ಕನ್ನಡ ಸುದ್ದಿ  /  Sports  /  Ipl Final Match Chennai Super Kings Do Not Want To See Mumbai Indians In Ipl Final Says Chris Gayle Rmy

IPL Final: ಮುಂಬೈ ಇಂಡಿಯನ್ಸ್ ಐಪಿಎಲ್ ಫೈನಲ್‌ಗೆ ಬರೋದನ್ನ ಸಿಎಸ್‌ಕೆ ಬಯಸೋದಿಲ್ಲ; ಎರಡನೇ ಕ್ವಾಲಿಫೈಯರ್‌ಗೂ ಮುನ್ನ ಗೇಲ್ ಹೇಳಿದ್ದಿಷ್ಟು

ಎರಡನೇ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ವಿರುದ್ಧ ಮುಂಬೈ ಇಂಡಿಯನ್ ಸೋಲುವ ಮೂಲಕ ಐಪಿಎಲ್ ಫೈನಲ್‌ಗೆ ಎಂಟ್ರಿ ನೀಡುವ ಆಸೆಯನ್ನು ಕೈಬಿಟ್ಟಿದೆ.

ಆರ್‌ಸಿಬಿಯ ಮಾಜಿ ಆಟಗಾರ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸಿಎಂಕೆ-ಎಂಐ ಬಗ್ಗೆ ಹೊಸ ಹೇಳಿಕೆಯನ್ನು ನೀಡಿದ್ದಾರೆ.
ಆರ್‌ಸಿಬಿಯ ಮಾಜಿ ಆಟಗಾರ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸಿಎಂಕೆ-ಎಂಐ ಬಗ್ಗೆ ಹೊಸ ಹೇಳಿಕೆಯನ್ನು ನೀಡಿದ್ದಾರೆ.

ಅಹಮದಾಬಾದ್: ಐಪಿಎಲ್‌ನ 16ನೇ ಆವೃತ್ತಿಯು (IPL 2023) ಕೊನೆಯ ಘಟಕ್ಕೆ ಬಂದಿದ್ದು, ಮಹತ್ವದ ಎರಡನೇ ಕ್ವಾಲಿಫೈಯರ್‌ನಲ್ಲಿ (Qualifier 2) ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 62 ರನ್‌ಗಳ ಗೆಲುವು ಪಡೆದ ಗುಜರಾತ್ ಟೈಟಾನ್ಸ್ (Gujarat Titans) ಸತತ ಎರಡನೇ ಬಾರಿಗೆ ಫೈನಲ್ (IPL Final) ಪ್ರವೇಶಿಸಿತು.

ಅಹಮದಾಬಾದ್‌ನಲ್ಲಿ ನಿನ್ನೆ (ಮೇ 26, ಶುಕ್ರವಾರ) ನಡೆದಿದ್ದ ಕ್ವಾಲಿಫೈಯರ್-2ನಲ್ಲಿ ಗುಜರಾತ್ ನೀಡಿದ್ದ 234 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಮುಟ್ಟವಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡ ವಿಫಲವಾಗಿತ್ತು. 171 ರನ್‌ಗಳಿಸಿ ರೋಹಿತ್ ಪಡೆ ಸರ್ವ ಪತನ ಕಂಡಿತ್ತು.

ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅಚ್ಚರಿಕೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬಂದ ವೇಗವನ್ನು ನೋಡಿದರೆ ಇವರು ಫೈನಲ್ ತಲುಪಿದರೆ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಸಾಧಾರಣ ಸವಾಲಾಗಲಿದೆ ಎಂದಿದ್ದಾರೆ.

ಗುಜರಾತ್ ಟೈಟಾನ್ಸ್‌ಗೆ ತವರು ನೆಲದಲ್ಲಿ ಆಡುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಅದನ್ನು ನಾನು ಪರಿಗಣನೆಗೆ ತೆಗೆದುಕೊಳ್ಳಬೇಕಾದ ವಿಷಯವಾದರೂ ಮುಂಬೈ ತುಂಬಾ ಬಲಿಷ್ಠ ತಂಡವಾಗಿತ್ತು.

ಮುಂಬೈ ಫೈನಲ್‌ಗೆ ಹೋಗುತ್ತಾ ಎಂಬ ಪ್ರಶ್ನೆಗೆ ಎದುರಾಗುತ್ತಿದ್ದಂತೆ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟರ್ ಆಗಿದ್ದ ಕ್ರಿಸ್ ಗೇಲ್, ಐಪಿಎಲ್ ಫೈನಲ್‌ನಲ್ಲಿ ಮುಂಬೈನಂತಹ ತಂಡವನ್ನು ನೋಡಲು ಚೆನ್ನೈ ಸೂಪರ್ ಕಿಂಗ್ಸ್ ಬಯಸುವುದಿಲ್ಲ ಎಂದು ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ಗುಜರಾತ್ ತಮ್ಮ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಲೀಗ್ ಹಂತದಲ್ಲಿ ಅಗ್ರಸ್ಥಾನದೊಂದಿಗೆ ಕಾಲಿಫೈಯರ್ ಆಗಿತ್ತು. ಆದರೆ ಚೆನ್ನೈನಲ್ಲಿ ನಡೆದ ಮೊದಲ ಅರ್ಹತಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಸೋಲು ಅನುಭವಿಸಿತ್ತು.

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದೊಂದಿಗೆ ಆರ್‌ಆರ್‌, ಆರ್‌ಸಿಬಿಯನ್ನು ಹಿಂದಿಕ್ಕೆ ಕ್ವಾಲಿಫೈಯರ್ ಆಗಿತ್ತು. ಆದರೆ ಗುಜರಾತ್ ಟೈಟಾನ್ಸ್‌ ವಿರುದ್ಧ ಎರಡನೇ ಕಾಲಿಫೈಯರ್‌ನಲ್ಲಿ ಸೋಲು ಫೈನಲ್ ಪ್ರವೇಶ ಆಸೆಯನ್ನು ಕೈಬಿಟ್ಟಿತು. ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟಿಂಗ್ ಲೈನಪ್‌ ಇದ್ದರೂ ಬೌಲಿಂಗ್ ವಿಭಾಗ ಕಳಪೆ ಪ್ರದರ್ಶನ ದಿಂದಾಗಿ ತಂಡ ಗೆಲ್ಲುವ ಪಂದ್ಯಗಳನ್ನು ಕೈಚೆಲ್ಲಿತ್ತು.

ಅಹಮದಾಬಾದ್‌ನಲ್ಲಿ ನಾಳೆ (ಮೇ 28, ಭಾನುವಾರ) ಐಪಿಎಲ್ ಫೈನಲ್‌ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಮುಂಬೈ ವಿರುದ್ಧದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಜಿಟಿ ತಂಡದ ಶುಬ್ಮನ್ ಗಿಲ್ 60 ಎಸೆತಗಳಲ್ಲಿ 129 ರನ್ ಗಳಿಸುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ಶತಕ ಸಿಡಿಸಿದ ಸಾಧನೆ ಮಾಡಿದರು.