ಕನ್ನಡ ಸುದ್ದಿ  /  Sports  /  Interesting Facts About Steve Smith Wife Dani Villis And Their Love Story

ಮೊದಲ ನೋಟದಲ್ಲೇ ಪ್ರೀತಿ.. 7 ವರ್ಷ ಡೇಟಿಂಗ್.. ಸ್ಟೀವ್ ಸ್ಮಿತ್- ಡ್ಯಾನಿ ವಿಲ್ಲಿಸ್​​​ ಸುಂದರ ಪ್ರೇಮಕಥೆ!

ಆನ್​ಫೀಲ್ಡ್​​ನಲ್ಲಿ ಸದಾ ಅದ್ಭುತ ತಂತ್ರಗಳ ಮೂಲಕ ಎದುರಾಳಿಯನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿರುವ ಸ್ಮಿತ್​, ಆಫ್​ ಫೀಲ್ಡ್​​​ನಲ್ಲೂ ಹುಡುಗಿಯರನ್ನು ಪಟಾಯಿಸುವ ಚಾಲಾಕಿ ಕೂಡ ಹೌದು.! ನೀವೇ ಓದಿ, ಸ್ಟೀವ್​​​ ಸ್ಮಿತ್ ಮತ್ತು ಪತ್ನಿ ಡ್ಯಾನಿ ವಿಲ್ಲಿಸ್ ಅವರ ಲವ್​ಸ್ಟೋರಿ (Steve Smith Dani Willis love story) ಹೇಗಿತ್ತು ಅಂತ.!

ಸ್ಟೀವ್​​​ ಸ್ಮಿತ್ ಮತ್ತು ಪತ್ನಿ ಡ್ಯಾನಿ ವಿಲ್ಲಿಸ್
ಸ್ಟೀವ್​​​ ಸ್ಮಿತ್ ಮತ್ತು ಪತ್ನಿ ಡ್ಯಾನಿ ವಿಲ್ಲಿಸ್

ಪ್ರತಿಷ್ಠಿತ ಬಾರ್ಡರ್​ - ಗವಾಸ್ಕರ್​ ಟ್ರೋಫಿ (Border - Gavaskar Trophy) ಗೆದ್ದ ಟೀಮ್​ ಇಂಡಿಯಾ (Team India), ಏಕದಿನ ಸರಣಿಯಲ್ಲಿ ಮಕಾಡೆ ಮಲಗಿತು. ಕಳಪೆ ಪ್ರದರ್ಶನ ತೋರಿದ ರೋಹಿತ್​ ಪಡೆ, 1-2ರಲ್ಲಿ ಸರಣಿ ಸೋತಿದೆ. ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಆದರೆ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್ (Steve Smith)​ ನಾಯಕತ್ವಕ್ಕೆ ಫುಲ್​ ಮಾರ್ಕ್ಸ್​​​ ಸಿಕ್ಕಿದೆ.

ಅದ್ಭುತ ಕ್ಯಾಪ್ಟನ್ಸಿ ಮೂಲಕ ಗಮನ ಸೆಳೆದಿರುವ ಸ್ಟೀವ್​ ಸ್ಮಿತ್​​, ಭಾರತ ತಂಡಕ್ಕೆ ತವರಿನಲ್ಲೇ ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ. ಚಾಣಾಕ್ಷ ನಾಯಕತ್ವಕ್ಕೆ ದಿಗ್ಗಜ ಕ್ರಿಕೆಟಿಗರೇ ಭೇಷ್​​​ ಎಂದಿದ್ದಾರೆ. ಸದಾ ಯೋಚನೆಯಲ್ಲೇ ಮಗ್ನರಾಗಿರುವ ರೀತಿ ಕಾಣುವ ಸ್ಟೀವ್​ ಸ್ಮಿತ್​ರ​​​​​ ಲವ್​​ಸ್ಟೋರಿ ನಿಮಗೆ ಯಾರಿಗಾದರೂ ಗೊತ್ತಾ? ಈ ಮುಂದೆ ನೋಡೋಣ.!

ಆನ್​ಫೀಲ್ಡ್​​ನಲ್ಲಿ ಸದಾ ಅದ್ಭುತ ತಂತ್ರಗಳ ಮೂಲಕ ಎದುರಾಳಿಯನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿರುವ ಸ್ಮಿತ್​, ಆಫ್​ ಫೀಲ್ಡ್​​​ನಲ್ಲೂ ಹುಡುಗಿಯರನ್ನು ಪಟಾಯಿಸುವ ಚಾಲಾಕಿ ಕೂಡ ಹೌದು.! ನೀವೇ ಓದಿ, ಸ್ಟೀವ್​​​ ಸ್ಮಿತ್ ಮತ್ತು ಪತ್ನಿ ಡ್ಯಾನಿ ವಿಲ್ಲಿಸ್ ಅವರ ಲವ್​ಸ್ಟೋರಿ (Steve Smith Dani Willis love story) ಹೇಗಿತ್ತು ಅಂತ.!

ಡ್ಯಾನಿ ವಿಲ್ಲಿಸ್.. ಸುಂದರಿ.. ನಗುವಿನ ಒಡತಿ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಮುಖ. ಮನಮೋಹಕ ಚೆಲುವೆ. ಅಂತಹ ಬ್ಯೂಟಿಗೆ ಬೋಲ್ಡ್​ ಆಗಿದ್ದ ಸ್ಮಿತ್​, ಮೊದಲ ನೋಟದಲ್ಲೇ ಫಿದಾ ಆಗಿದ್ದರಂತೆ. ಬಳಿಕ ಪ್ರಪೋಸ್​ ಮಾಡಿದ್ದರಂತೆ. ಇನ್ನೂ ಗಾರ್ಜಿಯಸ್​ ಡ್ಯಾನಿ ವಿಲ್ಲಿಸ್​​​​​, ವಕೀಲರು ಎಂಬುದು ವಿಶೇಷ.

ಸ್ಮಿತ್ ಕ್ರಿಕೆಟಿಗರಾಗಿದ್ದರೆ, ಅವರ ಪತ್ನಿ ವಕೀಲೆ. ಅವರು 2017 ರಲ್ಲಿ ಮ್ಯಾಕ್ವಾರಿ ವಿಶ್ವ ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ಡ್ಯಾನಿ ವಿಲ್ಲಿಸ್ ಮತ್ತು ಸ್ಟೀವ್ ಸ್ಮಿತ್ ಮೊದಲ ಬಾರಿಗೆ ಭೇಟಿಯಾಗಿದ್ದು 2011ರಲ್ಲಿ. ಅದು ಬಿಗ್ ಬ್ಯಾಷ್ ಲೀಗ್‌ ಉದ್ಘಾಟನಾ ಸಮಾರಂಭ. ಅಲ್ಲಿನ ಬಾರ್‌ವೊಂದರಲ್ಲಿ ಆಕೆಯನ್ನು ನೋಡಿದ ಮೊದಲ ನೋಟದಲ್ಲೇ ಸ್ಮಿತ್​ ಫಿದಾ ಆಗಿದ್ದರಂತೆ. ಮೊದಲ ಭೇಟಿಯಲ್ಲೇ ಪ್ರೇಮಾಂಕುರ ಮೊಳಕೆಯೊಡೆದಿತ್ತು ಎಂದು ಈ ಹಿಂದೆ ಸ್ಮಿತ್​ ಹೇಳಿಕೊಂಡಿದ್ದರು.

ಮೊದಲ ಭೇಟಿಯ ಬಳಿಕ ಪರಸ್ಪರ ಸ್ನೇಹಿತರಾದ ಈ ಜೋಡಿ, 7 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಸ್ಮಿತ್ ಡೇಟಿಂಗ್ ಪ್ರಾರಂಭಿಸಿದಾಗ ಡ್ಯಾನಿ ಇನ್ನೂ ಓದುತಿದ್ದರು ಎಂಬುದು ವಿಶೇಷ. ಬರೋಬ್ಬರಿ 7 ವರ್ಷಗಳ ಬಳಿಕ ಡೇಟ್​ ನಡೆಸಿದ ಸ್ಮಿತ್​, 2017 ರಲ್ಲಿ ಡ್ಯಾನಿಗೆ ಪ್ರಪೋಸ್ ಮಾಡಿದ್ದರು. ಇದಕ್ಕೆ ಡ್ಯಾನಿ ಕೂಡ ಒಪ್ಪಿಗೆ ಸೂಚಿಸಿದ್ದರು. ಇಬ್ಬರೂ 2018 ರಲ್ಲಿ ವಿವಾಹವಾದರು.

ಕಾಲೇಜಿನಲ್ಲಿದ್ದಾಗ ಡ್ಯಾನಿ ಅತ್ತುತ್ತಮ ಕ್ರೀಡಾಪಟು ಕೂಡ ಆಗಿದ್ದರು. ಆಕೆ ಈಜುಗಾರ್ತಿ ಹಾಗೂ ಪೊಲೊ ಆಟಗಾರ್ತಿ. ಅದರಲ್ಲೂ ಬಾಲ್​ ಟ್ಯಾಂಪರಿಂಗ್​ ಪ್ರಕರಣದಲ್ಲಿ ಸ್ಮಿತ್​ ನಿಷೇಧಗೊಂಡ ಸಂದರ್ಭದಲ್ಲಿ ಅವರ ಪರವಾಗಿ ಪತ್ನಿ ನಿಂತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಸ್ಮಿತ್​ ಪರ ಹೋರಾಟ ನಡೆಸಿದ್ದಳು. ಸ್ಮಿತ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರತಿ ವರ್ಷ ಭಾರತಕ್ಕೆ ಬರುತ್ತಿದ್ದ ಸ್ಮಿತ್​ ಪತ್ನಿ

ಸ್ಟೀವ್​ ಸ್ಮಿತ್​ ಐಪಿಎಲ್​ ಆಡುತ್ತಿದ್ದ ಪ್ರತಿ ಬಾರಿಯೂ ಭಾರತಕ್ಕೆ ಪತ್ನಿಯನ್ನು ಕರೆ ತರುತ್ತಿದ್ದರು. ಆದರೆ ಈ ಬಾರಿ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರನ್ನು ನೋಡುವ ಅವಕಾಶ ಫ್ಯಾನ್ಸ್​ಗೆ ಸಿಗುವುದಿಲ್ಲ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಹೆಚ್ಚಿನ ಅವಕಾಶಗಳು ಸಿಗದ ಕಾರಣ ಸ್ಮಿತ್ ಈ ಬಾರಿಯ IPL ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರಲಿಲ್ಲ.