ಪ್ಯಾರಿಸ್ ಒಲಿಂಪಿಕ್ಸ್; ಭಾರತದ 117 ಕ್ರೀಡಾಪಟುಗಳ, 140 ಸಹಾಯಕ ಸಿಬ್ಬಂದಿ ಪಟ್ಟಿ ಬಿಡುಗಡೆ ಮಾಡಿದ ಐಒಎ
Paris Olympics 2024: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ 117 ಕ್ರೀಡಾಪಟುಗಳ ಹಾಗೂ ಸಹಾಯಕ ಸಿಬ್ಬಂದಿ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬಿಡುಗಡೆ ಮಾಡಿದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಜುಲೈ 26 ರಿಂದ ಪ್ರಾರಂಭವಾಗುವ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 117 ಕ್ರೀಡಾಪಟುಗಳು ಮತ್ತು 140 ಸಹಾಯಕ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ರೀಡಾ ಪಟುಗಳ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು 140 ಸಹಾಯಕ ಸಿಬ್ಬಂದಿಗಳಲ್ಲಿ 72 ಸದಸ್ಯರನ್ನು ಸರ್ಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದೆ.
ಕ್ರೀಡಾಪಟುಗಳ ಅಗತ್ಯತೆ ಪೂರೈಸಲು, ಹೆಚ್ಚುವರಿ ತರಬೇತುದಾರರು ಮತ್ತು 72 ಸಹಾಯಕ ಸಿಬ್ಬಂದಿಯನ್ನು ಸರ್ಕಾರಕ್ಕೆ ವೆಚ್ಚದಲ್ಲಿ ಅನುಮೋದಿಸಲಾಗಿದೆ. ಅವರ ವಾಸ್ತವ್ಯದ ವ್ಯವಸ್ಥೆಯನ್ನು ಕ್ರೀಡಾ ಗ್ರಾಮದ ಹೊರಗಿನ ಹೋಟೆಲ್‌ಗಳಲ್ಲಿ/ಸ್ಥಳಗಳಲ್ಲಿ ಮಾಡಲಾಗಿದೆ ಎಂದು ಸಚಿವಾಲಯದ ಪತ್ರ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ ತಿಳಿಸಿದ್ದಾರೆ.
ಏಕೆಂದರೆ ಕ್ರೀಡಾ ಗ್ರಾಮದಲ್ಲಿ ಕೇವಲ 11 ಮಂದಿಯಷ್ಟೇ ಉಳಿಯಬೇಕಿದೆ. ಐವರು ವೈದ್ಯಕೀಯ ಸಿಬ್ಬಂದಿಯೂ ಇರಲಿದೆ. ಹಾಗಾಗಿ ಉಳಿದ ಸಹಾಯಕ ಸಿಬ್ಬಂದಿಗೆ ಕ್ರೀಡಾ ಗ್ರಾಮದಿಂದ ಹೊರಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಅಥ್ಲೆಟಿಕ್ಸ್ ತಂಡದಲ್ಲಿ 29 ಮಂದಿ (11 ಮಹಿಳೆಯರು ಮತ್ತು 18 ಪುರುಷರು) ದೇಶವನ್ನು ಪ್ರತಿನಿಧಿಸಲಿದ್ದಾರೆ. ಶೂಟಿಂಗ್ 21 ಮತ್ತು ಹಾಕಿ ಒಟ್ಟು 19 ಆಟಗಾರರನ್ನು ಹೊಂದಿದ್ದಾರೆ. 7 ಬ್ಯಾಡ್ಮಿಂಟನ್ ಆಟಗಾರರು ತಂಡದ ಭಾಗವಾಗಿದ್ದು, 8 ಟೇಬಲ್ ಟೆನಿಸ್ ಆಟಗಾರರು ಭಾರತದ ಪರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಭಾರತವು 20 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿದೆ. ಈಕ್ವೆಸ್ಟ್ರಿಯನ್, ಜೂಡೋ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬ ಆಟಗಾರ ಭಾಗವಹಿಸುತ್ತಾರೆ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ 119 ಅಥ್ಲೀಟ್‌ಗಳು ಭಾಗವಹಿಸಿದ್ದರು. ಭಾರತ 1 ಚಿನ್ನ ಸಹಿತ ಏಳು ಪದಕ ಗೆದ್ದಿತ್ತು. ಆದರೆ, ಟೊಕಿಯೊ ಒಲಿಂಪಿಕ್ಸ್ಗಿಂತ ಈ ಸಲ ಇಬ್ಬರು ಕಡಿಮೆ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಯಾವ ಕ್ರೀಡೆಯಲ್ಲಿ ಎಷ್ಟು ಕ್ರೀಡಾಪಟುಗಳು?
ಅಥ್ಲೆಟಿಕ್ಸ್ - 29
ಶೂಟಿಂಗ್ - 21
ಹಾಕಿ - 19
ಟೇಬಲ್-ಟೆನ್ನಿಸ್ - 8
ಬ್ಯಾಡ್ಮಿಂಟನ್ - 7
ಕುಸ್ತಿ - 6
ಬಿಲ್ಲುಗಾರಿಕೆ - 6
ಬಾಕ್ಸಿಂಗ್ - 6
ಗಾಲ್ಫ್ - 4
ಟೆನಿಸ್ - 3
ಸ್ವಿಮ್ಮಿಂಗ್ - 2
ಸೈಲಿಂಗ್ (ನೌಕಾಯಾನ) - 2
ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) - 1
ಜೂಡೋ - 1
ರೋಯಿಂಗ್ - 1
ವೇಟ್ ಲಿಫ್ಟಿಂಗ್ - 1
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಬಿಲ್ಲುಗಾರಿಕೆ
ಧೀರಜ್ ಬೊಮ್ಮದೇವರ: ಪುರುಷರ ತಂಡ
ತರುಣ್‌ದೀಪ್ ರೈ: ಪುರುಷರ ತಂಡ
ಪ್ರವೀಣ್ ಜಾಧವ್: ಪುರುಷರ ತಂಡ
ಭಜನ್ ಕೌರ್: ಮಹಿಳಾ ತಂಡ
ದೀಪಿಕಾ ಕುಮಾರಿ: ಮಹಿಳಾ ತಂಡ
ಅಂಕಿತಾ ಭಕತ್: ಮಹಿಳಾ ತಂಡ
ಅಥ್ಲೆಟಿಕ್ಸ್
ಅಕ್ಷದೀಪ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
ವಿಕಾಶ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
ಪರಮ್‌ಜೀತ್ ಸಿಂಗ್ ಬಿಶ್ತ್: ಪುರುಷರ 20 ಕಿಮೀ ಓಟದ ನಡಿಗೆ
ಪ್ರಿಯಾಂಕಾ ಗೋಸ್ವಾಮಿ: ಮಹಿಳೆಯರ 20 ಕಿ.ಮೀ ಓಟದ ನಡಿಗೆ
ಅವಿನಾಶ್ ಸೇಬಲ್: ಪುರುಷರ 3000ಮೀ ಸ್ಟೀಪಲ್‌ಚೇಸ್
ಪಾರುಲ್ ಚೌಧರಿ: ಮಹಿಳೆಯರ 3000ಮೀ ಸ್ಟೀಪಲ್ ಚೇಸ್, ಮಹಿಳೆಯರ 5000ಮೀ ಸ್ಟೀಪಲ್ ಚೇಸ್
ಜ್ಯೋತಿ ಯರ್ರಾಜಿ: ಮಹಿಳೆಯರ 100ಮೀ ಹರ್ಡಲ್ಸ್
ಕಿರಣ್ ಪಹಲ್: ಮಹಿಳೆಯರ 400 ಮೀ
ತಜಿಂದರ್‌ಪಾಲ್ ಸಿಂಗ್ ತೂರ್: ಪುರುಷರ ಶಾಟ್‌ಪುಟ್
ಅಭಾ ಖತುವಾ: ಮಹಿಳೆಯರ ಶಾಟ್‌ಪುಟ್
ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಎಸೆತ
ಕಿಶೋರ್ ಜೆನಾ: ಪುರುಷರ ಜಾವೆಲಿನ್ ಎಸೆತ
ಅಣ್ಣು ರಾಣಿ: ಮಹಿಳೆಯರ ಜಾವೆಲಿನ್ ಎಸೆತ
ಸರ್ವೇಶ್ ಕುಶಾರೆ: ಪುರುಷರ ಎತ್ತರ ಜಿಗಿತ
ಪ್ರವೀಣ್ ಚಿತ್ರವೆಲ್: ಪುರುಷರ ಟ್ರಿಪಲ್ ಜಂಪ್
ಅಬ್ದುಲ್ಲಾ ಅಬೂಬಕರ್: ಪುರುಷರ ಟ್ರಿಪಲ್ ಜಂಪ್
ಮುಹಮ್ಮದ್ ಅನಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್ ಮತ್ತು ರಾಜೇಶ್ ರಮೇಶ್: ಪುರುಷರ 4x400 ಮೀ ರಿಲೇ.
ಮಿಜೋ ಚಾಕೊ ಕುರಿಯನ್: 4x400ಮೀ ರಿಲೇ ಮತ್ತು 4x400ಮೀ ಮಿಶ್ರ ರಿಲೇ
ವಿದ್ಯಾ ರಾಮರಾಜ್, ಜ್ಯೋತಿಕಾ ಶ್ರೀ ದಂಡಿ, ಎಂಆರ್ ಪೂವಮ್ಮ, ಶುಭಾ ವೆಂಕಟೇಶನ್ ಮತ್ತು ಪ್ರಾಚಿ: ಮಹಿಳೆಯರ 4x400 ಮೀ ರಿಲೇ
ಪ್ರಾಚಿ: 4x400ಮೀ ಮಿಶ್ರ ರಿಲೇ
ಪ್ರಿಯಾಂಕಾ ಗೋಸ್ವಾಮಿ/ಸೂರಜ್ ಪನ್ವಾರ್: ರೇಸ್ ವಾಕ್ ಮಶ್ರ ಮ್ಯಾರಥಾನ್
ಬ್ಯಾಡ್ಮಿಂಟನ್
ಎಚ್‌ಎಸ್ ಪ್ರಣಯ್: ಪುರುಷರ ಸಿಂಗಲ್ಸ್
ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್
ಪಿವಿ ಸಿಂಧು: ಮಹಿಳೆಯರ ಸಿಂಗಲ್ಸ್
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ: ಪುರುಷರ ಡಬಲ್ಸ್
ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ: ಮಹಿಳೆಯರ ಡಬಲ್ಸ್
ಬಾಕ್ಸಿಂಗ್
ನಿಖತ್ ಜರೀನ್: ಮಹಿಳೆಯರ 50 ಕೆಜಿ
ಅಮಿತ್ ಫಂಗಲ್: ಪುರುಷರ 51 ಕೆಜಿ
ನಿಶಾಂತ್ ದೇವ್: ಪುರುಷರ 71 ಕೆಜಿ
ಪ್ರೀತಿ ಪವಾರ್: ಮಹಿಳೆಯರ 54 ಕೆಜಿ
ಲೊವ್ಲಿನಾ ಬೊರ್ಗೊಹೈನ್: ಮಹಿಳೆಯರ 75 ಕೆಜಿ
ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 57 ಕೆಜಿ
ಕುದುರೆ ಸವಾರಿ
ಅನುಷ್ ಅಗರ್ವಾಲಾ: ಡ್ರೆಸ್ಸೇಜ್
ಗಾಲ್ಫ್
ಶುಭಂಕರ್ ಶರ್ಮಾ : ಪುರುಷರ ಗಾಲ್ಫ್
ಗಗನ್ಜೀತ್ ಭುಲ್ಲರ್ : ಪುರುಷರ ಗಾಲ್ಫ್
ಅದಿತಿ ಅಶೋಕ್ ಮಹಿಳಾ ಗಾಲ್ಫ್
ದೀಕ್ಷಾ ಡಗಾರ್: ಮಹಿಳಾ ಗಾಲ್ಫ್
ಹಾಕಿ (ಪುರುಷರ ಹಾಕಿ ತಂಡ)
ಪಿಆರ್ ಶ್ರೀಜೇಶ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಗಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್, ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುಜರಾಂತ್ ಸಿಂಗ್.
ಜೂಡೋ
ತುಲಿಕಾ ಮಾನ್: ಮಹಿಳೆಯರ 78 ಕೆ.ಜಿ
ರೋಯಿಂಗ್ (Rowing)
ಬಲರಾಜ್ ಪನ್ವಾರ್: M1x
ನೌಕಾಯಾನ (Sailing)
ವಿಷ್ಣು ಸರವಣನ್: ಪುರುಷರ ಒನ್ ಪರ್ಸನ್ ಡಿಂಗಿ
ನೇತ್ರಾ ಕುಮನನ್: ಮಹಿಳೆಯರ ಏಕ ವ್ಯಕ್ತಿ ಡಿಂಗಿ
ಶೂಟಿಂಗ್
ಪೃಥ್ವಿರಾಜ್ ತೊಂಡೈಮಾನ್: ಪುರುಷರ ಟ್ರ್ಯಾಪ್
ರಾಜೇಶ್ವರಿ ಕುಮಾರಿ: ಮಹಿಳೆಯರ ಟ್ರ್ಯಾಪ್
ಶ್ರೇಯಸಿ ಸಿಂಗ್: ಮಹಿಳೆಯರ ಟ್ರ್ಯಾಪ್
ಅನಂತಜೀತ್ ಸಿಂಗ್ ನರುಕಾ: ಪುರುಷರ ಸ್ಕೀಟ್
ರೈಜಾ ಧಿಲ್ಲೋನ್: ಮಹಿಳೆಯರ ಸ್ಕೀಟ್
ಮಹೇಶ್ವರಿ ಚೌಹಾಣ್: ಮಹಿಳೆಯರ ಸ್ಕೀಟ್
ಅನಂತಜೀತ್ ಸಿಂಗ್ ನರುಕಾ/ಮಹೇಶ್ವರಿ ಚೌಹಾಣ್: ಸ್ಕೀಟ್ ಮಿಶ್ರ ತಂಡ
ಸಂದೀಪ್ ಸಿಂಗ್: ಪುರುಷರ 10 ಮೀ ಏರ್ ರೈಫಲ್
ಅರ್ಜುನ್ ಬಾಬುಟಾ: ಪುರುಷರ 10 ಮೀ ಏರ್ ರೈಫಲ್
ಎಲವೆನಿಲ್ ವಲರಿವನ್: ಮಹಿಳೆಯರ 10 ಮೀ ಏರ್ ರೈಫಲ್
ರಮಿತಾ ಜಿಂದಾಲ್: ಮಹಿಳೆಯರ 10 ಮೀ ಏರ್ ರೈಫಲ್
ಸ್ವಪ್ನಿಲ್ ಕುಸಾಲೆ: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
ಸಿಫ್ಟ್ ಕೌರ್ ಸಮ್ರಾ: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
ಅಂಜುಮ್ ಮೌದ್ಗಿಲ್: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
ಸಂದೀಪ್ ಸಿಂಗ್/ಎಲವೆನಿಲ್ ವಲರಿವನ್: 10ಮೀ ಏರ್ ರೈಫಲ್ ಮಿಶ್ರ ತಂಡ
ಅರ್ಜುನ್ ಬಾಬುತಾ/ರಮಿತಾ ಜಿಂದಾಲ್: 10ಮೀ ಏರ್ ರೈಫಲ್ ಮಿಶ್ರ ತಂಡ
ಅರ್ಜುನ್ ಚೀಮಾ: ಪುರುಷರ 10 ಮೀ ಏರ್ ಪಿಸ್ತೂಲ್
ಸರಬ್ಜೋತ್ ಸಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್
ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
ರಿದಮ್ ಸಾಂಗ್ವಾಮ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
ವಿಜಯವೀರ್ ಸಿಧು: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
ಅನೀಶ್ ಭನ್ವಾಲಾ: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
ಮನು ಭಾಕರ್: ಮಹಿಳೆಯರ 25 ಮೀ ಪಿಸ್ತೂಲ್
ಇಶಾ ಸಿಂಗ್: ಮಹಿಳೆಯರ 25 ಮೀ ಪಿಸ್ತೂಲ್
ಸರಬ್ಜೋತ್ ಸಿಂಗ್/ಮನು ಭಾಕರ್: 10ಮೀ ಏರ್ ಪಿಸ್ತೂಲ್ ಮಿಶ್ರ ತಂಡ
ಅರ್ಜುನ್ ಚೀಮಾ/ರಿದಮ್ ಸಾಂಗ್ವಾಮ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ
ಈಜು
ಧಿನಿಧಿ ದೇಸಿಂಗು: ಮಹಿಳೆಯರ 200 ಮೀ ಫ್ರೀಸ್ಟೈಲ್
ಶ್ರೀಹರಿ ನಟರಾಜ್: ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್
ಟೇಬಲ್ ಟೆನಿಸ್
ಶರತ್ ಕಮಲ್: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
ಹರ್ಮೀತ್ ದೇಸಾಯಿ: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
ಮಾನವ್ ಠಕ್ಕರ್: ಪುರುಷರ ತಂಡ
ಮನಿಕಾ ಬಾತ್ರಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
ಶ್ರೀಜಾ ಅಕುಲಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
ಅರ್ಚನಾ ಕಾಮತ್: ಮಹಿಳಾ ತಂಡ
ಟೆನಿಸ್
ಸುಮಿತ್ ನಗಲ್: ಪುರುಷರ ಸಿಂಗಲ್ಸ್
ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ: ಪುರುಷರ ಡಬಲ್ಸ್
ವೇಟ್ಲಿಫ್ಟಿಂಗ್
ಮೀರಾಬಾಯಿ ಚಾನು: ಮಹಿಳೆಯರ 49 ಕೆಜಿ
ಕುಸ್ತಿ
ಅಮನ್ ಸೆಹ್ರಾವತ್: ಪುರುಷರ ಫ್ರೀಸ್ಟೈಲ್ 57 ಕೆಜಿ
ವಿನೇಶ್ ಫೋಗಟ್: ಮಹಿಳೆಯರ 50 ಕೆಜಿ
ಅಂಶು ಮಲಿಕ್: ಮಹಿಳೆಯರ 57 ಕೆಜಿ
ನಿಶಾ ದಹಿಯಾ: ಮಹಿಳೆಯರ 68 ಕೆಜಿ
ರೀತಿಕಾ ಹೂಡಾ: ಮಹಿಳೆಯರ 76 ಕೆಜಿ
ಆಂಟಿಮ್ ಫಂಗಲ್: ಮಹಿಳೆಯರ 53 ಕೆಜಿ
