Watch: ವಾಹ್ ವಿರಾಟ್! ಬ್ಯಾಟಿಂಗ್ ಮಾತ್ರವಲ್ಲ, ಲೇಖನಿ ಹಿಡಿದು ಕವನ ಗೀಚೋದ್ರಲ್ಲೂ ಕೊಹ್ಲಿಯೇ ಕಿಂಗ್
ಕನ್ನಡ ಸುದ್ದಿ  /  ಕ್ರೀಡೆ  /  Watch: ವಾಹ್ ವಿರಾಟ್! ಬ್ಯಾಟಿಂಗ್ ಮಾತ್ರವಲ್ಲ, ಲೇಖನಿ ಹಿಡಿದು ಕವನ ಗೀಚೋದ್ರಲ್ಲೂ ಕೊಹ್ಲಿಯೇ ಕಿಂಗ್

Watch: ವಾಹ್ ವಿರಾಟ್! ಬ್ಯಾಟಿಂಗ್ ಮಾತ್ರವಲ್ಲ, ಲೇಖನಿ ಹಿಡಿದು ಕವನ ಗೀಚೋದ್ರಲ್ಲೂ ಕೊಹ್ಲಿಯೇ ಕಿಂಗ್

ಆರ್‌ಸಿಬಿಯು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ, ಕೊಹ್ಲಿ ಹಿಂದೆಂದೂ ತೋರಿಸದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದನ್ನು ಆರ್‌ಸಿಬಿ ಫ್ರಾಂಚೈಸಿಯು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ನಂಬರ್‌ ವನ್‌ ಕ್ರಿಕೆಟರ್‌ ಮಾತ್ರವಲ್ಲ. ಅವರು ಪ್ರತಿಭೆಗಳ ಗುಚ್ಛ. ಹಲವರಿಗೆ ಸ್ಫೂರ್ತಿ. ಮೈದಾನದಲ್ಲಿ ಅಗ್ರೆಸಿವ್ ಆಗಿ ಬ್ಯಾಟ್‌ ಬೀಸಿದ್ರೆ ಎದುರಾಳಿ ಕಥೆ ಮುಗೀತು. ಕ್ರಿಕೆಟ್‌ನ ಎಲ್ಲಾ ಮಾದರಿಗೂ ಹೇಳಿ ಮಾಡಿಸಿದ ವಿರಾಟ್‌, ಆಟದಷ್ಟೇ ಆಟಿಟ್ಯೂಡ್‌ನಲ್ಲಿಯೂ ನಂಬರ್‌ ವನ್.‌ ಅದಕ್ಕಾಗಿಯೇ ಅವರನ್ನು ಅಭಿಮಾನಿಗಳು 'ಕಿಂಗ್‌' ಎಂಬ ಹೆಸರಿನಿಂದ ಸಂಬೋಧಿಸುವುದು.

ತಾನೊಬ್ಬ ವಿಶ್ವಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಲವಾರು ದಾಖಲೆಗಳೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಪ್ರಾಬಲ್ಯ ಮೆರೆದಿದ್ದಾರೆ. ಇನ್ನು, ಮನರಂಜನೆಯ ವಿಷಯಕ್ಕೆ ಬಂದರೂ ಕೊಹ್ಲಿ ನಂಬರ್‌ ವನ್‌ ಎಂಟರ್‌ಟೇನರ್. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ನಲ್ಲಿ ಆಡುತ್ತಿರುವ ಕಿಂಗ್‌, ತಮ್ಮ ಇನ್ನೊಂದು ಮುಖವನ್ನು ಪ್ರದರ್ಶಿಸಿದ್ದಾರೆ. ಅರ್ಥಾತ್‌ ಹೊಸ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ.

ಆರ್‌ಸಿಬಿಯು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ, ಕೊಹ್ಲಿ ಹಿಂದೆಂದೂ ತೋರಿಸದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದನ್ನು ಆರ್‌ಸಿಬಿ ಫ್ರಾಂಚೈಸಿಯು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

“ಆರ್‌ಸಿಬಿ ಇನ್‌ಸೈಡರ್ ವಿತ್ ಮಿಸ್ಟರ್ ನಾಗ್ಸ್” ಎಂಬ ಶೀರ್ಷಿಕೆಯಡಿ ಫ್ರಾಂಚೈಸಿಯು ಹಂಚಿಕೊಂಡ ವಿಡಿಯೋದಲ್ಲಿ 'ಮಿಸ್ಟರ್ ನಾಗ್ಸ್' ಅವತಾರದಲ್ಲಿ ಕಾಣಿಸಕೊಳ್ಳುವ ನಿರೂಪಕ ಡ್ಯಾನಿಶ್ ಸೇಟ್, ಕೊಹ್ಲಿ ಜೊತೆಗೆ ಹರಟೆ ರೂಪದಲ್ಲಿ ಮಾತನಾಡಿದ್ದಾರೆ. ಈ ವೇಳೆ ಆರ್‌ಸಿಬಿ ಪರ ಕಳೆದ ವರ್ಷದ ಐಪಿಎಲ್ ಆವೃತ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೊಹ್ಲಿ ಜೊತೆಗೆ ನಾಗ್ಸ್‌ ಮಾತನಾಡಿದ್ದಾರೆ. ಸುದೀರ್ಘ ಅವಧಿಯ ಈ ವಿಡಿಯೋದ ಕೊನೆಯಲ್ಲಿ ಕೊಹ್ಲಿಯ ಸಾಹಿತ್ಯಾಭಿರುಚಿಗೆ ನಾಗ್ಸ್‌ ಸವಾಲು ಹಾಕಿದ್ದಾರೆ. ‘ಕವನ ಸ್ಪರ್ಧೆ’ಯ ಸವಾಲನ್ನು ಸ್ವೀಕರಿಸಿದ ಕೊಹ್ಲಿ, ತಮ್ಮ ಬರವಣಿಗೆ ಮತ್ತು ಕವನ ಗೀಚುವ ಕಲೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ನಾಗ್ಸ್‌ ಕೊಟ್ಟ ಸವಾಲಿನಲ್ಲಿ ಒಂದು ಟ್ವಿಸ್ಟ್ ಕೂಡಾ ಇತ್ತು. ಕವಿತೆ ಬರೆಯಲು ಕೊಹ್ಲಿಗೆ ಕೆಲವೊಂದು ಪದಗಳನ್ನು ನೀಡಲಾಯಿತು. ಅವುಗಳನ್ನು ಕವನದಲ್ಲಿ ಬಳಸಬೇಕಿತ್ತು. ಈ ಸವಾಲು ಕೊಹ್ಲಿಗೆ ಚಾಲೆಂಜಿಂಗ್‌ ಅನಿಸಲಿಲ್ಲ. ಹಿಂದೆ ಮುಂದೆ ನೋಡದೆ ಪೆನ್‌ ಹಿಡಿದು ತಕ್ಷಣವೇ ಕೊಹ್ಲಿ ಕವಿತೆ ಗೀಚಿದಾದರೆ. ಅವರು ತಮ್ಮ ಆರ್‌ಸಿಬಿ ವೃತ್ತಿಜೀವನದಲ್ಲಿ ಕಲಿತ ಪಾಠಗಳನ್ನು ಸ್ಫೂರ್ತಿದಾಯಕ ಶೈಲಿಯಲ್ಲಿ ಬರೆದಿಬಿಟ್ಟಿದ್ದಾರೆ. ಆಂಗ್ಲ ಭಾಷೆಯಲ್ಲಿ ಪ್ರಾಸದೊಂದಿಗೆ ವಿರಾಟ್‌ ಬರೆದ ಹನಿಗವನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕೊಹ್ಲಿ ಆಂಗ್ಲ ಭಾಷೆಯಲ್ಲಿ ಬರೆದ ಕವಿತೆ ಹೀಗಿದೆ:

“Fulfil your desire

Ignite the fire

Bat through the tough times

Sometimes it’s 263, sometimes 49.

Life can put you in a pickle,

laugh through like it’s a tickle.

Whether you get a 100 or a duck,

life goes on and don’t get stuck.

There is no map, ride the tide.

You are your own guide.”

ಅಭಿಮಾನಿಗಳು ಗೌರವದಿಂದ "ಕಿಂಗ್" ಎಂದೇ ಕರೆಯುವ ಬಗ್ಗೆ ಮಾತನಾಡಿದ ಕೊಹ್ಲಿ, ತನ್ನನ್ನು ಸರಳವಾಗಿ "ವಿರಾಟ್" ಎಂದು ಕರೆಯುವದೇ ತನಗಿಷ್ಟ ಎಂದು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.