ಕನ್ನಡ ಸುದ್ದಿ  /  ಕ್ರೀಡೆ  /  ಆರ್ಚರಿ ವಿಶ್ವಕಪ್;‌ ಭಾರತ ಮಹಿಳಾ ಕಾಂಪೌಂಡ್ ತಂಡಕ್ಕೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮಿಶ್ರ ತಂಡ

ಆರ್ಚರಿ ವಿಶ್ವಕಪ್;‌ ಭಾರತ ಮಹಿಳಾ ಕಾಂಪೌಂಡ್ ತಂಡಕ್ಕೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮಿಶ್ರ ತಂಡ

ವಿಶ್ವದ ನಂಬರ್‌ 1 ಭಾರತೀಯ ಕಾಂಪೌಂಡ್ ಮಹಿಳಾ ತಂಡವು, ಟರ್ಕಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಚಿನ್ನ ಗೆದ್ದುಕೊಂಡಿದೆ.

ಭಾರತ ಮಹಿಳಾ ಕಾಂಪೌಂಡ್ ತಂಡಕ್ಕೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮಿಶ್ರ ತಂಡ
ಭಾರತ ಮಹಿಳಾ ಕಾಂಪೌಂಡ್ ತಂಡಕ್ಕೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮಿಶ್ರ ತಂಡ (PTI)

ಆರ್ಚರಿ ವಿಶ್ವಕಪ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನೊಳಗೊಂಡ ಮಹಿಳಾ ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಸತತ ಮೂರನೇ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ವೇಳೆ ಭಾರತದ ಮಿಶ್ರ ತಂಡವು ಎರಡನೇ ಹಂತದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದೆ. ದಕ್ಷಿಣ ಕೊರಿಯಾದ ಯೆಚಿಯಾನನ್‌ನಲ್ಲಿ ಶನಿವಾರ ನಡೆದ ಹಂತ ಎರಡನೇ ಸುತ್ತಿನಲ್ಲಿ ಭಾರತೀಯರು ಸಾಧನೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವದ ನಂ.1 ಭಾರತೀಯ ಕಾಂಪೌಂಡ್ ಮಹಿಳಾ ತಂಡವು ಟರ್ಕಿಯ ಹಜಲ್ ಬುರುನ್, ಅಯ್ಸೆ ಬೆರಾ ಸುಜರ್ ಮತ್ತು ಬೇಗಂ ತ್ರಿವಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಒಂದೇ ಒಂದು ಸೆಟ್ ಸೋಲದೆ ಗೆದ್ದು ಬೀಗಿದರು.

ಈ ಗೆಲುವಿನೊಂದಿಗೆ ಜ್ಯೋತಿ, ಪರ್ನೀತ್ ಮತ್ತು ವಿಶ್ವ ಚಾಂಪಿಯನ್ ಅದಿತಿ ಜೊತೆಯಾಗಿ ವಿಶ್ವಕಪ್ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಈ ಹಿಂದೆ ಶಾಂಘೈನಲ್ಲಿ ನಡೆದ ಋತುವಿನ ಆರಂಭಿಕ ವಿಶ್ವಕಪ್ ಹಂತ ಒಂದನ್ನು ಗೆದ್ದಿದ್ದ ತ್ರಿವಳಿಗಳು, ಆ ಬಳಿಕ ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ಈವೆಂಟ್‌ನ ನಾಲ್ಕನೇ ಹಂತದಲ್ಲಿ ಬಂಗಾರದ ಸಾಧನೆ ಮಾಡಿದ್ದರು.

ಅತ್ತ ಏಷ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿ ಅವರು, ಪ್ರಿಯಾಂಶ್ ಅವರೊಂದಿಗೆ ಕಾಂಪೌಂಡ್ ಮಿಶ್ರ ತಂಡದ ಆರಂಭಿಕ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು. ಆದರೆ, ಫೈನಲ್‌ನಲ್ಲಿ ಅಮೆರಿಕದ ಒಲಿವಿಯಾ ಡೀನ್ ಮತ್ತು ಸಾಯರ್ ಸುಲ್ಲಿವಾನ್ ವಿರುದ್ಧ ಕೇವಲ ಎರಡು ಅಂಕಗಳ ಅಂತರದಿಂದ (155-153) ಸೋಲು ಕಂಡರು.

ಪ್ರಥಮೇಶ್‌ಗೆ ಸೋಲು

ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್‌ನ ಶೂಟ್-ಆಫ್‌ನಲ್ಲಿ ನೆದರ್ಲೆಂಡ್ಸ್‌ನ ಮೈಕ್ ಸ್ಕ್ಲೋಸರ್ ವಿರುದ್ಧ ಯುವ ಆಟಗಾರ ಪ್ರಥಮೇಶ್ ಫು ಸೋತರು. ಹೀಗಾಗಿ ಭಾರತದ ಬಿಲ್ಲುಗಾರರು ಕಾಂಪೌಂಡ್ ವಿಭಾಗದಲ್ಲಿ ಮೂರನೇ ಪದಕ ಗೆಲ್ಲಲು ವಿಫಲರಾದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ