ನಾರ್ವೆ ಚೆಸ್‌: ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು
ಕನ್ನಡ ಸುದ್ದಿ  /  ಕ್ರೀಡೆ  /  ನಾರ್ವೆ ಚೆಸ್‌: ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು

ನಾರ್ವೆ ಚೆಸ್‌: ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು

ನಾರ್ವೆ ಚೆಸ್ 2025ರ ಮೊದಲ ಸುತ್ತಿನ ಪಂದ್ಯದಲ್ಲಿ ಡಿ ಗುಕೇಶ್ ಸೋಲು ಕಂಡಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮಾಡಿದ ತಪ್ಪಿನಿಂದಾಗಿ ಪಂದ್ಯ ಸೋತಿದ್ದಾರೆ. ಈ ವಿಡಿಯೋ ಇಲ್ಲಿದೆ.

ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು
ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಎಡವಿದ ಡಿ ಗುಕೇಶ್; ತನ್ನದೇ ತಪ್ಪಿನಿಂದ ಸೋಲು (Twitter)

ನಾರ್ವೆ ಚೆಸ್‌ನ ಆರಂಭಿಕ ಸುತ್ತಿನಲ್ಲಿಯೇ ಭಾರತದ ವಿಶ್ವ ಚಾಂಪಿಯನ್ ಡಿ ಗುಕೇಶ್‌ಗೆ (D Gukesh) ಹಿನ್ನಡೆಯಾಗಿದೆ. ವಿಶ್ವದ ಉನ್ನತ ಶ್ರೇಯಾಂಕದ ಚೆಸ್‌ ಆಟಗಾರನಾದ ಮ್ಯಾಗ್ನಸ್ ಕಾರ್ಲ್‌ಸನ್, ತಾನು ಆಟದ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ಆಟಗಾರ ಎಂಬುದನ್ನು ಮತ್ತೆ ತೋರಿಸಿದ್ದಾರೆ. ಗುಕೇಶ್‌ ಅವರನ್ನು ಸೋಲಿಸಿ ಮೂರು ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ನಾರ್ವೆ ಚೆಸ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ನಾರ್ವೆ ಚೆಸ್ 2025ರಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗುಕೇಶ್ ಸೋತಿದ್ದಾರೆ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆದ ನಂತರ ಈ ಜೋಡಿ ಕ್ಲಾಸಿಕಲ್‌ ಚೆಸ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಯ್ತು. ಒಂದು ಹಂತದಲ್ಲಿ ಪಂದ್ಯವು ಡ್ರಾದಲ್ಲಿ ಕೊನೆಗೊಳ್ಳುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಕೈಗೆ ಬಂದ ತುತ್ತನ್ನು ಗುಕೇಶ್ ಕಳೆದುಕೊಂಡರು. ತಾನು ಮಾಡಿದ ಪ್ರಮಾದದಿಂದಾಗಿ ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ ಸೋಲು ಕಂಡರು.

ಆಟ ಮುಗಿಯಲು 10 ಸೆಕೆಂಡುಗಳು ಮಾತ್ರವೇ ಉಳಿದಿದ್ದಾಗ, ಗುಕೇಶ್ ಕಾರ್ಲ್‌ಸನ್ ಅವರಿಗೆ ರೂಕ್‌ ಬಳಸಿ ಚೆಕ್‌ ಕೊಡಬೇಕಾಗಿತ್ತು. ಅದು ಅವರಿಗಿದ್ದ ಏಕೈಕ ಮೂವ್‌ ಆಗಿತ್ತು. ಆದರೆ ಈ ವೇಳೆ ಗುಕೇಶ್‌ ಒಂದು ದೊಡ್ಡ ತಪ್ಪನ್ನು ಮಾಡಿದರು. ಕಾರ್ಲ್‌ಸನ್ ಅವರಿಗೆ ಕ್ವೀನ್‌ನೊಂದಿಗೆ ಚೆಕ್‌ ಮಾಡಿದರು. ಇದು ಆಟವನ್ನು ನಾರ್ವೇ ಆಟಗಾರನತ್ತ ತಿರುಗಿಸಿತು.

ವಿಡಿಯೊ ಇಲ್ಲಿದೆ

ಕಾರ್ಲ್‌ಸನ್ ಆರಂಭದಿಂದಲೂ ತನ್ನ ಎಂದಿನ ತಂತ್ರಗಳನ್ನು ಬಳಸಿ ಆಡಿದರು. ಆರಂಭದಲ್ಲಿಯೇ ಗುಕೇಶ್‌ಗೆ ಬಲೆ ಬೀಸಿ ಸೋಲಿಸಲು ಪ್ರಯತ್ನಿಸಿದರು. ಆದರೆ ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ ಅವರ ತಂತ್ರಕ್ಕೆ ಸುಲಭವಾಗಿ ಬಗ್ಗಲಿಲ್ಲ. 11ನೇ ಮೂವ್‌ವರೆಗೂ ಎದುರಾಳಿಯನ್ನು ತಟಸ್ಥಗೊಳಿಸಿದರು. ಆದರೆ ಕಾರ್ಲ್‌ಸನ್ ಸಂಪೂರ್ಣ ನಿಯಂತ್ರಣದಲ್ಲಿದ್ದರು. ಕೊನೆಗೂ ನಾಲ್ಕು ಗಂಟೆಗಳ ಕಾಲ ನಡೆದ ಆಟದಲ್ಲಿ 56 ಹೆಚ್ಚು ಮೂವ್‌ ಆಗಿ, ಕಾರ್ಲ್‌ಸನ್ ಗೆದ್ದರು.

ಅತ್ತ ಅರ್ಜುನ್ ಎರಿಗೈಸಿ ಆರಂಭಿಕ ಸುತ್ತಿನಲ್ಲಿ ಚೀನಾದ ಗ್ರ್ಯಾಂಡ್‌ ಮಾಸ್ಟರ್‌ ವೀ ಯಿ ಅವರನ್ನು ಸೋಲಿಸಿದ್ದಾರೆ. ಯಿ ಅವರನ್ನು ಸೋಲಿಸಿ 1.5 ಅಂಕಗಳನ್ನು ಗೆದ್ದರು. ನಾರ್ವೆ ಚೆಸ್‌ನಲ್ಲಿ ಶಾಸ್ತ್ರೀಯ ಸ್ವರೂಪದಲ್ಲಿ ಗೆಲುವಿಗಾಗಿ ಪ್ರತಿಯೊಬ್ಬ ಆಟಗಾರನು ಮೂರು ಅಂಕಗಳನ್ನು ಗಳಿಸುತ್ತಾರೆ. ಆದರೆ ಡ್ರಾ ಅವರಿಗೆ ತಲಾ ಒಂದು ಅಂಕವನ್ನು ನೀಡುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.