Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು
- ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ವಯೋವೃದ್ಧರು, ವಿಶೇಷ ಚೇತನರು ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನದ ವೇಳೆ ರಾಜ್ಯಾದ್ಯಂತ ಕಂಡುಬಂದ ಅಪರೂಪದ ಫೋಟೋಗಳು ಇಲ್ಲಿವೆ.
- ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ವಯೋವೃದ್ಧರು, ವಿಶೇಷ ಚೇತನರು ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನದ ವೇಳೆ ರಾಜ್ಯಾದ್ಯಂತ ಕಂಡುಬಂದ ಅಪರೂಪದ ಫೋಟೋಗಳು ಇಲ್ಲಿವೆ.
(2 / 11)
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಮತ ಚಲಾಯಿಸಿದ ಮದುಮಗಳು ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮುಹೂರ್ತಕ್ಕೂ ಮುನ್ನ ತಮ್ಮ ಹಕ್ಕು ಚಲಾಯಿಸಿದ್ದಾರೆ.
(3 / 11)
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ವಿಧಾನಸಭಾ ಕ್ಷೇತ್ರದ ದುರ್ವಿಗೆರೆಯ ಮತಗಟ್ಟೆಯಲ್ಲಿ 106 ವರ್ಷದ ಶತಾಯುಷಿ ಜಾನಕೀಬಾಯಿ ಮತದಾನ ಮಾಡಿದರು.
(4 / 11)
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮೋರಿಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 124ರಲ್ಲಿ ವೃದ್ಧರು ಹಾಗೂ ವಿಕಲಚೇತನರು ಮತದಾನ ಮಾಡಿದರು. ಅವರಿಗಾಗಿ ವಾಹನ ಸೌಲಭ್ಯವನ್ನು ಒದಗಿಸಲಾಗಿತ್ತು.
(6 / 11)
ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಢಣಾಪುರದಲ್ಲಿ ವಿಶೇಷಚೇತನರು ಹಾಗೂ ವಯೋವೃದ್ಧರಿಗೆ ಮತದಾನ ಮಾಡಿದರು. ಅವರಿಗಾಗಿ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
(9 / 11)
ದಕ್ಷಿಣ ಕನ್ನಡದ ಬಂಟ್ವಾಳ ಕ್ಷೇತ್ರದ ಬೆಂಜನಪದವು, ಮೂಡಾಯಿಕೋಡಿ, ಧಾರೆಕಟ್ಟೆ ಭಾಗದಲ್ಲಿ ಮನೆ ಮನೆ ಮತ ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮನೆ ಮನೆಗೆ 12ಡಿ ಪತ್ರವನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬಂತು. ಹೀಗಾಗಿ ಈ ಭಾಗದ ಮತದಾರರಾದ ವಿಕ್ಟರ್ ಬರೆಟ್ಟೋ ಅವರನ್ನು ವೀಲ್ ಚೇರ್ ಹಾಗೂ ನಡೆಯಲು ಸಾಧ್ಯವಾಗದ ಐತಪ್ಪ ಬೆಳ್ಚಡ ಅವರನ್ನು ಕೈಯಲ್ಲಿ ಹಿಡಿದುಕೊಂಡು ಮತಗಟ್ಟೆಗೆ ಕರೆತರಲಾಯ್ತು.
(10 / 11)
ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟುವರಾದ ಅರಸೀಕೆರೆಯ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217ರಲ್ಲಿ ತಮ್ಮ ಅಜ್ಜಿ ಮಲ್ಲಮ್ಮ, ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು.
ಇತರ ಗ್ಯಾಲರಿಗಳು