PKL 11: ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ, ಲೈವ್ ವೀಕ್ಷಿಸೋದು ಹೇಗೆ?-kabaddi news when is pkl 11 starting pro kabaddi league season 11 date schedule and live streaming details jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ, ಲೈವ್ ವೀಕ್ಷಿಸೋದು ಹೇಗೆ?

PKL 11: ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ, ಲೈವ್ ವೀಕ್ಷಿಸೋದು ಹೇಗೆ?

Pro Kabaddi League Season 11: ಪ್ರೊ ಕಬಡ್ಡಿಯ ಹೊಸ ಸೀಸನ್‌ ಆರಂಭಕ್ಕೆ ಕೆಲವೇ ವಾರಗಳು ಬಾಕಿ ಉಳಿದಿವೆ. ಅಭಿಮಾನಿಗಳು ಪಿಕೆಎಲ್‌ ಆರಂಭಕ್ಕೆ ಕಾಯುತ್ತಿದ್ದು, ಮೊದಲ ಪಂದ್ಯ ಯಾವಾಗ ನಡುಯುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬೆಂಗಳೂರು ಬುಲ್ಸ್‌ ತಂಡ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.

ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ?
ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ?

ಪ್ರೊ ಕಬಡ್ಡಿ ಲೀಗ್‌ನ ಮತ್ತೊಂದು ಸೀಸನ್‌ ಆರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ. ಈ ಬಾರಿ ಪಿಕೆಎಲ್‌ ಟೂರ್ನಿಯ 11ನೇ ಆವೃತ್ತಿ ನಡೆಯುತ್ತಿದ್ದು, ಒಂದು ದಶಕದ ರೋಚಕ ಅಭಿಯಾನದ ನಂತರ ಮತ್ತೊಂದು ದಶಕದ ಅದ್ಧೂರಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹನ್ನೆರಡು ತಂಡಗಳು ಫ್ರಾಂಚೈಸಿ ಆಧರಿತ ಲೀಗ್‌ನಲ್ಲಿ ತೊಡೆ ತಟ್ಟಿ ಸ್ಪರ್ಧಿಸಲು ಸಜ್ಜಾಗಿವೆ. ಕಳೆದ ಆವೃತ್ತಿಯ ವಿನ್ನರ್‌ ಪುಣೇರಿ ಪಲ್ಟಾನ್ ತಂಡವು ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ಈ ಬಾರಿ ಹಲವು ಆಟಗಾರರ ಮೇಲೆ ಭಾರಿ ನಿರೀಕ್ಷೆ ಇದೆ. ಪರ್ದೀಪ್ ನರ್ವಾಲ್, ಪವನ್ ಸೆಹ್ರಾವತ್, ಫಜೆಲ್ ಅತ್ರಾಚಲಿ ಮತ್ತು ಮಣಿಂದರ್ ಸಿಂಗ್ ಅವರಂತಹ ಬಲಿಷ್ಠ ಹಾಗೂ ಸ್ಟಾರ್ ಆಟಗಾರರು ತಮ್ಮ ತಮ್ಮ ತಂಡಗಳಿಗೆ ಕಪ್‌ ಗೆಲ್ಲಿಸಲು ಮುಂದಾಗಿದ್ದಾರೆ. ಸದ್ಯ ಎಲ್ಲಾ ತಂಡಗಳು ಪೂರ್ವಸಿದ್ಧತಾ ಶಿಬಿರಗಳಲ್ಲಿವೆ. ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ಟೂರ್ನಿಗೆ ಆರಂಭ ಸಿಗಲಿದ್ದು, ಅದಕೂ ಮುನ್ನ ಈ ಬಾರಿಯ ಸೀಸನ್‌ ಕುರಿತ ಪ್ರಮುಖ ಮಾಹಿತಿ ತಿಳಿಯೋಣ.

ಪಿಕೆಎಲ್ ಸೀಸನ್ 11 ಆರಂಭ ಯಾವಾಗ?

ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್ 2024ರ ಅಕ್ಟೋಬರ್ 18ರಂದು ಆರಂಭವಾಗಲಿದೆ. ಪಿಕೆಎಲ್ 10ನೇ ಆವೃತ್ತಿಯ ಫೈನಲ್‌ ಪಂದ್ಯ ನಡೆದ ಐದು ತಿಂಗಳ ಬಳಿಕ ಮತ್ತೊಂದು ಆವೃತ್ತಿ ಬಂದಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಉದ್ಘಾಟನಾ ಪಂದ್ಯದಲ್ಲಿ ಪವನ್ ಸೆಹ್ರಾವತ್ ಅವರ ಬಳಗದ ವಿರುದ್ಧ ಪರ್ದೀಪ್ ನರ್ವಾಲ್ ತಂಡ ಕಣಕ್ಕಿಳಿಯಲಿದೆ. ನಿಮ್ಮ ಊಹೆಯಂತೆಯೇ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್‌ಗೆ ಮುಖಾಮುಖಿಯಾಗಲಿವೆ.

ಪಿಕೆಎಲ್‌ 11ರ ಉದ್ಘಾಟನಾ ಪಂದ್ಯ ಎಲ್ಲಿ ನಡೆಯಲಿದೆ?

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯವು ಅಕ್ಟೋಬರ್ 18ರಂದು ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ.

ನೇರ ಪ್ರಸಾರ, ಲೈವ್‌ ಸ್ಟ್ರೀಮಿಂಗ್‌ ವೀಕ್ಷಣೆ ಹೇಗೆ?

ಪಿಕೆಎಲ್‌ 11ನೇ ಆವೃತ್ತಿಯ ಮೊದಲ ಪಂದ್ಯ ಸೇರಿದಂತೆ ಸೀಸನ್‌ನ ಎಲ್ಲಾ ಪಂದ್ಯಗಳನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದೇ ವೇಳೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಿಕೆಎಲ್‌ನ ಸೀಸನ್-ಓಪನರ್ ಹಾಗೂ ಎಲ್ಲಾ ಪಂದ್ಯಗಳನ್ನು ಮೊಬೈಲ್‌ ಮೂಲಕ ವೀಕ್ಷಿಸಬಹುದು.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.