P Chidambaram: ಫ್ರೆಂಚ್​ ಓಪನ್ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ಕ್ರೀಡೆಗೆ ರಾಜಕೀಯದಿಂದ ಮುಕ್ತಿ ಕೊಡಿ ಎಂದ ಚಿದಂಬರಂ
ಕನ್ನಡ ಸುದ್ದಿ  /  ಕ್ರೀಡೆ  /  Ipl  /  P Chidambaram: ಫ್ರೆಂಚ್​ ಓಪನ್ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ಕ್ರೀಡೆಗೆ ರಾಜಕೀಯದಿಂದ ಮುಕ್ತಿ ಕೊಡಿ ಎಂದ ಚಿದಂಬರಂ

P Chidambaram: ಫ್ರೆಂಚ್​ ಓಪನ್ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ಕ್ರೀಡೆಗೆ ರಾಜಕೀಯದಿಂದ ಮುಕ್ತಿ ಕೊಡಿ ಎಂದ ಚಿದಂಬರಂ

ಫ್ರೆಂಚ್​ ಓಪನ್​​ ಟೂರ್ನಿಯ (French Open 2023) ಫೈನಲ್​​​​ ಪ್ರವೇಶಿಸಿದ ನಾಲ್ಕು ದೇಶಗಳ ಫೈನಲಿಸ್ಟ್​​ಗಳನ್ನು ಭಾರತ ನೋಡಿ ಪಾಠ ಕಲಿಯಬೇಕೆಂದು ಕಾಂಗ್ರೆಸ್​ ನಾಯಕ ಪಿ.ಚಿದಂಬರಂ (P Chidambaram) ಸಂಚಲನ ಟ್ವೀಟ್​ ಮಾಡಿದ್ದಾರೆ.

ಫ್ರೆಂಚ್​ ಓಪನ್​ ಟೂರ್ನಿಯ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ಪಿ ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ
ಫ್ರೆಂಚ್​ ಓಪನ್​ ಟೂರ್ನಿಯ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ಪಿ ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ

ಪ್ಯಾರಿಸ್​ನಲ್ಲಿ ನಡೆದ ಫ್ರೆಂಚ್​​ ಓಪನ್​​ ಟೂರ್ನಿಗೆ (French Open 2023) ಅದ್ಧೂರಿ ತೆರೆ ಬಿದ್ದಿದೆ. ಜೂನ್​ 11ರಂದು ನಡೆದ ಫೈನಲ್​ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್​ ರೂಡ್ (Casper Ruud) ಅವರನ್ನು ಮಣಿಸುವ ಮೂಲಕ ಸರ್ಬಿಯಾದ 36 ವರ್ಷದ ದಿಗ್ಗಜ ಆಟಗಾರ ನೋವಾಕ್​ ಜೊಕೊವಿಕ್ (Novak Djokovic), ದಾಖಲೆಯ 23ನೇ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

P Chidambaram: ಫ್ರೆಂಚ್​ ಓಪನ್ ಫೈನಲಿಸ್ಟ್​ ಆಟಗಾರರ ದೇಶಗಳಿಂದ ಭಾರತ ಪಾಠ ಕಲಿಯಬೇಕು; ರಾಜಕೀಯದಿಂದ ಕ್ರೀಡೆಗೆ ಮುಕ್ತಿ ಕೊಡಿ ಎಂದ ಚಿದಂಬರಂ

ಜೂನ್ 10ರಂದು ನಡೆದ ಫ್ರೆಂಚ್ ಓಪನ್ 2023ರ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ (Karolina Muchova) ಅವರನ್ನು ಪರಾಭವಗೊಳಿಸಿದ ವಿಶ್ವದ ನಂಬರ್ 1 ಟೆನ್ನಿಸ್ ತಾರೆ ಇಗಾ ಸ್ವಿಯಾಟೆಕ್ (Iga Swiatek) ತನ್ನ ರೋಲ್ಯಾಂಡ್ ಗ್ಯಾರೋಸ್ ಕಿರೀಟ ಉಳಿಸಿಕೊಂಡರು. ಈ ಟೂರ್ನಿಯ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ಪಿ.ಚಿದಂಬರಂ (P Chidambaram) ಅವರು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.

ಫ್ರೆಂಚ್​ ಓಪನ್​​ ಟೂರ್ನಿಯ ಫೈನಲ್​​​​ ಪ್ರವೇಶಿಸಿದ ನಾಲ್ಕು ದೇಶಗಳ ಫೈನಲಿಸ್ಟ್​​ಗಳನ್ನು ಭಾರತ ನೋಡಿ ಪಾಠ ಕಲಿಯಬೇಕೆಂದು ಸಂಚಲನ ಟ್ವೀಟ್​ ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ಆಟಗಾರರ ದೇಶಗಳನ್ನು ಉಲ್ಲೇಖಿಸುವ ಮೂಲಕ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ. ಪೋಸ್ಟ್​ ಮಾಡಿದ್ದು ಜೂನ್​ 11ರಂದು ಆದರೂ ಈಗಲೂ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಚಿದಂಬರಂ ಅವರ ಟ್ವೀಟ್​ ಹೀಗಿದೆ

ಭಾನುವಾರ ರಾತ್ರಿ 10 ಗಂಟೆಗೆ ಅವರು ಟ್ವಿಟರ್​ ವೇದಿಕೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ರೋಲ್ಯಾಂಡ್​ ಗ್ಯಾರೋಸ್ (ಫ್ರೆಂಚ್​ ಓಪನ್​) ಟೆನಿಸ್​ ಟೂರ್ನಮೆಂಟ್​ನ ಫೈನಲ್​​​​​ ಸೇರಿದ ನಾಲ್ವರು ಫೈನಲಿಸ್ಟ್​​ಗಳು, ಪೊಲೆಂಡ್​, ಜೆಕ್ ರಿಪಬ್ಲಿಕ್, ಸರ್ಬಿಯಾ ಮತ್ತು ನಾರ್ವೆ ದೇಶಗಳನ್ನು ಪ್ರತಿನಿಧಿಸಿದ ಆಟಗಾರರು.

ಮೇಲೆ ತಿಳಿಸಿದ ಎಲ್ಲಾ ದೇಶಗಳು ತಮ್ಮದೇ ಆದ ಸಮಸ್ಯೆಗಳು, ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಹೊರತಾಗಿಯೂ ಅತ್ಯಂತ ಕೆಳ ದರ್ಜೆಯಲ್ಲಿವೆ. ಆ ದೇಶಗಳ ನಾಯಕರೂ ಸಾಧಾರಣರು. ಆದರೆ ಅವರ ಕ್ರೀಡೆಗಳಲ್ಲಿ ಯಾವುದೇ ರಾಜಕೀಯ ಮತ್ತು ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಕ್ರೀಡಾ ಸಚಿವರಿದ್ದರೂ ಅವರು ತೆರೆಮರೆಯಲ್ಲಿಯೇ ಇರುತ್ತಾರೆ. ಭಾರತದಂತಹ ದೇಶಗಳಿಗೆ ಇವು ಉತ್ತಮ ಪಾಠ' ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಚಿದಂಬರಂ ಅವರು ಸದ್ಯ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಉದ್ದೇಶಿಸಿಯೇ ಈ ಟ್ವೀಟ್​ ಮಾಡಿರುವುದು ಸ್ಪಷ್ಟ.  ಕಳೆದ ಎರಡು ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರತದ ಖ್ಯಾತನಾಮ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಲೈಂಗಿಕ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (WFI Chief Brij Bhushan Singh) ಅವರನ್ನು ಬಂಧಿಸುವಂತೆ ಕ್ರೀಡಾಪಟುಗಳು ಆಗ್ರಹಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದರೂ ಕುಸ್ತಿಪಟುಗಳಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಜೂನ್​ 15ರಂದು ದೆಹಲಿ ಪೊಲೀಸರು ಚಾರ್ಜ್​ ಶೀಟ್​ ಸಲ್ಲಿಸಲಾಗಿದೆ. ಸದ್ಯ ಚಿದಂಬರಂ ಅವರು ಟ್ವೀಟ್​ ಮಾಡಲು ಕಾರಣ ಬ್ರಿಜ್​ ಭೂಷಣ್​ ಅವರು ರಾಜಕೀಯ ನಾಯಕನಾಗಿದ್ದು, ಕ್ರೀಡಾ ಕ್ಷೇತ್ರದಲ್ಲೂ ತನ್ನ ಅಧಿಪತ್ಯ ಮುಂದುವರೆಸಿದ್ದಾರೆ. ರಾಜಕೀಯ ನಾಯಕರ ಆಗಮನದಿಂದ ಕ್ರೀಡಾ ಕ್ಷೇತ್ರವು ಪಾರದರ್ಶಕತೆ ಕಳೆದುಕೊಳ್ಳುತ್ತಿದೆ ಎಂಬ ಅರ್ಥದಲ್ಲಿ ಟ್ವೀಟ್​ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಕ್ರೀಡಾ ಕ್ಷೇತ್ರಕ್ಕೆ ರಾಜಕೀಯ ನಾಯಕರಿಂದ ಮುಕ್ತಿ ನೀಡಬೇಕು. ಆ ಮೂಲಕ ಕ್ರೀಡಾಪಟುಗಳಿಗೆ ಸ್ವತಂತ್ರ ನೀಡಬೇಕು ಎನ್ನುವ ಅರ್ಥದಲ್ಲಿ ಪಿ ಚಿದಂಬರಂ ಅವರು ಈ ಟ್ವೀಟ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.