PKL Season 11: ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಈ ಮೂವರು ದಿಗ್ಗಜರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ಫ್ಯಾನ್ಸ್-kabaddi news 3 legends fans missed alot pro kabaddi league anup kumar ajay thakur manjeet chillar prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pkl Season 11: ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಈ ಮೂವರು ದಿಗ್ಗಜರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ಫ್ಯಾನ್ಸ್

PKL Season 11: ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಈ ಮೂವರು ದಿಗ್ಗಜರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ಫ್ಯಾನ್ಸ್

Pro Kabaddi League: ಅಕ್ಟೋಬರ್ 18ರಿಂದ ಪ್ರಾರಂಭವಾಗುವ ಪ್ರೊ ಕಬಡ್ಡಿ ಲೀಗ್​​​ ಸೀಸನ್​ 11ಕ್ಕೂ ಮುನ್ನ ಕಬಡ್ಡಿ ಫ್ಯಾನ್ಸ್, ಮಿಸ್​ ಮಾಡಿಕೊಳ್ಳುತ್ತಿರುವ ಆಟಗಾರರ ಪಟ್ಟಿಯನ್ನು ಈ ಮುಂದೆ ನೋಡೋಣ.

ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಈ ಮೂವರು ದಿಗ್ಗಜರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ಫ್ಯಾನ್ಸ್
ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಈ ಮೂವರು ದಿಗ್ಗಜರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರಂತೆ ಫ್ಯಾನ್ಸ್

PKL 11: ಪ್ರೊ ಕಬಡ್ಡಿ ಲೀಗ್‌-11 ಆವೃತ್ತಿಯು ಅಕ್ಟೋಬರ್​​ 18 ರಿಂದ ಅದ್ಧೂರಿ ಆರಂಭ ಪಡೆಯಲಿದೆ. ಎಲ್ಲಾ ತಂಡಗಳು ಟ್ರೋಫಿ ಗೆಲ್ಲಲು ಭರ್ಜರಿ ಕಸರತ್ತು ನಡೆಸುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಆಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೂ ಈ ಮೂವರು ಆಟಗಾರರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಬಡ್ಡಿ ಕೋರ್ಟ್​ನಲ್ಲಿ ಈ ಮೂವರು ಕಾಣಿಸಿಕೊಂಡು ತುಂಬಾ ವರ್ಷಗಳೇ ಕಳೆದರೂ ಅವರ ಆಟವನ್ನು ಎಂದಿಗೂ ಮರೆತಿಲ್ಲ. ಪಿಕೆಎಲ್ ಯಶಸ್ಸಿನ ಹಿಂದಿರುವ ಆ ಮೂವರು ಯಾರು?

ಅನೂಪ್ ಕುಮಾರ್

ಅನೂಪ್ ಕುಮಾರ್ ಪಿಕೆಎಲ್‌ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಆತನ ನಾಯಕತ್ವದಲ್ಲಿ ಯು ಮುಂಬಾ ಲೀಗ್‌ನ ಮೊದಲ ಮೂರು ಸೀಸನ್​ಗಳಲ್ಲಿ (ಹ್ಯಾಟ್ರಿಕ್) ಫೈನಲ್‌ಗೆ ಪ್ರವೇಶಿಸಿತು. ಆದಾಗ್ಯೂ, ತಂಡ ಒಂದು ಬಾರಿ ಮಾತ್ರ (ಪಿಕೆಎಲ್ 2ನೇ ಆವೃತ್ತಿ) ಗೆದ್ದಿತು. ಅನೂಪ್ ಕುಮಾರ್ ಕೊನೆಯದಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಪಿಕೆಎಲ್​​-6 ರಲ್ಲಿ ಕಾಣಿಸಿಕೊಂಡರು. ಅನೂಪ್, ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ 91 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 596 ಅಂಕ ಗಳಿಸಿದ್ದಾರೆ. ಇದರಲ್ಲಿ 527 ರೇಡ್ ಅಂಕಗಳು ಸೇರಿವೆ. ಅವರು ಪುಣೇರಿ ಪಲ್ಟಾನ್ ತಂಡದ ಕೋಚ್ ಆಗಿದ್ದಾರೆ. ಆದರೆ, ಅಭಿಮಾನಿಗಳು ಅವರ ಆಟವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅಜಯ್ ಠಾಕೂರ್

ಪ್ರೊ ಕಬಡ್ಡಿ ಲೀಗ್-8ರ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ಪರ ಕೊನೆಯ ಬಾರಿಗೆ ಕಾಣಿಸಿಕೊಂಡ ಅನುಭವಿ ರೈಡರ್ ಅಜಯ್ ಠಾಕೂರ್ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪಿಕೆಎಲ್ ಇತಿಹಾಸದಲ್ಲಿ ರೈಡರ್ ಆಗಿ 120 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಜಯ್, 794 ರೇಡ್ ಅಂಕಗಳನ್ನು ಒಳಗೊಂಡಂತೆ ಒಟ್ಟು 816 ಅಂಕ ಕಲೆ ಹಾಕಿದ್ದಾರೆ. ಪಿಕೆಎಲ್​ ಮೊದಲ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಠಾಕೂರ್, ನಂತರ ಪುಣೇರಿ ಪಲ್ಟನ್, ತಮಿಳ್ ತಲೈವಾಸ್ ಪರವೂ ಆಡಿದ್ದಾರೆ. ಪಿಕೆಎಲ್​​​-8 ಸೀಸನ್​​​ನಲ್ಲಿ ಗಾಯಗೊಂಡ ಕಾರಣ ಟೂರ್ನಿ ಮಧ್ಯದಲ್ಲೇ ತೊರೆದರು. ಅಭಿಮಾನಿಗಳ ನೆಚ್ಚಿನ ಆಟಗಾರರಲ್ಲಿ ಒಬ್ಬರು.

ಮಂಜೀತ್ ಚಿಲ್ಲರ್

ಪ್ರೊ ಕಬಡ್ಡಿ ಲೀಗ್​ನ ಮೊದಲ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ನಾಯಕನಾಗಿದ್ದ ಮಂಜೀತ್ ಚಿಲ್ಲರ್, ಲೀಗ್​ ಇತಿಹಾಸದಲ್ಲಿ ಮೂರನೇ ಅತ್ಯುತ್ತಮ ಡಿಫೆಂಡರ್ ಆಗಿ ಹೊರ ಹೊಮ್ಮಿದ್ದಾರೆ. ಅವರು ಕೊನೆಯ ಬಾರಿಗೆ ಪಿಕೆಎಲ್‌ನ 8ನೇ ಋತುವಿನಲ್ಲಿ ದಬಾಂಗ್ ಡೆಲ್ಲಿ ಕೆಸಿ ಪರ ಆಡಿದ್ದರು. ಅದೇ ಸೀಸನ್​ನಲ್ಲಿ ಮಂಜೀತ್​ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲೂ ಯಶಸ್ವಿಯಾದರು. ಮಂಜೀತ್ ತನ್ನ ಪಿಕೆಎಲ್ ವೃತ್ತಿಜೀವನಲ್ಲಿ132 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 391 ಟ್ಯಾಕಲ್ ಪಾಯಿಂಟ್ಸ್​ ಒಳಗೊಂಡಂತೆ ಒಟ್ಟು 616 ಅಂಕಗಳನ್ನು ಸಂಪಾದಿಸಿದ್ದಾರೆ. ಆಕ್ರಮಣಕಾರಿ ಆಟಗಾರನಾಗಿದ್ದ ಮಂಜೀತ್​ ಅವರ ಆಟವನ್ನೂ ಇವತ್ತಿಗೂ ಮಿಸ್ ಮಾಡಿಕೊಳ್ತಿದ್ದಾರೆ ಫ್ಯಾನ್ಸ್.

PKL ಸೀಸನ್
ವಿಜೇತ
ರನ್ನರ್ ಅಪ್
1
ಜೈಪುರ ಪಿಂಕ್ ಪ್ಯಾಂಥರ್ಸ್
ಯು ಮುಂಬಾ
2
ಯು ಮುಂಬಾ
ಬೆಂಗಳೂರು ಬುಲ್ಸ್
3
ಪಾಟ್ನಾ ಪೈರೇಟ್ಸ್
ಯು ಮುಂಬಾ
4
ಪಾಟ್ನಾ ಪೈರೇಟ್ಸ್
ಜೈಪುರ ಪಿಂಕ್ ಪ್ಯಾಂಥರ್ಸ್
5
ಪಾಟ್ನಾ ಪೈರೇಟ್ಸ್
ಗುಜರಾತ್ ಫಾರ್ಚೂನ್ ಜೈಂಟ್ಸ್
6
ಬೆಂಗಳೂರು ಬುಲ್ಸ್
ಗುಜರಾತ್ ಫಾರ್ಚೂನ್ ಜೈಂಟ್ಸ್
7
ಬೆಂಗಾಲ್ ವಾರಿಯರ್ಸ್
ದಬಾಂಗ್ ದೆಹಲಿ
8
ದಬಾಂಗ್ ದೆಹಲಿ
ಪಾಟ್ನಾ ಪೈರೇಟ್ಸ್
9
ಜೈಪುರ ಪಿಂಕ್ ಪ್ಯಾಂಥರ್ಸ್
ಪುಣೇರಿ ಪಲ್ಟನ್
10
ಪುಣೇರಿ ಪಲ್ಟನ್
ಹರಿಯಾಣ ಸ್ಟೀಲರ್ಸ್

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.