ISL Final: ಮೋಹನ್ ಬಾಗನ್ vs ಬೆಂಗಳೂರು ಎಫ್​ಸಿ ಐಎಸ್​ಎಲ್ ಫೈನಲ್; ಎಲ್ಲಿ, ಯಾವಾಗ, ಹಿಂದಿನ ವಿಜೇತರ ಯಾರು?
ಕನ್ನಡ ಸುದ್ದಿ  /  ಕ್ರೀಡೆ  /  Isl Final: ಮೋಹನ್ ಬಾಗನ್ Vs ಬೆಂಗಳೂರು ಎಫ್​ಸಿ ಐಎಸ್​ಎಲ್ ಫೈನಲ್; ಎಲ್ಲಿ, ಯಾವಾಗ, ಹಿಂದಿನ ವಿಜೇತರ ಯಾರು?

ISL Final: ಮೋಹನ್ ಬಾಗನ್ vs ಬೆಂಗಳೂರು ಎಫ್​ಸಿ ಐಎಸ್​ಎಲ್ ಫೈನಲ್; ಎಲ್ಲಿ, ಯಾವಾಗ, ಹಿಂದಿನ ವಿಜೇತರ ಯಾರು?

Mohun Bagan vs Bengaluru FC: ಇಂಡಿಯನ್ ಸೂಪರ್ ಲೀಗ್ ಫೈನಲ್ ಪಂದ್ಯವು ಏಪ್ರಿಲ್ 12ರ ಶನಿವಾರ ಮೋಹನ್ ಬಾಗನ್ vs ಬೆಂಗಳೂರು ಎಫ್​ಸಿ ನಡುವೆ ನಡೆಯಲಿದೆ. ಈ ಪಂದ್ಯದ ಕುರಿತು ಮಾಹಿತಿ ಇಂತಿದೆ.

ISL Final: ಮೋಹನ್ ಬಾಗನ್ vs ಬೆಂಗಳೂರು ಎಫ್​ಸಿ ಐಎಸ್​ಎಲ್ ಫೈನಲ್; ಎಲ್ಲಿ, ಯಾವಾಗ, ಹಿಂದಿನ ವಿಜೇತರ ಯಾರು?
ISL Final: ಮೋಹನ್ ಬಾಗನ್ vs ಬೆಂಗಳೂರು ಎಫ್​ಸಿ ಐಎಸ್​ಎಲ್ ಫೈನಲ್; ಎಲ್ಲಿ, ಯಾವಾಗ, ಹಿಂದಿನ ವಿಜೇತರ ಯಾರು?

ಬಹುನಿರೀಕ್ಷಿತ ಇಂಡಿಯನ್ ಸೂಪರ್ ಲೀಗ್​ಗೆ​ ತೆರೆ ಬೀಳಲು ದಿನಗಣನೆ ಆರಂಭವಾಗಿದೆ. ಏಪ್ರಿಲ್ 12ರಂದು ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್​​ಸಿ ಮತ್ತು ಮೋಹನ್ ಬಗಾನ್ ಸೂಪರ್ ಜೈಂಟ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣ ಫೈನಲ್​ಗೆ ಆತಿಥ್ಯ ವಹಿಸಲಿದೆ. ನಿಯಮಿತ ಆವೃತ್ತಿಯಲ್ಲಿ ಮೋಹನ್ ಬಗಾನ್ ತಂಡವು ಬಿಎಫ್​​ಸಿಗಿಂತ ಅತ್ಯಧಿಕ ಅಂಕ ಪಡೆದ ಹಿನ್ನೆಲೆ ಕೋಲ್ಕತ್ತಾದಲ್ಲಿ ಅಂತಿಮ ಪಂದ್ಯ ಜರುಗಲಿದೆ.

ಲೀಗ್ ಹಂತದಲ್ಲಿ ಸುನಿಲ್ ಛೆಟ್ರಿ ನೇತೃತ್ವದ ಬೆಂಗಳೂರು ಎಫ್​ಸಿ ತಂಡವು ಆಡಿದ್ದ 24 ಪಂದ್ಯಗಳಲ್ಲಿ 11 ಗೆಲುವು, 8 ಸೋಲು ಕಂಡಿತ್ತು. ಜೊತೆಗೆ 5 ಡ್ರಾ ಸಾಧಿಸಿತ್ತು. ಒಟ್ಟಾರೆ 38 ಅಂಕ ಗಳಿಸಿದ್ದ ಬೆಂಗಳೂರು ಎಫ್​ಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಇತ್ತ ಮೋಹನ್ ಬಗಾನ್ ತಂಡವು ಕಣಕ್ಕಿಳಿದಿದ್ದ 24 ಪಂದ್ಯಗಳಲ್ಲಿ 17 ಗೆಲುವು, 2 ಸೋಲು ಸಾಧಿಸಿತ್ತು. ಉಳಿದ 5ರಲ್ಲಿ ಡ್ರಾ ಸಾಧಿಸಿತ್ತು. ಒಟ್ಟಾರೆ 56 ಅಂಕ ಸಂಪಾದಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿತ್ತು.

ಸೆಮಿಫೈನಲ್​ನಲ್ಲಿ ಗೋವಾ ಎಫ್​ಸಿ ತಂಡವನ್ನು ಮಣಿಸಿದ ಬಿಎಫ್​ಸಿ 4ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಎಫ್‌ಸಿ ಗೋವಾ ವಿರುದ್ಧದ 2ನೇ ಸೆಮಿಫೈನಲ್‌ ಬಳಿಕ ಒಟ್ಟು ಗೋಲುಗಳ (3-2)ಲೆಕ್ಕಚಾರದಲ್ಲಿ ಬೆಂಗಳೂರು ಎಫ್‌ಸಿ ಐಎಸ್‌ಎಲ್ 2025ರ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಸೆಮಿಫೈನಲ್ ಮೊದಲ​ ಲೆಗ್​ನಲ್ಲಿ 2-0 ಅಂತರದ ಗೋಲು ಗಳಿಸಿ ಗೆಲುವು ಸಾಧಿಸಿತ್ತು. ಆದರೆ ಸೆಮಿಫೈನಲ್ 2ನೇ ಲೆಗ್​​ನಲ್ಲಿ ಬಿಎಫ್​ಸಿ 1-2 ರಿಂದ ಸೋತಿತ್ತು. ಆದರೆ, ಒಟ್ಟು ಗೋಲುಗಳ ಲೆಕ್ಕಾಚಾರದಲ್ಲಿ ಬಿಎಫ್​​ಸಿ ಮುನ್ನಡೆ ಸಾಧಿಸಿತ್ತು.

ಮೋಹನ್ ಬಗಾನ್ ಕೂಡ 4ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. 2022-23ರ ಆವೃತ್ತಿಯ ಚಾಂಪಿಯನ್ ಆಗಿದ್ದ ಬಾಗನ್ ತಂಡವು 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಸೆಮಿಫೈನಲ್ ಮೊದಲ ಲೆಗ್​ನಲ್ಲಿ ಜೆಮ್ಶೆಡ್​ಪುರ ವಿರುದ್ಧ 1-2ರಿಂದ ಮಣಿದಿದ್ದ ಮೋಹನ್ ಬಾಗನ್, 2ನೇ ಲೆಗ್​ನಲ್ಲಿ 2-0 ಅಂತರದಿಂದ ಗೆದ್ದಿತ್ತು ಪರಿಣಾಮ ಸೆಮಿಫೈನಲ್‌ನ 2 ಲೆಗ್‌ ಪಂದ್ಯಗಳಲ್ಲಿ ದಾಖಲಾದ ಒಟ್ಟು ಗೋಲುಗಳ ಲೆಕ್ಕಾಚಾರದಲ್ಲಿ ಮೋಹನ್‌ ಬಾಗನ್‌ (3–2) ತಂಡವು ಮೇಲುಗೈ ಸಾಧಿಸಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿತು.

ಮತ್ತೆ ಫೈನಲ್​ನಲ್ಲಿ ಬಿಎಫ್​ಸಿ-ಮೋಹನ್ ಬಾಗನ್ ಮುಖಾಮುಖಿ

2022-23ರ ಆವೃತ್ತಿಯ ಫೈನಲ್​ನಲ್ಲಿ ಸೆಣಸಾಟ ನಡೆಸಿದ್ದ ತಂಡಗಳೇ ಮತ್ತೊಮ್ಮೆ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಅಂದು ಫೈನಲ್​ನಲ್ಲಿ ಬಿಎಫ್​ಸಿ ಮಣಿಸಿ ಮೋಹನ್ ಬಾಗನ್ 4-3 ಅಂತರದಿಂದ ಗೆದ್ದು ಚೊಚ್ಚಲ ಚಾಂಪಿಯನ್ ಆಗಿತ್ತು. 2018-19ರಲ್ಲಿ ಗೋವಾ ಎಫ್​ಸಿ ವಿರುದ್ಧ ಬೆಂಗಳೂರು ಎಫ್​ಸಿ ಗೆದ್ದು ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದೀಗ ಉಭಯ ತಂಡಗಳು 2ನೇ ಟ್ರೋಫಿಯನ್ನು ಗೆಲ್ಲಲು ಸಜ್ಜಾಗಿವೆ. ಆದರೆ ಟ್ರೋಫಿ ಯಾವ ತಂಡದ ಪಾಲಾಗಲಿದೆ ಎಂಬುದನ್ನು ಕಾದುನೋಡೋಣ.

ISL ಸೀಸನ್ಚಾಂಪಿಯನ್ಸ್ರನ್ನರ್ಸ್ ಅಪ್
2023-24ಮುಂಬೈ ಸಿಟಿ ಎಫ್‌ಸಿಮೋಹನ್ ಬಗಾನ್ ಸೂಪರ್ ಜೈಂಟ್
2022-23ಎಟಿಕೆ ಮೋಹನ್ ಬಗಾನ್ಬೆಂಗಳೂರು ಎಫ್‌ಸಿ
2021-22ಹೈದರಾಬಾದ್ ಎಫ್‌ಸಿಕೇರಳ ಬ್ಲಾಸ್ಟರ್ಸ್
2020-21ಮುಂಬೈ ಸಿಟಿ ಎಫ್‌ಸಿಎಟಿಕೆ ಮೋಹನ್ ಬಗಾನ್
2019-20ಎಟಿಕೆಚೆನ್ನೈಯಿನ್ ಎಫ್‌ಸಿ
2018-19ಬೆಂಗಳೂರು ಎಫ್‌ಸಿಎಫ್‌ಸಿ ಗೋವಾ
2017-18ಚೆನ್ನೈಯಿನ್ ಎಫ್‌ಸಿಬೆಂಗಳೂರು ಎಫ್‌ಸಿ
2016ಎಟಿಕೆಕೇರಳ ಬ್ಲಾಸ್ಟರ್ಸ್
2015ಚೆನ್ನೈಯಿನ್ ಎಫ್‌ಸಿಎಫ್‌ಸಿ ಗೋವಾ
2014ಎಟಿಕೆಕೇರಳ ಬ್ಲಾಸ್ಟರ್ಸ್

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.