ಕನ್ನಡ ಸುದ್ದಿ  /  Sports  /  Lionel Messi Jersey: Pm Narendra Modi Receives Lionel Messi Jersey As Gift

Lionel Messi jersey: ಬೆಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಮೆಸ್ಸಿ ಜೆರ್ಸಿ ಉಡುಗೊರೆ

Lionel Messi jersey: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಿನ್ನೆ ಒಂದು ಸರ್‌ಪ್ರೈಸ್‌ ಗಿಫ್ಟ್‌ ಸಿಕ್ಕಿದೆ. ಅರ್ಜೆಂಟೀನಾ ಫುಟ್ಬಾಲ್‌ ಟೀಮ್‌ನ ಜೆರ್ಸಿ ಅದು. ವಿಶ್ವಕಪ್‌ ವಿಜೇತ ತಂಡದ ಚಾಂಪಿಯನ್‌ ಲಿಯೋನೆಲ್‌ ಮೆಸ್ಸಿ ಹೆಸರು ಅದರಲ್ಲಿದೆ.

ಲಿಯೋನೆಲ್‌ ಮೆಸ್ಸಿ ಜೆರ್ಸಿ ಉಡುಗೊರೆಯಾಗಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
ಲಿಯೋನೆಲ್‌ ಮೆಸ್ಸಿ ಜೆರ್ಸಿ ಉಡುಗೊರೆಯಾಗಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ (ANI)

ಬೆಂಗಳೂರು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಿನ್ನೆ ಒಂದು ಸರ್‌ಪ್ರೈಸ್‌ ಗಿಫ್ಟ್‌ ಸಿಕ್ಕಿದೆ. ಅರ್ಜೆಂಟೀನಾ ಫುಟ್ಬಾಲ್‌ ಟೀಮ್‌ನ ಜೆರ್ಸಿ ಅದು. ವಿಶ್ವಕಪ್‌ ವಿಜೇತ ತಂಡದ ಚಾಂಪಿಯನ್‌ ಲಿಯೋನೆಲ್‌ ಮೆಸ್ಸಿ ಹೆಸರು ಅದರಲ್ಲಿದೆ.

ಇಂಡಿಯಾ ಎನರ್ಜಿ ವೀಕ್‌ 2023ರ ಸೈಡ್‌ಲೈನ್‌ನಲ್ಲಿ ವೈಪಿಎಫ್‌ ಪ್ರೆಸಿಡೆಂಟ್‌ ಪಬ್ಲೋ ಗೊನ್‌ಝಲೇಜ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ವಿಶೇಷ ಉಡುಗೊರೆ ನೀಡಿದವರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜೆಂಟೀನಾದ ಫುಟ್ಬಾಲ್‌ ದಂತಕಥೆ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಕೊನೆಯ ವಿಶ್ವಕಪ್‌ ಆಟವಾಗಿತ್ತು. ಅದರ ಫೈನಲ್‌ನಲ್ಲಿ ಕುತೂಹಲಕಾರಿ ಹೋರಾಟದಲ್ಲಿಅರ್ಜೆಂಟೀನಾ ಪೆನಾಲ್ಟಿಗಳಲ್ಲಿ 4-2 ಗೋಲುಗಳಿಂದ ಅಂತಿಮ ಪಂದ್ಯವನ್ನು ಗೆದ್ದುಕೊಂಡಿತು.

ಫಿಫಾ 2022 ವಿಶ್ವಕಪ್ ಗೆದ್ದ ಅರ್ಜೆಂಟೀನಾವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಅರ್ಜೆಂಟೀನಾ ಮತ್ತು ಲಿಯೋನೆಲ್ ಮೆಸ್ಸಿ ಅವರ ವಿಜಯವನ್ನು ಲಕ್ಷಾಂತರ ಭಾರತೀಯರು ಆಚರಿಸುತ್ತಿದ್ದಾರೆ ಎಂದು ಹೇಳಿದ್ದರು.

"ಇದು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ! #FIFAWorldCup ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು! ಅವರು ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಭವ್ಯವಾದ ವಿಜಯವನ್ನು ಸಂತೋಷಿಸುತ್ತಾರೆ! @alferdez," ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದರು.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಇಂಡಿಯಾ ಎನರ್ಜಿ ವೀಕ್‌ 2023ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬೆಂಗಳೂರು ತಂತ್ರಜ್ಞಾನ, ಪ್ರತಿಭೆ ಮತ್ತು ನಾವೀನ್ಯತೆಯ ಶಕ್ತಿಯಿಂದ ತುಂಬಿದ ನಗರವಾಗಿದೆ. ನನ್ನಂತೆಯೇ ನೀವೂ ಸಹ ಇಲ್ಲಿನ ಯುವ ಶಕ್ತಿಯ ಸೇವೆ ಪಡೆಯುತ್ತಿದ್ದೀರಿ. ಭಾರತದ G20 ಶೃಂಗಸಭೆ ಈ ವರ್ಷದ ಮೊದಲ ಪ್ರಮುಖ ಇಂಧನ ಕುರಿತ ಕಾರ್ಯಕ್ರಮವಾಗಿ ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ನಡೆಯುತ್ತಿರುವ ಭಾರತವು ಇಂಧನ ಕ್ಷೇತ್ರಕ್ಕೆ ಅಭೂತಪೂರ್ವ ಸಾಧ್ಯತೆಗಳನ್ನು ಹೊಂದಿದೆ. 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಇಂಧನ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಶಕ್ತಿಯ ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿದೆ ಎಂದರು.

ಬಾಹ್ಯ ಪರಿಸ್ಥಿತಿಗಳು ಏನೇ ಇರಲಿ, ಆಂತರಿಕ ಸ್ಥಿತಿಸ್ಥಾಪಕತ್ವದಿಂದಾಗಿ ಭಾರತವು ಎಲ್ಲಾ ಸವಾಲುಗಳನ್ನು ಜಯಿಸಿದೆ. ಅದರ ಹಿಂದೆ ಹಲವು ಅಂಶಗಳು ಇದ್ದವು. 1) ಸ್ಥಿರ, ನಿರ್ಣಾಯಕ ಸರ್ಕಾರ, 2) ನಿರಂತರ ಸುಧಾರಣೆಗಳು ಮತ್ತು 3) ತಳಮಟ್ಟದಲ್ಲಿ ಸಾಮಾಜಿಕ-ಆರ್ಥಿಕ ಸಬಲೀಕರಣ.

ಇತ್ತೀಚೆಗೆ ಐಎಎಫ್ 2023 ರ ಬೆಳವಣಿಗೆಯ ಪ್ರಕ್ಷೇಪಣವನ್ನು ಬಿಡುಗಡೆ ಮಾಡಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಿದೆ. ಸಾಂಕ್ರಾಮಿಕ ಮತ್ತು ಯುದ್ಧದ ಪ್ರಭಾವದ ಹೊರತಾಗಿಯೂ, 2022 ರಲ್ಲಿ ಭಾರತವು ಜಾಗತಿಕ ಪ್ರಕಾಶಮಾನವಾದ ತಾಣವಾಗಿ ಉಳಿಯಿತು ಎಂದು ಪ್ರಧಾನಿ ಮೋದಿ ವಿವರಿಸಿದರು.