ಕನ್ನಡ ಸುದ್ದಿ  /  ಕ್ರೀಡೆ  /  Pollard On Sachin: ಸಚಿನ್ ಮುಂದೆ ಧೋನಿ ಕ್ರೇಜ್​​ ತುಂಬಾ ಕಡಿಮೆ: ಪೊಲಾರ್ಡ್​ ಅಚ್ಚರಿ ಹೇಳಿಕೆ

Pollard on Sachin: ಸಚಿನ್ ಮುಂದೆ ಧೋನಿ ಕ್ರೇಜ್​​ ತುಂಬಾ ಕಡಿಮೆ: ಪೊಲಾರ್ಡ್​ ಅಚ್ಚರಿ ಹೇಳಿಕೆ

IPL 2023: ಧೋನಿ ಸಿಕ್ಸರ್​​ ಸಿಡಿಸಿದ ಮೈದಾನದಲ್ಲಿ ಅಭಿಮಾನಿಗಳ ಕಿರುಚಾಟದ ದೃಶ್ಯವನ್ನು ಜೀವನದಲ್ಲೇ ನೋಡಿರಲಿಲ್ಲ ಎಂದಿದ್ದ ಮಾರ್ಕ್​ವುಡ್​ಗೆ ಟಾಂಗ್​ ಕೊಟ್ಟ ಕಿರನ್​ ಪೊಲಾರ್ಡ್​, ಇಷ್ಟು ಕ್ರೇಜ್​ ಅನ್ನು ನಾನು ಯಾವಾಗಲೋ ನೋಡಿದ್ದೆ. ಈ ರೀತಿಯ ಅನುಭವವನ್ನು ಮೊದಲೇ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಸಚಿನ್ ಮತ್ತು ಧೋನಿ
ಸಚಿನ್ ಮತ್ತು ಧೋನಿ

16ನೇ ಆವೃತ್ತಿಯ ಐಪಿಎಲ್​​​ನಲ್ಲಿ (IPL) ಪ್ರಮುಖ ಆಕರ್ಷಣೆ ಅಂದರೆ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni). ಈ ಸೀಸನ್​​​ ಅವರಿಗೆ ಕೊನೆಯ ಐಪಿಎಲ್​ ಎಂಬ ಸುದ್ದಿ ಬಿರುಗಾಳಿಯಂತೆ ಹಬ್ಬಿದ್ದೇ ತಡ, ಮಾಹಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಬಳಗ ತಂಡೋಪತಂಡವಾಗಿ ಮೈದಾನದತ್ತ ಹೆಜ್ಜೆ ಹಾಕುತ್ತಿದೆ. ಪಂದ್ಯ ಪಂದ್ಯಕ್ಕೂ ಮೈದಾನದಲ್ಲೂ ಧೋನಿ ನಾಮಜಪ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಟಿವಿಗಳನ್ನೂ ಧೋನಿಯದ್ದೇ ಸದ್ದು ನಡೆಯುತ್ತಿದೆ. ಧೋನಿ ಬ್ಯಾಟಿಂಗ್​​ಗೆ ಬಂದಾಗ ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿದೆ. ವಯಸ್ಸು 41 ಆದರೂ, ಅವರ ಗತ್ತು ಏನು ಎಂಬುದನ್ನು ಆ ಮೂಲಕ ಸೂಚಿಸುತ್ತಿದೆ. ಗುಜರಾತ್​ ಟೈಟಾನ್ಸ್ (Gujarat Titans)​, ಲಕ್ನೋ ಸೂಪರ್​ ಜೈಂಟ್ಸ್ (Lucknow Super Giants)​ ತಂಡಗಳ ವಿರುದ್ಧ ಕದನ ನಡೆದಾಗ ಮೈದಾನದ ತುಂಬೆಲ್ಲಾ ಹಳದಿ ಬಣ್ಣದೇ ಸದ್ದು. ಸಿಂಪಲ್ಲಾಗಿ ಹೇಳಬೇಕು ಅಂದ್ರೆ ಇದು ಮಾಹಿಗಿರುವ ಕ್ರೇಜ್​​ ಅಷ್ಟೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಫ್ಯಾನ್​ ಫಾಲೋಯಿಂಗ್​ ಹೊಂದಿರುವ ಧೋನಿಗೆ ಆರ್‌ಸಿಬಿ ಅಭಿಮಾನಿಗಳು ಬೆಂಬಲ ನೀಡಲಿದ್ದಾರೆ ಎಂದು ಸ್ವತಃ ವಿರಾಟ್ ಕೊಹ್ಲಿಯೇ (Virat Kohli) ಒಂದು ಬಾರಿ ಬಹಿರಂಗಪಡಿಸಿದ್ದರು. ಲಕ್ನೋ ವಿರುದ್ಧ ಆಡಿದ್ದು ಮೂರೇ ಎಸೆತವಾದರೂ, ಜಿಯೋ ಸಿನಿಮಾದಲ್ಲಿ ಕಣ್ತುಂಬಿಕೊಂಡಿದ್ದು 1.7 ಕೋಟಿ. ಈ ವೇಳೆ ಸಿಕ್ಸರ್​​ ಇಡೀ ಕ್ರೀಡಾಂಗಣವೇ ಕೇಕೆ ಹಾಕಿತು ಎಂದು ಬೌಲರ್​​ ಮಾರ್ಕ್​ವುಡ್ (Mark Wood)​ ಹೇಳಿದ್ದರು. ಇಂತಹ ದೃಶ್ಯವನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳಿದ್ದರು.

ಆದರೆ, ಮುಂಬೈ ಇಂಡಿಯನ್ಸ್ ಮಾಜಿ ಆಲ್​ರೌಂಡರ್ ಕಿರನ್​​ ಪೊಲಾರ್ಡ್ (Kieron Pollard), ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಸಚಿನ್​​ ತೆಂಡೂಲ್ಕರ್​ಗೆ (Sachin Tendulkar) ಇರುವಷ್ಟು ಫ್ಯಾನ್​ ಫಾಲೋಯಿಂಗ್​ ಧೋನಿಗೆ ಇಲ್ಲ ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ಇಂತಹ ದೃಶ್ಯವನ್ನು ಜೀವನದಲ್ಲೇ ನೋಡಿರಲಿಲ್ಲ ಎಂದಿದ್ದ ಮಾರ್ಕ್​ವುಡ್​ಗೆ ಟಾಂಗ್​ ಕೊಟ್ಟ ಪೊಲಾರ್ಡ್​, ಇಷ್ಟು ಕ್ರೇಜ್​ ಅನ್ನು ನಾನು ಯಾವಾಗಲೋ ನೋಡಿದ್ದೆ. ಈ ರೀತಿಯ ಅನುಭವವನ್ನು ನಾನು ಮೊದಲೇ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

'ಇದು ಅವರ ಕೊನೆಯ ಸೀಸನ್ ಎಂಬ ಸುದ್ದಿಯಿಂದಾಗಿ ಧೋನಿ ಹೋದಲ್ಲೆಲ್ಲಾ ಅವರಿಗೆ ಅಪಾರ ಬೆಂಬಲ ಸಿಗುತ್ತಿದೆ. ಹೋಮ್ ಗ್ರೌಂಡ್ ಆಗಿರಲಿ ಅಥವಾ ಬೇರೆ ಮೈದಾನದಲ್ಲಿ ಆಡುತ್ತಿರಲಿ.. ಎಲ್ಲರೂ ಮಾಹಿ ಬೆಂಬಲಿಗರೇ ಆಗಿದ್ದಾರೆ. ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ಅವರು ಸಲ್ಲಿಸಿದ ಸೇವೆಗೆ ಇದು ಗೌರವವಾಗಿದೆ. ಆದರೆ, ನಾವು ಇಂತಹ ಅನುಭವವನ್ನು ಹಲವು ವರ್ಷಗಳ ಹಿಂದೆಯೇ ಅನುಭವಿಸಿದ್ದೇವೆ. ನಮ್ಮ ಐಕಾನ್ ಸಚಿನ್ ತೆಂಡೂಲ್ಕರ್ ತಂಡದಲ್ಲಿದ್ದಾಗ ಹೋದಲ್ಲೆಲ್ಲಾ ಕ್ರೀಡಾಂಗಣಗಳು 'ಸಚಿನ್.. ಸಚಿನ್..' ಎಂಬ ಘೋಷಣೆಗಳಿಂದ ಮೊಳಗುತ್ತಿದ್ದವು. ಮುಂಬೈ ಇಂಡಿಯನ್ಸ್‌ಗೆ ಎಲ್ಲೆಡೆ ಬೆಂಬಲ ಸಿಕ್ಕಿತ್ತು ಎಂದು ಮುಂಬೈ ಬ್ಯಾಟಿಂಗ್​ ಕೋಚ್​ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಇಬ್ಬರೂ ಕೂಡ ಕ್ರಿಕೆಟ್ ದಿಗ್ಗಜರು. ಅವರ ಸೇವೆಗೆ ಇಷ್ಟೊಂದು ಬೆಂಬಲ ಸಿಗುತ್ತಿರುವುದು ಆಶ್ಚರ್ಯವೇನಿಲ್ಲ. ಸೋಶಿಯಲ್ ಮೀಡಿಯಾ ಇಲ್ಲದ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಅದ್ಭುತ ಫಾಲೋವರ್ಸ್ ಪಡೆದಿದ್ದರು ಎಂದು ಧೋನಿಗಿಂತ ಸಚಿನ್​ಗೆ ಹೆಚ್ಚು ಕ್ರೇಜ್​ ಹೊಂದಿದ್ದರು ಎನ್ನುವ ಅರ್ಥದಲ್ಲಿ ಕಿರಣ್ ಪೊಲಾರ್ಡ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ 2013ರ ಋತುವಿನ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸಚಿನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್‌ಗೆ ಮೆಂಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2020ರ ಐಪಿಎಲ್‌ಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಧೋನಿ, 16ನೇ ಆವೃತ್ತಿಯ ಬಳಿಕ ಎಲ್ಲಾ ಫಾರ್ಮೆಟ್‌ಗಳಿಂದ ನಿವೃತ್ತಿಯಾಗಲಿದ್ದಾರೆ ಎಂದು ವದಂತಿಗಳಿವೆ.