Women's T20 World Cup 2023: ವನಿತೆಯರ ಟಿ20 ವಿಶ್ವಕಪ್‌ಗೆ ದಿನಗಣನೆ; ಚೊಚ್ಚಲ ಕಪ್ ಗೆಲ್ಲಲು ಕೌರ್ ಪಡೆ ಸಜ್ಜು
ಭಾರತ ತನ್ನ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಫೆಬ್ರವರಿ 12ರಂದು ಭಾರತ ಮತ್ತು ಪಾಕ್ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ವರ್ಷದ ಆರಂಭದಲ್ಲೇ ವನಿತೆಯರ ಅಂಡರ್ 19 ಕ್ರಿಕೆಟ್ ತಂಡವು ಚೊಚ್ಚಲ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಇದೀಗ ಹಿರಿಯ ವನಿತೆಯರ ಸರದಿ. ಐಸಿಸಿ ವನಿತೆಯರ ಟಿ20 ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ ವನಿತೆಯರು ಸಜ್ಜಾಗಿದ್ದು, ಈಗಾಗಲೇ ದಕ್ಷಿಣ ಆಫ್ರಿಕಾಗೆ ಹಾರಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಈ ಬಾರಿಯ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾವು ಗ್ರೂಪ್ 2ರಲ್ಲಿ ಕಣಕ್ಕಿಳಿಲಿಯಲಿದೆ. ಭಾರತದೊಂದಿಗೆ ಈ ಗುಂಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವನಿತೆಯರ ತಂಡಗಳಿವೆ. ಫೆಬ್ರವರಿ 10ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಪ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಗ್ರೂಪ್ 1ರಲ್ಲಿ ಕಾಣಿಸಿಕೊಳ್ಳಲಿದೆ. ಫೆಬ್ರವರಿ 11ರಂದು ಆಸ್ಟ್ರೇಲಿಯಾ ತನ್ನ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತನ್ನ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಫೆಬ್ರವರಿ 12ರಂದು ಭಾರತ ಮತ್ತು ಪಾಕ್ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಪಂದ್ಯಗಳು ಯಾವಾಗದಿಂದ ಆರಂಭ
ಈ ಬಾರಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ದಕ್ಷಿಣ ಆಫ್ರಿಕಾವು ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಾಗಿದ್ದು, ಒಟ್ಟು 10 ತಂಡಗಳು ಕಪ್‌ಗಾಗಿ ಕಾದಾಡಲಿವೆ. ಗುಂಪು ಹಂತದ ಪಂದ್ಯಗಳು ಕೇಪ್ ಟೌನ್, ಪರ್ಲ್ ಮತ್ತು ಗ್ಕೆಬರ್ಹಾದಲ್ಲಿ ನಡೆಯಲಿದೆ. ನಾಕೌಟ್ ಪಂದ್ಯಗಳನ್ನು ಕೇಪ್ ಟೌನ್‌ನಲ್ಲಿ ಆಯೋಜಿಸಲಾಗುತ್ತದೆ. ಗ್ರೂಪ್ 1 ಮತ್ತು ಗ್ರೂಪ್ 2ರಿಂದ ಎರಡು ಅಗ್ರ ತಂಡಗಳು 2023ರ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಹಂತವನ್ನು ಪ್ರವೇಶಿಸುತ್ತವೆ. ಫೈನಲ್ ಪಂದ್ಯವು ಫೆಬ್ರವರಿ 26ರಂದು ನಡೆಯಲಿದೆ.
ಕಳೆದ ಆವೃತ್ತಿಯಲ್ಲಿ ಭಾರತ ರನ್ನರ್ ಅಪ್ ಆಗಿತ್ತು. ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಎರಡು ಗುಂಪುಗಳು ಯಾವುವು?
ಗುಂಪು 1: ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ
ಗುಂಪು 2: ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಐರ್ಲೆಂಡ್
ಭಾರತದಲ್ಲಿ ಲೈವ್ ಸ್ಟ್ರೀಮಿಂಗ್ ಯಾವ ಚಾನೆಲ್‌ಗಳಲ್ಲಿ?
ವನಿತೆಯರ ವಿಶ್ವಕಪ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲೂ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಐಸಿಸಿ ಮಹಿಳಾ ವಿಶ್ವಕಪ್ 2023ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
ಫೆಬ್ರವರಿ 10 - ದಕ್ಷಿಣ ಆಫ್ರಿಕಾ v ಶ್ರೀಲಂಕಾ - ಕೇಪ್ ಟೌನ್
ಫೆಬ್ರವರಿ 11 - ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ - ಪಾರ್ಲ್
ಫೆಬ್ರವರಿ 11 - ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ - ಪಾರ್ಲ್
ಫೆಬ್ರವರಿ 12 - ಭಾರತ v ಪಾಕಿಸ್ತಾನ - ಕೇಪ್ ಟೌನ್
ಫೆಬ್ರವರಿ 12 - ಬಾಂಗ್ಲಾದೇಶ v ಶ್ರೀಲಂಕಾ - ಕೇಪ್ ಟೌನ್
ಫೆಬ್ರವರಿ 13 - ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ - ಪಾರ್ಲ್
ಫೆಬ್ರವರಿ 13 - ದಕ್ಷಿಣ ಆಫ್ರಿಕಾ v ನ್ಯೂಜಿಲೆಂಡ್ - ಪಾರ್ಲ್
ಫೆಬ್ರವರಿ 14 - ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ - ಗ್ಕೆಬರ್ಹಾ
ಫೆಬ್ರವರಿ 15 - ವೆಸ್ಟ್ ಇಂಡೀಸ್ ವಿರುದ್ಧ ಭಾರತ - ಕೇಪ್ ಟೌನ್
ಫೆಬ್ರವರಿ 15 - ಪಾಕಿಸ್ತಾನ ವಿರುದ್ಧ ಐರ್ಲೆಂಡ್ - ಕೇಪ್ ಟೌನ್
ಫೆಬ್ರವರಿ 16 - ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ - ಗ್ಕೆಬರ್ಹಾ
ಫೆಬ್ರವರಿ 17 - ನ್ಯೂಜಿಲೆಂಡ್ v ಬಾಂಗ್ಲಾದೇಶ - ಕೇಪ್ ಟೌನ್
ಫೆಬ್ರವರಿ 17 - ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್ - ಕೇಪ್ ಟೌನ್
ಫೆಬ್ರವರಿ 18 - ಇಂಗ್ಲೆಂಡ್ ವಿರುದ್ಧ ಭಾರತ - ಗ್ಕೆಬರ್ಹಾ
ಫೆಬ್ರವರಿ 18 - ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ - ಗ್ಕೆಬರ್ಹಾ
ಫೆಬ್ರವರಿ 19 - ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ - ಪಾರ್ಲ್
ಫೆಬ್ರವರಿ 19 - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ - ಪಾರ್ಲ್
ಫೆಬ್ರವರಿ 20 - ಐರ್ಲೆಂಡ್ ವಿರುದ್ಧ ಭಾರತ - ಗ್ಕೆಬರ್ಹಾ
ಫೆಬ್ರವರಿ 21 - ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ - ಕೇಪ್ ಟೌನ್
ಫೆಬ್ರವರಿ 21 - ದಕ್ಷಿಣ ಆಫ್ರಿಕಾ v ಬಾಂಗ್ಲಾದೇಶ - ಕೇಪ್ ಟೌನ್
ವಿಶ್ವಕಪ್‌ನ ನಾಕೌಟ್ ಹಂತ
ಫೆಬ್ರವರಿ 23 - ಸೆಮಿಫೈನಲ್ 1 ಕೇಪ್ ಟೌನ್
ಫೆಬ್ರವರಿ 24 - ಸೆಮಿಫೈನಲ್ 2 ಕೇಪ್ ಟೌನ್
ಫೈನಲ್ -ಫೆಬ್ರವರಿ 26