ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ ಮಹಿಳಾ ಕಾಂಪೌಂಡ್ ತಂಡ
ಕನ್ನಡ ಸುದ್ದಿ  /  ಕ್ರೀಡೆ  /  ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ ಮಹಿಳಾ ಕಾಂಪೌಂಡ್ ತಂಡ

ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ ಮಹಿಳಾ ಕಾಂಪೌಂಡ್ ತಂಡ

ಭಾರತ ವನಿತೆಯರ ಆರ್ಚರಿ ತಂಡವು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಮೂವರ ಬಿಲ್ಲುಗಾರಿಕೆ ತಂಡ ಅಜೇಯ ಗೆಲುವಿನ ಓಟ ಮುಂದುವರೆಸಿದೆ.

ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ ಮಹಿಳಾ ಕಾಂಪೌಂಡ್ ತಂಡ
ಆರ್ಚರಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಭಾರತ ಮಹಿಳಾ ಕಾಂಪೌಂಡ್ ತಂಡ

ಆರ್ಚರಿ ವಿಶ್ವಕಪ್‌ನಲ್ಲಿ (Archery World Cup) ಭಾರತ ವನಿತೆಯರ ತಂಡವು ಹ್ಯಾಟ್ರಿಕ್‌ ಚಿನ್ನ ಗೆದ್ದಿದೆ. ಮಹಿಳಾ ಕಾಂಪೌಂಡ್ ಆರ್ಚರಿ ತಂಡವು ವಿಶ್ವಕಪ್‌ ಚಿನ್ನದೊಂದಿಗೆ ಮುಂದೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಬಂಗಾರದ ಪದಕ ಗೆಲ್ಲುವ ಕನಸು ಕಾಣುತ್ತಿದೆ. ಭಾರತದ ಕಾಂಪೌಂಡ್ ವನಿತೆಯರ ಬಿಲ್ಲುಗಾರಿಕೆ ತಂಡವು ಜೂನ್‌ 22ರ ಶನಿವಾರ ನಡೆದ ವಿಶ್ವಕಪ್ ಸ್ಪರ್ಧೆಯ ಮೂರನೇ ಲೆಗ್‌ನಲ್ಲಿ ಎಸ್ಟೋನಿಯಾ ತಂಡವನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದ್ದಾರೆ.

ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಭಾರತ ಸಂಯುಕ್ತ ಮಹಿಳಾ ಆರ್ಚರಿ ತಂಡವು ಈ ಋತುವಿನಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಮೂರನೇ ಹಂತದಲ್ಲಿ ಎಸ್ಟೋನಿಯಾ ವಿರುದ್ಧ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಗ್ರ ಶ್ರೇಯಾಂಕದೊಂದಿಗೆ ಅರ್ಹತೆ ಪಡೆದಿದ್ದ ಈ ಮೂವರು, ಟರ್ಕಿಯ ಅಂಟಲ್ಯದಲ್ಲಿ ನಡೆದ ಫೈನಲ್‌ನಲ್ಲಿಯೂ ಮುನ್ನಡೆ ಸಾಧಿಸಿದರು. ಎಸ್ಟೋನಿಯಾದ ಎದುರಾಳಿಗಳಾದ ಲಿಸೆಲ್ ಜಾತ್ಮಾ, ಮೀರಿ-ಮರಿಟಾ ಪಾಸ್ ಮತ್ತು ಮಾರಿಸ್ ಟೆಟ್ಸ್‌ಮನ್ ಅವರನ್ನು 232-229 ಅಂಕಗಳ ರೋಚಕ ಅಂತರದಿಂದ ಸೋಲಿಸಿದರು.

ಮಹಿಳಾ ಸಂಯುಕ್ತ ತಂಡವು ಈ ಋತುವಿನಲ್ಲಿ ಅಜೇಯವಾಗಿ ಮುನ್ನಡೆದಿದೆ. ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇವರು ಕ್ರಮವಾಗಿ ಶಾಂಘೈ ಮತ್ತು ಯೆಚಿಯೋನ್‌ನಲ್ಲಿ ವಿಶ್ವಕಪ್ ಹಂತ 1 ಮತ್ತು ಹಂತ 2ರಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಜ್ಯೋತಿ, ಅದಿತಿ ಮತ್ತು ಪರ್ನೀತ್ ಮುಂದೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸದ್ಲಿದೆ. ವಿಶ್ವಕಪ್‌ ಚಿನ್ನವು ಅವರ ವಿಶ್ವಾಸ ಹೆಚ್ಚಿಸಿದೆ.

ಅತ್ತ ಭಾರತದ ಪುರುಷ ಕಂಪೌಂಡ್ ಬಿಲ್ಲುಗಾರ ಪ್ರಿಯಾಂಶ್ ಮುಂದಿನ ದಿನದಲ್ಲಿ ಕಂಚಿನ ಪದಕ್ಕಾಗಿ ಹೋರಾಡಲಿದ್ದಾರೆ. ಮತ್ತೊಂದೆಡೆ ರಿಕರ್ವ್ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಕೂಡ ವೈಯಕ್ತಿಕ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.