1951, 1982 ರಲ್ಲಿ ಏಷ್ಯಾ ಕ್ರೀಡೆಗಳು ನಡೆದಿದ್ದವು. ಇದೇ ವೇದಿಕೆಯಲ್ಲಿ 2010ರಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಕೂಡ ನಡೆದಿವೆ. 2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳು ಬಂದರೆ ಗುಜರಾತ್ ವೇದಿಕೆ ಕಾದಿದೆ ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಒಲಿಂಪಿಕ್ಸ್ ನಿರ್ವಹಣೆಗೆ ಹಲವು ಗುಜರಾತಿಗಳು ಆಸಕ್ತಿ ತೋರಿಸಿದ್ದಾರೆ. ಅವರ ಬಳಿ ಮೂಲಭೂತ ಸೌಲಭ್ಯಗಳಿವೆ. ಇತರ ಸರ್ಕಾರಿ ಮೇನಿಫೋಸ್ಟಲ್ಲೂ ಒಲಿಂಪಿಕ್ಸ್ ನಿರ್ವಹಣೆ ಕೂಡ ಭಾಗವಾಗಿದೆ ಅಂತ ಹೇಳಿದ್ದಾರೆ.

ವಿಭಾಗ