Riyan Parag: ಮಾಜಿ ಕ್ರಿಕೆಟರ್ಸ್ ಏನೇ ಹೇಳೋದಿದ್ರೂ, ನನಗೆ ನೇರವಾಗಿ ಮೆಸೇಜ್ ಮಾಡಿ, ಟ್ವೀಟ್ ಮಾಡಬೇಡಿ; ಟೀಕಿಸುವರಿಗೆ ರಿಯಾನ್ ಪರಾಗ್ ಮನವಿ
Riyan Parag: ನನ್ನ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬರೆಯುವ ಬದಲು ನನಗೆ ನೇರವಾಗಿ ನನಗೆ ಮೆಸೇಜ್ ಮಾಡಿ. ನಾನು ಅದಕ್ಕೆ ಸ್ವಾಗತ ಮಾಡುತ್ತೇನೆ ಎಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ರಿಯಾನ್ ಪರಾಗ್ ತಿಳಿಸಿದ್ದಾರೆ.
ಭಾರತದ ಟ್ಯಾಲೆಂಟೆಡ್ ಕ್ರಿಕೆಟರ್ ರಿಯಾನ್ ಪರಾಗ್ (Riyan Parag), ತನ್ನನ್ನು ಟೀಕಿಸುವ ಮತ್ತು ಟ್ರೋಲ್ (Troll) ಮಾಡುವ ಮಾಜಿ ಆಟಗಾರರ ವಿರುದ್ಧ ಇದೇ ಮೊದಲ ಬಾರಿಗೆ ತು ಟಿ ಬಿಚ್ಚಿದ್ದಾರೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಮಂದಗತಿಯ ಬ್ಯಾಟಿಂಗ್ ನಡೆಸುವ ಸತತ ವೈಫಲ್ಯ ಅನುಭವಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಪರಾಗ್, ಇದೀಗ ತನ್ನ ಟೀಕೆ ಮಾಡುವವರ ಕುರಿತು ಪ್ರತಿಕ್ರಿಯಿಸಿದ್ದಾರೆ.
ಮಾಜಿ ಕ್ರಿಕೆಟಿಗರು ಮತ್ತು ನೆಟ್ಟಿಗರು, 21 ವರ್ಷದ ಯುವ ಕ್ರಿಕೆಟಿಗನ ದಯನೀಯ ವೈಫಲ್ಯಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಓವರ್ ಆ್ಯಟಿಟ್ಯೂಡ್ ಇರುವ ಆಟಗಾರನಿಗೆ ಅವಕಾಶ ಏಕೆ ಕೊಡುತ್ತೀರಿ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜ್ಮೆಂಟ್ ಸೂಚಿಸಿದ್ದರು. ಸದ್ಯ ಇದಕ್ಕೆ ಪ್ರತಿಕ್ರಿಯಿಸಿರುವ ಯುವ ಆಟಗಾರ, ಟ್ವೀಟ್ ಮಾಡಬೇಡಿ, ನನಗೆ ಮೇಸೇಜ್ ಮಾಡಿ ಎಂದು ಹೇಳಿದ್ದಾರೆ.
5 ಬೌಲರ್, 5 ಬ್ಯಾಟರ್ಸ್ ಮತ್ತು ಪರಾಗ್
ಟ್ವಿಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಹಂಚಿಕೊಂಡಿರುವ ವಿಡಿಯೋದಲ್ಲಿ ಪರಾಗ್ ಈ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಅವರು ರಾಜಸ್ಥಾನ್ ತಂಡವು 6 ಬ್ಯಾಟರ್ಸ್, 5 ಬೌಲರ್ಸ್ ಎನ್ನುವಂತೆ ಆಡಿತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ರಿಕೆಟ್ ವಿಶ್ಲೇಷಕ ಜೋ ಭಟ್ಟಾಚಾರ್ಯ ಅವರು ಅಲ್ಲ ಎಂದು ಹೇಳಿದ್ದಾರೆ. ಈ ಐಪಿಎಲ್ನಲ್ಲಿ ರಾಜಸ್ಥಾನ್ ಆಡಿದ್ದು 5 ಬೌಲರ್, 5 ಬ್ಯಾಟರ್ಸ್ ಮತ್ತು ಮತ್ತೊಬ್ಬ ರಿಯಾನ್ ಪರಾಗ್ ಎನ್ನುವ ರೀತಿ ಆಡಿತು ಎಂದು ಹೇಳಿದರು.
‘ಅಭಿಮಾನಿಗಳ ಆಕ್ರೋಶ ಅರ್ಥವಾಗುತ್ತದೆ’
ಈ ವಿಡಿಯೋ ಕುರಿತಂತೆ ಕುರಿತಂತೆ ಮೊದಲ ಬಾರಿಗೆ, ಪ್ರತಿಕ್ರಿಯಿಸಿದ್ದು, ಪ್ರೇಕ್ಷಕರು, ಅಭಿಮಾನಿಗಳು, ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿಕೊಂಡು ಪಂದ್ಯ ಕಣ್ತುಂಬಿಕೊಳ್ಳಲು ಬರುತ್ತಾರೆ. ಆದರೆ ಆಡಲು ಅಲ್ಲ. ಮೈದಾನದಲ್ಲಿ ಆಟಗಾರರು, ಉತ್ತಮ ಪ್ರದರ್ಶನ ನೀಡದೇ ಇದ್ದರೆ, ಅವರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುವುದು, ದ್ವೇಷಿಸುವುದು ನನಗೆ ಅರ್ಥವಾಗುತ್ತದೆ ಎಂದು ಪರಾಗ್ ಹೇಳಿದ್ದಾರೆ.
‘ನನಗೆ ನೇರವಾಗಿ ಮೆಸೇಜ್ ಮಾಡಿ’
ಆದರೆ ಇದೇ ವಿಚಾರಕ್ಕೆ ಸಂಬಂಧಿಸಿ, ಚಂದಾದಾರರು ಆಗಿರುವ ವೆರಿಫೈಡ್ ಖಾತೆಗಳನ್ನು ಹೊಂದಿದವರು, ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಸೇರಿದಂತೆ ಹಲವರು ನನ್ನ ಕುರಿತು ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಾರೆ. ಅದರ ಬದಲಿಗೆ ನನಗೆ ನೇರವಾಗಿ ನನಗೆ ಮೆಸೇಜ್ ಮಾಡಿ. ಪ್ರಾಮಾಣಿಕ ಮತ್ತು ನಿಜವಾಗಿಯೂ ಹೇಳುತ್ತೇನೆ, ನನಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿದರೆ, ನಾನು ಇಷ್ಟ ಪಡುತ್ತೇನೆ ಎಂದು ಪರಾಗ್ ತಿಳಿಸಿದ್ದಾರೆ.
ಸಲಹೆಗಳಿಗೆ ಸ್ವಾಗತ
ಅದು ಯಾರೇ ಆಗಲಿ, ನೀನು ಈ ರೀತಿ ಆಡುವುದು ತಪ್ಪು. ಅದರ ಬದಲಿಗೆ ಹೀಗೆ ಆಡಿದರೆ, ನೀನು ಸುಧಾರಣೆ ಕಾಣುತ್ತೀಯಾ? ಪ್ರದರ್ಶನ ಸುಧಾರಿಸಲಿದೆ ಎಂದು ಸಲಹೆ, ಸೂಚನೆಗಳನ್ನು ನೀಡಿದರೆ, ಖಂಡಿತವಾಗಿಯೂ ನಾನು ಆ ಮಾತುಗಳನ್ನು ಕೇಳುತ್ತೇನೆ. ನಿಮ್ಮ ಸಲಹೆಗಳಿಗೆ ಸ್ವಾಗತ ಎಂದು ಹೇಳಿದ ಪರಾಗ್, ಈ ಬಾರಿಯ ಐಪಿಎಲ್ನಲ್ಲಿ 2 ಪಂದ್ಯಗಳಲ್ಲಿ ಕಣಕ್ಕಿಳಿಯದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಬೇಸರವಾಯಿತು’
ನಾನು ಎರಡು ಪಂದ್ಯಗಳಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದೆ. ಒಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಿಗೂ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹೇಗೆಲ್ಲಾ ಆಡಬೇಕು, ಹೇಗೆ ರನ್ ಗಳಿಸಬೇಕು ಎಂದು ನೆಟ್ಸ್ನಲ್ಲಿ ತುಂಬಾ ಸಮಯ ಕಳೆದೆ. ದುರಾದೃಷ್ಟವಶಾತ್ ಆ ತಂಡಗಳ ವಿರುದ್ಧವೂ ಆಡುವ ಅವಕಾಶ ಸಿಗಲಿಲ್ಲ. ಕೊಂಚ ಬೇಸರವಾಯಿತು ಎಂದು ಹೇಳಿದ್ದಾರೆ.
ಐಪಿಎಲ್ನಲ್ಲಿ ಪರಾಗ್ ಪ್ರದರ್ಶನ
2019ರಿಂದಲೂ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿಯ ಭಾಗವಾಗವಾಗಿರುವ ಪರಾಗ್, 16ನೇ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ 118ರ ಸ್ಟ್ರೈಕ್ರೇಟ್ನಲ್ಲಿ 78 ರನ್ ಗಳಿಸಿದ್ದರು. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಮತ್ತು ನೆಟ್ಟಿಗರು ಪರಾಗ್ರನ್ನು ಟೀಕಿಸಿದ್ದರು. ಈವರೆಗೂ ಐದು ಸೀಸನ್ಗಳಲ್ಲಿ ಕಣಕ್ಕಿಳಿದಿರುವ ಯುವ ಆಟಗಾರ, 54 ಪಂದ್ಯಗಳಲ್ಲಿ ಕೇವಲ 600 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ ಕೇವಲ 16.22.