ಕನ್ನಡ ಸುದ್ದಿ  /  ಕ್ರೀಡೆ  /  Srh Vs Mi: ವಿಶೇಷ ದಿನದ ಪಂದ್ಯ ಗೆದ್ದು ಹ್ಯಾಟ್ರಿಕ್ ಸಾಧಿಸಿದ ಮುಂಬೈ ಇಂಡಿಯನ್ಸ್

SRH vs MI: ವಿಶೇಷ ದಿನದ ಪಂದ್ಯ ಗೆದ್ದು ಹ್ಯಾಟ್ರಿಕ್ ಸಾಧಿಸಿದ ಮುಂಬೈ ಇಂಡಿಯನ್ಸ್

ಮುಂಬೈ ಪರ ದುಬಾರಿ ಬೆಲೆಯ ಆಟಗಾರ ಕ್ಯಾಮರೂನ್‌ ಗ್ರೀನ್‌ ಚೊಚ್ಚಲ ಐಪಿಎಲ್‌ ಅರ್ಧಶತಕ ಸಿಡಿಸಿದರು. ಚೇಸಿಂಗ್‌ ವೇಳೆ ಹೈದರಾದ್‌ ಪರ ಕನ್ನಡಿಗ ಮಯಾಂಕ್‌ ಅಗರ್ವಾಲ್‌ 48 ರನ್‌ ಗಳಿಸಿ ಅರ‍್ಧಶತಕ ವಂಚಿತರಾದರು.

ಮುಂಬೈ ಇಂಡಿಯನ್ಸ್‌ ಸಂಭ್ರಮ
ಮುಂಬೈ ಇಂಡಿಯನ್ಸ್‌ ಸಂಭ್ರಮ

ಐಪಿಎಲ್‌ ಟೂರ್ನಿ ಆರಂಭವಾಗಿ ಇಂದಿಗೆ 15 ವರ್ಷ. ಈ ವಿಶೇಷ ದಿನದ ರೋಚಕ ಕದನದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) ಗೆದ್ದುಬೀಗಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌, ಕ್ಯಾಮರೂನ್‌ ಗ್ರೀನ್‌ ಚೊಚ್ಚಲ ಐಪಿಎಲ್‌ ಅರ್ಧಶತಕದ ನೆರವಿನಿಂದ 192 ರನ್‌ ಕಲೆ ಹಾಕಿತು. ಬೃಹತ್‌ ಮೊತ್ತ ಚೇಸಿಂಗ್‌ ಮಾಡಿದ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ 178 ಗಳಿಸಿ ಆಲೌಟ್‌ ಆಯ್ತು. ಆ ಮೂಲಕ ಮುಂಬೈ 14 ರನ್‌ಗಳಿಂದ ಗೆದ್ದಿತು.

ಕೊನೆಯ ಓವರ್‌ ಎಸೆದ ಅರ್ಜುನ್‌ ತೆಂಡೂಲ್ಕರ್‌, ಐದನೇ ಎಸೆತದಲ್ಲಿ ಭುವನೇಶ್ವರ್‌ ವಿಕೆಟ್‌ ಪಡೆದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ವಿಕೆಟ್‌ ಸಾಧನೆ. ಅಲ್ಲದೆ ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ ತಂಡವು ಸತತ ಮೂರನೇ ಗಜಯ ದಾಖಲಿಸಿದೆ.

ಹೈದರಾಬಾದ್‌ ಇನ್ನಿಂಗ್ಸ್

ಚೇಸಿಂಗ್‌ ಆರಂಭಿಸಿದ ಸನ್‌ರೈಸರ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಹ್ಯಾರಿ ಬ್ರೂಕ್‌, ಈ ಪಂದ್ಯದಲ್ಲಿ ಕೇವಲ 9 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಭರವಸೆಯ ಬ್ಯಾಟರ್‌ ರಾಹುಲ್‌ ತ್ರಿಪಾಠಿ ಕೂಡಾ 7 ರನ್‌ ಗಳಿಸಿ ಔಟಾದರು. ಈ ಇಬ್ಬರನ್ನೂ ಬೆಹ್ರೆನ್ಡಾರ್ಫ್ ಪೆವಿಲಿಯನ್‌ಗೆ ಕಳುಹಿಸಿದರು.

ಈ ವೇಳೆ ಒಂದಾದ ಕನ್ನಡಿಗ ಮಯಾಂಕ್‌ ಮತ್ತು ನಾಯಕ ಐಡನ್‌ ಮರ್ಕ್ರಾಮ್‌ ಕೆಲ ಹೊತ್ತು ಕೊತೆಯಾಟವಾಡಿದರು. ನಾಯಕ 22 ರನ್‌ ಗಳಿಸಿ ಸುಸ್ತಾದರು. ಅವರ ಬೆನ್ನಲ್ಲೇ ಯುವ ಆಟಗಾರ ಅಭಿಶೇಕ್‌ ಶರ್ಮಾ ಕೂಡಾ 1 ರನ್‌ ಗಳಿಸಿ ಔಟಾದರು. ಆ ಬಳಿಕ ಹೆನ್ರಿಚ್‌ ಕ್ಲಾಸೆನ್‌ ಮತ್ತು ಅಗರ್ವಾಲ್‌ ಸ್ಫೋಟಕ ಆಟವಾಡಿದರು. ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 36 ರನ್‌ ಸಿಡಿಸಿದ ಕ್ಲಾಸೆನ್‌ ಮುಂಬೈ ಪಾಲಿಗೆ ಕಂಟಕರಾದರು. ಆದರೆ ಬೌಂಡರಿ ಲೈನ್‌ ಬಳಿ ಕ್ಯಾಚ್‌ ಹಿಡಿದ ಟಿಮ್‌ ಡೇವಿಡ್‌, ತಂಡ ನಿಟ್ಟುಸಿರು ಬಿಡುವಂತೆ ಮಾಡಿದರು. ಅವರ ಬೆನ್ನಲ್ಲೇ ಕನ್ನಡಿಗ ಮಯಾಂಕ್‌ ಕೂಡಾ ಡೇವಿಡ್‌ಗೆ ಮತ್ತೊಮ್ಮೆ ಕ್ಯಾಚ್‌ ನೀಡಿದರು. ಪಂದ್ಯದಲ್ಲಿ ಒಟ್ಟು ನಾಲ್ಕು ಪ್ರಮುಖ ಕ್ಯಾಚ್‌ ಹಿಡಿದ ಡೇವಿಡ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಯಾಂಕ್‌ 48 ರನ್‌ಗಳಿಗೆ ಔಟಾಗಿ ಅರ್ಧಶತಕ ವಂಚಿತಾದರು.‌

ಗ್ರೀನ್‌ ಅರ್ಧಶತಕ

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ, ದುಬಾರಿ ಬೆಲೆಯ ಆಟಗಾರ ಕ್ಯಾಮರೂನ್‌ ಗ್ರೀನ್‌ ಚೊಚ್ಚಲ ಐಪಿಎಲ್‌ ಅರ್ಧಶತಕ ಮತ್ತು ಯುವ ಆಟಗಾರ ತಿಲಕ್‌ ವರ್ಮಾ ಸಮಯೋಚಿತ ಆಟದ ನೆರವಿನಿಂದ 192 ರನ್‌ ಕಲೆ ಹಾಕಿತು. ಆರಂಭದಿಂದಲೂ ಸ್ಫೋಟಕ ಆಟಕ್ಕೆ ಮುಂದಾದ ನಾಯಕ ರೋಹಿತ್‌ ಶರ್ಮಾ 18 ಎಸೆತಗಳಲ್ಲಿ 28 ರನ್‌ ಗಳಿಸಿ ನಟರಾಜನ್‌ ಎಸೆತಕ್ಕೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಕಿಶನ್‌ ಅಂತಿಮವಾಗಿ 38 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಬಂದ ಸ್ಫೋಟಕ ಬ್ಯಟರ್‌ ಸೂರ್ಯಕುಮಾರ್‌ ಯಾದವ್‌, 7 ರನ್‌ ಗಳಿಸಿ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಈ ವೇಳೆ ಒಂದಾದ ಗ್ರೀನ್‌ ಮತ್ತು ತಿಲಕ್‌ ವರ್ಮಾ ವೇಗದ ಆಟಕ್ಕೆ ಮುಂದಾದರು. ಅಬ್ಬರಿಸಿದ ತಿಲಕ್‌ ನಾಲ್ಕು ಸಿಕ್ಸರ್‌ ಸಹಿತ 37 ರನ್‌ ಸ್ಫೋಟಿಸಿ ಭುವಿ ಎಸೆತದಲ್ಲಿ ಕ್ಯಾಚ್‌ ನೀಡಿ ವಿರಮಿಸಿದರು. ಆದರೆ, ಅಬ್ಬರದಾಟ ಮುಂದುವರೆಸಿದ ಗ್ರೀನ್‌, 64 ರನ್‌ ಕಲೆಹಾಕಿ ಅಜೇಯರಾಗಿ ಉಳಿದರು. ಟಿಮ್‌ ಡೇವಿಡ್‌ 16 ರನ್‌ ಗಳಿಸಿದರು. ಅಂತಿಮವಾಗಿ ಮುಂಬೈ 5ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿತು.

ಹೈದರಾಬಾದ್‌ ಪರ ಮಾರ್ಕೊ ಜಾನ್ಸನ್‌ ಎರಡು ವಿಕೆಟ್‌ ಪಡೆದರೆ, ಭುವನೇಶವರ್‌ ಮತ್ತು ಟಿ ನಟರಾಜನ್‌ ತಲಾ ಒಂದು ವಿಕೆಟ್‌ ಪಡೆದರು.