Karnataka Election: ಬಿಎಸ್​ವೈ, ಸವದಿ,​​​ ಶೆಟ್ಟರ್​​​ರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕೆ ಅಲ್ಲವೇ; ಕಾಂಗ್ರೆಸ್​
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ಬಿಎಸ್​ವೈ, ಸವದಿ,​​​ ಶೆಟ್ಟರ್​​​ರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕೆ ಅಲ್ಲವೇ; ಕಾಂಗ್ರೆಸ್​

Karnataka Election: ಬಿಎಸ್​ವೈ, ಸವದಿ,​​​ ಶೆಟ್ಟರ್​​​ರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕೆ ಅಲ್ಲವೇ; ಕಾಂಗ್ರೆಸ್​

Karnataka Election: ಲಿಂಗಾಯತ ನಾಯಕರು ಬೇಕಿಲ್ಲ ಎಂಬ ಕಾರಣಕ್ಕಾಗಿಯೇ ಜಗದೀಶ್​​ ಶೆಟ್ಟರ್, ಬಿಎಸ್​ ಯಡಿಯೂರಪ್ಪ, ಲಕ್ಷ್ಮಣ್​​ ಸವದಿ ಅವರನ್ನು ಬಿಜೆಪಿ ದೂರ ಇಟ್ಟಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಜಗದೀಶ್​ ಶೆಟ್ಟರ್​​, ಬಿಎಸ್​ ಯಡಿಯೂರಪ್ಪ, ಲಕ್ಷ್ಮಣ್​ ಸವದಿ
ಜಗದೀಶ್​ ಶೆಟ್ಟರ್​​, ಬಿಎಸ್​ ಯಡಿಯೂರಪ್ಪ, ಲಕ್ಷ್ಮಣ್​ ಸವದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) 5 ದಿನಗಳು ಮಾತ್ರ ಬಾಕಿ ಇವೆ. ಮತ ಬೇಟೆಗೆ ಅಂತಿಮ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್​, ಮತ್ತೊಮ್ಮೆ ಲಿಂಗಾಯತ ಅಸ್ತ್ರ (Lingayat) ಪ್ರಯೋಗಿಸಿದೆ. ಲಿಂಗಾಯತರ ಬೆಂಬಲದಿಂದಲೇ ಅಧಿಕಾರ ಬಂದಿದ್ದ ಬಿಜೆಪಿ, ಈಗ ಅದೇ ಲಿಂಗಾಯತ ಸಮುದಾಯದ ನಾಯಕರನ್ನೇ ಕಡೆಗಣನೆ ಮಾಡುತ್ತಿದೆ. ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ (BJP) ಕ್ರಿಯೆಯಲ್ಲೂ ತೋರಿಸಿದೆ ಎಂದು ಕಾಂಗ್ರೆಸ್​ (Congress)​ ಆರೋಪಿಸಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​​, ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ ಕ್ರಿಯೆಯಲ್ಲೂ ತೋರಿಸಿದೆ. ಲಕ್ಷ್ಮಣ್​ ಸವದಿ (Laxman Savadi), ಜಗದೀಶ್​​​ ಶೆಟ್ಟರ್ (Jagadish Shettar), ಬಿಎಸ್​​ ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು (Lingayat Leaders) ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ? ಎಂದು ಕಾಂಗ್ರೆಸ್​ ಎತ್ತಿಕಟ್ಟಿದೆ.

ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ ಎಂದು ಟ್ವೀಟ್​​​ನಲ್ಲಿ ಬಿಜೆಪಿಯನ್ನು ಕೆರಳಿಸಿದೆ. ಟ್ವೀಟ್​ ಮುಖಾಂತರ ಮಾತ್ರವಲ್ಲದೆ, ಕಾಂಗ್ರೆಸ್​ ಸೇರಿರುವ ಜಗದೀಶ್​ ಶೆಟ್ಟರ್​ ಕೂಡ ಲಿಂಗಾಯತ ಸಮುದಾಯದ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕೂಡ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದರು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಲಿಂಗಾಯತ, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಬಿಜೆಪಿ ಬಲದಿಂದ. ಆದರೆ ಇವತ್ತು ಅವರನ್ನೇ ಕಡೆಗಣಿಸಿದೆ. ಸಮುದಾಯವನ್ನೂ ಮತ್ತು ನಾಯಕತ್ವ ತೆಗೆದು ಹಾಕುವ ಹಿಡನ್​ ಅಜೆಂಡಾವನ್ನು ಹೊಂದಿದೆ. ನಿಜವಾಗಿಯೂ ಈ ಸಮುದಾಯದ ನಾಯಕರು ಅರ್ಥೈಸಿಕೊಳ್ಳಬೇಕು. ಇದು ನನ್ನೊಬ್ಬನ ವೈಯಕ್ತಿಕ ಪ್ರಶ್ನೆ ಅಲ್ಲ, ಸಮುದಾಯದ ಪ್ರಶ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೂ ನಾನು 6 ಸಲ ಗೆದ್ದು ವಿಧಾನಸಭೆ ಪ್ರವೇಶಿಸಿದ್ದೇನೆ. ಮುಖ್ಯಮಂತ್ರಿಯೂ ಆಗಿದ್ದೇನೆ. ಆದರೆ ಮುಂದಿನ ಭವಿಷ್ಯದ ಬಗ್ಗೆ ನನಗೇನು ಇಲ್ಲ. ಆದರೆ ಸಮುದಾಯದ ಹಿತದೃಷ್ಟಿಯೇ ಮುಖ್ಯ. ಅದಕ್ಕಾಗಿ ನಾನು ಹೇಳುತ್ತಿದ್ದೇನೆ. ನೀವು ಎಚ್ಚರವಾಗಿರಬೇಕು. ಬಿಜೆಪಿಯಿಂದ ಮುಂದೆ ಗಂಡಾಂತರ ಇದೆ ಎಂಬುದನ್ನು ಅರಿಯಿರಿ. ಆ ಗಂಡಾಂತರದಿಂದ ಪಾರಾಗಲು ಕಾಂಗ್ರೆಸ್​ ಪಕ್ಷಕ್ಕೆ ನಿಮ್ಮ ಸಂಪೂರ್ಣ ಬೆಂಬಲ ಬೇಕು. ಒಟ್ಟಾಗಿ ಪಾಠ ಕಲಿಸೋಣ. ಇಲ್ಲವಾದಲ್ಲಿ ಸರ್ವಾಧಿಕಾರ ಪ್ರವೃತ್ತಿ ಮುಂದುವರೆಯುತ್ತದೆ ಎಂದಿದ್ದಾರೆ.

ಇಂದಿನ ಪ್ರಮುಖ ರಾಜಕೀಯ ಸುದ್ದಿ

Corruption Rate Card: ಇದು ಬಿಜೆಪಿಯ ಭ್ರಷ್ಟಾಚಾರದ ದರ ಪಟ್ಟಿ; ಸಿಎಂ ಪೋಸ್ಟ್​ಗೆ 2500 ಕೋಟಿ, ಸಚಿವ ಸ್ಥಾನ 500 ಕೋಟಿಗೆ ಡೀಲ್​​; ಆರೋಪ

ಬಿಜೆಪಿಯನ್ನು 40% ಕಮೀಷನ್​ ಸರ್ಕಾರ ಎಂದಿರುವ ಕಾಂಗ್ರೆಸ್​, ಎಷ್ಟೆಷ್ಟು ಪರ್ಸೆಂಟ್​ ಲೂಟಿ ಮಾಡಿದೆ ಎಂದು ಆರೋಪಿಸಿದೆ. ಅಂಕಿ-ಅಂಶದ ಸಮೇತ ‘ಭ್ರಷ್ಟಾಚಾರ ದರ ಪಟ್ಟಿ‘ಯನ್ನು (Corruption Rate Card) ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್​​ನ ಪ್ರಮುಖ ನಾಯಕರು, ಈ ಆರೋಪಗಳಿಗೆ ಮೊದಲು ಉತ್ತರ ಕೊಡಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

Whats_app_banner