IPL 2023: ಇವರೇ ಐಪಿಎಲ್ನ ಅತ್ಯಂತ ದುಬಾರಿ ಆಟಗಾರರು; ಈ 10 ಕ್ರಿಕೆಟಿಗರ ಮೇಲೇನೆ ಎಲ್ಲರ ಕಣ್ಣು!
IPL 2023: ಹರಾಜಿನಲ್ಲಿ ಸ್ಟಾರ್ ಆಟಗಾರರ ಮೇಲೆ ಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಅದರಲ್ಲೂ ಈ ಹತ್ತು ವಿಶ್ವಶ್ರೇಷ್ಠ ಕ್ರಿಕೆಟಿಗರಿಗೆ ಮೇಲೆ ದುಡ್ಡಿನ ಮಳೆಯನ್ನೇ ಹರಿಸಿವೆ. ಇಂದಿನಿಂದ ಶುರುವಾಗುವ IPLನಲ್ಲಿ ಅವರು ಅಬ್ಬರಿಸುತ್ತಾರಾ? ಫ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳುತ್ತಾರಾ ಎಂಬ ಕುತೂಹಲ ಗರಿಗೆದರಿದೆ. ಆ ದುಬಾರಿ ಆಟಗಾರರು ಯಾರು ಎಂಬುದನ್ನು ನೋಡೋಣ.
(1 / 10)
Sam Curran: ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 18.5 ಕೋಟಿ ರೂ.ಗೆ ಖರೀದಿಸಿತ್ತು. ಇದುವರೆಗೂ ಐಪಿಎಲ್ ಪ್ರಶಸ್ತಿ ಗೆಲ್ಲದ ಫ್ರಾಂಚೈಸಿ ಕರನ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಕಳೆದ ಸೀಸನ್ವರೆಗೂ ಚೆನ್ನೈ ತಂಡದಲ್ಲಿದ್ದರು.
(2 / 10)
Cameron Green: ಸ್ಯಾಮ್ ಕರನ್ ನಂತರ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ 17.5 ಕೋಟಿ ರೂ.ಗಳ ಬೆಲೆಯೊಂದಿಗೆ 2ನೇ ದುಬಾರಿ ಆಟಗಾರ ಎನಿಸಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಕಳೆದ ಸೀಸನ್ನಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಮುಂಬೈ ತಂಡಕ್ಕೆ ಈ ಬಾರಿ ಗ್ರೀನ್ ಬಲ ತುಂಬಲಿದ್ದಾರಾ ಎಂಬ ಕುತೂಹಲ ಸೃಷ್ಟಿಯಾಗಿದೆ. ಇತ್ತೀಚೆಗಿನ ಭಾರತ ಪ್ರವಾಸದಲ್ಲಿ ಮಿಂಚಿದ ಗ್ರೀನ್, ಅದೇ ಫಾರ್ಮ್ ಮುಂದುವರಿಸುವ ಭರವಸೆಯಲ್ಲಿದ್ದಾರೆ.
(3 / 10)
IPL 2023: ఇంగ్లండ్ టెస్ట్ టీమ్ కెప్టెన్ బెన్ స్టోక్స్ ను చెన్నై సూపర్ కింగ్స్ రూ.16.5 కోట్లకు కొనుగోలు చేసింది. ధోనీ తర్వాత తమ కెప్టెన్సీ స్టోక్స్కే అప్పగించాలని భావిస్తున్న సీఎస్కే.. అతనిపై భారీ ఆశలే పెట్టుకుంది. గాయం వల్ల మొదటి కొన్ని మ్యాచ్ లలో స్టోక్స్ కేవలం బ్యాటింగ్కే పరిమితం కానున్నాడు.
(4 / 10)
Nicholas Pooran: ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ. 16 ಕೋಟಿ ಜಾಕ್ಪಾಟ್ ಹೊಡೆದ ಪೂರನ್, ಈ ಬಾರಿಯಾದರೂ ನಂಬಿಕೆ ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಕಳೆ ಎರಡು ಸೀಸನ್ಗಳಲ್ಲೂ ಈ ಪವರ್ ಹಿಟ್ಟರ್, ಕಳಪೆ ಪ್ರದರ್ಶನ ತೋರಿದ್ದರು.
(5 / 10)
Harry Brook: ಇಂಗ್ಲೆಂಡ್ ತಂಡದ ಯಂಗ್ ಸೆನ್ಸೇಷನ್ ಹ್ಯಾರಿ ಬ್ರೂಕ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 13.25 ಕೋಟಿಗೆ ಖರೀದಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಡಿಬಡಿ ಆಟವಾಡುತ್ತಿರುವ ಬ್ರೂಕ್, ಈ ಮೆಗಾ ಟೂರ್ನಿಯಲ್ಲೂ ಹೈದರಾಬಾದ್ ಪರ ಮಧ್ಯಮ ಕ್ರಮಾಂಕದ ಭಾರವನ್ನು ಹೊರಲಿದ್ದಾರೆ. ಇದು ಅವರಿಗೆ ಚೊಚ್ಚಲ ಐಪಿಎಲ್.
(6 / 10)
Mayank Agarwal: ಮಯಾಂಕ್ ಅಗರ್ವಾಲ್ ಅವರನ್ನು ಸನ್ ರೈಸರ್ಸ್ ತಂಡ ರೂ.8.25 ಕೋಟಿಗೆ ಖರೀದಿಸಿತು. ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಯಾಂಕ್ ಈ ಬಾರಿ ಹೈದರಾಬಾದ್ ಪರ ಓಪನಿಂಗ್ ಆಗಲಿದ್ದಾರೆ.
(7 / 10)
KL Rahul: ಕಳೆದ ವರ್ಷ ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಜೊತೆ ಕೆಎಲ್ ರಾಹುಲ್, 17 ಕೋಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಅವರು ನಾಯಕ ಮತ್ತು ಆಟಗಾರರಾಗಿ ಉತ್ತಮ ಪ್ರದರ್ಶನ ಕೂಡ ನೀಡಿದ್ದರು. ಮತ್ತು ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದರು. ಈ ಬಾರಿ ಅಮೋಘ ಫಾರ್ಮ್‌ನಲ್ಲಿ ಇಲ್ಲದ ಅವರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.(PTI)
(8 / 10)
Rohit Sharma: ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ರೋಹಿತ್ ಶರ್ಮಾಗೆ ಫ್ರಾಂಚೈಸಿ, 16 ಕೋಟಿ ರೂಪಾಯಿ ನೀಡುತ್ತಿದೆ. ಕಳೆದ ವರ್ಷದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಈ ಬಾರಿಯ ಈ ಟೀಮ್ ಇಂಡಿಯಾ ನಾಯಕ ಏನು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.(PTI)
(9 / 10)
Ravindra Jadeja: ಕಳೆದ ಋತುವಿನಲ್ಲಿ CSK ತಂಡದ ನಾಯಕನಾಗಲು ವಿಫಲರಾಗಿದ್ದ ರವೀಂದ್ರ ಜಡೇಜಾ ಅವರನ್ನು 16 ಕೋಟಿಗೆ ಉಳಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ಚೆನ್ನೈ ಈ ಋತುವಿನಲ್ಲಿ ಜಡೇಜಾ ಮೇಲೆ ಹೆಚ್ಚಿನ ಭರವಸೆ ಹೊಂದಿದೆ.
(10 / 10)
Virat Kohli: ಮೊದಲ ಸೀಸನ್‌ನಿಂದ ಆರ್‌ಸಿಬಿ ಫ್ರಾಂಚೈಸಿ ಪರ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಆ ಫ್ರಾಂಚೈಸಿ ಕೊಹ್ಲಿಗೆ 15 ಕೋಟಿ ನೀಡಿ ಉಳಿಸಿಕೊಂಡಿದೆ. ಕಳೆದ ಸೀಸನ್ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಕೊಹ್ಲಿ, ಈ ಬಾರಿ ಅದ್ಭುತ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕೊಹ್ಲಿ, ಐಪಿಎಲ್ನಲ್ಲೂ ಅದೇ ಫಾರ್ಮ್ ಮುಂದುವರೆಸುವ ಭರವಸೆಯಲ್ಲಿದ್ದಾರೆ.
ಇತರ ಗ್ಯಾಲರಿಗಳು