ಕನ್ನಡ ಸುದ್ದಿ  /  Sports  /  Indian Cricket In 2023 Full List Of Schedule Fixture Matches Series And Tournaments

Indian cricket Team Schedule 2023: ಏಕದಿನ ವಿಶ್ವಕಪ್, ಏಷ್ಯಾಕಪ್.. 2023ರಲ್ಲಿ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇದು

Indian cricket Team Schedule 2023: ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್‌ನಂತಹ ಮೆಗಾ ಪಂದ್ಯಾವಳಿಗಳೊಂದಿಗೆ 2023 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಈ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ಇದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ (ಫೋಟೋ-ANI/AP)
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ (ಫೋಟೋ-ANI/AP)

2022ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮಿಶ್ರ ಫಲಿತಾಂಶಗಳನ್ನು ನೀಡಿದೆ. ದಕ್ಷಿಣ ಆಫ್ರಿಕಾದ ಕೈಯಲ್ಲಿ ಟೆಸ್ಟ್ ಸರಣಿ ಸೋಲಿನೊಂದಿಗೆ ವರ್ಷ ಪ್ರಾರಂಭವಾಯಿತು. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ನೊಂದಿಗೆ ಕೊನೆಗೊಂಡಿತು.

ಈ ನಡುವೆ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ವೈಫಲ್ಯಗಳನ್ನು ಎದುರಿಸಿದೆ. ಈ ವರ್ಷ ಹಲವು ನಾಯಕರು ಬದಲಾಗಿದ್ದಾರೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ರೇಸ್‌ನಲ್ಲಿ ಭಾರತ ಇನ್ನೂ ಇದೆ ಎಂಬುದು ಅಭಿಮಾನಿಗಳಿಗೆ ಸಮಾಧಾನದ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಹೊಸ ವರ್ಷ 2023ರಲ್ಲಿ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ. ಈ ವರ್ಷವೂ ಏಷ್ಯಾಕಪ್, ಏಕದಿನ ವಿಶ್ವಕಪ್ ಮತ್ತು ಮಹಿಳಾ ಟಿ20 ವಿಶ್ವಕಪ್‌ನಂತಹ ಮೆಗಾ ಟೂರ್ನಿಗಳಿವೆ.

ಜನವರಿ 2023: ಭಾರತ vs ಶ್ರೀಲಂಕಾ (ತವರು ನೆಲದಲ್ಲಿ)

ತವರು ನೆಲದಲ್ಲಿ ಶ್ರೀಲಂಕಾ ವಿರುದ್ಧ ಮೂರು ಟಿ20 ಮತ್ತು ಮೂರು ಏಕಿದಿನ ಸರಣಿಗಳೊಂದಿಗೆ ಭಾರತವು ಹೊಸ ವರ್ಷವನ್ನು ಪ್ರಾರಂಭಿಸಲಿದೆ. ಮೊದಲು ಮೂರು ಟಿ20 ಸರಣಿಯನ್ನು ಆಡಲಿದೆ. ಈ ಪಂದ್ಯಗಳು ಜನವರಿ 3, ಜನವರಿ 5 ಮತ್ತು ಜನವರಿ 7 ರಂದು ಕ್ರಮವಾಗಿ ಮುಂಬೈ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಆ ನಂತರ, ಏಕದಿನ ಸರಣಿ ಆರಂಭವಾಗಲಿದೆ. ಜನವರಿ 10, 12 ಮತ್ತು 15 ರಂದು ಕ್ರಮವಾಗಿ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ಮೂರು ಪಂದ್ಯಗಳು ನಡೆಯಲಿವೆ.

ಜನವರಿ, ಫೆಬ್ರವರಿ 2023: ಭಾರತ vs ನ್ಯೂಜಿಲೆಂಡ್ (ತವರಿನಲ್ಲಿ)

ಶ್ರೀಲಂಕಾ ವಿರುದ್ಧದ ಸರಣಿಗಳ ನಂತರ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ20 ಸರಣಿಗಳನ್ನು ಆಡಲಿದೆ. ಇದರ ಭಾಗವಾಗಿ ಜನವರಿ 18 ರಂದು ಹೈದರಾಬಾದ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಬಳಿಕ ಉಳಿದ ಎರಡು ಏಕದಿನ ಪಂದ್ಯಗಳು ಜನವರಿ 21 ಮತ್ತು 24 ರಂದು ರಾಯ್‌ಪುರ ಮತ್ತು ಇಂದೋರ್‌ನಲ್ಲಿ ನಡೆಯಲಿವೆ. ಟಿ20 ಸರಣಿಯ ಭಾಗವಾಗಿ, ಜನವರಿ 27, 29 ಮತ್ತು ಫೆಬ್ರವರಿ 1 ರಂದು ರಾಂಚಿ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಚುಟುಕು ಪಂದ್ಯಗಳು ನಡೆಯಲಿವೆ.

ಫೆಬ್ರವರಿ, ಮಾರ್ಚ್ 2023: ಭಾರತ vs ಆಸ್ಟ್ರೇಲಿಯಾ (ತವರಿನಲ್ಲಿ)

ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಸರಣಿಗಳನ್ನು ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ನಾಲ್ಕು ಟೆಸ್ಟ್ ಸರಣಿಗಳು ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಸೈಕಲ್‌ನಲ್ಲಿ ಆಡಲಿರುವ ಕೊನೆಯ ಸರಣಿಯಾಗಿದೆ.

ಇದರ ಭಾಗವಾಗಿ, ಮೊದಲ ಟೆಸ್ಟ್ ಫೆಬ್ರವರಿ 9-13 ರವರೆಗೆ ನಾಗ್ಪುರದಲ್ಲಿ, ಎರಡನೇ ಟೆಸ್ಟ್ ಫೆಬ್ರವರಿ 17-21 ರವರೆಗೆ ದೆಹಲಿಯಲ್ಲಿ, ಮೂರನೇ ಟೆಸ್ಟ್ ಮಾರ್ಚ್ 1-5 ರವರೆಗೆ ಧರ್ಮಶಾಲಾದಲ್ಲಿ ಮತ್ತು ನಾಲ್ಕನೇ ಟೆಸ್ಟ್ ಮಾರ್ಚ್ 9-13 ರವರೆಗೆ ಅಹಮದಾಬಾದ್‌ನಲ್ಲಿ ನಡೆಯಿತು. ಆ ಬಳಿಕ ಮೂರು ಏಕದಿನ ಸರಣಿಯೂ ನಡೆಯಲಿದೆ. ಈ ಮೂರು ಟಿ20 ಪಂದ್ಯಗಳು ಮಾರ್ಚ್ 17, 19 ಮತ್ತು 22 ರಂದು ಮುಂಬೈ, ವಿಶಾಖಪಟ್ಟಣ ಮತ್ತು ಚೆನ್ನೈನಲ್ಲಿ ನಡೆಯಲಿವೆ.

ಮಾರ್ಚ್-ಮೇ 2023: ಇಂಡಿಯನ್ ಪ್ರೀಮಿಯರ್ ಲೀಗ್ (IPL)

ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಮಾರ್ಚ್-ಮೇ ನಲ್ಲಿ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲಿದೆ. ಟೀಂ ಇಂಡಿಯಾದ ಹಿರಿಯ, ಕಿರಿಯರ ಜೊತೆಗೆ ಇಂಗ್ಲೆಂಡ್, ಆಸೀಸ್, ದ.ಆಫ್ರಿಕಾ, ವಿಂಡೀಸ್, ಶ್ರೀಲಂಕಾ, ಆಫ್ಘಾನ್ ಆಟಗಾರರು ಈ ಟೂರ್ನಿಯಲ್ಲಿ ಆಡುವ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ,

ಜೂನ್ 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಭಾರತ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ನಿರ್ಣಾಯಕವಾಗಲಿದೆ. ಈ ಸರಣಿಯನ್ನು ಗೆದ್ದರೆ ಜೂನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪ್ರಸ್ತುತ ಆಸ್ಟ್ರೇಲಿಯ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಜುಲೈ/ಆಗಸ್ಟ್ 2023: ವೆಸ್ಟ್ ಇಂಡೀಸ್ vs ಭಾರತ (ವೆಸ್ಟ್ ಇಂಡೀಸ್‌ನಲ್ಲಿ)

ಇದು ವೆಸ್ಟ್ ಇಂಡೀಸ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ಪ್ರವಾಸವಾಗಿದೆ. ಇದರ ಭಾಗವಾಗಿ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ಆದರೆ ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.

ಸೆಪ್ಟೆಂಬರ್ 2023: ಏಷ್ಯಾ ಕಪ್ 2023 (ಪಾಕಿಸ್ತಾನದಲ್ಲಿ)

ಏಷ್ಯಾಕಪ್ 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ. ಯಾವುದೇ ಕಾರಣಕ್ಕೂ ಆ ದೇಶಕ್ಕೆ ಹೋಗುವುದಿಲ್ಲ ಎಂದಿರುವ ಬಿಸಿಸಿಐ, ಏಷ್ಯಾಕಪ್ ಪಂದ್ಯಾವಳಿಯ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನಿಸುವುದಾಗಿ ಹೇಳಿದೆ. ಸದ್ಯಕ್ಕೆ ಟೂರ್ನಿ ನಡೆಯುವ ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಟೂರ್ನಿಗೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಏನಾಗುತ್ತದೋ ಕಾದು ನೋಡಬೇಕಿದೆ.

ಅಕ್ಟೋಬರ್ 2023: ಭಾರತ vs ಆಸ್ಟ್ರೇಲಿಯಾ (ತವರಿನಲ್ಲಿ)

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡ ಮೂರು ಏಕದಿನ ಸರಣಿಗೆ ಆಗಮಿಸಲಿದೆ. ಮೆಗಾ ಟೂರ್ನಿಯ ಸಿದ್ಧತೆಯ ಭಾಗವಾಗಿ ಈ ಸರಣಿ ನಡೆಯಲಿದೆ.

ಅಕ್ಟೋಬರ್/ನವೆಂಬರ್ 2023: ICC ಪುರುಷರ ಕ್ರಿಕೆಟ್ ವಿಶ್ವಕಪ್

ಮೊದಲ ಬಾರಿಗೆ ಭಾರತ ಮಾತ್ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. ಭಾರತವು 1987, 1996 ಮತ್ತು 2011 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ದೇಶಗಳೊಂದಿಗೆ ಜಂಟಿಯಾಗಿ ಮಹಾಟೂರ್ನಿಯನ್ನು ಆಯೋಜಿಸಿತ್ತು. ಈ ಬಾರಿಯ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಮಾತ್ರ ನಡೆಯಲಿವೆ.

ನವೆಂಬರ್/ಡಿಸೆಂಬರ್ 2023: ಆಸ್ಟ್ರೇಲಿಯಾ ವಿರುದ್ಧ ಭಾರತ (ತವರಿನಲ್ಲಿ)

2023ರಲ್ಲಿ ಆಸ್ಟ್ರೇಲಿಯಾ ತಂಡ ಮೂರನೇ ಬಾರಿ ಭಾರತಕ್ಕೆ ಬರಲಿದೆ. ಇದರ ಭಾಗವಾಗಿ ಐದು ಟಿ20 ಸರಣಿಗಳು ನಡೆಯಲಿವೆ.

ಡಿಸೆಂಬರ್ 2023: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ದಕ್ಷಿಣ ಆಫ್ರಿಕಾದಲ್ಲಿ)

ಭಾರತವು 2023 ರ ವರ್ಷವನ್ನು ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಕೊನೆಗೊಳಿಸಲಿದೆ. ಇದು ಸಂಪೂರ್ಣ ಪ್ರವಾಸವಾಗಿದೆ. ಅಂದರೆ ಈ ಪ್ರವಾಸದ ಭಾಗವಾಗಿ ಭಾರತ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ.