PKL 11: ಪ್ರೊ ಕಬಡ್ಡಿ ಲೀಗ್ ಅಖಾಡಕ್ಕೆ ಗೂಳಿಗಳು ಇಳಿಯೋದು ಯಾವಾಗ; ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ವೇಳಾಪಟ್ಟಿ-kabaddi news pkl 2024 25 full schedule of bengaluru bulls for pro kabaddi league season 11 pardeep narwal jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್ ಅಖಾಡಕ್ಕೆ ಗೂಳಿಗಳು ಇಳಿಯೋದು ಯಾವಾಗ; ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ವೇಳಾಪಟ್ಟಿ

PKL 11: ಪ್ರೊ ಕಬಡ್ಡಿ ಲೀಗ್ ಅಖಾಡಕ್ಕೆ ಗೂಳಿಗಳು ಇಳಿಯೋದು ಯಾವಾಗ; ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ವೇಳಾಪಟ್ಟಿ

ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ಅಕ್ಟೋಬರ್‌ 18ರಂದು ಬೆಂಗಳೂರು ಬುಲ್ಸ್‌ ಅಭಿಯಾನ ಆರಂಭಿಸುತ್ತಿದೆ. ಮೊದಲ ಪಂದ್ಯದಲ್ಲೇ ಗೆಲುವಿನೊಂದಿಗೆ ಶುಭಾರಂಭ ಮಾಡಲು ಗೂಳಿಗಳ ಬಳಗೆ ಎದುರು ನೋಡುತ್ತಿದೆ. ಪಿಕೆಎಲ್‌ 11ರಲ್ಲಿ ಬುಲ್ಸ್‌ ಸಂಪೂರ್ಣ ವೇಳಾಪಟ್ಟಿ ನೋಡೋಣ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ವೇಳಾಪಟ್ಟಿ
ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸಂಪೂರ್ಣ ವೇಳಾಪಟ್ಟಿ

ಪ್ರೊ ಕಬಡ್ಡಿ ಲೀಗ್ (PKL 11) ಸೀಸನ್ 11ರ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬುಲ್ಸ್‌ ಆಡುತ್ತಿದೆ. ಹಲವು ಹೊಸತನಗಳೊಂದಿಗೆ ಕಬಡ್ಡಿ ಅಖಾಡಕ್ಕಿಳಿಯಲು ಆಟಗಾರರು ಕಾಯುತ್ತಿದ್ದು, ಈ ಬಾರಿ ಎರಡನೇ ಕಪ್‌ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಪಿಕೆಎಲ್‌ ಇತಿಹಾಸದಲ್ಲೇ ಅತ್ಯಂ ಯಶಸ್ವಿ ರೈಡರ್‌ ಎನಿಸಿಕೊಂಡಿರುವ ಪರ್ದೀಪ ನರ್ವಾಲ್‌ ತಂಡ ಸೇರಿಕೊಂಡಿರುವುದು, ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಅಲ್ಲದೆ ರಣ್‌ಧೀರ್‌ ಸಿಂಗ್‌ ಆರಂಭದಿಂದಲೂ ತಂಡದ ಕೋಚ್‌ ಆಗಿ ಉಳಿದಿರುವುದು ತಂಡ ಮಾತ್ರವಲ್ಲದೆ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ.

ನೂತನ ಋತುವಿನ ಆರಂಭಕ್ಕೂ ಮುನ್ನ ಗೂಳಿಗಳ ಬಳಗದ ಪಿಕೆಎಲ್‌ ಪಂದ್ಯದ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ. ಅಕ್ಟೋಬರ್ 18ರಂದು ಹೈದರಾಬಾದ್‌ನಲ್ಲಿ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ರಾತ್ರಿ 8:00 ಗಂಟೆಗೆ ಆರಂಭವಾಗುವ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಉದ್ಘಾಟನಾ ಪಂದ್ಯ ಆಡಲಿದೆ.

ಪಿಕೆಎಲ್‌ ಸೀಸನ್ 6ರಲ್ಲಿ ಚೊಚ್ಚಲ ಕಬಡ್ಡಿ ಟ್ರೋಫಿ ಗೆದ್ದಿದ್ದ ಗೂಳಿಗಳು, ಪರ್ದೀಪ್ ನರ್ವಾಲ್ ಅವರಂತಹ ಸ್ಟಾರ್‌ಗಳ ಬಲದೊಂದಿಗೆ ಎರಡನೇ ಕಪ್‌ ಗೆಲ್ಲುವ ವಿಶ್ವಾಸದಲ್ಲಿದೆ. ತಂಡದ ವೇಳಾಪಟ್ಟಿ ನೋಡೋಣ.

ಬೆಂಗಳೂರು ಬುಲ್ಸ್‌ ಪಿಕೆಎಲ್‌ 11 ವೇಳಾಪಟ್ಟಿ

ದಿನಾಂಕದಿನತಂಡ ಎತಂಡ ಬಿಸ್ಥಳಸಮಯ
18-ಅಕ್ಟೋಬರ್ಶುಕ್ರವಾರತೆಲುಗು ಟೈಟಾನ್ಸ್ಬೆಂಗಳೂರು ಬುಲ್ಸ್ಹೈದರಾಬಾದ್20:00
20-ಅಕ್ಟೋಬರ್ಭಾನುವಾರಗುಜರಾತ್ ಜೈಂಟ್ಸ್ಬೆಂಗಳೂರು ಬುಲ್ಸ್ಹೈದರಾಬಾದ್21:00
22-ಅಕ್ಟೋಬರ್ಮಂಗಳವಾರಯುಪಿ ಯೋಧಾಸ್ಬೆಂಗಳೂರು ಬುಲ್ಸ್ಹೈದರಾಬಾದ್21:00
25-ಅಕ್ಟೋಬರ್ಶುಕ್ರವಾರಬೆಂಗಳೂರು ಬುಲ್ಸ್ಪುಣೇರಿ ಪಲ್ಟನ್ಹೈದರಾಬಾದ್21:00
29-ಅಕ್ಟೋಬರ್ಮಂಗಳವಾರಬೆಂಗಳೂರು ಬುಲ್ಸ್ದಬಾಂಗ್ ದೆಹಲಿ ಕೆ.ಸಿ.ಹೈದರಾಬಾದ್21:00
2-ನವೆಂಬರ್ಶನಿವಾರಬೆಂಗಳೂರು ಬುಲ್ಸ್ತೆಲುಗು ಟೈಟಾನ್ಸ್ಹೈದರಾಬಾದ್20:00
4-ನವೆಂಬರ್ಸೋಮವಾರಬೆಂಗಳೂರು ಬುಲ್ಸ್ತಮಿಳು ತಲೈವಾಸ್ಹೈದರಾಬಾದ್20:00
9-ನವೆಂಬರ್ಶನಿವಾರಬೆಂಗಳೂರು ಬುಲ್ಸ್ಬೆಂಗಾಲ್ ವಾರಿಯರ್ಸ್ಹೈದರಾಬಾದ್21:00
12-ನವೆಂಬರ್ಮಂಗಳವಾರಬೆಂಗಳೂರು ಬುಲ್ಸ್ಜೈಪುರ ಪಿಂಕ್ ಪ್ಯಾಂಥರ್ಸ್ನೋಯ್ಡಾ20:00
16-ನವೆಂಬರ್ಶನಿವಾರದಬಾಂಗ್ ದೆಹಲಿ ಕೆ.ಸಿ.ಬೆಂಗಳೂರು ಬುಲ್ಸ್ನೋಯ್ಡಾ21:00
18-ನವೆಂಬರ್ಸೋಮವಾರಬೆಂಗಳೂರು ಬುಲ್ಸ್ಯು ಮುಂಬಾನೋಯ್ಡಾ20:00
19-ನವೆಂಬರ್ಮಂಗಳವಾರಬೆಂಗಳೂರು ಬುಲ್ಸ್ಪಾಟ್ನಾ ಪೈರೇಟ್ಸ್ನೋಯ್ಡಾ21:00
21-ನವೆಂಬರ್ಗುರುವಾರಬೆಂಗಳೂರು ಬುಲ್ಸ್ಹರಿಯಾಣ ಸ್ಟೀಲರ್ಸ್ನೋಯ್ಡಾ20:00
25-ನವೆಂಬರ್ಸೋಮವಾರಯು ಮುಂಬಾಬೆಂಗಳೂರು ಬುಲ್ಸ್ನೋಯ್ಡಾ20:00
30-ನವೆಂಬರ್ಶನಿವಾರಪಾಟ್ನಾ ಪೈರೇಟ್ಸ್ಬೆಂಗಳೂರು ಬುಲ್ಸ್ನೋಯ್ಡಾ20:00
3-ಡಿಸೆಂಬರ್ಮಂಗಳವಾರಬೆಂಗಳೂರು ಬುಲ್ಸ್ಗುಜರಾತ್ ಜೈಂಟ್ಸ್ಪುಣೆ20:00
10-ಡಿಸೆಂಬರ್ಮಂಗಳವಾರಬೆಂಗಾಲ್ ವಾರಿಯರ್ಸ್ಬೆಂಗಳೂರು ಬುಲ್ಸ್ಪುಣೆ21:00
11-ಡಿಸೆಂಬರ್ಬುಧವಾರಹರಿಯಾಣ ಸ್ಟೀಲರ್ಸ್ಬೆಂಗಳೂರು ಬುಲ್ಸ್ಪುಣೆ20:00
13-ಡಿಸೆಂಬರ್ಶುಕ್ರವಾರಪುಣೇರಿ ಪಲ್ಟನ್ಬೆಂಗಳೂರು ಬುಲ್ಸ್ಪುಣೆ21:00
17-ಡಿಸೆಂಬರ್ಮಂಗಳವಾರಜೈಪುರ ಪಿಂಕ್ ಪ್ಯಾಂಥರ್ಸ್ಬೆಂಗಳೂರು ಬುಲ್ಸ್ಪುಣೆ21:00
22-ಡಿಸೆಂಬರ್ಭಾನುವಾರತಮಿಳು ತಲೈವಾಸ್ಬೆಂಗಳೂರು ಬುಲ್ಸ್ಪುಣೆ20:00
24-ಡಿಸೆಂಬರ್ಮಂಗಳವಾರಬೆಂಗಳೂರು ಬುಲ್ಸ್ಯುಪಿ ಯೋಧಾಸ್ಪುಣೆ20:00

ಬೆಂಗಳೂರು ಬುಲ್ಸ್ ತಂಡ

ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಆದಿತ್ಯ ಪೊವಾರ್, ಲಕ್ಕಿ ಕುಮಾರ್, ಪರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್ಕ್ರು ರಾವಲ್.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.