ಕನ್ನಡ ಸುದ್ದಿ  /  ಕ್ರೀಡೆ  /  Chess Gm Tournament 2024: ಬೆಂಗಳೂರಿಗೆ ಒಲಿದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ; 2024ರ ಜನವರಿಯಲ್ಲಿ ಚದುರಂಗದಾಟ

Chess GM Tournament 2024: ಬೆಂಗಳೂರಿಗೆ ಒಲಿದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ; 2024ರ ಜನವರಿಯಲ್ಲಿ ಚದುರಂಗದಾಟ

2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ನಡೆಯಲಿದೆ.ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಜಿಎಂ ಓಪನ್ ಚೆಸ್ ಟೂರ್ನಿ ನಡೆಸುವ ಅವಕಾಶ ಪಡೆದಿದೆ.

2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ನಡೆಯಲಿದೆ. ಕರ್ನಾಟಕದ ಕ್ರೀಡಾ ಪದಾಧಿಕಾರಿಗಳು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.
2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ನಡೆಯಲಿದೆ. ಕರ್ನಾಟಕದ ಕ್ರೀಡಾ ಪದಾಧಿಕಾರಿಗಳು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಯನ್ನು (International Grand Master Open Chess Tournament) ಆಯೋಜಿಸುವ ಅವಕಾಶ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ (Karnataka) ಒಲಿದು ಬಂದಿದೆ. 2024ರ ಜನವರಿ 18 ರಿಂದ 26ರ ವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಚೆಸ್ ಅಸೋಸಿಯೇಷನ್, ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನಲ್ಲಿ (Bangalore) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ಮೆಂಟ್ ಆಯೋಜಿಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ (BUDCA) ಟೂರ್ನಿ ಅಚ್ಚುಕಟ್ಟಾಗಿ ನಡೆಯಲು ಕೈ ಜೋಡಿಸಲಿದೆ.

ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ನೆಹರು ಯುವ ಕೇಂದ್ರ ಸಂಘಟನೆ, ಕೇಂದ್ರ, ರಾಜ್ಯ ಸರ್ಕಾರಗಳ ಬೆಂಬಲ ಈ ಮಹತ್ವದ ಟೂರ್ನಿಗೆ ಇರಲಿದೆ.

ಗ್ರ್ಯಾಂಡ್ ಮಾಸ್ಟರ್ಸ್ ಸೇರಿ 18 ದೇಶಗಳಿಂದ 1,500 ಸ್ಪರ್ಧಿಗಳು ಭಾಗಿ

ಟೂರ್ನಿಯಲ್ಲಿ 50 ಗ್ರ್ಯಾಂಡ್ ಮಾಸ್ಟರ್‌ಗಳು ಸೇರಿದಂತೆ ಭಾರತ ಹಾಗೂ 18 ದೇಶಗಳ 1,500 ಆಟಗಾರರು ಟೂರ್ಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ನೋಡಬೇಕೆಂದು ಅಂದುಕೊಂಡಿದ್ದ ಇತರೆ ದೇಶದಗ ಕ್ರೀಡಾಪಟುಗಳಿಗೆ ಇಂದೊಂದು ಅತ್ಯುತ್ತಮ ಅವಕಾಶವಾಗಿದೆ. ಭಾರತದಲ್ಲಿ ಚೆಸ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಆ ಸ್ಪರ್ಧಿಗಳು ಸಾಕ್ಷಿಯಾಗಲಿದ್ದಾರೆ.

ಭಾರತೀಯ ಚೆಟ್ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಇದರಿಂದ ಯುವ ಪೀಳಿಗೆ ಚೆಸ್ ಆಟದತ್ತ ಆಕರ್ಷಿತವಾಗಲು ನೆರವಾಗುತ್ತಿದೆ. ಡಿ ಗುಕೇಶ್, ಆರ್ ಪ್ರಜ್ಞಾನಂದ, ಅರ್ಜುನ್ ಎರಿಗೈಸಿ ಮತ್ತು ನಿಹಾಲ್ ಸರಿನ್ ಅವರಂತಹ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಮೂಲಕ ಭಾರತೀಯ ಚೆಸ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಆಯಾಮವನ್ನು ನೀಡುತ್ತಿದ್ದಾರೆ. ಚೆಸ್ ವಿಶ್ವಕಪ್‌ನಲ್ಲಿ ಆರ್ ಪ್ರಜ್ಞಾನಂದ ಫೈನಲ್ ತಲುಪಿ ಕೊನೆಯ ವರೆಗೆ ಅವರು ನಡೆಸಿದ ಹೋರಾಟ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದ್ದರು.

ಜನಪ್ರಿಯತೆ ಆಗುತ್ತಿದ್ದರೂ ಭಾರತದಲ್ಲಿ ಚೆಸ್ ಪ್ರಾಯೋಜಕತ್ವದ ಸವಾಲು

ಹೆಚ್ಚುತ್ತಿರುವ ಜನಪ್ರಿಯತೆಯ ಹೊರತಾಗಿಯೂ ಭಾರತದಲ್ಲಿ ಚೆಸ್ ಪ್ರಾಯೋಜಕತ್ವದ ಸವಾಲುಗಳು ಎದುರಾಗಿವೆ. ಕಾರ್ಪೊರೇಟ್ ಸಂಸ್ಥೆಗಳು ಈ ಕ್ರೀಡೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಇದು ಸಕಾಲವಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ಹೆಚ್ಚಿನ ಮಾಹಿತಿ ತಿಳಿಯಿಲು www.budca64.com ಭೇಟಿ ನೀಡಬಹುದು.

ಬೆಂಗಳೂರಿನಲ್ಲಿ ಟೂರ್ನಿ ಆಯೋಜನೆ ಮಾಡುತ್ತಿರುವ ಬಗ್ಗೆ ನಿನ್ನೆ (ಸೆಪ್ಟೆಂಬರ್ 17, ಭಾನುವಾರ) ಕರ್ನಾಟಕದ ಕ್ರೀಡಾ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. BUDCA ಕಾರ್ಯದರ್ಶಿ ಶುಭಾ ಹೆಬ್ಬಾರ್, BUDCA ಅಧ್ಯಕ್ಷೆ ಸೌಮ್ಯ, ಕೆಎಸ್‌ಸಿಎ ಅಧ್ಯಕ್ಷರಾದ ಡಿಪಿ ಅನಂತ, ಕೆಎಸ್‌ಸಿಎ ಕಾರ್ಯದರ್ಶಿ ಅರವಿಂದ್ ಶಾಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.