ಕನ್ನಡ ಸುದ್ದಿ  /  Photo Gallery  /  India Vs Australia Fourth Test Day Four Action In Images

India vs Australia 4th Test: ನಾಲ್ಕನೇ ದಿನದಾಟದಲ್ಲಿ ಭಾರತದ ಮೇಲುಗೈ; ಚಿತ್ರಗಳಲ್ಲಿ ದಿನದ ಅಪ್ಡೇಟ್ ನೋಡಿ

  • India vs Australia: ಅಂತಿಮ ಟೆಸ್ಟ್‌ನ ನಾಲ್ಕನೇ ದಿನ, ವಿರಾಟ್ ಕೊಹ್ಲಿ ಅವರ 186 ರನ್‌ಗಳು ಭಾರತದ‌ ಮೊದಲ ಇನ್ನಿಂಗ್ಸ್‌ ಮೊತ್ತವನ್ನು 571ಕ್ಕೆ ಏರಿಸಿತು. ಇದಕ್ಕೆ ಪ್ರತಿಯಾಗಿ, ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ಸ್ಟಂಪ್‌ ವೇಳೆಗೆ 3/0 ರನ್ ಗಳಿಸಿದೆ. ಆ ಮೂಲಕ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ನಾಲ್ಕನೇ ದಿನದಾಟದ ಪ್ರಮುಖ ಫೋಟೋಗಳು ಇಲ್ಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಳೆದ ದಿನ 289/3 ರನ್‌ ಗಳಿಸಿದ್ದ ಭಾರತ, 4ನೇ ದಿನ ಬ್ಯಾಟಿಂಗ್‌ ಮುಂದುವರೆಸಿತು. ಅಂತಿಮ ಅವಧಿಯಲ್ಲಿ 571 ರನ್‌ಗಳಿಗೆ ಆಲೌಟ್ ಆಯಿತು, ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ 91 ರನ್‌ಗಳ ಮುನ್ನಡೆ ಸಾಧಿಸಿತು.
icon

(1 / 6)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಳೆದ ದಿನ 289/3 ರನ್‌ ಗಳಿಸಿದ್ದ ಭಾರತ, 4ನೇ ದಿನ ಬ್ಯಾಟಿಂಗ್‌ ಮುಂದುವರೆಸಿತು. ಅಂತಿಮ ಅವಧಿಯಲ್ಲಿ 571 ರನ್‌ಗಳಿಗೆ ಆಲೌಟ್ ಆಯಿತು, ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ 91 ರನ್‌ಗಳ ಮುನ್ನಡೆ ಸಾಧಿಸಿತು.(AP)

4ನೇ ದಿನದಂದು ವಿರಾಟ್ ಕೊಹ್ಲಿಯೊಂದಿಗೆ ಬ್ಯಾಟಿಂಗ್ ಪುನರಾರಂಭಿಸಿದ ರವೀಂದ್ರ ಜಡೇಜಾ, ಮೊದಲ ಸೆಷನ್‌ನಲ್ಲಿ 28 ರನ್ ಗಳಿಸಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು.
icon

(2 / 6)

4ನೇ ದಿನದಂದು ವಿರಾಟ್ ಕೊಹ್ಲಿಯೊಂದಿಗೆ ಬ್ಯಾಟಿಂಗ್ ಪುನರಾರಂಭಿಸಿದ ರವೀಂದ್ರ ಜಡೇಜಾ, ಮೊದಲ ಸೆಷನ್‌ನಲ್ಲಿ 28 ರನ್ ಗಳಿಸಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು.(PTI)

ಏತನ್ಮಧ್ಯೆ, 3ನೇ ದಿನದಂದು ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಇಂದು ಊಟದ ನಂತರದ ಅವಧಿಯಲ್ಲಿ ತಮ್ಮ 28ನೇ ಟೆಸ್ಟ್ ಶತಕ ಸಿಡಿಸಿದರು.
icon

(3 / 6)

ಏತನ್ಮಧ್ಯೆ, 3ನೇ ದಿನದಂದು ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಇಂದು ಊಟದ ನಂತರದ ಅವಧಿಯಲ್ಲಿ ತಮ್ಮ 28ನೇ ಟೆಸ್ಟ್ ಶತಕ ಸಿಡಿಸಿದರು.(ANI)

ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಕೆಎಸ್ ಭರತ್ ಅವರನ್ನು ಊಟದ ನಂತರದ ಅವಧಿಯಲ್ಲಿ ನಾಥನ್ ಲಿಯಾನ್ ಔಟ್‌ ಮಾಡಿದರು.
icon

(4 / 6)

ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಕೆಎಸ್ ಭರತ್ ಅವರನ್ನು ಊಟದ ನಂತರದ ಅವಧಿಯಲ್ಲಿ ನಾಥನ್ ಲಿಯಾನ್ ಔಟ್‌ ಮಾಡಿದರು.(ANI)

ಅಂತಿಮ ಅವಧಿಯಲ್ಲಿ 113 ಎಸೆತಗಳಲ್ಲಿ 79 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸಿ ಟಾಡ್ ಮರ್ಫಿ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು.
icon

(5 / 6)

ಅಂತಿಮ ಅವಧಿಯಲ್ಲಿ 113 ಎಸೆತಗಳಲ್ಲಿ 79 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸಿ ಟಾಡ್ ಮರ್ಫಿ ಎಸೆತದಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು.(AP)

ನಾಲ್ಕನೇ ದಿನದ ಅಂತ್ಯಕ್ಕೆ 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿದೆ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಮ್ಯಾಥ್ಯೂ ಕುಹ್ನೆಮನ್‌ ಕ್ರೀಸ್‌ನಲ್ಲಿದ್ದಾರೆ.
icon

(6 / 6)

ನಾಲ್ಕನೇ ದಿನದ ಅಂತ್ಯಕ್ಕೆ 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿದೆ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಮ್ಯಾಥ್ಯೂ ಕುಹ್ನೆಮನ್‌ ಕ್ರೀಸ್‌ನಲ್ಲಿದ್ದಾರೆ.(ANI)


IPL_Entry_Point

ಇತರ ಗ್ಯಾಲರಿಗಳು