ಕನ್ನಡ ಸುದ್ದಿ  /  Sports  /  India Vs South Africa 2nd T20 Dream11 Prediction

IND vs SA 2nd t20: ಇಂದು ದಕ್ಷಿಣ ಆಫ್ರಿಕಾ ಎದುರು ಭಾರತದ ಎರಡನೇ ಟಿ20 ಪಂದ್ಯ; ಹೇಗಿದೆ ಪ್ಲೇಯಿಂಗ್‌ ಇಲೆವೆನ್

ಅಯ್ಯರ್ ಸ್ಟ್ಯಾಂಡ್‌ಬೈನ ಭಾಗವಾಗಿದ್ದಾರೆ. ಆದರೆ ಅವರ ಅಗತ್ಯತೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ವಿಶ್ವಕಪ್ ಗೂ ಮುನ್ನ ಶ್ರೇಯಸ್‌ಗೆ ಆಟಗಾರನಿಗೆ ಈ ಪಂದ್ಯದಲ್ಲಾದರೂ ಚಾನ್ಸ್‌ ಕೊಡುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ಇಂದು ದಕ್ಷಿಣ ಆಫ್ರಿಕಾ ಎದುರು ಭಾರತದ ಎರಡನೇ ಟಿ20 ಪಂದ್ಯ; ಹೇಗಿದೆ ಪ್ಲೇಯಿಂಗ್‌ ಇಲೆವನ್
ಇಂದು ದಕ್ಷಿಣ ಆಫ್ರಿಕಾ ಎದುರು ಭಾರತದ ಎರಡನೇ ಟಿ20 ಪಂದ್ಯ; ಹೇಗಿದೆ ಪ್ಲೇಯಿಂಗ್‌ ಇಲೆವನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 1-0 ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯ ತಿರುವನಂತಪುರಂನಲ್ಲಿ ನಡೆದಿದ್ದು, ಟೀಂ ಇಂಡಿಯಾ ಪ್ರವಾಸಿ ತಂಡವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಇಲ್ಲಿ ದೀಪಕ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ ಬೌಲಿಂಗ್‌ನಲ್ಲಿ ಛಾಪು ಮೂಡಿಸಿದರೆ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಗಳಿಸಿದರು.

ಮೊದಲ ಟಿ20ಯನ್ನು ಸುಲಭವಾಗಿ ಗೆದ್ದ ನಂತರ ರೋಹಿತ್ ಶರ್ಮಾ ಆಡುವ XI ನಲ್ಲಿ ಬದಲಾವಣೆ ಮಾಡಲು ಯೋಚಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸದ್ಯ ಭಾರತಕ್ಕೆ, ಈ ಸರಣಿಯು T20 ವಿಶ್ವಕಪ್‌ಗೆ ಮೊದಲು ಅಭ್ಯಾಸ ಸರಣಿಯಂತಿದೆ. ಇಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಆಟಗಾರರಿಗೆ ಅವಕಾಶವನ್ನು ನೀಡಲು ಬಯಸುತ್ತದೆ. ಒಂದರ್ಥದಲ್ಲಿ ಇದು ಅವರ ಫಾರ್ಮ್‌ ಪರೀಕ್ಷೆಯೂ ಹೌದು.

ಶ್ರೇಯಸ್‌ಗೆ ಸಿಗುತ್ತಾ ಚಾನ್ಸ್?

ತಿರುವನಂತಪುರಂ ಟಿ20ಯ ಆಡುವ XI ಹೊರತುಪಡಿಸಿ, ವಿಶ್ವಕಪ್ ತಂಡದ ಭಾಗವಾಗಿರುವ ತಂಡದಲ್ಲಿ ಕೇವಲ ಇಬ್ಬರು ಆಟಗಾರರಿದ್ದಾರೆ. ಅವರೆಂದರೆ ಯಜುವೇಂದ್ರ ಚಹಾಲ್ ಮತ್ತು ಶ್ರೇಯಸ್ ಅಯ್ಯರ್. ಅಯ್ಯರ್ ಸ್ಟ್ಯಾಂಡ್‌ಬೈನ ಭಾಗವಾಗಿದ್ದಾರೆ. ಆದರೆ ಅವರ ಅಗತ್ಯತೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ವಿಶ್ವಕಪ್ ಗೂ ಮುನ್ನ ಶ್ರೇಯಸ್‌ಗೆ ಈ ಪಂದ್ಯದಲ್ಲಾದರೂ ಚಾನ್ಸ್‌ ಕೊಡುತ್ತಾರಾ ಎಂಬುದು ಸದ್ಯದ ಪ್ರಶ್ನೆ. ಒಂದು ವೇಳೆ ನೀಡಿದ್ದೇ ಆದರೆ, ಆದ ಸೂರ್ಯಕುಮಾರ್‌ ಯಾದವ್‌ ಅವರ ಜಾಗಕ್ಕೆ ಅಯ್ಯರ್‌ ಬರಬೇಕಾಗುತ್ತದೆ. ಇತ್ತ ಚಾಹಲ್‌ ಈಗಾಗಲೇ ಹಲವು ಸರಣಿಯಲ್ಲಿ ಆಡಿದ ಹಿನ್ನೆಲೆಯಲ್ಲಿ ಅವರು ಈ ಸರಣಿಗೆ ಆಡುವುದು ಅನುಮಾನ.

ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಶಹಬಾದ್ ಅಹ್ಮದ್ ಸಾಲಿನಲ್ಲಿದ್ದಾರೆ. ಇತ್ತ ಬುಮ್ರಾ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಅವರ ಬದಲಿಗೆ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಒಂದು ವೇಳೆ ಬುಮ್ರಾ ಕೂಡ ವಿಶ್ವಕಪ್‌ನಿಂದ ಹೊರಗುಳಿದರೆ, ಸಿರಾಜ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಬಹುದು.

ನಾಲ್ಕರಿಂದ ಆರು ವಾರಗಳ ಕಾಲ ಬುಮ್ರಾ ಔಟ್

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೊಂದಿಗೆ ಟಿ20 ವಿಶ್ವಕಪ್‌ನಿಂದ ಬುಮ್ರಾ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಿಸಿಸಿಐ ದಕ್ಷಿಣ ಆಫ್ರಿಕಾ ಸರಣಿಯ ಬಗ್ಗೆ ಹೇಳಿದೆ, ಆದರೆ ಟಿ 20 ವಿಶ್ವಕಪ್‌ನಲ್ಲಿ ಅವರ ಲಭ್ಯತೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲ, ಆದರೆ ನಾಲ್ಕರಿಂದ ಆರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಟೀಂ ಇಂಡಿಯಾ ಆಟಗಾರರ ಪ್ಲೇಯಿಂಗ್‌ ಇಲೆವೆನ್

ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್/ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್