ಕನ್ನಡ ಸುದ್ದಿ  /  Sports  /  Ipl 2023: Virat Kohlis Dream Will Sanjay Manjrekars Astonishing Claim About Rcb Great And Faf Du Plessiss Role

IPL 2023: ವಿರಾಟ್​ ಕೊಹ್ಲಿ ಟ್ರೋಫಿ ಕನಸು ಈ ಬಾರಿ ನನಸಾಗಲಿದೆ: ಸಂಜಯ್​ ಮಂಜ್ರೇಕರ್​ ಭವಿಷ್ಯ

ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ (Sanjay Manjrekar) ಅವರು 15 ವರ್ಷಗಳಿಂದ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿರುವ ಆರ್​ಸಿಬಿ ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಲಿದ್ದು, ಟ್ರೋಫಿ ಬರ ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

16ನೇ ಆವೃತ್ತಿಯ ಐಪಿಎಲ್ (IPL)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್ ತಂಡಗಳು (CSK vs GT) ಕಾದಾಟ ನಡೆಸಲಿವೆ. ಅದರಲ್ಲೂ ಪ್ರತಿ ವರ್ಷದಂತೆ ಈ ವರ್ಷವೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ (Royal Challengers Bangalore) ನಿರೀಕ್ಷೆ ಹೆಚ್ಚಾಗಿದೆ. ಕಪ್​ ಗೆಲ್ಲುವ ಫೇವರಿಟ್​ ತಂಡವೂ ಎನಿಸಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು, ಏಪ್ರಿಲ್​ 2ರಂದು IPL​ನಲ್ಲಿ ಏಪ್ರಿಲ್​ 2ರಂದು ತಮ್ಮ ಅಭಿಯಾನ ಆರಂಭಿಸಲಿದೆ. ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಬಾರಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡವನ್ನು (Mumbai Indians) ಎದುರಿಸಲಿದೆ. ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದೆ. ಮುಂಬೈ 17 ಗೆಲುವು ದಾಖಲಿಸಿದ್ದರೆ, ಬೆಂಗಳೂರು 13 ಗೆಲುವು ಸಾಧಿಸಿದೆ.

ಇದೀಗ ಈ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಆರ್​​ಸಿಬಿ ಅಭಿಮಾನಿಗಳಿಗೆ ಶುಭಸುದ್ದಿಯೊಂದನ್ನು ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ (Sanjay Manjrekar) ಅವರು 15 ವರ್ಷಗಳಿಂದ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿರುವ ಆರ್​ಸಿಬಿ ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಲಿದ್ದು, ಟ್ರೋಫಿ ಬರ ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ 15 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಟ್ರೋಫಿ ಗೆದ್ದಿಲ್ಲ. ಮೂರು ಫೈನಲ್​​ಗೇರಿದರೂ, ರನ್ನರ್​​ಅಪ್​​​​ಗಷ್ಟೇ ತೃಪ್ತಿಪಟ್ಟುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಮಂಜ್ರೇಕರ್​​​​, ಆರ್​ಸಿಬಿ ಈ ಸಲ ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ಅವಕಾಶ ಹೊಂದಿದೆ. ಆ ಮೂಲಕ ವಿರಾಟ್​ ಕೊಹ್ಲಿ ಅವರ ಟ್ರೋಫಿ ಕನಸು ನನಗಾಗಲಿದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಅದು ಪರಿಣಾಮಕಾರಿ ಪ್ರದರ್ಶನದಿಂದ ಮಾತ್ರ ಎಂದು ಮಂಜ್ರೇಕರ್ ಹೇಳಿದ್ದಾರೆ.

ಅದ್ಭುತ ಫಾರ್ಮ್​​ನಲ್ಲಿದ್ದಾರೆ ಕೊಹ್ಲಿ!

ಕಳೆದ ವರ್ಷದ ಸೆಪ್ಟೆಂಬರ್​​ವರೆಗೂ ಅಂದರೆ ಮೂರು ವರ್ಷಗಳ ಕಾಲ ಆರ್​​​ಸಿಬಿ ಮಾಜಿ ನಾಯಕ ವಿರಾಟ್​ ಕೊಹ್ಲಿ ಕ್ರಿಕೆಟ್​​ ತೀವ್ರ ವೈಫಲ್ಯ ಅನುಭವಿಸಿದ್ದರು. ರನ್​ಗಳಿಸಲು ಪರದಾಟ ನಡೆಸಿದ್ದರು. ಆದರೆ ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ ಕೊಹ್ಲಿ, ಅದೇ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ. ಈಗ ಐಪಿಎಲ್​​ನಲ್ಲೂ ಅದೇ ಲಯ ಮುಂದುವರೆಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಳೆಯ ಲಯಕ್ಕೆ ಮರಳಿದ ನಂತರ 3 ವರ್ಷಗಳ ನಂತರ ಶತಕ ಸಿಡಿಸಿದರು. ಏಷ್ಯಕಪ್​-ಟಿ20 ವಿಶ್ವಕಪ್​​​​​ನಲ್ಲಿ ಅಬ್ಬರದ ಆಟವಾಡಿದರು. ಏಕದಿನ ಕ್ರಿಕೆಟ್​​ನಲ್ಲೂ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ಮಿಂಚಿದರು. ಟೆಸ್ಟ್​ ಕ್ರಿಕೆಟ್​​ನಲ್ಲೂ ಫಾರ್ಮ್​ಗೆ ಬಂದರು. ಸದ್ಯ ಕೊಹ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಪ್ರದರ್ಶನ ಆರ್​ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊಹ್ಲಿಯ ಜೊತೆಗೆ ಉಳಿದವರ ಪ್ರದರ್ಶನವೂ ಅಗತ್ಯ ಎಂದು ಹೇಳಿದ್ದಾರೆ.

ಆರ್​ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​​), ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಕರಣ್​ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್.