ಕನ್ನಡ ಸುದ್ದಿ  /  Photo Gallery  /  Ipl And Wpl First Ever Hatrik Wicket Takers

WPLನಲ್ಲಿ ಇಸ್ಸಿ ವಾಂಗ್​ ಚೊಚ್ಚಲ ಹ್ಯಾಟ್ರಿಕ್​ ಪಡೆದ ಆಟಗಾರ್ತಿ.. ಹಾಗಾದ್ರೆ IPLನಲ್ಲಿ ಮೊದಲು ಯಾರು?

ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲಿ (Women's Premier League) ಮೊದಲ ಹ್ಯಾಟ್ರಿಕ್​ ವಿಕೆಟ್ ಸಂಪಾದಿಸಿದ ಖ್ಯಾತಿಗೆ ಮುಂಬೈ ಇಂಡಿಯನ್ಸ್​ ತಂಡದ ಇಸ್ಸಿ ವಾಂಗ್ (Issy Wong)​​​​ ಪಾತ್ರರಾಗಿದ್ದಾರೆ. ಹಾಗಾದರೆ ಇಂಡಿಯನ್​ ಪ್ರೀಮಿಯರ್​ ಲೀಗ್​​​ನಲ್ಲಿ ಮೊದಲ ಹ್ಯಾಟ್ರಿಕ್​ ಕಬಳಿಸಿದ ಆಟಗಾರ ಯಾರು.?

ಮಹಿಳಾ ಪ್ರೀಮಿಯರ್​ ಲೀಗ್​​​​ನ (India Premier League) ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ (Mumbai Indians)​, ಫೈನಲ್​ಗೆ ಎಂಟ್ರಿಕೊಟ್ಟಿದೆ. ಯುಪಿ ವಾರಿಯರ್ಸ್ (UP Warriorz) ತಂಡವನ್ನು 72 ರನ್​ಗಳಿಂದ ಮಣಿಸಿ, ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ 2ನೇ ತಂಡ ಎನಿಸಿತು. ಮಾರ್ಚ್​ 26ರಂದು ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಲಿದೆ.
icon

(1 / 5)

ಮಹಿಳಾ ಪ್ರೀಮಿಯರ್​ ಲೀಗ್​​​​ನ (India Premier League) ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ (Mumbai Indians)​, ಫೈನಲ್​ಗೆ ಎಂಟ್ರಿಕೊಟ್ಟಿದೆ. ಯುಪಿ ವಾರಿಯರ್ಸ್ (UP Warriorz) ತಂಡವನ್ನು 72 ರನ್​ಗಳಿಂದ ಮಣಿಸಿ, ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ 2ನೇ ತಂಡ ಎನಿಸಿತು. ಮಾರ್ಚ್​ 26ರಂದು ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಲಿದೆ.(WPL/TwitterWPL/Twitter)

ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್​​ ಇಸ್ಸಿ ವಾಂಗ್​, ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ್ದಾರೆ. WPL ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್​​ಸಾಧಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಬೌಲಿಂಗ್​ ಮಾಡಿದ 4 ಓವರ್​​ಗಳಲ್ಲಿ 15 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಉರುಳಿಸಿದ್ದಾರೆ.
icon

(2 / 5)

ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್​​ ಇಸ್ಸಿ ವಾಂಗ್​, ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ್ದಾರೆ. WPL ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್​​ಸಾಧಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಬೌಲಿಂಗ್​ ಮಾಡಿದ 4 ಓವರ್​​ಗಳಲ್ಲಿ 15 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಉರುಳಿಸಿದ್ದಾರೆ.(WPL/Twitter)

ಕಿರಣ್​ ನವಿಗೆರೆ (12.2), ಸಿಮ್ರಾನ್ ಶೇಖ್ (12.3), ಸೋಫಿ ಎಕ್ಲೆಸ್ಟನ್ (12.4) ಅವರು ಮೊದಲ ಹ್ಯಾಟ್ರಿಕ್​​​ನಲ್ಲಿ ಬಲಿಯಾದ ಆಟಗಾರ್ತಿಯಾಗಿದ್ದಾರೆ. 13ನೇ ಓವರ್​​​ನಲ್ಲಿ ಐತಿಹಾಸಿಕ ಮೈಲಿಗಲ್ಲು ದಾಖಲಾಯಿತು. WPLನಲ್ಲಿ ಮೊದಲು ಹ್ಯಾಟ್ರಿಕ್​ ಸಾಧಿಸಿದ್ದು ಇಸ್ಸಿ ವಾಂಗ್​ ಆದರೆ, ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ್ಯಾರು?
icon

(3 / 5)

ಕಿರಣ್​ ನವಿಗೆರೆ (12.2), ಸಿಮ್ರಾನ್ ಶೇಖ್ (12.3), ಸೋಫಿ ಎಕ್ಲೆಸ್ಟನ್ (12.4) ಅವರು ಮೊದಲ ಹ್ಯಾಟ್ರಿಕ್​​​ನಲ್ಲಿ ಬಲಿಯಾದ ಆಟಗಾರ್ತಿಯಾಗಿದ್ದಾರೆ. 13ನೇ ಓವರ್​​​ನಲ್ಲಿ ಐತಿಹಾಸಿಕ ಮೈಲಿಗಲ್ಲು ದಾಖಲಾಯಿತು. WPLನಲ್ಲಿ ಮೊದಲು ಹ್ಯಾಟ್ರಿಕ್​ ಸಾಧಿಸಿದ್ದು ಇಸ್ಸಿ ವಾಂಗ್​ ಆದರೆ, ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ್ಯಾರು?(WPL/Twitter)

ಲಕ್ಷ್ಮೀಪತಿ ಬಾಲಾಜಿ ಇಂಡಿಯನ್​​ ಪ್ರೀಮಿಯರ್​​ ಲೀಗ್​​​ನಲ್ಲಿ ಚೊಚ್ಚಲ  ಹ್ಯಾಟ್ರಿಕ್​ ಸಾಧಿಸಿದ ಬೌಲರ್​ ಎನಿಸಿದ್ದಾರೆ. 2008ರ ಮೇ 10ರಂದು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವೇಗದ ಬೌಲರ್​ ಆಗಿದ್ದ ಬಾಲಾಜಿ, IPL​​ನಲ್ಲಿ ಇತಿಹಾಸ ನಿರ್ಮಿಸಿದ್ದರು.
icon

(4 / 5)

ಲಕ್ಷ್ಮೀಪತಿ ಬಾಲಾಜಿ ಇಂಡಿಯನ್​​ ಪ್ರೀಮಿಯರ್​​ ಲೀಗ್​​​ನಲ್ಲಿ ಚೊಚ್ಚಲ  ಹ್ಯಾಟ್ರಿಕ್​ ಸಾಧಿಸಿದ ಬೌಲರ್​ ಎನಿಸಿದ್ದಾರೆ. 2008ರ ಮೇ 10ರಂದು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವೇಗದ ಬೌಲರ್​ ಆಗಿದ್ದ ಬಾಲಾಜಿ, IPL​​ನಲ್ಲಿ ಇತಿಹಾಸ ನಿರ್ಮಿಸಿದ್ದರು.(Twitter)

ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ವಿರುದ್ಧ ಹ್ಯಾಟ್ರಿಕ್ ವಿಕೆಟ್​ ಕಬಳಿಸಿದ್ದರು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐತಿಹಾಸಿಕ ದಾಖಲೆ ದಾಖಲಾಗಿತ್ತು. ಪಂದ್ಯದ 20ನೇ ಓವರ್​​ನಲ್ಲಿ ಪಂಜಾಬ್​ ಗೆಲುವಿಗೆ 27 ಬೇಕಿದ್ದಾಗ ಇರ್ಫಾನ್​ ಪಠಾಣ್​, ಪಿಯೂಷ್​ ಚಾವ್ಲಾ, ವಿಕ್ರಮ್​ ರಾಜ್​ ವೀರ್​ಸಿಂಗ್​ ಅವರನ್ನು ಮೊದಲ ಹ್ಯಾಟ್ರಿಕ್​ ವಿಕೆಟ್​ ಬಲಿ ಪಡೆದರು. ಆ ಪಂದ್ಯದಲ್ಲಿ ಬಾಲಾಜಿ 24 ರನ್​ ಬಿಟ್ಟು 5 ವಿಕೆಟ್​ ಉರುಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
icon

(5 / 5)

ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ವಿರುದ್ಧ ಹ್ಯಾಟ್ರಿಕ್ ವಿಕೆಟ್​ ಕಬಳಿಸಿದ್ದರು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐತಿಹಾಸಿಕ ದಾಖಲೆ ದಾಖಲಾಗಿತ್ತು. ಪಂದ್ಯದ 20ನೇ ಓವರ್​​ನಲ್ಲಿ ಪಂಜಾಬ್​ ಗೆಲುವಿಗೆ 27 ಬೇಕಿದ್ದಾಗ ಇರ್ಫಾನ್​ ಪಠಾಣ್​, ಪಿಯೂಷ್​ ಚಾವ್ಲಾ, ವಿಕ್ರಮ್​ ರಾಜ್​ ವೀರ್​ಸಿಂಗ್​ ಅವರನ್ನು ಮೊದಲ ಹ್ಯಾಟ್ರಿಕ್​ ವಿಕೆಟ್​ ಬಲಿ ಪಡೆದರು. ಆ ಪಂದ್ಯದಲ್ಲಿ ಬಾಲಾಜಿ 24 ರನ್​ ಬಿಟ್ಟು 5 ವಿಕೆಟ್​ ಉರುಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.(Twitter)


IPL_Entry_Point

ಇತರ ಗ್ಯಾಲರಿಗಳು