IPL 2023: ಶ್ರೇಯಸ್ ಅಯ್ಯರ್ ಬೆನ್ನಲ್ಲೇ KKRಗೆ ಕೈಕೊಟ್ಟ ಸ್ಟಾರ್ ಪ್ಲೇಯರ್ಸ್
IPL 2023: ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ (Shakib al Hasan) ಮತ್ತು ಲಿತ್ತನ್ ದಾಸ್ (Liton Das) 16ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ದೂರ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಎರಡು ವಾರಗಳಲ್ಲಿ ಆರಂಭವಾಗಲಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿ ಬಂದಿದೆ. ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಬೆನ್ನು ನೋವಿನಿಂದ ಟೂರ್ನಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ. ಇದರ ಬೆನ್ನಲ್ಲೇ ವಿದೇಶಿ ಸ್ಟಾರ್ ಪ್ಲೇಯರ್ಸ್ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.
ಟ್ರೆಂಡಿಂಗ್ ಸುದ್ದಿ
ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ (Shakib al Hasan) ಮತ್ತು ಲಿತ್ತನ್ ದಾಸ್ (Liton Das) ಈ ಆವೃತ್ತಿಯ ಬಹುತೇಕ ಪಂದ್ಯಗಳಿಗೆ ದೂರ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಈ ಬಾಂಗ್ಲಾದೇಶದ ಆಟಗಾರರಿಗೆ ದೇಶದ ಕ್ರಿಕೆಟ್ ಮಂಡಳಿ ಆಕ್ಷೇಪಣೆ ಪ್ರಮಾಣ ಪತ್ರವನ್ನು (No objection certificate) ನೀಡಿಲ್ಲ. ಪ್ರಸ್ತುತ ಬಾಂಗ್ಲಾದೇಶ ತವರಿನಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ.
ಐರ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಮೂರು ಏಕದಿನ, ಮೂರು ಟಿ20 ಪಂದ್ಯಗಳು ಮತ್ತು ಒಂದು ಟೆಸ್ಟ್ ಪಂದ್ಯ ನಡೆಯಲಿವೆ. ಶಕೀಬ್ ಜೊತೆಗೆ ಲಿತ್ತನ್ ದಾಸ್ ಎಲ್ಲಾ 3 ಸ್ವರೂಪಗಳಲ್ಲಿ ಆಡುವ ಆಟಗಾರರಲ್ಲಿ ಒಬ್ಬರು. ಐರ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಸರಣಿ ಏಪ್ರಿಲ್ 9 ರಂದು ಕೊನೆಗೊಳ್ಳಲಿದೆ. ಈ ಪಂದ್ಯಗಳು ಮುಗಿಯುವವರೆಗೂ ಶಕೀಬ್ ಮತ್ತು ದಾಸ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವುದು ಅನುಮಾನ ಎಂದು ತಿಳಿದಿದೆ.
ಬೆನ್ನು ನೋವಿನಿಂದಾಗಿ ಓಡಾಡಲು ಸಾಧ್ಯವಾಗದ ಶ್ರೇಯಸ್ ಅಯ್ಯರ್ ಅವರು ಇಡೀ ಆವೃತ್ತಿ ಅಥವಾ ಕನಿಷ್ಠ ಮೊದಲಾರ್ಧ ಟೂರ್ನಿಗೆ ಮಿಸ್ ಆಗಲಿದ್ದಾರೆ ಎಂದು ವರದಿಗಳು ಹೊರಹೊಮ್ಮಿವೆ. ಹಾಗಾಗಿ ಅನುಭವಿ ಶಕೀಬ್ ಅಲ್ ಹಸನ್ಗೆ ನಾಯಕತ್ವದ ಜವಾಬ್ದಾರಿ ಹಸ್ತಾಂತರ ಮಾಡುವ ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿತ್ತು. ಆದರೆ ಇದೀಗ ಹಸನ್ ಕೂಡ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ದೂರ ಇರಲಿದ್ದಾರೆ. ಇದು ಕೆಕೆಆರ್ ಅಭಿಮಾನಿಗಳಿಗೆ ಭಾರಿ ಶಾಕ್ ನೀಡಿದೆ.
ಅಯ್ಯರ್ ಜೊತೆಗೆ ಶಕೀಬ್ ಸಹ ಶಾಕ್ ನೀಡಿದ್ದು, ಕೊಲ್ಕತ್ತಾ ತಂಡದ ನಾಯಕ ಯಾರು? ಎಂಬ ಪ್ರಶ್ನೆ ಟೀಮ್ ಮ್ಯಾನೇಜ್ಮೆಂಟ್ಗೆ ಕಾಡುತ್ತಿದೆ. ಇತ್ತೀಚೆಗೆ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ಕೆಕೆಆರ್ ನಾಯಕರನ್ನಾಗಿ ನೇಮಕ ಮಾಡುವ ಕುರಿತು ಸುದ್ದಿ ಹರಿದಾಡಿತ್ತು. ಆದರೆ ಇದು ಸುಳ್ಳು ಸುದ್ದಿ ಎನ್ನಲಾಗಿದೆ.
ನರೈನ್ ಅಥವಾ ರಸೆಲ್ಗೆ ನಾಯಕತ್ವ.?
ಸದ್ಯ ನಾಯಕತ್ವದ ಹುಡುಕಾಟದಲ್ಲಿರುವ ಕೊಲ್ಕತ್ತಾಗೆ 2 ಆಯ್ಕೆಗಳು ಮುಂದಿವೆ. ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೈನ್ ಮತ್ತು ಆ್ಯಂಡ್ರೆ ರಸೆಲ್ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ಕಟ್ಟಲು ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಕೆಆರ್‌ನ ನಿಜವಾದ ನಾಯಕ ಯಾರು ಎಂಬುದು ಕುತೂಹಲ ಮೂಡಿಸಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ
ಶ್ರೇಯಸ್ ಅಯ್ಯರ್ ನಾಯಕ) (ಫಿಟ್‌ನೆಸ್ ಪರೀಕ್ಷೆಗಾಗಿ ಕಾಯಲಾಗುತ್ತಿದೆ), ನಿತೀಶ್ ರಾಣಾ, ರೆಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಸಿಂಗ್ ರೋಣ, ಅನುಕುಲ್ ಚಕ್ರವರ್ತಿ, ಆರ್. ನಾರಾಯಣ್ ಜಗದೀಸನ್, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್ದೀಪ್ ಸಿಂಗ್, ಲಿತ್ತನ್ ದಾಸ್, ಶಕೀಬ್ ಅಲ್ ಹಸನ್.