ಅಫ್ಘಾನಿಸ್ತಾನ ಸವಾಲಿಗೆ ಭಾರತ ಸಜ್ಜು; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಹವಾಮಾನ ಹಾಗೂ ಪಿಚ್ ರಿಪೋರ್ಟ್
India Vs Afghanistan : ಟಿ20 ವಿಶ್ವಕಪ್ 2024 ಸೂಪರ್-8 ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿವೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಸೂಪರ್-8 ಹಂತದ ಮೂರನೇ ಪಂದ್ಯದಲ್ಲಿ ಜೂನ್ 20ರಂದು ಭಾರತ-ಅಫ್ಘಾನಿಸ್ತಾನ ತಂಡಗಳು (India Vs Afghanistan) ಪರಸ್ಪರ ಮುಖಾಮುಖಿಯಾಗಲಿವೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಲೀಗ್ ಹಂತದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಉಭಯ ತಂಡಗಳು ಸೂಪರ್-8 ಹಂತದಲ್ಲೂ ಅದೇ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಲು ಸಜ್ಜಾಗಿವೆ.
ಲೀಗ್ ಹಂತದ ಎ ಗುಂಪಿನಲ್ಲಿ ಭಾರತ ತಂಡವು ಮೂರು ಪಂದ್ಯ ಗೆದ್ದಿತು. ಒಂದು ಪಂದ್ಯ ರದ್ದಾಯಿತು. 6 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಸೂಪರ್-8 ಪ್ರವೇಶಿಸಿತು. ಅಫ್ಘಾನಿಸ್ತಾನ ಸಿ ಗುಂಪಿನಲ್ಲಿ 4 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿತು. ಅಂತಿಮ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಹೀನಾಯವಾಗಿ ಸೋಲನುಭವಿಸಿತು. ಎರಡನೇ ಸ್ಥಾನ ಪಡೆದು ಸೂಪರ್-8 ಪ್ರವೇಶಿಸಿತು.
ಭಾರತ vs ಅಫ್ಘಾನಿಸ್ತಾನ ಹೆಡ್ ಟು ಹೆಡ್
ಭಾರತ ಮತ್ತು ಅಫ್ಘಾನಿಸ್ತಾನ ಇದುವರೆಗೆ 8 ಟಿ20ಐ ಪಂದ್ಯಗಳನ್ನು ಆಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿದೆ. ಉಳಿದೊಂದು ಪಂದ್ಯ ರದ್ದಾಗಿದೆ. ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಆಫ್ಘನ್ ತಂಡವು ಟೀಮ್ ಇಂಡಿಯಾ ವಿರುದ್ಧ ಗೆದ್ದೇ ಇಲ್ಲ.
ಭಾರತ vs ಅಫ್ಘಾನಿಸ್ತಾನ ಬ್ರಿಡ್ಜ್‌ಟೌನ್ ಹವಾಮಾನ
ರಾತ್ರಿ 8ಗಂಟೆಗೆ ಆರಂಭವಾಗಲಿರುವ ಪಂದ್ಯಕ್ಕೆ, ಮಳೆ ಸಾಧ್ಯತೆ ಕಡಿಮೆ. ಆಗಾಗ್ಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಶೇ 10ರಷ್ಟು ಮಳೆಯ ಮುನ್ಸೂಚನೆ ಇದೆ. ಆಟದ ಸಮಯದಲ್ಲಿ ಬಿಸಿಲಿನ ವಾತಾವರಣವನ್ನು ನಿರೀಕ್ಷಿಸಲಾಗಿದೆ.
ಭಾರತ vs ಅಫ್ಘಾನಿಸ್ತಾನ ಪಿಚ್ ವರದಿ
ಕೆನ್ಸಿಂಗ್ಟನ್ ಓವಲ್ T20 ಕ್ರಿಕೆಟ್‌ನಲ್ಲಿ ಸಮತೋಲಿತ ಮೇಲ್ಮೈ ಒದಗಿಸುತ್ತದೆ. ಬೌಲರ್ಗಳು ಮತ್ತು ಬ್ಯಾಟರ್ಗಳಿಗೆ ಸಮನಾದ ಪೈಪೋಟಿ ನೀಡಲಿದೆ. ವಿಶ್ವಕಪ್‌ನ 5 ಪಂದ್ಯಗಳಲ್ಲಿ ಮೊದಲೆರಡು ಮಳೆಯಿಂದಾಗಿ ಕೊಚ್ಚಿಹೋದವು. ಈ ಮೈದಾನದಲ್ಲಿ ಆಸ್ಟ್ರೇಲಿಯಾ 200+ ಸ್ಕೋರ್ ಮಾಡಿತ್ತು.
ಭಾರತ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಫ್ಘಾನಿಸ್ತಾನ ಪ್ಲೇಯಿಂಗ್ XI
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ನೂರ್ ಅಹ್ಮದ್.
ಬಾರ್ಬಡೋಸ್ ಮೈದಾನದ ಟಿ20 ಅಂಕಿ-ಅಂಶ
ಟಿ20ಐ ಪಂದ್ಯಗಳು : 47
ಮೊದಲು ಬ್ಯಾಟಿಂಗ್ ಗೆದ್ದ ಪಂದ್ಯಗಳು : 30
ಮೊದಲು ಬೌಲಿಂಗ್‌ನಲ್ಲಿ ಗೆದ್ದ ಪಂದ್ಯಗಳು : 14
ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ : 138
ಎರಡನೇ ಇನಿಂಗ್ಸ್‌ನ ಸರಾಸರಿ ಸ್ಕೋರ್ : 125
ಗರಿಷ್ಠ ಮೊತ್ತ: ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 224/5
ಗರಿಷ್ಠ ಸ್ಕೋರ್ ಬೆನ್ನಟ್ಟಿದ: ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 172/6
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ