ಎಫ್ಐಎಚ್ ಹಾಕಿ ಪ್ರೊ ಲೀಗ್; ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು
ಕನ್ನಡ ಸುದ್ದಿ  /  ಕ್ರೀಡೆ  /  ಎಫ್ಐಎಚ್ ಹಾಕಿ ಪ್ರೊ ಲೀಗ್; ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು

ಎಫ್ಐಎಚ್ ಹಾಕಿ ಪ್ರೊ ಲೀಗ್; ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು

FIH Hockey Pro League: ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾದ ನಾಯಕಿ ಗ್ರೇಸ್ ಸ್ಟೀವರ್ಟ್ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆ ಬಳಿಕ ಟಾಟಮ್ ಸ್ಟೀವರ್ಟ್ ಪಂದ್ಯದ 23ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರೆ, ಕೈಟ್ಲಿನ್ ನಾಬ್ಸ್ 55ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು
ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು (Hockey India)

ಭುವನೇಶ್ವರದ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ಜನವರಿ 8ರ ಬುಧವಾರ ನಡೆದ ಎಫ್ಐಎಚ್ ಹಾಕಿ ಪ್ರೊ ಲೀಗ್ (FIH Hockey Pro League) 2023/24 ಪಂದ್ಯದಲ್ಲಿ ಭಾರತ ವನಿತೆಯರ ಹಾಕಿ ತಂಡವು (Indian women’s hockey team) ಆಸ್ಟ್ರೇಲಿಯಾ ವಿರುದ್ಧ 0-3 ಗೋಲುಗಳಿಂದ ಹೀನಾಯ ಸೋಲು ಅನುಭವಿಸಿತು.

ಭಾರತೀಯ ವನಿತೆಯರ ಕೆಚ್ಚೆದೆಯ ಹೋರಾಟದ ನಡುವೆಯೂ ಮೂರು ಗೋಲು ಗಳಿಸಿದ ಆಸೀಸ್‌, ಮತ್ತೊಮ್ಮೆ ಭಾರತದ ಎದುರು ಪಾರಮ್ಯ ಮೆರೆಯಿತು. ಆಸ್ಟ್ರೇಲಿಯಾದ ನಾಯಕಿ ಗ್ರೇಸ್ ಸ್ಟೀವರ್ಟ್ 19ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆ ಬಳಿಕ ಟಾಟಮ್ ಸ್ಟೀವರ್ಟ್ ಪಂದ್ಯದ 23ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸುವಲ್ಲಿ ಸಫಲರಾದರು. ಕೊನೆಗೆ ಕೈಟ್ಲಿನ್ ನಾಬ್ಸ್ 55ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ | PKL 10: ಪುಣೇರಿ ಪಲ್ಟನ್‌ ಎದುರು ಮುಗ್ಗರಿಸಿದ ಗೂಳಿಗಳು; ಬೆಂಗಳೂರು ಬುಲ್ಸ್ ಪ್ಲೇ ಆಫ್‌ ಪ್ರವೇಶ ಕಷ್ಟ ಕಷ್ಟ

ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಕೂಡಾ ಗೋಲು ಗಳಿಸುವ ಅವಕಾಶಗಳನ್ನು ಪಡೆದವು. ಆದರೆ ಅದನ್ನು ಅಂಕವಾಗಿ ಪರಿವರ್ತಿಸುವಲ್ಲಿ ವಿಫಲವಾದವು. ಮೊದಲ ಕ್ವಾರ್ಟರ್ ಮುಕ್ತಾಯಗೊಳ್ಳುತ್ತಿದ್ದಂತೆ ಬಲಿಷ್ಠ ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ಏಕೆಂದರೆ ಭಾರತವು ಡಿಫೆನ್ಸ್‌ನಲ್ಲಿ ಬಲವಾಗಿತ್ತು.

ಮೊದಲಾರ್ಧದ ಅಂತ್ಯಕ್ಕೆ ಭಾರತ ತಂಡ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ, ಗೋಲು ಗಳಿಸಲು ವಿಫಲವಾಯ್ತು. ಆದರೆ ಅದಾಗಲೇ ಆಸ್ಟ್ರೇಲಿಯಾ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತು.

ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕಳೆದುಕೊಂಡ ಭಾರತ

ಮೂರನೇ ಕ್ವಾರ್ಟರ್‌ನ ಕೊನೆಯ ಹಂತದಲ್ಲಿ ಭಾರತಕ್ಕೆ ಮತ್ತೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತು. ಆದರೆ ಉದಿತಾ ಈ ಅವಕಾಶವನ್ನು ಮಿಸ್‌ ಮಾಡಿಕೊಂಡರು. ಅತ್ತ ಆಸ್ಟ್ರೇಲಿಯಾ ತನ್ನ ಎರಡು ಗೋಲುಗಳ ಮುನ್ನಡೆಯನ್ನು ಉಳಿಸಿಕೊಂಡಿತು.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 3 ಹಾಗೂ 4ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಅಲಭ್ಯ; 5ನೇ ಪಂದ್ಯಕ್ಕೂ ಮರಳೋದು ಅನುಮಾನ

ಕೊನೆಯ ಕ್ವಾರ್ಟರ್‌ನಲ್ಲಿ ಭಾರತದ ಒತ್ತಡ ಹೆಚ್ಚಿತು. ಮುನ್ನಡೆಯಲ್ಲಿದ ಆಸೀಸ್‌ ನಿರಾಳವಾಗಿತ್ತು. ಎರಡು ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್ ನೀಡಲಾಯಿತು. ಆದರೆ ಉದಿತಾ ಮತ್ತು ಮುಮ್ತಾಜ್ ಖಾನ್ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲರಾದರು.

ಕೊನೆಯಲ್ಲಿ ಕೈಟ್ಲಿನ್ ನಾಬ್ಸ್ ಅವರು ಪಂದ್ಯ ಮುಗಿಯಲು ಐದು ನಿಮಿಷಗಳು ಬಾಕಿ ಇರುವಾಗ ಮತ್ತೊಂದು ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾಗೆ 3-0 ಅಂತರದ ಮುನ್ನಡೆ ತಂದುಕೊಟ್ಟರು. ಆಟವು ಕೊನೆಗೊಳ್ಳುತ್ತಿದ್ದಂತೆ ನವನೀತ್ ಗೋಲು ಗಳಿಸಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಕೂಡಾ ಸಫಲವಾಗಲಿಲ್ಲ.

ಇದನ್ನೂ ಓದಿ | ಭಾರತ ಹಾಕಿ ಆಟಗಾರ ವರುಣ್ ಕುಮಾರ್ ಮೇಲೆ ಅತ್ಯಾಚಾರ ಆರೋಪ; ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನಲ್ಲಿ ಪ್ರಕರಣ ದಾಖಲು

ಮುಂದೆ ಭಾರತ ವನಿತೆಯರ ತಂಡವು ತಂಡ ಫೆಬ್ರವರಿ 9ರಂದು ನಡೆಯಲಿರುವ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೆಣಸಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.