ಕನ್ನಡ ಸುದ್ದಿ  /  Sports  /  Kl Rahul Seeks Odi Comfort In The Middle

KL Rahul: 5ನೇ ಕ್ರಮಾಂಕದಲ್ಲಿ KL ರಾಹುಲ್​​ಗಿಲ್ಲ ಯಾರೂ ಸರಿಸಾಟಿ.. ಅಂಕಿ-ಅಂಶ ನೋಡಿದ್ರೆ ಶಾಕ್​ ಆಗ್ತೀರಾ?

KL Rahul: ಆಸ್ಟ್ರೇಲಿಯಾ ನೀಡಿದ ಸಾಧಾರಣ ಗುರಿ​ ಬೆನ್ನತ್ತುವಾಗ ಭಾರತ ಸಂಕಷ್ಟಕ್ಕೆ ಸಿಲುಕಿತು. ಇಶಾನ್​ ಕಿಶನ್​, ಶುಭ್​ಮನ್​ ಗಿಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​​ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದರು. ಆದರೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್​ ರಾಹುಲ್​​​ ತಂಡಕ್ಕೆ ಆಸರೆಯಾದರು.

ಕೆ.ಎಲ್​.ರಾಹುಲ್​​​
ಕೆ.ಎಲ್​.ರಾಹುಲ್​​​ (BCCI Twitter)

2022ರಲ್ಲಿ ಸಾಲು ಸಾಲು ಪ್ಲಾಫ್​ ಶೋ ನೀಡಿದ ಕೆಎಲ್​ ರಾಹುಲ್​ ಕೊನೆಗೂ ಟ್ರ್ಯಾಕ್​ಗೆ ಮರಳಿದ್ದಾರೆ. ಆಸಿಸ್​​ ವಿರುದ್ಧ ತಾಳ್ಮೆಯ ಮಂತ್ರ ಪಠಿಸಿದ ರಾಹುಲ್​, ಮೊದಲ ಏಕದಿನದ ಗೆಲುವಿನ ರೂವಾರಿಯಾಗಿದ್ದಾರೆ. ಫಾರ್ಮ್​​ಗೆ ಮರಳಿ, ಪರ್ಫಾಮ್​ ಮಾಡಿದ್ದಾರೆ. 91 ಎಸೆತಗಳಲ್ಲಿ ಅಜೇಯ 75 ರನ್​​​ ಸಿಡಿಸಿ ಮೆಚ್ಚುಗೆಗೆ ಕಾರಣರಾದರು. 7 ಬೌಂಡರಿ, 1 ಸಿಕ್ಸರ್​​​​ ಅವರ ಸೊಗಸಾದ ಇನ್ನಿಂಗ್ಸ್​​​ನಲ್ಲಿ ದಾಖಲಾಗಿವೆ.

ಆಸ್ಟ್ರೇಲಿಯಾ ವಿರುದ್ಧದ ಟೀಮ್​ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಅಂದುಕೊಂಡಂತೆ ಆಸಿಸ್​​​ ಪಡೆಯನ್ನ ಕೇವಲ 188 ರನ್​ಗಳಿಗೆ ಟೀಮ್​ ಇಂಡಿಯಾ ಕಟ್ಟಿ ಹಾಕಿತು. ಈ ಸಾಧಾರಣ ಟಾರ್ಗೆಟ್​ ಬೆನ್ನತ್ತುವಾಗ ಸಂಕಷ್ಟಕ್ಕೆ ಸಿಲುಕಿತು. ಇಶಾನ್​ ಕಿಶನ್​, ಶುಭ್​ಮನ್​ ಗಿಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​​ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದರು. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್​ ರಾಹುಲ್​​​ ತಂಡಕ್ಕೆ ಆಸರೆಯಾದರು.

ತಂಡಕ್ಕೆ ಆಸರೆಯಾದ ರಾಹುಲ್​, ಏಕಾಂಗಿ ಹೋರಾಟ.!

ಸ್ವಲ್ಪ ಯಾಮಾರಿದರೂ ಟೀಮ್​ ಇಂಡಿಯಾ ಸೋಲಿನ ಮುಖಭಂಗ ಅನುಭವಿಸಿ ಬಿಡುತ್ತಿತ್ತು. ಇದರಿಂದ ಪಾರು ಮಾಡಿದ್ದು, ಕೆಎಲ್​ ರಾಹುಲ್​.. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಮಯೋಚಿತ ಇನ್ನಿಂಗ್ಸ್​ ಕಟ್ಟಿದ ಕೆಎಲ್​ ತಾಳ್ಮೆಯ ಬ್ಯಾಟಿಂಗ್​ ನಡೆಸಿದರು. ಯಾವ ಕ್ಷಣದಲ್ಲೂ ಏಕಾಗ್ರತೆ ಕಳೆದುಕೊಳ್ಳದ ರಾಹುಲ್​​, ಅರ್ಧಶತಕ ಸಿಡಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಇದಕ್ಕೆ ರವೀಂದ್ರ ಜಡೇಜಾ ಸಖತ್​ ಸಾಥ್​ ನೀಡಿದರು. 6ನೇ ವಿಕೆಟ್​​ಗೆ ಶತಕದ ಜೊತೆಯಾಟವಾಡಿದರು.

ಮಿಡಲ್​ ಆರ್ಡರ್​ನಲ್ಲಿ ಮಿಂಚು

ಹೌದು..! 2022ರ ಕರಾಳ ವರ್ಷದಲ್ಲಿ ಕೆಎಲ್​ ರಾಹುಲ್​ ಸಾಲು ಸಾಲು ಫ್ಲಾಪ್​​​ ಶೋಗಳನ್ನ ನೀಡಿದ್ದರು. ಕ್ಲಾಸ್​ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದ ರಾಹುಲ್​, ಫ್ಲಾಪ್​ ಸ್ಟಾರ್​ ಆಗಿ ಬಿಟ್ಟರು. ಹೀಗಾಗಿಯೇ ಬಾರ್ಡರ್​​​ -ಗವಾಸ್ಕರ್ ಸರಣಿಯ ಕೊನೆಯ 2 ಪಂದ್ಯಗಳಿಗೆ ಬೆಂಚ್​ ಕಾದರು. ಇದೀಗ ಏಕದಿನ ಕ್ರಿಕೆಟ್​​ನಲ್ಲಿ ಮತ್ತೆ ಅಬ್ಬರಿಸುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಮಿಡಲ್​ ಆರ್ಡರ್​ಗೆ ಕೆಎಲ್​​ ಫಿಕ್ಸ್​!

ಮುಂಬರುವ ವಿಶ್ವಕಪ್​ ದೃಷ್ಠಿಯಿಂದ ಟೀಮ್​ ಇಂಡಿಯಾದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಬಿಸಿಸಿಐ 20 ಆಟಗಾರರ ಶಾರ್ಟ್​ಲಿಸ್ಟ್​ ಕೂಡ ಮಾಡಿದೆ. ಕೋಚ್​-ಕ್ಯಾಪ್ಟನ್​ ಕೂಡ ಕೋರ್​ ಟೀಮ್​ ರೆಡಿ ಮಾಡುತ್ತಿದ್ದಾರೆ. ಈಗ ರಾಹುಲ್​ರನ್ನ ಮಿಡಲ್​ ಆರ್ಡರ್​ನಲ್ಲಿ ಆಡಿಸಿದ್ದು, ಕೂಡ ಈ ಪ್ಲಾನ್​ನ ಭಾಗವೇ ಆಗಿದೆ. ಯಾಕಂದರೆ ಕೆ.ಎಲ್​ 5ನೇ ಕ್ರಮಾಂಕದಲ್ಲಿ ಸೂಪರ್​ ಡೂಪರ್​ ಪರ್ಫಾಮೆನ್ಸ್​ ನೀಡುತ್ತಿದ್ದಾರೆ.

5ನೇ ಕ್ರಮಾಂಕದಲ್ಲಿ ರಾಹುಲ್​

ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಒಟ್ಟು 17 ಇನ್ನಿಂಗ್ಸ್​ಗಳನ್ನಾಡಿರುವ ರಾಹುಲ್​, 733 ರನ್ ​ಗಳಿಸಿದ್ದಾರೆ. 56.38ರ ಬ್ಯಾಟಿಂಗ್​​​​ ಸರಾಸರಿಯಲ್ಲಿ ಬ್ಯಾಟ್​​ ಬೀಸಿರುವ ರಾಹುಲ್​, 7 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.

ನಂಬರ್​ 4ರಲ್ಲೂ ಅದ್ಭುತ ಪ್ರದರ್ಶನ

ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲೂ ರಾಹುಲ್​ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ 4ನೇ ಕ್ರಮಾಂಕದಲ್ಲೂ ಜಬರ್​​ದಸ್ತ್​ ಬ್ಯಾಟಿಂಗ್​ ನಡೆಸಿದ್ದಾರೆ. 4ನೇ ಸ್ಲಾಟ್​​​ನಲ್ಲಿ 6 ಪಂದ್ಯಗಳನ್ನಾಡಿರುವ ರಾಹುಲ್​ 209 ರನ್​ ಚಚ್ಚಿದ್ದಾರೆ. 1 ಶತಕವನ್ನೂ ಸಿಡಿಸಿದ್ದಾರೆ.

ಮಿಡಲ್​ ಆರ್ಡರ್​ನಲ್ಲಿ ರಾಹುಲ್​ ಸ್ಥಾನ ಭದ್ರನಾ?

ಸದ್ಯಕ್ಕಂತೂ ರಾಹುಲ್​ ಮಿಡಲ್​ ಆರ್ಡರ್​ನಲ್ಲಿ ಆಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಪ್ಲೇಸ್​ ಸ್ಥಾನ ಕನ್​ಫರ್ಮ್​ ಅನ್ನುವಂತಿಲ್ಲ.. ಫ್ಲಾಪ್​ ಆದರೆ ಬೆಂಚ್​ ಕಾಯೋದು ಕನ್​ಫರ್ಮ್​..! ಯಾಕಂದ್ರೆ, ನಂಬರ್​​ 5 ಸ್ಲಾಟ್​​ಗೂ ಪೈಪೋಟಿ ತೀವ್ರವಾಗಿದೆ. ಸದ್ಯ ಅಪಘಾತದಿಂದ ಚೇತರಿಸಿಕೊಳ್ತಿರೋ ಪಂತ್​, ಕಂಪ್ಲೀಟ್​ ಫಿಟ್​ ಆದ ಬಳಿಕ ಆ ಪೈಪೋಟಿ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ರಾಹುಲ್​ ಕನ್ಸಿಸ್ಟೆನ್ಸಿ ಮೆಂಟೇನ್​ ಮಾಡೋದು ಅನಿವಾರ್ಯ.