ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ಭಾರತ ಆತಿಥ್ಯ; ಇಂದಿನಿಂದ ಪಂದ್ಯ ಆರಂಭ, ಭಾಗವಹಿಸುವ ದೇಶಗಳು ಹಾಗೂ ಸಂಪೂರ್ಣ ವೇಳಾಪಟ್ಟಿ
Kho Kho World Cup 2025: ಭಾರತದಲ್ಲಿ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್ ನಡೆಯುತ್ತಿದೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಪುರುಷರ ವಿಭಾಗದಲ್ಲಿ 20 ದೇಶಗಳು ಮತ್ತು ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಭಾಗಿಯಾಗುತ್ತಿವೆ. ಭಾರತ ಮತ್ತು ನೇಪಾಳ ಪುರುಷರ ನಡುವೆ ಇಂದು (ಜನವರಿ 13) ಉದ್ಘಾಟನಾ ಪಂದ್ಯ ನಡೆಯುತ್ತಿದೆ.

ಇದೇ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ನಡೆಯುತ್ತಿದ್ದು, ಭಾರತವು ಚೊಚ್ಚಲ ಆವೃತ್ತಿಯ ಟೂರ್ನಿ ಆಯೋಜನೆಗೆ ಸಜ್ಜಾಗಿದೆ. 2025ರ ಖೋ ಖೋ ವಿಶ್ವಕಪ್ ಜನವರಿ 13ರಿಂದ 19ರವರೆಗೆ ಆಯೋಜಿಸಲಾಗಿದ್ದು, ಭಾರತದ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 20 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಭಾಗವಹಿಸಲಿವೆ. ಜನವರಿ 13ರ ಸೋಮವಾರ ಭಾರತ ಪುರುಷರ ಖೋ ಖೋ ತಂಡವು ನೇಪಾಳವನ್ನು ಎದುರಿಸುವುದರೊಂದಿಗೆ ಪಂದ್ಯಾವಳಿಗೆ ಅಧಿಕೃತ ಚಾಲನೆ ಸಿಗಲಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಬೆಂಬಲದೊಂದಿಗೆ ನಡೆಯುತ್ತಿರುವ ಖೋ ಖೋ ವಿಶ್ವಕಪ್‌ನಲ್ಲಿ ಪುರುಷರ ಮತ್ತು ಮಹಿಳಾ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಡಲಿವೆ.
ಖೋ ಖೋ ವಿಶ್ವಕಪ್ ತಂಡಗಳು ಮತ್ತು ಗುಂಪುಗಳು
ಪುರುಷರ ತಂಡಗಳು
- ಗುಂಪು ಎ: ಭಾರತ, ನೇಪಾಳ, ಪೆರು, ಬ್ರೆಜಿಲ್, ಭೂತಾನ್
- ಗುಂಪು ಬಿ: ದಕ್ಷಿಣ ಆಫ್ರಿಕಾ, ಘಾನಾ, ಅರ್ಜೆಂಟೀನಾ, ನೆದರ್‌ಲ್ಯಾಂಡ್ಸ್, ಇರಾನ್
- ಗುಂಪು ಸಿ: ಬಾಂಗ್ಲಾದೇಶ, ಶ್ರೀಲಂಕಾ, ಕೊರಿಯಾ ಗಣರಾಜ್ಯ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಪೋಲೆಂಡ್
- ಗುಂಪು ಡಿ: ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ಆಸ್ಟ್ರೇಲಿಯಾ, ಕೀನ್ಯಾ
ಮಹಿಳಾ ತಂಡಗಳು
- ಗುಂಪು ಎ: ಭಾರತ, ಇರಾನ್, ಮಲೇಷ್ಯಾ, ಕೊರಿಯಾ ಗಣರಾಜ್ಯ
- ಗುಂಪು ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ಕೀನ್ಯಾ, ಉಗಾಂಡಾ, ನೆದರ್‌ಲ್ಯಾಂಡ್ಸ್
- ಗುಂಪು ಸಿ: ನೇಪಾಳ, ಭೂತಾನ್, ಶ್ರೀಲಂಕಾ, ಜರ್ಮನಿ, ಬಾಂಗ್ಲಾದೇಶ
- ಗುಂಪು ಡಿ: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪೋಲೆಂಡ್, ಪೆರು, ಇಂಡೋನೇಷ್ಯಾ
ಖೋ ಖೋ ವಿಶ್ವಕಪ್ 2025 ವೇಳಾಪಟ್ಟಿ (ಪುರುಷರ ಪಂದ್ಯಗಳು)
ಜನವರಿ 13, ಸೋಮವಾರ
- ಭಾರತ vs ನೇಪಾಳ (ಗುಂಪು A) - ರಾತ್ರಿ 8:30
ಜನವರಿ 14, ಮಂಗಳವಾರ
- ದಕ್ಷಿಣ ಆಫ್ರಿಕಾ vs ಘಾನಾ (ಗುಂಪು B) - ಬೆಳಿಗ್ಗೆ 10:30
- ಬಾಂಗ್ಲಾದೇಶ vs ಶ್ರೀಲಂಕಾ (ಗುಂಪು C) - ಬೆಳಿಗ್ಗೆ 11:15
- ಇಂಗ್ಲೆಂಡ್ vs ಜರ್ಮನಿ (ಗುಂಪು D) - ಬೆಳಿಗ್ಗೆ 11.15
- ಘಾನಾ vs ನೆದರ್ಲ್ಯಾಂಡ್ಸ್ (ಗುಂಪು B) - ಬೆಳಿಗ್ಗೆ 11.15
- ಪೆರು vs ಭೂತಾನ್ (ಗುಂಪು A) - ಮಧ್ಯಾಹ್ನ 12:30
- ಅರ್ಜೆಂಟೀನಾ vs ಇರಾನ್ (ಗುಂಪು B) - ಮಧ್ಯಾಹ್ನ 1:00
- ದಕ್ಷಿಣ ಕೊರಿಯಾ vs ಪೋಲೆಂಡ್ (ಗುಂಪು C) - ಮಧ್ಯಾಹ್ನ 2.45
- ಮಲೇಷ್ಯಾ vs ಕೀನ್ಯಾ (ಗುಂಪು D) - ಸಂಜೆ 4:00
- ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್ (ಗುಂಪು B) - ಸಂಜೆ 4:30
- ಬಾಂಗ್ಲಾದೇಶ vs ಯುಎಸ್ಎ (ಗುಂಪು C) - ಸಂಜೆ 5.15
- ಇಂಗ್ಲೆಂಡ್ vs ಆಸ್ಟ್ರೇಲಿಯಾ (ಗುಂಪು D) - ಸಂಜೆ 6.30
- ನೇಪಾಳ vs ಪೆರು (ಗುಂಪು A) - ಸಂಜೆ 6.30
- ಘಾನಾ vs ಅರ್ಜೆಂಟೀನಾ (ಗುಂಪು B) - ಸಂಜೆ 7.45
- ಭಾರತ vs ಬ್ರೆಜಿಲ್ (ಗುಂಪು A) - ರಾತ್ರಿ 8:15
ಜನವರಿ 15, ಬುಧವಾರ
- ಶ್ರೀಲಂಕಾ vs ಯುಎಸ್ಎ (ಗುಂಪು C) - ಬೆಳಿಗ್ಗೆ 10:30
- ಆಸ್ಟ್ರೇಲಿಯಾ vs ಕೀನ್ಯಾ (ಗುಂಪು D) - ಬೆಳಿಗ್ಗೆ 11:00
- ಘಾನಾ vs ನೆದರ್ಲ್ಯಾಂಡ್ಸ್ (B) - ಬೆಳಿಗ್ಗೆ 11.15
- ಇಂಗ್ಲೆಂಡ್ vs ಮಲೇಷ್ಯಾ (ಗುಂಪು D) - ಮಧ್ಯಾಹ್ನ 3:15
- ಭಾರತ vs ಪೆರು (ಗುಂಪು A) - ರಾತ್ರಿ 8:15
- ನೇಪಾಳ vs ಬ್ರೆಜಿಲ್ (ಗುಂಪು A) - ಬೆಳಿಗ್ಗೆ 11.15
- ಜರ್ಮನಿ vs ಆಸ್ಟ್ರೇಲಿಯಾ (ಗುಂಪು D) - ಬೆಳಿಗ್ಗೆ 10.00
- ಬಾಂಗ್ಲಾದೇಶ vs ದಕ್ಷಿಣ ಕೊರಿಯಾ (ಗುಂಪು C) - ಮಧ್ಯಾಹ್ನ 12.30
- ದಕ್ಷಿಣ ಆಫ್ರಿಕಾ vs ಅರ್ಜೆಂಟೀನಾ (ಗುಂಪು B) ಮಧ್ಯಾಹ್ನ 2.45
- ಬ್ರೆಜಿಲ್ vs ಭೂತಾನ್ (ಗುಂಪು A) - ಸಂಜೆ 5.15
- ನೆದರ್ಲ್ಯಾಂಡ್ಸ್ vs ಇರಾನ್ (ಗುಂಪು B) - ಸಂಜೆ 5.15
- ಶ್ರೀಲಂಕಾ vs ದಕ್ಷಿಣ ಕೊರಿಯಾ (ಗುಂಪು ಸಿ) - ಸಂಜೆ 7.45
ಜನವರಿ 16, ಗುರುವಾರ
- ನೇಪಾಳ vs ಭೂತಾನ್ (ಗುಂಪು ಎ) - ಬೆಳಿಗ್ಗೆ 9:15
- ಜರ್ಮನಿ vs ಕೀನ್ಯಾ (ಗುಂಪು ಡಿ) - ಬೆಳಿಗ್ಗೆ 10:30
- ದಕ್ಷಿಣ ಕೊರಿಯಾ vs ಅಮೆರಿಕ (ಗುಂಪು ಸಿ) - ಮಧ್ಯಾಹ್ನ 3:15
- ಬಾಂಗ್ಲಾದೇಶ vs ಪೋಲೆಂಡ್ (ಗುಂಪು ಸಿ) - ಸಂಜೆ 5.45
- ಭಾರತ vs ಭೂತಾನ್ (ಗುಂಪು ಎ) - ರಾತ್ರಿ 8:15
- ಘಾನಾ vs ಇರಾನ್ (ಗುಂಪು ಬಿ) - ಬೆಳಿಗ್ಗೆ 8.45
- ಪೆರು vs ಬ್ರೆಜಿಲ್ (ಗುಂಪು ಎ) - ಬೆಳಿಗ್ಗೆ 11.15
- ಶ್ರೀಲಂಕಾ vs ಪೋಲೆಂಡ್ (ಗುಂಪು ಸಿ) - ಬೆಳಿಗ್ಗೆ 10.00
- ಮಲೇಷ್ಯಾ vs ಆಸ್ಟ್ರೇಲಿಯಾ (ಗುಂಪು ಡಿ) - ಮಧ್ಯಾಹ್ನ 12.30
ಇದನ್ನೂ ಓದಿ | ಖೋ ಖೋ ವಿಶ್ವಕಪ್ 2025: ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಭಾಗವಹಿಸುವ ದೇಶಗಳು, ಲೈವ್ ಸ್ಟ್ರೀಮಿಂಗ್ ವಿವರ ಇಂತಿದೆ
- ಕ್ವಾರ್ಟರ್ ಫೈನಲ್ -ಜನವರಿ 17, ಶುಕ್ರವಾರ (ಬೆಳಿಗ್ಗೆ 11:45)
- ಸೆಮಿಫೈನಲ್ - ಜನವರಿ 18, ಶನಿವಾರ (ಸಂಜೆ 5:45)
- ಫೈನಲ್ - ಜನವರಿ 19, ಭಾನುವಾರ (ರಾತ್ರಿ 8:15)
ಖೋ ಖೋ ವಿಶ್ವಕಪ್ 2025 ಮಹಿಳೆಯರ ಪಂದ್ಯಗಳ ವೇಳಾಪಟ್ಟಿ
ಜನವರಿ 14, ಮಂಗಳವಾರ
- ಇಂಗ್ಲೆಂಡ್ vs ಆಸ್ಟ್ರೇಲಿಯಾ (ಗುಂಪು ಬಿ) - ಬೆಳಿಗ್ಗೆ 11:45
- ನೇಪಾಳ vs ಭೂತಾನ್ (ಗುಂಪು ಸಿ) - ಬೆಳಿಗ್ಗೆ 10:00
- ದಕ್ಷಿಣ ಆಫ್ರಿಕಾ vs ನ್ಯೂಜಿಲೆಂಡ್ (ಗುಂಪು ಡಿ) - ಬೆಳಿಗ್ಗೆ 10:00
- ಶ್ರೀಲಂಕಾ vs ಬಾಂಗ್ಲಾದೇಶ (ಗುಂಪು ಸಿ) - ಮಧ್ಯಾಹ್ನ 12:30
- ಕೀನ್ಯಾ vs ನೆದರ್‌ಲ್ಯಾಂಡ್ಸ್ (ಗುಂಪು ಬಿ) - ಮಧ್ಯಾಹ್ನ 3:15
- ಇಂಗ್ಲೆಂಡ್ vs ಉಗಾಂಡಾ (ಗುಂಪು ಬಿ) - ಸಂಜೆ 5:45
- ಭಾರತ vs ದಕ್ಷಿಣ ಕೊರಿಯಾ (ಗುಂಪು ಎ) - ಸಂಜೆ 7:00
- ದಕ್ಷಿಣ ಆಫ್ರಿಕಾ vs ಪೆರು (ಗುಂಪು ಡಿ) - ಸಂಜೆ 5:15
- ನೇಪಾಳ vs ಜರ್ಮನಿ (ಗುಂಪು ಸಿ) - ಸಂಜೆ 4:00
- ಇರಾನ್ vs ಮಲೇಷ್ಯಾ (ಗುಂಪು ಎ) - ಸಂಜೆ 7:45
ಜನವರಿ 15, ಬುಧವಾರ
- ಆಸ್ಟ್ರೇಲಿಯಾ vs ಉಗಾಂಡಾ (ಗುಂಪು ಬಿ) - 10:00 ಬೆಳಿಗ್ಗೆ
- ಇಂಗ್ಲೆಂಡ್ ವಿರುದ್ಧ ಕೀನ್ಯಾ (ಗುಂಪು ಬಿ) - ಮಧ್ಯಾಹ್ನ 12:30
- ಉಗಾಂಡ ವಿರುದ್ಧ ನೆದರ್‌ಲ್ಯಾಂಡ್ಸ್ (ಗುಂಪು ಬಿ) - ಸಂಜೆ 4:00
- ನೇಪಾಳ ವಿರುದ್ಧ ಶ್ರೀಲಂಕಾ (ಗುಂಪು ಸಿ) - ಮಧ್ಯಾಹ್ನ 2:45
- ಜರ್ಮನಿ ವಿರುದ್ಧ ಬಾಂಗ್ಲಾದೇಶ (ಗುಂಪು ಸಿ) - ಸಂಜೆ 6:30
- ಪೆರು ವಿರುದ್ಧ ಇಂಡೋನೇಷ್ಯಾ (ಗುಂಪು ಡಿ) - ಸಂಜೆ 6:30
- ಮಲೇಷ್ಯಾ ವಿರುದ್ಧ ದಕ್ಷಿಣ ಕೊರಿಯಾ (ಗುಂಪು ಎ) - ಸಂಜೆ 7:45
- ಉಗಾಂಡ ವಿರುದ್ಧ ನೆದರ್‌ಲ್ಯಾಂಡ್ಸ್ (ಗುಂಪು ಬಿ) - ಸಂಜೆ 4:00
- ಭೂತಾನ್ ವಿರುದ್ಧ ಜರ್ಮನಿ (ಗುಂಪು ಸಿ) - ಬೆಳಿಗ್ಗೆ 11:45
- ನ್ಯೂಜಿಲೆಂಡ್ ವಿರುದ್ಧ ಪೆರು (ಗುಂಪು ಡಿ) - ಮಧ್ಯಾಹ್ನ 1:00
- ದಕ್ಷಿಣ ಆಫ್ರಿಕಾ ವಿರುದ್ಧ ಪೋಲೆಂಡ್ (ಗುಂಪು ಡಿ) - ಸಂಜೆ 4:30
- ಭಾರತ ವಿರುದ್ಧ ಇರಾನ್ (ಗುಂಪು ಎ) - ಸಂಜೆ 7:00
ಜನವರಿ 16, ಗುರುವಾರ
- ಭೂತಾನ್ ವಿರುದ್ಧ ಬಾಂಗ್ಲಾದೇಶ (ಗುಂಪು ಸಿ) - ಬೆಳಿಗ್ಗೆ 8:45
- ಕೀನ್ಯಾ ವಿರುದ್ಧ ಉಗಾಂಡಾ (ಗುಂಪು ಬಿ) - ಬೆಳಿಗ್ಗೆ 11:15
- ನ್ಯೂಜಿಲೆಂಡ್ ವಿರುದ್ಧ ಇಂಡೋನೇಷ್ಯಾ (ಗುಂಪು ಡಿ) - ಬೆಳಿಗ್ಗೆ 11:45
- ನೇಪಾಳ vs ಬಾಂಗ್ಲಾದೇಶ (ಗುಂಪು C) - ಸಂಜೆ 4:30
- ಶ್ರೀಲಂಕಾ vs ಜರ್ಮನಿ (ಗುಂಪು C) - ಮಧ್ಯಾಹ್ನ 1:00
- ಭಾರತ vs ಮಲೇಷ್ಯಾ (ಗುಂಪು A) - ಸಂಜೆ 7:00
- ದಕ್ಷಿಣ ಆಫ್ರಿಕಾ vs ಇಂಡೋನೇಷ್ಯಾ (ಗುಂಪು D) - ಸಂಜೆ 6:30
- ಭೂತಾನ್ vs ಶ್ರೀಲಂಕಾ (ಗುಂಪು C) - ಸಂಜೆ 7:45
- ಇರಾನ್ vs ದಕ್ಷಿಣ ಕೊರಿಯಾ (ಗುಂಪು A) - ಸಂಜೆ 4:00
- ಪೋಲೆಂಡ್ vs ಪೆರು (ಗುಂಪು D) - ಮಧ್ಯಾಹ್ನ 12:30
- ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ (ಗುಂಪು B) - ಬೆಳಿಗ್ಗೆ 10:00
- ಇಂಗ್ಲೆಂಡ್ vs ನೆದರ್ಲ್ಯಾಂಡ್ಸ್ (ಗುಂಪು B) - ಸಂಜೆ 4:00
- ಆಸ್ಟ್ರೇಲಿಯಾ vs ಕೀನ್ಯಾ (ಗುಂಪು B) - ಸಂಜೆ 5:15
- ನ್ಯೂಜಿಲೆಂಡ್ vs ಪೋಲೆಂಡ್ (ಗುಂಪು B) - ಸಂಜೆ 6:30
- ಕ್ವಾರ್ಟರ್-ಫೈನಲ್ - ಜನವರಿ 17, ಶುಕ್ರವಾರ (ಬೆಳಿಗ್ಗೆ 10:30)
- ಸೆಮಿಫೈನಲ್ - ಜನವರಿ 18, ಶನಿವಾರ (ಸಂಜೆ 4:30 ರಿಂದ)
- ಫೈನಲ್ - ಜನವರಿ 19, ಭಾನುವಾರ (ಸಂಜೆ 7:00 ಗಂಟೆಗೆ)
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
