ಕನ್ನಡ ಸುದ್ದಿ  /  Sports  /  Lionel Messi Surpasses 100 Career Goals For Argentina

Lionel Messi: ಅರ್ಜೆಂಟೀನಾ ಪರ 100 ಗೋಲುಗಳ ಗಡಿ ದಾಟಿದ ಮೆಸ್ಸಿ

ಕಳೆದ ವರ್ಷದ ಕತಾರ್​​​​​ನಲ್ಲಿ ನಡೆದ ಫುಟ್​​​ಬಾಲ್​ ವಿಶ್ವಕಪ್ ಟೂರ್ನಿಯಲ್ಲಿ ಲಿಯೊನೆಲ್​ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಅದಾದ ಬೆನ್ನಲ್ಲೇ ತಂಡದ ನಾಯಕ ಲಿಯೊನೆಲ್​ ಮೆಸ್ಸಿಗೆ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿ ಕೂಡಾ ಲಭಿಸಿತ್ತು.

ಮೆಸ್ಸಿ
ಮೆಸ್ಸಿ (REUTERS)

ಕ್ಯುರಾಕೊ (Curacao) ವಿರುದ್ಧ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದ ಮೊದಲಾರ್ಧದಲ್ಲಿ ಲಿಯೋನೆಲ್ ಮೆಸ್ಸಿ (Lionel Messi) ಹ್ಯಾಟ್ರಿಕ್ ಗೋಲು ಗಳಿಸಿದರು. ಆ ಮೂಲಕ ಅರ್ಜೆಂಟೀನಾ ಪರ ವೃತ್ತಿಜೀವನದಲ್ಲಿ 100 ಗೋಲುಗಳ ಗಡಿ ದಾಟಿದರು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಫಿಫಾ ವಿಶ್ವಕಪ್‌ ಟ್ರೋಫಿ ಗೆದ್ದ ನಂತರ ತಮ್ಮ ಎರಡನೇ ಪಂದ್ಯದಲ್ಲಿ ಕೆರಿಬಿಯನ್ ತಂಡವನ್ನು 7-0 ಅಂತರದಿಂದ ಸೋಲಿಸಿದರು.

35ರ ಹರೆಯದ ಜಾಗತಿಕ ಫುಟ್ಬಾಲ್‌ ಸ್ಟಾರ್‌ ಮೆಸ್ಸಿ, ಪಂದ್ಯದ 20ನೇ ನಿಮಿಷದಲ್ಲಿ ತಮ್ಮ ಬಲಗಾಲಿನಿಂದ ಫುಟ್ಬಾಲ್‌ ಅನ್ನು ಗೋಲ್‌ ಬಾಕ್ಸ್‌ನ ಅಂಚಿನ ಮೂಲಕ ಒಳಸೇರಿಸಿ 100 ಗೋಲುಗಳ ಮೈಲಿಗಲ್ಲನ್ನು ತಲುಪಿದರು. ಆ ಮೂಲಕ ಕುರಾಕೊ ವಿರುದ್ಧ ಗೋಲಿನ ಖಾತೆಯನ್ನೂ ತೆರೆದರು.

ನಂತರ 33ನೇ ನಿಮಿಷದಲ್ಲಿ ಗೋಲ್‌ಕೀಪರ್‌ನ ಬಲಕ್ಕೆ ಗೋಲು ಹೊಡೆಯುವ ಮೂಲಕ ಅರ್ಜೆಂಟೀನಾ ಪರ 101ನೇ ಸ್ಕೋರ್ ಗಳಿಸಿದರು. ಅದರ ಬೆನ್ನಲ್ಲೇ 37ನೇ ನಿಮಿಷದಲ್ಲಿ 102ನೇ ಗೋಲು ಹೊಡೆದರು. ಅದಕ್ಕೂ ಎರಡು ನಿಮಿಷಗಳಿಗಿಂತ ಮುಂಚೆ, ಎಂಝೋ ಫೆರ್ನಾಂಡಿಸ್‌ ಅವರಿಗೆ ಗೋಲು ಗಳಿಸಲು ನೆರವಾದರು.

ಅರ್ಜೆಂಟೀನಾ ನಾಯಕನು ಅಧಿಕೃತ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡಗಳ ಪರ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೇವಲ ಇಬ್ಬರು ಆಟಗಾರರಿಗಿಂತ ಹಿಂದಿದ್ದಾರೆ. ಜಾಗತಿಕ ಫುಟ್ಬಾಲ್‌ ರೋಡ್‌ ಮಾಡೆಲ್‌ ಆಗಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ತಮ್ಮ ದೇಶದ ಪರ ಬರೋಬ್ಬರಿ 122 ಗೋಲು ಗಳಿಸಿದ್ದಾರೆ. ಅವರ ಬಳಿಕ ಇರಾನ್‌ನ ಅಲಿ ಡೇಯ್ 109 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷದ ಕತಾರ್​​​​​ನಲ್ಲಿ ನಡೆದ ಫುಟ್​​​ಬಾಲ್​ ವಿಶ್ವಕಪ್ ಟೂರ್ನಿಯಲ್ಲಿ ಲಿಯೊನೆಲ್​ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಅದಾದ ಬೆನ್ನಲ್ಲೇ ತಂಡದ ನಾಯಕ ಲಿಯೊನೆಲ್​ ಮೆಸ್ಸಿಗೆ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿ ಕೂಡಾ ಲಭಿಸಿತ್ತು. ಪ್ಯಾರಿಸ್​​ನಲ್ಲಿ ಜರುಗಿದ ಅದ್ಧೂರಿ ಪ್ರಶಸ್ತಿ ಸಮಾರಂಭದಲ್ಲಿ ಲಿಯೊನೆಲ್​ ಮೆಸ್ಸಿ ಆ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಕತಾರ್​​​ನಲ್ಲಿ ನಡೆದ ಫಿಫಾ ಫುಟ್​ಬಾಲ್​ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​​ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಗೆದ್ದು ಫಿಫಾ ವಿಶ್ವಕಪ್​ 2022ರ ಚಾಂಪಿಯನ್​ ಆಗಿತ್ತು. 3-3 ಗೋಲ್​ಗಳ ಮೂಲಕ ಪಂದ್ಯ ಟೈ ಆದಾಗ ಪೆನಾಲ್ಟಿ ಶೂಟ್​ಔಟ್​ನಲ್ಲಿ 4-2 ಅಂತರದಿಂದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಫೈನಲ್​​​ನಲ್ಲಿ 2 ಗೋಲು ಸಿಡಿಸಿದ್ದ ಮೆಸ್ಸಿ,‌ ಸಂಪೂರ್ಣ ಟೂರ್ನಿಯಲ್ಲಿ 7 ಗೋಲು ಗಳಿಸಿದ್ದರು. ಹೀಗಾಗಿ ಟೂರ್ನಿಯ ಗೋಲ್ಡನ್​ ಬಾಲ್​ ಜಯಿಸಿದ್ದರು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ಮೇಲೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ಗಂಭೀರ ಆರೋಪ ಮಾಡಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆಗೆ ಬಾಕ್ಸಿಂಗ್ ಅಧಿಕಾರಿಗಳನ್ನು ಆಹ್ವಾನಿಸುವ ವಿಚಾರವಾಗಿ ಅದರ "ಪಾರದರ್ಶಕ ತತ್ವಗಳ" ಬಗ್ಗೆ ಐಬಿಎ ಚಕಾರ ಎತ್ತಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ