ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ, ಕ್ರಿಕೆಟಿಗರಿಗಿಲ್ಲ ಪ್ರಶಸ್ತಿ
ಕನ್ನಡ ಸುದ್ದಿ  /  ಕ್ರೀಡೆ  /  ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ, ಕ್ರಿಕೆಟಿಗರಿಗಿಲ್ಲ ಪ್ರಶಸ್ತಿ

ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ, ಕ್ರಿಕೆಟಿಗರಿಗಿಲ್ಲ ಪ್ರಶಸ್ತಿ

Khel Ratna Award and Arjuna Award: ಕೇಂದ್ರ ಸರ್ಕಾರವು ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಮತ್ತು 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ ಮಾಡಿದೆ.

ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ
ಮನು ಭಾಕರ್, ಡಿ ಗುಕೇಶ್ ಸೇರಿ ನಾಲ್ವರಿ ಖೇಲ್ ರತ್ನ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಣೆ

ಕೇಂದ್ರ ಕ್ರೀಡಾ ಸಚಿವಾಲಯ ಇಂದು (ಜನವರಿ 2) 2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪಡೆದವರ ಪಟ್ಟಿಯನ್ನು ಪ್ರಕಟಿಸಿದೆ. ಒಲಿಂಪಿಕ್ಸ್ ಪದಕ ವಿಜೇತೆ​​ ಮನು ಭಾಕರ್ ಮತ್ತು ಚೆಸ್ ಪಟು ಡಿ ಗುಕೇಶ್ ಸೇರಿದಂತೆ ನಾಲ್ವರು ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿ, 32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಘೋಷಿಸಿದೆ. ಮನು ಭಾಕರ್, ಗುಕೇಶ್ ಜೊತೆಗೆ ಹಾಕಿ ಆಟಗಾರ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ಆಟಗಾರ ಪ್ರವೀಣ್ ಕುಮಾರ್ ಅವರಿಗೂ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.

2025ರ ಜನವರಿ 17ರ (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ತನಿಖೆಯ ನಂತರ ಈ ಆಟಗಾರರು, ತರಬೇತುದಾರರು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ. ಆದರೆ ಈ ಬಾರಿ ಕ್ರಿಕೆಟಿಗರಿಗೆ ಯಾವುದೇ ಪ್ರಶಸ್ತಿ ಬಂದಿಲ್ಲ.

ಕ್ರಿಕೆಟ್‌ಗಿಲ್ಲ ಯಾವುದೇ ಪ್ರಶಸ್ತಿ

ಈ ಬಾರಿ ಕ್ರಿಕೆಟ್ ಆಟಗಾರರಿಗೆ ಯಾವುದೇ ಪ್ರಶಸ್ತಿ ಬಂದಿಲ್ಲ. ಖೇಲ್ ರತ್ನ ಮತ್ತು ಧ್ಯಾನ್ ಚಂದ್ರ ಖೇಲ್ ರತ್ನ ಪ್ರಶಸ್ತಿಗಳಲ್ಲಿ ಯಾವುದೇ ಕ್ರಿಕೆಟ್ ಆಟಗಾರರನ್ನು ಸೇರಿಸದೆ ಇರುವುದು ಅಚ್ಚರಿ ಮೂಡಿಸಿದೆ. ಆಟಗಾರನಿರಲಿ, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಹೆಸರನ್ನು ಕೋಚ್ ವಿಭಾಗದಲ್ಲೂ ಸೇರಿಸಲಾಗಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2024 ಪಡೆದವರು

1. ಡಿ ಗುಕೇಶ್ (ಚೆಸ್)

2. ಹರ್ಮನ್‌ಪ್ರೀತ್ ಸಿಂಗ್ (ಹಾಕಿ)

3. ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)

4. ಮನು ಭಾಕರ್ (ಶೂಟಿಂಗ್)

ಅರ್ಜುನ ಪ್ರಶಸ್ತಿ ಯಾರಿಗೆ ಬಂದಿದೆ ನೋಡಿ

1. ಜ್ಯೋತಿ ಯರಾಜಿ (ಅಥ್ಲೆಟಿಕ್ಸ್)

2. ಅಣ್ಣು ರಾಣಿ (ಅಥ್ಲೆಟಿಕ್ಸ್)

3. ನೀತು (ಬಾಕ್ಸಿಂಗ್)

4. ಸ್ವೀಟಿ (ಬಾಕ್ಸಿಂಗ್)

5. ವಾಂತಿಕಾ ಅಗರ್ವಾಲ್ (ಚೆಸ್)

6. ಸಲೀಮಾ ಟೆಟೆ (ಹಾಕಿ)

7. ಅಭಿಷೇಕ್ (ಹಾಕಿ)

8. ಸಂಜಯ್ (ಹಾಕಿ)

9. ಜರ್ಮನ್‌ಪ್ರೀತ್ ಸಿಂಗ್ (ಹಾಕಿ)

10. ಸುಖಜೀತ್ ಸಿಂಗ್ (ಹಾಕಿ)

11. ರಾಕೇಶ್ ಕುಮಾರ್ (ಪ್ಯಾರಾ ಆರ್ಚರಿ)

12. ಪ್ರೀತಿ ಪಾಲ್ (ಪ್ಯಾರಾ ಅಥ್ಲೆಟಿಕ್ಸ್)

13. ಜೀವನಜಿ ದೀಪ್ತಿ (ಪ್ಯಾರಾ ಅಥ್ಲೆಟಿಕ್ಸ್)

14. ಅಜಿತ್ ಸಿಂಗ್ (ಪ್ಯಾರಾ ಅಥ್ಲೆಟಿಕ್ಸ್)

15. ಸಚಿನ್ ಸರ್ಜೆರಾವ್ ಖಿಲಾರಿ (ಪ್ಯಾರಾ ಅಥ್ಲೆಟಿಕ್ಸ್)

16. ಧಾರಾಂಬಿರ್ (ಪ್ಯಾರಾ ಅಥ್ಲೆಟಿಕ್ಸ್)

17. ಪ್ರಣವ್ ಸುರ್ಮಾ (ಪ್ಯಾರಾ ಅಥ್ಲೆಟಿಕ್ಸ್)

18. ಎಚ್ ಹೊಕಾಟೊ ಸೆಮಾ (ಪ್ಯಾರಾ ಅಥ್ಲೆಟಿಕ್ಸ್)

19. ಸಿಮ್ರಾನ್ ಜಿ (ಪ್ಯಾರಾ ಅಥ್ಲೆಟಿಕ್ಸ್)

20. ನವದೀಪ್ (ಪ್ಯಾರಾ ಅಥ್ಲೆಟಿಕ್ಸ್)

21. ನಿತೀಶ್ ಕುಮಾರ್ (ಪ್ಯಾರಾ ಬ್ಯಾಡ್ಮಿಂಟನ್)

22. ತುಳಸಿಮತಿ ಮುರುಗೇಶನ್ (ಪ್ಯಾರಾ ಬ್ಯಾಡ್ಮಿಂಟನ್)

23. ನಿತ್ಯ ಶ್ರೀ ಸುಮತಿ ಶಿವನ್ (ಪ್ಯಾರಾ ಬ್ಯಾಡ್ಮಿಂಟನ್)

24. ಮನಿಶಾ ರಾಮದಾಸ್ (ಪ್ಯಾರಾ ಬ್ಯಾಡ್ಮಿಂಟನ್)

25. ಕಪಿಲ್ ಪರ್ಮಾರ್ (ಪ್ಯಾರಾ ಜೂಡೋ)

26. ಮೋನಾ ಅಗರ್ವಾಲ್ (ಪ್ಯಾರಾ ಶೂಟಿಂಗ್)

27. ರುಬಿನಾ ಫ್ರಾನ್ಸಿಸ್ (ಪ್ಯಾರಾ ಶೂಟಿಂಗ್)

28. ಸ್ವಪ್ನಿಲ್ ಸುರೇಶ್ ಕುಸಾಲೆ (ಶೂಟಿಂಗ್)

29. ಸರಬ್ಜೋತ್ ಸಿಂಗ್ (ಶೂಟಿಂಗ್)

30. ಅಭಯ್ ಸಿಂಗ್ (ಸ್ಕ್ವಾಷ್)

31. ಸಜನ್ ಪ್ರಕಾಶ್ (ಈಜು)

32. ಅಮನ್ (ಕುಸ್ತಿ)

ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿ (ಜೀವಮಾನ)

1. ಸುಚಾ ಸಿಂಗ್ (ಅಥ್ಲೆಟಿಕ್ಸ್)

2. ಮುರಳಿಕಾಂತ್ ರಾಜಾರಾಂ ಪೇಟ್ಕರ್ (ಪ್ಯಾರಾ-ಈಜು)

ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ)

1. ಸುಭಾಷ್ ರಾಣಾ (ಪ್ಯಾರಾ-ಶೂಟಿಂಗ್)

2. ದೀಪಾಲಿ ದೇಶಪಾಂಡೆ (ಶೂಟಿಂಗ್)

3. ಸಂದೀಪ್ ಸಾಂಗ್ವಾನ್ (ಹಾಕಿ)

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ವಿಭಾಗ)

1. ಎಸ್. ಮುರಳೀಧರನ್ (ಬ್ಯಾಡ್ಮಿಂಟನ್)

2. ಅರ್ಮಾಂಡೊ ಆಗ್ನೆಲ್ಲೊ ಕೊಲಾಕೊ (ಫುಟ್‌ಬಾಲ್)

ರಾಷ್ಟ್ರೀಯ ಕ್ರೀಡಾ ಪ್ರಚಾರ ಪ್ರಶಸ್ತಿ

1. ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ

ಮೌಲಾನಾ ಅಬುಲ್ ಕಲಾಂ ಆಜಾದ್ (MAKA) ಟ್ರೋಫಿ 2024

1 ಚಂಡೀಗಢ ವಿಶ್ವವಿದ್ಯಾಲಯ (ವಿಜೇತ ವಿಶ್ವವಿದ್ಯಾಲಯ)

2. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, (1ನೇ ರನ್ನರ್ ಅಪ್ ವಿಶ್ವವಿದ್ಯಾಲಯ)

3. ಗುರುನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ (2ನೇ ರನ್ನರ್ ಅಪ್ ವಿಶ್ವವಿದ್ಯಾಲಯ)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.