ಕನ್ನಡ ಸುದ್ದಿ  /  Sports  /  Ipl 2023 Rcb In Talks With Michael Bracewell After Injured Will Jacks Ruled Out Of Entire Season

IPL 2023: ಆರ್​​ಸಿಬಿ ತಂಡಕ್ಕೆ ಬರ್ತಿದ್ದಾರೆ ಕಿವೀಸ್​​​​​ ಸ್ಫೋಟಕ ಆಲ್​​ರೌಂಡರ್​​​?

ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳೆ ಕಾಲಿಗೆ ಗಾಯವಾಗಿದ್ದರಿಂದ ಜಾಕ್ಸ್ IPL​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಿಸಿಕೊಳ್ಳಲು ಆರ್‌ಸಿಬಿ ತಂಡ ಬಲಗೈ ಬ್ಯಾಟ್ಸ್‌ಮನ್‌ನ ತಂಡಕ್ಕೆ ಕರೆತಂದಿತ್ತು. ಆದರೆ ಆರ್‌ಸಿಬಿ ಲೆಕ್ಕಾಚಾರಗಳಿಗೆ ಈಗ ತಣ್ಣೀರೆರಚಿದಂತ್ತಾಗಿದೆ.

ವಿಲ್ ಜಾಕ್ಸ್​ ಮತ್ತು ಮೈಕೆಲ್​ ಬ್ರೇಸ್​ವೆಲ್​
ವಿಲ್ ಜಾಕ್ಸ್​ ಮತ್ತು ಮೈಕೆಲ್​ ಬ್ರೇಸ್​ವೆಲ್​ (Twitter)

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​​ಗೂ (Indian Premeier League) ಮುನ್ನ ರಾಯಲ್​ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಆಘಾತವಾಗಿದೆ. ಮಿನಿ ಹರಾಜಿನಲ್ಲಿ 3.2 ಕೋಟಿ ನೀಡಿ RCB ಖರೀದಿಸಿದ್ದ ಇಂಗ್ಲೆಂಡ್‌ನ ಯುವ ಬ್ಯಾಟರ್‌ ವಿಲ್‌ ಜಾಕ್ಸ್‌ (Will Jacks) ಗಾಯದಿಂದ ಹೊರ ಬಿದ್ದಿದ್ದಾರೆ. ಇದೀಗ ಈತನ ಬದಲೀ ಆಟಗಾರನಾಗಿ ನ್ಯೂಜಿಲೆಂಡ್​ ಆಲ್​ರೌಂಡರ್​​​​​ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ.

ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳೆ ಕಾಲಿಗೆ ಗಾಯವಾಗಿದ್ದರಿಂದ ಜಾಕ್ಸ್ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಿಸಿಕೊಳ್ಳಲು ಆರ್‌ಸಿಬಿ ತಂಡ ಬಲಗೈ ಬ್ಯಾಟ್ಸ್‌ಮನ್‌ನ ತಂಡಕ್ಕೆ ಕರೆತಂದಿತ್ತು. ಆದರೆ ಆರ್‌ಸಿಬಿ ಲೆಕ್ಕಾಚಾರಗಳಿಗೆ ಈಗ ತಣ್ಣೀರೆರಚಿದಂತ್ತಾಗಿದೆ. ಗಾಯದ ಸಮಸ್ಯೆ ಕಾರಣ ಟೂರ್ನಿಯಿಂದ ಸಂಪೂರ್ಣ ಹೊರ ಬಿದ್ದಿದ್ದಾರೆ.

ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಬ್ಯಾಕಪ್‌ ಆಟಗಾರನಾಗಿ ಆರ್‌ಸಿಬಿ ವಿಲ್‌ ಜಾಕ್ಸ್‌ ಅವರನ್ನು ಖರೀದಿ ಮಾಡಿತ್ತು. ಬಾಂಗ್ಲಾದೇಶ ಪ್ರವಾಸದಲ್ಲಿ ಇಂಗ್ಲೆಂಡ್‌ ತಂಡದ ಪರ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡಿದ್ದ ವಿಲ್‌ ಜಾಕ್ಸ್‌, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಗಾಯಗೊಂಡಿದ್ದರು. ಬಳಿಕ ಸ್ಕ್ಯಾನಿಂಗ್‌ ವರದಿ ಪಡೆದು ಪರಿಣತ ವೈದ್ಯರಿಂದ ಸಲಹೆ ಪಡೆದ ಬಳಿಕ ಐಪಿಎಲ್​​​​ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.

ವಿಲ್​ ಜಾಕ್ಸ್​​​​​​​​​​ ಗಾಯದಿಂದ ಹೊರ ಬೀಳುತ್ತಿದ್ದಂತೆ ನ್ಯೂಜಿಲೆಂಡ್​ ತಂಡದ ಮೈಕೆಲ್​ ಬ್ರೇಸ್​ವೆಲ್​ ಅವರೊಂದಿಗೆ ಮಾತುಕತೆಗೆ ಆರ್​ಸಿಬಿ ಮುಂದಾಗಿದೆ. ಆಲ್​ರೌಂಡರ್​ ಬ್ರೇಸ್​ವೆಲ್​, ವಿಧ್ವಂಸಕ ಬ್ಯಾಟಿಂಗ್​​ಗೆ ಗಮನ ಸೆಳೆದಿದ್ದಾರೆ. ಬೌಲಿಂಗ್​​​ನಲ್ಲೂ ವಿಕೆಟ್​ ಪಡೆಯದೇ ವಾಪಸ್​ ಹೋಗುವುದಿಲ್ಲ. ಇದೀಗ ಈತನನ್ನು ತಂಡಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆ ಹೊಂದಿದ್ದ ಬ್ರೇಸ್​​​​​​​​ವೆಲ್​ ಅನ್​ಸೋಲ್ಡ್​ ಆಗಿದ್ದರು.

ಈವರೆಗೂ 16 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಬ್ರೇಸ್​ವೆಲ್​​ 139.51ರ ಸ್ಟ್ರೈಕ್​ರೇಟ್​​ನಲ್ಲಿ 133 ರನ್​ ಸಿಡಿಸಿದ್ದಾರೆ. 1 ಅರ್ಧಶತಕ ಕೂಡ ಚಚ್ಚಿದ್ದಾರೆ. ಆದರೆ ಬೌಲಿಂಗ್​​ನಲ್ಲಿ ಧಮಾಕ ಸೃಷ್ಟಿಸಿದ್ದು, 21 ವಿಕೆಟ್​ ಬೇಟೆಯಾಡಿದ್ದಾರೆ. ಕೇವಲ 5.36 ಎಕಾನಮಿ ಹೊಂದಿದ್ದಾರೆ.

ಟಾಪ್ಲೇ ಆಡುವ ಸಾಧ್ಯತೆ ಇದೆ!

ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ತಂಡ ಇಂಗ್ಲೆಂಡ್‌ ತಂಡದ ಎಡಗೈ ವೇಗದ ಬೌಲರ್‌ ರೀಸ್‌ ಟಾಪ್ಲಿ ಅವರನ್ನು ಖರೀದಿ ಮಾಡಿತ್ತು. ಆದರೆ, ಗಾಯದ ಸಮಸ್ಯೆ ಕಾರಣ ರೀಸ್‌ ಟಾಪ್ಲಿ ಕ್ರಿಕೆಟ್‌ನಿಂದ ಬಹುಪಾಲು ಸಮಯ ದೂರ ಉಳಿದಿದ್ದರು. ಇದೀಗ ಗಾಯದಿಂದ ಚೇತರಿಸಿರುವ ಎಡಗೈ ವೇಗಿ ಐಪಿಎಲ್‌ 2023 ಟೂರ್ನಿಗೂ ಮುನ್ನ ಆರ್‌ಸಿಬಿ ಬಳಗ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

16ನೇ ಆವೃತ್ತಿಯ ಐಪಿಎಲ್​​ ಮಾರ್ಚ್ 31 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸೆಣಸಾಟ ನಡೆಸಲಿವೆ. ಇನ್ನು ಆರ್​ಸಿಬಿ ತಂಡವು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹೇಜಲ್​​​ವುಡ್​, ಮೊಹಮ್ಮದ್ ಸಿರಾಜ್, ಕರಣ್​​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.