IPL 2023: ಜಾನಿ ಬೈರ್‌ಸ್ಟೋ ಔಟ್.. ಸ್ಟಾರ್ ಆಟಗಾರನ ಎಂಟ್ರಿಯಿಂದ ಪಂಜಾಬ್ಗೆ ಬಂತು ಆನೆಬಲ!
IPL 2023: ನ್ಯೂಜಿಲೆಂಡ್ ತಂಡದ ಸ್ಫೋಟಕ ಆಟಗಾರ ಮಾರ್ಟಿನ್ ಗಪ್ಟಿಲ್ಗೆ ಗಾಳ ಗಾಕಿದೆ. ಬೈರ್‌ಸ್ಟೋ ಸ್ಥಾನಕ್ಕೆ ಮಾರ್ಟಿನ್ ಗಪ್ಟಿಲ್ ಅವರನ್ನು ರಿಪ್ಲೇಸ್ ಮಾಡಲು ಪಂಜಾಬ್ ಕಿಂಗ್ಸ್ ಮುಂದಾಗಿದ್ದು, ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಮುಖ ಆಟಗಾರರೇ ಮಿಲಿಯನ್ ಡಾಲರ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದು ಫ್ರಾಂಚೈಸಿಗಳ ತಲೆನೋವಿಗೆ ಕಾರಣವಾಗಿದ್ದು, ಬದಲೀ ಆಟಗಾರರ ಆಯ್ಕೆಯಲ್ಲಿ ಬ್ಯುಸಿಯಾಗಿವೆ. ಈಗಾಗಲೇ ಇಂಗ್ಲೆಂಡ್ ಆಟಗಾರ ವಿಲ್ ಜಾಕ್ಸ್ ಅವರ ಜಾಗಕ್ಕೆ ನ್ಯೂಜಿಲೆಂಡ್ ತಂಡದ ಮೈಕೆಲ್ ಬ್ರೇಸ್ವೆಲ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದೆ.
ಟ್ರೆಂಡಿಂಗ್ ಸುದ್ದಿ
ಉಳಿದ ತಂಡಗಳಿಗೂ ಆಟಗಾರರ ಅಲಭ್ಯತೆ ಸಿಕ್ಕಾಪಟ್ಟೆ ಕಾಡುತ್ತಿದೆ. ಮುಂಬೈ ಇಂಡಿಯನ್ಸ್ಗೆ ಜಸ್ಪ್ರಿತ್ ಬೂಮ್ರಾ, ಜಾಯ್ ರಿಚರ್ಡ್ಸನ್, ಚೆನ್ನೈ ಸೂಪರ್ ಕಿಂಗ್ಸ್ಗೆ ಕೈಲ್ ಜೆಮಿಸನ್, ರಾಜಸ್ಥಾನ್ ರಾಯಲ್ಸ್ಗೆ ಪ್ರಸಿದ್ಧ್ ಕೃಷ್ಣ, ಕೊಲ್ಕತ್ತಾ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ಗೆ ರಿಷಭ್ ಪಂತ್, ಆ್ಯನಿಚ್ ನೋಕಿಯಾ, ಸರ್ಫರಾಜ್ ಖಾನ್ ಮತ್ತು ಪಂಜಾಬ್ಗೆ ಜಾನಿ ಬೈರ್‌ಸ್ಟೋ ಸೇರಿದಂತೆ ಪ್ರಮುಖರೇ ಇಂಜುರಿಯಿಂದ ಟೂರ್ನಿಯಿಂದ ಹೊರಗುಳಿಯ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ (Jonny Bairstow) ಅಲಭ್ಯರಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದ ಬೈರ್‌ಸ್ಟೋ ಶಸ್ತ್ರ ಚಿಕಿತ್ಸೆ ನಡೆದಿದೆ. ರಿಕವರ್ ಆಗಿರುವ ಕುರಿತು ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಹಾಗಾಗಿ ಆರಂಭಿಕ ಬ್ಯಾಟ್ಸ್‌ಮನ್ ಬೈರ್‌ಸ್ಟೋ ಬದಲಿಗೆ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆಸಿದೆ.
ಮಾರ್ಟಿನ್ ಗಪ್ಟಿಲ್ಗೆ ಗಾಳ
ನ್ಯೂಜಿಲೆಂಡ್ ತಂಡದ ಸ್ಫೋಟಕ ಆಟಗಾರ ಮಾರ್ಟಿನ್ ಗಪ್ಟಿಲ್ಗೆ ಗಾಳ ಗಾಕಿದೆ. ಬೈರ್‌ಸ್ಟೋ ಸ್ಥಾನಕ್ಕೆ ಮಾರ್ಟಿನ್ ಗಪ್ಟಿಲ್ ಅವರನ್ನು ರಿಪ್ಲೇಸ್ ಮಾಡಲು ಪಂಜಾಬ್ ಕಿಂಗ್ಸ್ ಮುಂದಾಗಿದ್ದು, ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಪ್ಪಿಗೆ ಸಿಕ್ಕರೆ ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ.
ಗಪ್ಟಿಲ್ ಸೇರ್ಪಡೆಯಿಂದಲೂ ಬಲಿಷ್ಠ!
ಜಾನಿ ಬೈರ್‌ಸ್ಟೋ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಡೆಪ್ತ್ ಆಗಿದ್ದರು. ಆರಂಭಿಕನಾಗಿ ಎದುರಾಳಿಗೆ ನಡುಕ ಸೃಷ್ಟಿಸುತ್ತಿದ್ದರು. ಭಯಾನಕ ಬ್ಯಾಟಿಂಗ್ ತಂಡದ ಮೊತ್ತವನ್ನು ಒಂದೇ ಸಮನೆ ಏರಿಕೆ ಮಾಡುತ್ತಿದ್ದರು. ಇದೀಗ ಗಪ್ಟಿಲ್ ಕೂಡ ಅಗ್ರೆಸ್ಸಿವ್ ಆಟಕ್ಕೆ ಪ್ರಸಿದ್ಧಿ ಪಡೆದಿದ್ದು, ತಂಡದ ಬಲವನ್ನು ಹೆಚ್ಚಿಸಲಿದ್ದಾರೆ.
ಕಾಲಿಗೆ ಗಾಯ, ಶಸ್ತ್ರಚಿಕಿತ್ಸೆ ಯಶಸ್ವಿ!
ಕಳೆದ ಐಪಿಎಲ್ಗೂ ಮೊದಲು ಕೈಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಮರಳಿದ್ದರು. ತದನಂತರ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅವರ ಕಾಲು ಮುರಿದಿತ್ತು. ಬಳಿಕ ಪಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು. ಈ ಕಾರಣ ಮೆಗಾ ಟೂರ್ನಿ ಟಿ20 ವಿಶ್ವಕಪ್ನಿಂದ ಹೊರ ಗುಳಿದಿದ್ದರು. ಇನ್ನೂ ರಿಕವರ್ ಆಗುತ್ತಿರುವ ಬಲಗೈ ಆಟಗಾರ ಈ ಬಾರಿ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದು ಪಂಬಾಜ್ಗೆ ಹಿನ್ನಡೆಯಾಗುತ್ತಿದೆ.
ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿ ಪಂಜಾಬ್
15 ಸೀಸನ್ಗಳಿಂದ ಟ್ರೋಫಿ ಗೆಲ್ಲೋಕೆ ಪರದಾಟ ನಡೆಸುತ್ತಿರುವ ಪಂಜಾಬ್ ಕಿಂಗ್ಸ್, ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಬಲಿಷ್ಠ ತಂಡವನ್ನೇ ಹೊಂದಿರುವ ಪಂಜಾಬ್, ಟ್ರೋಫಿಗೆ ಮುತ್ತಿಕ್ಕಲು ಭರದ ಸಿದ್ಧತೆ ನಡೆಸಿದೆ. ಜೊತೆಗೆ ಮಾರ್ಟಿನ್ ಗಪ್ಟಿಲ್ ತಂಡ ಸೇರಿರುವುದು ತಂಡದ ವಿಶ್ವಾಸವನ್ನು ಡಬಲ್ ಮಾಡಿದೆ.
ಪಂಜಾಬ್ ಕಿಂಗ್ಸ್ ತಂಡ
ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಮಾರ್ಟಿನ್ ಗಪ್ಟಿಲ್, ಪ್ರಭ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ಸ್ಯಾಮ್ ಕುರಾನ್, ಸಿಕಂದರ್ ರಝಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಮೋಹಿತ್ ರಾಥೆ, ಹರ್‌ಪ್ರೀತ್ ಬ್ರಾರ್.