ಐಎಸ್ಎಲ್ ಪ್ಲೇಆಫ್ ವೇಳಾಪಟ್ಟಿ: ಅರ್ಹತೆ ಪಡೆದ ತಂಡಗಳು, ನಾಕೌಟ್ ಸುತ್ತು, ಸೆಮಿಫೈನಲ್, ಫೈನಲ್ ದಿನಾಂಕ ಹೀಗಿದೆ
Indian Super League 2024-25: ಇಂಡಿಯನ್ ಸೂಪರ್ ಲೀಗ್ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಇದೀಗ ಪ್ಲೇಆಫ್ ಪಂದ್ಯಗಳ ಕದನಕ್ಕೆ ವೇದಿಕೆ ಸಜ್ಜಾಗಿದೆ.

ಇಂಡಿಯನ್ ಸೂಪರ್ ಲೀಗ್ (ISL) 2024-25 ಲೀಗ್ ಹಂತ ಮುಕ್ತಾಯಗೊಂಡಿದ್ದು, ರೋಮಾಂಚಕಾರಿ ಪ್ಲೇಆಫ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಎಫ್‌ಸಿ ಗೋವಾ ನೇರ ಸೆಮಿಫೈನಲ್ ಸ್ಥಾನ ಪಡೆದುಕೊಂಡಿದ್ದು, ಬೆಂಗಳೂರು ಎಫ್‌ಸಿ, ಜೆಮ್ಶೆಡ್‌ಪುರ ಎಫ್‌ಸಿ, ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ನಾಕೌಟ್ ಸುತ್ತಿನಲ್ಲಿ ಹೋರಾಡಲಿವೆ.
ನಾಕೌಟ್ ಪಂದ್ಯಗಳು ಮಾರ್ಚ್ 29 ಮತ್ತು 30, 2025ರಂದು ನಡೆಯಲಿವೆ. ನಂತರ ಏಪ್ರಿಲ್ 2 ಮತ್ತು 3 ರಂದು ಸೆಮಿಫೈನಲ್ ಮೊದಲ ಲೆಗ್‌ಗಳು ಮತ್ತು ಏಪ್ರಿಲ್ 6 ಮತ್ತು 7 ರಂದು ಎರಡನೇ ಲೆಗ್‌ಗಳು ನಡೆಯಲಿವೆ. ವಿಜೇತರು ಫೈನಲ್ಗೆ ಎಂಟ್ರಿಕೊಡುತ್ತಾರೆ. ಲೀಗ್ ಹಂತವು ಮಾರ್ಚ್ 12 ರಂದು ಮುಕ್ತಾಯಗೊಂಡಿತು. ಆದರೆ ಭಾರತೀಯ ಪುರುಷರ ರಾಷ್ಟ್ರೀಯ ತಂಡವು ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಪ್ಲೇಆಫ್ ಪಂದ್ಯಗಳನ್ನು ತಡವಾಗಿ ನಡೆಸಲಾಗುತ್ತಿದೆ.
ಐಎಸ್ಎಲ್ 2024-25 ಪ್ಲೇಆಫ್ ಸ್ವರೂಪ
ಲೀಗ್ ಹಂತದ ನಂತರ ಅಗ್ರ ಆರು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತವೆ. ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ನೇರವಾಗಿ ಅರ್ಹತೆ ಗಳಿಸುತ್ತವೆ. 3, 4, 5, 6ನೇ ಸ್ಥಾನಿಗಳು ನಾಕೌಟ್ ಸುತ್ತಿನಲ್ಲಿ ಸೆಣಸಾಟ ನಡೆಸಲಿವೆ. ಒಡಿಶಾ ಎಫ್‌ಸಿ ವಿರುದ್ಧ 1-0 ಅಂತರದ ಜಯದೊಂದಿಗೆ ಮೋಹನ್ ಬಗಾನ್ ಎಸ್‌ಜಿ ತಮ್ಮ ಪ್ಲೇಆಫ್ ಸ್ಥಾನವನ್ನು ಮೊದಲೇ ಖಚಿತಪಡಿಸಿಕೊಂಡರೆ, ಕೇರಳ ಬ್ಲಾಸ್ಟರ್ಸ್ ವಿರುದ್ಧ 1-1 ಡ್ರಾ ನಂತರ ಎಫ್‌ಸಿ ಗೋವಾ ತಂಡವು ಎರಡನೇ ಸ್ಥಾನ ಪಡೆದುಕೊಂಡಿತು.
ಚೆನ್ನೈಯಿನ್ ಎಫ್‌ಸಿ ವಿರುದ್ಧ 1-0 ಅಂತರದ ಜಯದೊಂದಿಗೆ ಬೆಂಗಳೂರು ಎಫ್‌ಸಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರೆ, ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಜೆಮ್‌ಶೆಡ್‌ಪುರ ಎಫ್‌ಸಿ ಕೂಡ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡವು. ಬೆಂಗಳೂರು ಎಫ್‌ಸಿ ವಿರುದ್ಧ 2-0 ಅಂತರದ ನಿರ್ಣಾಯಕ ಜಯ ಸಾಧಿಸಿದ ನಂತರ ಮುಂಬೈ ಸಿಟಿ ಎಫ್‌ಸಿ ಅಂತಿಮ ಸ್ಥಾನವನ್ನು ಪಡೆದುಕೊಂಡಿತು.
ನಾಕೌಟ್ ಸುತ್ತು – ಮಾರ್ಚ್ 29 ಮತ್ತು 30, 2025
ಬೆಂಗಳೂರು ಎಫ್‌ಸಿ vs ಮುಂಬೈ ಸಿಟಿ ಎಫ್‌ಸಿ - ಶ್ರೀ ಕಂಠೀರವ ಸ್ಟೇಡಿಯಂ, ಬೆಂಗಳೂರು (ಸಂಜೆ 7:30)
ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ vs ಜೆಮ್ಶೆಡ್‌ಪುರ ಎಫ್‌ಸಿ - ಜವಾಹರಲಾಲ್ ನೆಹರು ಕ್ರೀಡಾಂಗಣ, ಶಿಲ್ಲಾಂಗ್ (ಸಂಜೆ 7:30)
ಸೆಮಿಫೈನಲ್ಸ್ - ಮೊದಲ ಹಂತ: ಏಪ್ರಿಲ್ 2 ಮತ್ತು 3, 2025
TBD vs ಮೋಹನ್ ಬಗಾನ್ ಎಸ್‌ಜಿ - TBD (ಸಂಜೆ 7:30)
TBD vs ಗೋವಾ ಎಫ್‌ಸಿ - ಟಿಬಿಡಿ (ಸಂಜೆ 7:30)
TBD - ಅಂದರೆ ಇನ್ನೂ ತಂಡ ನಿರ್ಧಾರವಾಗಿಲ್ಲ ಎಂದರ್ಥ
ಸೆಮಿಫೈನಲ್ಸ್ - ಎರಡನೇ ಹಂತ: ಏಪ್ರಿಲ್ 6 ಮತ್ತು 7, 2025
ಮೋಹನ್ ಬಗಾನ್ ಎಸ್‌ಜಿ vs TBD - ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ, ಕೋಲ್ಕತ್ತಾ (ಸಂಜೆ 7:30)
ಗೋವಾ ಎಫ್‌ಸಿ vs TBD - ಜವಾಹರಲಾಲ್ ನೆಹರು ಕ್ರೀಡಾಂಗಣ, ಗೋವಾ (ಸಂಜೆ 7:30)
ಐಎಸ್ಎಲ್ 2024-25 ಫೈನಲ್
ದಿನಾಂಕ ಘೋಷಣೆಯಾಗಿಲ್ಲ. ಲೀಗ್ ಟೇಬಲ್‌ನಲ್ಲಿ ಉನ್ನತ ಸ್ಥಾನ ಪಡೆದ ತಂಡದ ತವರು ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
