ಕನ್ನಡ ಸುದ್ದಿ  /  Sports  /  Jasprit Bumrah Sanjana Ganesan Celebrating Marriage 2nd Anniversary Separately

ನ್ಯೂಜಿಲೆಂಡ್​ನಲ್ಲಿ ಬೂಮ್ರಾ, WPLನಲ್ಲಿ ಸಂಜನಾ.. 2ನೇ ವಿವಾಹ ವಾರ್ಷಿಕೋತ್ಸವಕ್ಕೆ ದೂರ ದೂರ!

ಭಾರತದ ಸ್ಟಾರ್ ವೇಗಿ ಜಸ್​ಪ್ರಿತ್​ ಬೂಮ್ರಾ (Jasprit Bumrah)- ಕ್ರೀಡಾ ನಿರೂಪಕಿ ಸಂಜನಾ ಗಣೇಸನ್ (Sanjana Ganesan) ದಂಪತಿಗೆ ಇಂದು ಎರಡನೇ ವಿವಾಹ ವಾರ್ಷಿಕೋತ್ಸವದ (Wedding Anniversary) ಸಂಭ್ರಮ.! 2021ರ ಮಾರ್ಚ್​ 15 ರಂದು ಸಪ್ತಪದಿ ತುಳಿದಿದ್ದ ಈ ಜೋಡಿ, ಇಂದಿಗೆ 2 ವರ್ಷ ಪೂರೈಸಿಕೊಂಡಿದೆ.

ಜಸ್​ಪ್ರಿತ್​ ಬೂಮ್ರಾ - ಸಂಜನಾ ಗಣೇಸನ್
ಜಸ್​ಪ್ರಿತ್​ ಬೂಮ್ರಾ - ಸಂಜನಾ ಗಣೇಸನ್ (Sanjana Ganesan/Instagram)

ಭಾರತದ ಸ್ಟಾರ್ ವೇಗಿ ಜಸ್​ಪ್ರಿತ್​ ಬೂಮ್ರಾ (Jasprit Bumrah)- ಕ್ರೀಡಾ ನಿರೂಪಕಿ ಸಂಜನಾ ಗಣೇಸನ್ (Sanjana Ganesan) ದಂಪತಿಗೆ ಇಂದು ಎರಡನೇ ವಿವಾಹ ವಾರ್ಷಿಕೋತ್ಸವದ (Wedding Anniversary) ಸಂಭ್ರಮ.! 2021ರ ಮಾರ್ಚ್​ 15 ರಂದು ಸಪ್ತಪದಿ ತುಳಿದಿದ್ದ ಈ ಜೋಡಿ, ಇಂದಿಗೆ 2 ವರ್ಷ ಪೂರೈಸಿಕೊಂಡಿದೆ. ಆದರೆ ಮದುವೆಯಾದ ಎರಡೇ ವರ್ಷಕ್ಕೆ ದೂರ ದೂರ ಆಗಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ಜೋಡಿ ಈಗ ಬೇರೆ ಬೇರೆಯಾಗಿದ್ದಾರೆ. ಹೌದು..! ಯಾರ್ಕರ್​ ಸ್ಪೆಷಲಿಸ್ಟ್​​, ಮ್ಯಾಚ್​ ವಿನ್ನರ್​​​​ ಟೀಮ್​ ಇಂಡಿಯಾ ವೇಗಿ ಬೂಮ್ರಾ ನ್ಯೂಜಿಲೆಂಡ್​​​ನಲ್ಲಿದ್ದರೆ, ಮಹಿಳಾ ಪ್ರೀಮಿಯರ್​ ಲೀಗ್​​​​ನಲ್ಲಿ ಸಂಜನಾ ಗಣೇಶನ್ ನಿರತರಾಗಿದ್ದಾರೆ. ಇದೇ ಕಾರಣಕ್ಕೆ ಸಂಭ್ರಮವನ್ನು ಆಚರಿಸಿಕೊಳ್ಳಲು ದೂರ ದೂರ ಆಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಂಜನಾ ಪೋಸ್ಟ್​​

ಪತಿಯ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿರುವ ಸಂಜನಾ ಗಣೇಶನ್, ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಎರಡು ವರ್ಷಗಳಾಗಿದೆ, ನಿನ್ನ ಸನಿಹ ಸೇರಿ ಎಂದು ಸಂಜನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಸದ್ಯ 2ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಬೂಮ್ರಾ ದಂಪತಿಗೆ ಹಲವಾರು ಸೆಲೆಬ್ರೆಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಗಾಯದ ಕಾರಣ ಟೀಮ್​ ಇಂಡಿಯಾಗೆ ದೂರ.!

ಬೂಮ್ರಾ ಸದ್ಯ ನ್ಯೂಜಿಲೆಂಡ್​​ನಲ್ಲಿದ್ದಾರೆ. ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗಾಗಿ ಅಲ್ಲಿಗೆ ಮರಳಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕವರ್ ಮಾಡುತ್ತಿದ್ದು, ತಮ್ಮ 2ನೇ ವಿವಾಹ ವಾರ್ಷಿಕೋತ್ಸವವನ್ನು ಮೊದಲ ಬಾರಿಗೆ ಏಕಾಂಗಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.

ಗಾಯದ ಸಮಸ್ಯೆಯಿಂದ ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಇದೀಗ ಜಸ್​ಪ್ರಿತ್ ಬೂಮ್ರಾ, ಈ ವರ್ಷ ಐಪಿಎಲ್ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್​ ವೇಳೆಗೆ ಫುಲ್​​ ಫಿಟ್‌ ಎಂಬುದು ಬಿಸಿಸಿಐನ ಬಲವಾದ ನಂಬಿಕೆಯಾಗಿದೆ.

ಪ್ಯಾರಿಸ್​ನಲ್ಲಿ ಹೊಸ ವರ್ಷ ಆಚರಣೆ.!

ಗಾಯದ ಕಾರಣ, 2022ರ ಸೆಪ್ಟೆಂಬರ್​​ನಲ್ಲಿ ಕ್ರಿಕೆಟ್​ ಸೇವೆಯಿಂದ ದೂರವಾಗಿದ್ದ ವೇಗಿ, ಈವರೆಗೂ ತಂಡಕ್ಕೆ ಕಂಬ್ಯಾಕ್​ ಮಾಡಲೇ ಇಲ್ಲ. ಪ್ಯಾರಿಸ್​​​ನಲ್ಲಿ ತಮ್ಮ ಪತ್ನಿಯೊಂದಿಗೆ ಹೊಸ ವರ್ಷವನ್ನು ವೆಲ್​ಕಮ್​ ಮಾಡಿಕೊಂಡಿದ್ದರು. ಇದೀಗ ವೆಡ್ಡಿಂಗ್​ ಆ್ಯನಿವರ್ಸರಿ ದೂರದಿಂದಲೇ ಆಚರಿಸಿಕೊಳ್ಳುತ್ತಿದ್ದಾರೆ.

ಪ್ರೀತಿ ಹುಟ್ಟಿದ್ದು ಯಾವಾಗ.?

ಮದುವೆಗೂ 2 - 3 ವರ್ಷಗಳ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಂಜನಾ ಗಣೇಶನ್, ಬೂಮ್ರಾ ಅವರನ್ನು ಸಂದರ್ಶನ ಮಾಡಿದ್ದರು. ಇದರ ನಂತರ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಆದರೆ ಇವರ ಪ್ರೀತಿ ಯಾರಿಗೂ ತಿಳಿದಿರಲಿಲ್ಲ. ಜೊತೆಗೆ ಗುಟ್ಟಾಗಿಯೇ ಮದುವೆಯಾದರು.

ಅನುಪಮಾ ಜೊತೆ ಡೇಟಿಂಗ್ ಟಾಕ್​

2021ರ ಮಾರ್ಚ್​​​ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮಧ್ಯದಿಂದಲೇ ಬ್ರೇಕ್​ ತೆಗೆದುಕೊಂಡಿದ್ದರು. ಆಗ ಎಲ್ಲರೂ ಬುಮ್ರಾ ಹಠಾತ್ತನೆ ಹೊರಬಿದ್ದಾಗ ಏನಾಯಿತು ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ ಬೂಮ್ರಾಗೆ ಮದುವೆಗೆ ಮಾತ್ರ ರಜೆ ನೀಡಲಾಗಿದೆ ಎಂದು ಬಿಸಿಸಿಐ ಖಜಾನೆ ಪ್ರತಿಕ್ರಿಯಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ನಟಿ ಅನುಪಮಾ ಪರಮೇಶ್ವರನ್ ಅವರನ್ನು ಜಸ್​​ಪ್ರಿತ್​ ಬೂಮ್ರಾ ವರಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಂತಿಮವಾಗಿ ಸಂಜನಾ ಗಣೇಶನ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಗೊತ್ತಾಗಿತ್ತು.