ಕನ್ನಡ ಸುದ್ದಿ  /  Sports  /  India Vs Sri Lanka 2nd Odi Team India S Bowlers Attacked On Sri Lanka All Out For 215 Runs

India vs Sri Lanka 2nd ODI: ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಲಂಕಾ ತತ್ತರ; 215 ರನ್ ಗೆ ಸರ್ವ ಪತನ

ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಸುನ್ ಶನಕ ನೇತೃತ್ವದ ಶ್ರೀಲಂಕಾ ತಂಡ 215 ರನ್ ಗಳಿಗೆ ಸರ್ವ ಪತನ ಕಂಡಿದೆ.

ಶ್ರೀಲಂಕಾ ಆಟಗಾರನ ವಿಕೆಟ್ ಪಡೆದಾಗ ಕುಲ್ದೀಪ್ ಯಾದವ್ ಅವರನ್ನು ಅಭಿನಂದಿಸಿದ ಗಿಲ್ ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್.(ಫೋಟೋ-AP)
ಶ್ರೀಲಂಕಾ ಆಟಗಾರನ ವಿಕೆಟ್ ಪಡೆದಾಗ ಕುಲ್ದೀಪ್ ಯಾದವ್ ಅವರನ್ನು ಅಭಿನಂದಿಸಿದ ಗಿಲ್ ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್.(ಫೋಟೋ-AP)

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 39.4 ಓವರ್ ಗಳಲ್ಲಿ 215 ರನ್ ಗಳಿಸಿ ಸರ್ವ ಪತನ ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವನ್ನು ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಆರನೇ ಓವರ್ ನ ಕೊನೆಯ ಎಸೆತದಲ್ಲಿ ಎನ್ ಫೆರ್ನಾಂಡೋ ಅವರನ್ನು ಮೊಹಮ್ಮದ್ ಸಿರಾಜ್ ಬೋಲ್ಡ್ ಮಾಡುವ ಮೂಲಕ ವಿಕೆಟ್ ಖಾತೆಯನ್ನು ತೆರೆದರು. ಮುಂದಿನ 10 ಓವರ್ ಗಳಲ್ಲಿ ಯಾವುದೇ ವಿಕೆಟ್ ಬೀಳದಿದ್ದರೂ ಆ ನಂತರ ಮೇಲುಗೈ ಸಾಧಿಸಿದರು. ಪರಿಣಾಮ 39.4 ಓವರ್ ಗಳಲ್ಲಿ ಲಂಕಾ ತಂಡವನ್ನು ಆಲೌಟ್ ಮಾಡಲಾಯಿತು.

ಕಳೆದ ಪಂದ್ಯದಲ್ಲಿ ಶತಕ ಗಳಿಸಿ ಶ್ರೀಲಂಕಾ ತಂಡವನ್ನು 300 ರನ್ ಗಳ ಗಡಿ ದಾಟಿಸಿದ್ದ ನಾಯಕ ದಸುನ್ ಶನಕ ಈ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2, ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು.

ನುವಾನಿದು ಫೆರ್ನಾಂಡೋ(50), ಅವಿಷ್ಕ ಫೆರ್ನಾಂಡೋ(20), ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (34), ಧನಂಜಯ ಡಿ ಸಿಲ್ವ(0), ಚರಿತ್ ಅಸಲಂಕ(15), ನಾಯಕ ದಸುನ್ ಶನಕ (2), ವನಿಂದು ಹಸರಂಗ(21), ದುನಿತ್ ವೆಲ್ಲಲಗೆ(32), ಚಾಮಿಕ ಕರುಣಾರತ್ನೆ(17), ಲಹಿರು ಕುಮಾರ(0), ಕಸುನ್ ರಜಿತ ಔಟಾಗದೆ 17 ರನ್ ಗಳಿಸಿದರು.

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

ಬೆಂಚ್: ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್

ಶ್ರೀಲಂಕಾ ತಂಡ:

ನುವಾನಿದು ಫೆರ್ನಾಂಡೋ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಗೆ, ಲಹಿರು ಕುಮಾರ, ಕಸುನ್ ರಜಿತ

ಬೆಂಚ್: ಮಹೀಶ ಬಂಡರ, ಮಹೀಶ ಬಂಡರ, ಮಹೀಶ ಬಂಡರ, ಮಹೀಶನ ತೀಕ್ಷಣ, ಸದೀರ ಸಮರವಿಕ್ರಮ, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ