ಚೊಚ್ಚಲ ಖೋ ಖೋ ವಿಶ್ವಕಪ್​ನಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ; ಫೈನಲ್​ನಲ್ಲಿ ನೇಪಾಳ ಸೋಲಿಸಿ ಪ್ರಶಸ್ತಿ ಗೆದ್ದ ಪುರುಷರು-ಮಹಿಳೆಯರು
ಕನ್ನಡ ಸುದ್ದಿ  /  ಕ್ರೀಡೆ  /  ಚೊಚ್ಚಲ ಖೋ ಖೋ ವಿಶ್ವಕಪ್​ನಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ; ಫೈನಲ್​ನಲ್ಲಿ ನೇಪಾಳ ಸೋಲಿಸಿ ಪ್ರಶಸ್ತಿ ಗೆದ್ದ ಪುರುಷರು-ಮಹಿಳೆಯರು

ಚೊಚ್ಚಲ ಖೋ ಖೋ ವಿಶ್ವಕಪ್​ನಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ; ಫೈನಲ್​ನಲ್ಲಿ ನೇಪಾಳ ಸೋಲಿಸಿ ಪ್ರಶಸ್ತಿ ಗೆದ್ದ ಪುರುಷರು-ಮಹಿಳೆಯರು

Kho Kho World Cup 2025: ಜನವರಿ 19ರ ಭಾನುವಾರ ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಫೈನಲ್ ಪಂದ್ಯಗಳಲ್ಲಿ ನೇಪಾಳದ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಸೋಲಿಸಿದ ಭಾರತದ ಪುರುಷರು-ಮಹಿಳೆಯರ ತಂಡಗಳು ಟ್ರೋಫಿಗೆ ಮುತ್ತಿಕ್ಕಿ ಇತಿಹಾಸ ನಿರ್ಮಿಸಿವೆ.

ಚೊಚ್ಚಲ ಖೋ ಖೋ ವಿಶ್ವಕಪ್​ನಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ; ಫೈನಲ್​ನಲ್ಲಿ ನೇಪಾಳ ಸೋಲಿಸಿ ಪ್ರಶಸ್ತಿ ಗೆದ್ದ ಪುರುಷರು-ಮಹಿಳೆಯರು
ಚೊಚ್ಚಲ ಖೋ ಖೋ ವಿಶ್ವಕಪ್​ನಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ; ಫೈನಲ್​ನಲ್ಲಿ ನೇಪಾಳ ಸೋಲಿಸಿ ಪ್ರಶಸ್ತಿ ಗೆದ್ದ ಪುರುಷರು-ಮಹಿಳೆಯರು

ಚೊಚ್ಚಲ ಖೋ ಖೋ ವಿಶ್ವಕಪ್​-2025 ಟೂರ್ನಿಯಲ್ಲಿ ಭಾರತ ತಂಡ ಎರಡು ವಿಭಾಗಗಳಲ್ಲಿ (ಪುರುಷರು-ಮಹಿಳೆಯರು) ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಜನವರಿ 19ರ ಭಾನುವಾರ ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಫೈನಲ್ ಪಂದ್ಯಗಳಲ್ಲಿ ನೇಪಾಳದ ಪುರುಷರ ಮತ್ತು ಮಹಿಳಾ ತಂಡಗಳನ್ನು ಸೋಲಿಸಿದ ಭಾರತದ ಪುರುಷರು-ಮಹಿಳೆಯರ ತಂಡಗಳು ಟ್ರೋಫಿಗೆ ಮುತ್ತಿಕ್ಕುವ ಮೂಲಕ ಚರಿತ್ರೆ ಸೃಷ್ಟಿಸಿವೆ. ಮತ್ತೊಂದೆಡೆ ನೇಪಾಳ ಎರಡೂ ವಿಭಾಗಗಳಲ್ಲೂ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ತೀವ್ರ ನಿರಾಸೆ ಅನುಭವಿಸಿತು.

ಜನವರಿ 18ರ ಶನಿವಾರದಂದು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಮಣಿಸಿದ್ದ ಭಾರತ ಮಹಿಳಾ ತಂಡ ಇದೀಗ ಫೈನಲ್​ನಲ್ಲಿ ನೇಪಾಳವನ್ನು 38 ಅಂಕಗಳಿಂದ ಮಣಿಸಿ ಹೊಸ ಇತಿಹಾಸ ನಿರ್ಮಿಸಿದೆ. 78-40 ಅಂಕಗಳ ಅಂತರದಿಂದ ಸೋಲಿಸಿ ಕಪ್ ಗೆದ್ದು ಸಂಭ್ರಮಿಸಿತು. ಪುರುಷರ ವಿಭಾಗದಲ್ಲೂ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡವನ್ನೇ ಎದುರಿಸಿದ್ದ ಭಾರತ ಇದೀಗ ಫೈನಲ್​ನಲ್ಲಿ ನೇಪಾಳವನ್ನು 54-36 ಅಂಕಗಳ ಅಂತರದಿಂದ ಗೆದ್ದು ಮಹಿಳೆಯರ ಸಾಧನೆಯನ್ನು ಪುನರಾವರ್ತಿಸಿದ ಕಾರಣ ಇತಿಹಾಸ ಪುನರಾವರ್ತನೆಯಾಯಿತು.

ಭಾರತ ಮಹಿಳಾ ತಂಡದ ಪ್ರಯಾಣ

ಜನವರಿ 13ರಿಂದ ಶುರುವಾಗ ಖೋ ಖೋ ವಿಶ್ವಕಪ್​ನಲ್ಲಿ ಭಾರತದ ವನಿತೆಯರು ಅಜೇಯವಾಗಿ ಫೈನಲ್​ಗೇರಿದ್ದರು. ತಮ್ಮ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡ ಜಯ ದಾಖಲಿಸಿತ್ತು. ಅಲ್ಲಿಂದ ಫೈನಲ್ ತನಕ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಮಹಿಳೆಯರ ತಂಡ ಒಟ್ಟಾರೆ ಭಾರತ ತಂಡ 78-40 ಅಂಕಗಳ ಅಂತರದಿಂದ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗ್ರೂಪ್​ ಎನಲ್ಲಿ ಸ್ಥಾನ ಪಡೆದಿದ್ದ ಭಾರತ ಆಡಿ ಮೂರು ಪಂದ್ಯಗಳಲ್ಲಿ ಗೆದ್ದು ಬೀಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ 175-18 ರಿಂದ ಗೆದ್ದು ಅಭಿಯಾನ ಆರಂಭಿಸಿದ್ದ ಭಾರತ ತನ್ನ ಮುಂದಿನ ಪಂದ್ಯದಲ್ಲಿ ಇರಾನ್ ವಿರುದ್ಧ 100-16 ಅಂತರದಿಂದ ಜಯಿಸಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಮಲೇಷ್ಯಾ ಎದುರು 100-20ರಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು.

ಭಾರತ ಪುರುಷರ ತಂಡದ ಪ್ರಯಾಣ

ಮಹಿಳೆಯರಂತೆ ಪುರುಷರ ತಂಡವೂ ಚಾಂಪಿಯನ್ ಆಗಿದೆ. ಅಲ್ಲದೆ, ಟೂರ್ನಿಯುದ್ದಕ್ಕೂ ತಂಡದ ಪ್ರದರ್ಶನ ಅದ್ಭುತವಾಗಿತ್ತು. ಗುಂಪು ಹಂತದಲ್ಲಿ ಪೆರು, ಬ್ರೆಜಿಲ್ ಮತ್ತು ಭೂತಾನ್ ವಿರುದ್ಧ ಅಮೋಘ ಜಯ ದಾಖಲಿಸಿ ಭಾರತ ಪಾರಮ್ಯ ಮೆರೆದಿತ್ತು. ಟೂರ್ನಿಯ ಕ್ವಾರ್ಟರ್-ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ್ದ ಮೆನ್​ ಇನ್ ಬ್ಲ್ಯೂ ಬಳಿಕ ಸೆಮೀಸ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಇದೀಗ ಫೈನಲ್​ನಲ್ಲಿ ನೇಪಾಳವನ್ನು ಸೋಲಿಸಿ ಅಜೇಯವಾಗಿ ಚಾಂಪಿಯನ್ ಆಗಿದೆ. ಚೊಚ್ಚಲ ಖೋ-ಖೋ ವಿಶ್ವಕಪ್‌ನಲ್ಲೇ ವಿಶ್ವ ಚಾಂಪಿಯನ್ ಆದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.