Lakshyasen: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯಸೇನ್
ಕನ್ನಡ ಸುದ್ದಿ  /  ಕ್ರೀಡೆ  /  Lakshyasen: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯಸೇನ್

Lakshyasen: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯಸೇನ್

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 20ಕ್ಕೆ ತಲುಪಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್ ಚಿನ್ನದ ಪದಕ ಗೆದ್ದಿದ್ದಾರೆ.

<p>ಕಾಮನ್‌ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯಸೇನ್ (ಫೋಟೋ-ಸಂಗ್ರಹ)</p>
ಕಾಮನ್‌ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯಸೇನ್ (ಫೋಟೋ-ಸಂಗ್ರಹ)

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ಚಿನ್ನದ ಪದಕಗಳು ಭಾರತದ ಖಾತೆಗೆ ಸೇರಿವೆ. ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದಿದ್ದರು, ನಂತರ ಲಕ್ಷ್ಯಸೇನ್ ಅವರ ಈ ಹಾದಿಗೆ ಹಸಿರು ನಿಶಾನೆ ತೋರಿದರು. ಅವರು ತಮ್ಮ ಮಲೇಷಿಯಾದ ಎದುರಾಳಿ ಯಾಂಗ್ ಅವರನ್ನು 19-21, 21-9, 21-16 ರಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಹೋರಾಡಿದ ರೀತಿ ಅದ್ಭುತವೆಂದೇ ಹೇಳಬೇಕು. ಮೊದಲ ಗೇಮ್ ನಲ್ಲಿ 19-21ರಲ್ಲಿ ಸೋತರೂ, ಎರಡನೇ ಗೇಮ್ ನಲ್ಲಿ ರೋಚಕವಾಗಿ ಚೇತರಿಸಿಕೊಂಡರು. ಎರಡನೇ ಗೇಮ್ ನಲ್ಲಿ ಒಂದು ಹಂತದಲ್ಲಿ 6-8 ರಿಂದ ಹಿನ್ನಡೆ ಅನುಭವಿಸಿದರು. ಆದರೆ ಆ ಬಳಿಕ ಏಕಾಏಕಿ ಸಿಡಿದೆದ್ದ ಸೇನ್ ಎದುರಾಳಿಗೆ ಒಂದೇ ಅಂಕ ನೀಡುವ ಮೂಲಕ 15 ಅಂಕ ಗಳಿಸಿದರು.

ಮತ್ತು ಮೂರನೇ ಗೇಮ್ ಕೂಡ ಬಿರುಸಿನಿಂದ ಸಾಗಿತು. ಆಟದ ಮಧ್ಯಂತರದಲ್ಲಿ 11-7ರಲ್ಲಿ ಮುನ್ನಡೆಯಲ್ಲಿದ್ದ ಲಕ್ಷ್ಯಸೇನ್ ನಂತರ ಮುನ್ನಡೆ ಮುಂದುವರಿಸಿದರು. ಅಂತಿಮವಾಗಿ ಮೂರನೇ ಗೇಮ್ ಅನ್ನು 21-16 ಅಂತರದಿಂದ ಪಂದ್ಯ ಗೆದ್ದು ಚಿನ್ನದ ಪದಕ ಪಡೆದರು. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 20ನೇ ಚಿನ್ನದ ಪದಕವಾಗಿದೆ. ಈ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 57ಕ್ಕೆ ತಲುಪಿದೆ.

ಲಕ್ಷ್ಯಸೇನ್ ಅವರ ಈ ಸಾಧಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಮತ್ತು ಶಕ್ತಿಯುತ ಲಕ್ಷ್ಯ ಸೇನ್ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು.

ನೀವು ಕಮಾಂಡಿಂಗ್ ಡಿಸ್‌ಪ್ಲೇಯೊಂದಿಗೆ ಪುಟಿದೇಳುವ ರೀತಿ ಗೆಲ್ಲಲು ನಿರ್ಧರಿಸಿರುವ ದಿಟ್ಟತನ ಹೊಸ ಭಾರತವನ್ನು ಸಂಕೇತಿಸುತ್ತದೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಮತ್ತೆ ಮೇಲಕ್ಕೆತ್ತುವಂತೆ ಮಾಡಿದ್ದೀರಿ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಲಕ್ಷ್ಯ ಸೇನ್‌ನ ಸಾಧನೆಯಿಂದ ಹರ್ಷಿತರಾಗಿದ್ದು, ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಅವರು ಕಾಮನ್‌ವೆಲ್ತ್‌ ಗೇಮ್ಸ್‌ ಮೂಲಕ ಅತ್ಯುತ್ತಮವಾಗಿ ಆಡಿದ್ದಾರೆ. ಫೈನಲ್ಸ್ ಸಮಯದಲ್ಲಿ ಅತ್ಯುತ್ತಮ ಸ್ಥಿತಿಸ್ಥಾಪಕತ್ವವನ್ನು ತೋರಿಸಿದರು. ಇವರು ಭಾರತದ ಹೆಮ್ಮೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.

ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ ಅವರು ಕೆನಡಾದ ಮಿಚೆಲ್ ಲೀ ಅವರನ್ನು 21-15, 21-13 ಸೆಟ್‌ಗಳಿಂದ ಸುಲಭವಾಗಿ ಸೋಲಿಸಿದರು. ಸಿಂಧು ಕಾಮನ್‌ವೆಲ್ತ್‌ ಗೇಮ್ಸ್‌ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದಿದ್ದು ಇದೇ ಮೊದಲು. ಹಿಂದಿನ ಪಂದ್ಯಗಳಲ್ಲಿ ಮಿಶ್ರ ತಂಡ ಚಿನ್ನ ಗೆದ್ದು ಸಿಂಗಲ್ಸ್‌ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವುದು ಖಚಿತ ಎಂದು ಹೇಳಿದ್ದರು. ಮೊದಲಿನಿಂದಲೂ ಎದುರಾಳಿಗಳನ್ನು ಮಣಿಸಿ ಫೈನಲ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.

ಫೈನಲ್‌ನಲ್ಲಿ ಆರಂಭದಿಂದಲೂ ಎದುರಾಳಿ ಮಿಚೆಲಿ ಮೇಲೆ ಪ್ರಾಬಲ್ಯ ಮೆರೆದರು. ಯಾವುದೇ ಸಂದರ್ಭದಲ್ಲೂ ಆಕೆ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಸಿಂಧು 21-15ರಿಂದ ಮೊದಲ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್ ನಲ್ಲೂ ಸಿಂಧು ಆರಂಭದಿಂದಲೇ ಮುನ್ನಡೆ ಮುಂದುವರಿಸಿದರು. ಪಂದ್ಯ ಮಧ್ಯಂತರದಲ್ಲಿ 11-6ರಲ್ಲಿ ಮುನ್ನಡೆಯಿತು.

ವಿರಾಮದ ನಂತರ ಎದುರಾಳಿ ಲೀ ಆಕ್ರಮಣಕಾರಿ ಆಟವಾಡಿದರು. ಇಬ್ಬರೂ ಅಂಕಕ್ಕಾಗಿ ಶ್ರಮಿಸಿದರು. ಒಂದೇ ರ್ಯಾಲಿಯಲ್ಲಿ 57 ಶಾಟ್‌ಗಳನ್ನು ಏಕಕಾಲದಲ್ಲಿ ಆಡಲಾಯಿತು. ಆ ಬಳಿಕ ಪಾಯಿಂಟ್ ಸಿಂಧು ಪಾಲಾಯಿತು.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.