ವಾರಿಯರ್ಸ್‌ಗೆ ಸೋಲಿನ ರುಚಿ ತೋರಿಸಿದ ಹರಿಯಾಣ; ತಲೈವಾಸ್ ಮಣಿಸಿ ಅಗ್ರಪಟ್ಟ ಉಳಿಸಿಕೊಂಡ ಪಲ್ಟನ್
ಕನ್ನಡ ಸುದ್ದಿ  /  ಕ್ರೀಡೆ  /  ವಾರಿಯರ್ಸ್‌ಗೆ ಸೋಲಿನ ರುಚಿ ತೋರಿಸಿದ ಹರಿಯಾಣ; ತಲೈವಾಸ್ ಮಣಿಸಿ ಅಗ್ರಪಟ್ಟ ಉಳಿಸಿಕೊಂಡ ಪಲ್ಟನ್

ವಾರಿಯರ್ಸ್‌ಗೆ ಸೋಲಿನ ರುಚಿ ತೋರಿಸಿದ ಹರಿಯಾಣ; ತಲೈವಾಸ್ ಮಣಿಸಿ ಅಗ್ರಪಟ್ಟ ಉಳಿಸಿಕೊಂಡ ಪಲ್ಟನ್

Pro Kabaddi League 2023: ಪಿಕೆಎಲ್‌ ಸೀಸನ್‌ 10ರ ಅಂಕಪಟ್ಟಿಯಲ್ಲಿ ಸದ್ಯ ಪುಣೇರಿ ಪಲ್ಟನ್‌ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ತಮಿಳ್ ತಲೈವಾಸ್ ವಿರುದ್ಧ ಪುಣೇರಿ ಪಲ್ಟನ್‌ಗೆ ಜಯ
ತಮಿಳ್ ತಲೈವಾಸ್ ವಿರುದ್ಧ ಪುಣೇರಿ ಪಲ್ಟನ್‌ಗೆ ಜಯ

ಪ್ರೊ ಕಬಡ್ಡಿ ಲೀಗ್‌ (Pro Kabaddi League 2023) ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) ತಂಡವು ತಮಿಳ್ ತಲೈವಾಸ್ ವಿರುದ್ಧ 29-26 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಭಾನುವಾರ (ಜನವರಿ 7) ನಡೆದ ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಹರಿಯಾಣ ಸ್ಟೀಲರ್ಸ್‌ (Haryana Steelers) 35-41 ಜಯ ಸಾಧಿಸಿತು.

ಪಲ್ಟನ್ ಗೆಲುವಿನಲ್ಲಿ ಮೊಹಮ್ಮದ್ರೇಜಾ ಚಿಯಾನೆಹ್ ಶಾದ್ಲೋಯಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಗೌರವ್ ಖಾತ್ರಿ ಟ್ಯಾಕಲ್‌ನಲ್ಲಿ 6 ಪಾಯಿಂಟ್‌ ಕಲೆ ಹಾಕಿದರು. ಅತ್ತ ತಲೈವಾಸ್‌ ತಂಡದ ನಾಯಕ ಸಾಗರ್ ಟ್ಯಾಕಲ್ ಸಹಿತ ಏಳು ಪಾಯಿಂಟ್‌ಗಳೊಂದಿಗೆ ತಂಡದ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದರು. ಆದರೆ, ತಂಡವನ್ನು ಗೆಲುವಿನತ್ತ ಮುನ್ನಡೆಸಲು ಅವರಿಂದ ಸಾಧ್ಯವಾಗಲಿಲ್ಲ.

ಪಂದ್ಯದ ಮೊದಲಾರ್ಧದ ವೇಳೆಗೆ ಎರಡೂ ತಂಡಗಳು ಮುನ್ನಡೆ ಸಾಧಿಸಿದವು. ರಕ್ಷಣಾತ್ಮಕ ಆಟವಾಡುತ್ತಿದ್ದ ತಂಡಗಳು ಒಂದೇ ಲಯ ಕಾಯ್ದುಕೊಂಡವು. ಅಂತಿಮವಾಗಿ ಮೊದಲಾರ್ಧದಲ್ಲಿ ಪಲ್ಟನ್ ತಂಡವು 12-11ರಿಂದ ಅಲ್ಪ ಮುನ್ನಡೆ ಸಾಧಿಸಿತು. ಆ ಬಳಿಕ ಅದೇ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡಿತು.

ಟ್ಯಾಕಲ್‌ನಲ್ಲಿ ಹರಿಯಾಣ ಬೊಂಬಾಟ್

ದಿನದ ಎರಡನೇ ಪಂದ್ಯದಲ್ಲಿ ಟ್ಯಾಕಲ್‌ನಲ್ಲಿ ಮೇಲುಗೈ ಸಾಧಿಸಿದ ಹರಿಯಾಣ ಗೆಲುವು ಒಲಿಸಿಕೊಂಡಿತು. ರೈಡಿಂಗ್‌ನಲ್ಲಿ ಚಂದ್ರನ್‌ ರಂಜಿತ್‌ 7 ಪಾಯಿಂಟ್‌ ಕಲೆ ಹಾಕಿದರು. ಇವರಿಗೆ ಸಾಥ್ ನೀಡಿದ ಶಿವಂ ಕೂಡಾ 7 ಪಾಯಿಂಟ್‌ ಒಟ್ಟುಗೂಡಿಸಿದರು. ಮೋಹಿತ್‌, ಜೈದೀಪ್‌ ಮತ್ತು ಮೋಹಿತ್‌ ಟ್ಯಾಕಲ್‌ನಲ್ಲಿ ಮಿಂಚಿದರು.

ಬೆಂಗಾಲ್‌ ಪರ ಶ್ರೀಕಾಂತ್‌ ಜಾಧವ್‌ ರೈಡಿಂಗ್‌ನಲ್ಲಿ ಸೂಪರ್‌ 10 ಪೂರ್ಣಗೊಳಿಸಿದರು. ಮಣಿಂದರ್‌ ಸಿಂಗ್‌ 8 ಅಂಕ ಗಳಿಸಿದರು. ಆದರೆ ತಂಡದ ಗೆಲುವು ಸಾಧ್ಯವಾಗಲಿಲ್ಲ.

ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟನ್‌ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.