ಕನ್ನಡ ಸುದ್ದಿ  /  Sports  /  Miw Vs Ggw: Mumbai Indians Seal Playoff Berth With Big Win Over Gujarat Giants

MIW vs GGW: ಐದಕ್ಕೆ ಐದೂ ಗೆಲುವು ದಾಖಲಿಸಿದ ಮುಂಬೈ; ಪ್ಲೇ ಆಫ್​ ಟಿಕೆಟ್​ ಕನ್ಫರ್ಮ್​​​.!

MIW vs GGW: ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಪಂದ್ಯ ಪಂದ್ಯಕ್ಕೂ ಆಲ್​​ರೌಂಡ್​​ ಪ್ರದರ್ಶನ ನೀಡುತ್ತಿರುವ ಮುಂಬೈ, ಪ್ಲೇ ಆಫ್​​​​​​​​​ನತ್ತ ಹೆಜ್ಜೆ ಹಾಕಿದೆ. ಸೋಮವಾರ ರಾತ್ರಿ ನಡೆದ ಲೀಗ್​​ನ 12ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ ಮತ್ತೊಂದು ಅಮೋಘ ಗೆಲುವು ಸಾಧಿಸಿದೆ.

ಗೆಲುವಿನ ಸಂಭ್ರಮದಲ್ಲಿ ಮುಂಬೈ ಆಟಗಾರ್ತಿಯರು
ಗೆಲುವಿನ ಸಂಭ್ರಮದಲ್ಲಿ ಮುಂಬೈ ಆಟಗಾರ್ತಿಯರು (WPL/Twitter)

ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಮುಂಬೈ ಇಂಡಿಯನ್ಸ್​ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಟೂರ್ನಿಯಲ್ಲಿ ಆಡಿದ ಐದೂ ಪಂದ್ಯಗಳನ್ನೂ ಗೆದ್ದು ಬೀಗಿದೆ. ಪಂದ್ಯ ಪಂದ್ಯಕ್ಕೂ ಆಲ್​​ರೌಂಡ್​​ ಪ್ರದರ್ಶನ ನೀಡುತ್ತಿರುವ ಮುಂಬೈ, ಪ್ಲೇ ಆಫ್​​​​​​​​​ನತ್ತ ಹೆಜ್ಜೆ ಹಾಕಿದೆ. ಸೋಮವಾರ ರಾತ್ರಿ ನಡೆದ ಲೀಗ್​​ನ 12ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ ಮತ್ತೊಂದು ಅಮೋಘ ಗೆಲುವು ಸಾಧಿಸಿದೆ.

ಮುಂಬೈನ ಬ್ರಬೋರ್ನ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್​ ನೇತೃತ್ವದ ತಂಡ 55 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಜಿದ್ದಿನ ಫೈಟ್​ ನೀಡುವ ಲೆಕ್ಕಾಚಾರ ಹಾಕಿಕೊಂಡಿದ್ದ ಗುಜರಾತ್​​ಗೆ, ಮುಂಬೈ ಎಲ್ಲವನ್ನೂ ಉಲ್ಟಾ ಮಾಡಿಬಿಟ್ಟಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಪಲ್ಟಾನ್ಸ್​​​​​ ಪರ ನಾಯಕಿ ಹರ್ಮನ್​ಪ್ರೀತ್ ಕೌರ್ (51) ಸ್ಪೋಟಕ ಅರ್ಧಶತಕ ಬಾರಿಸಿ ಮತ್ತೆ ಮಿಂಚಿದರೆ, ಯಾಸ್ತಿಕಾ ಭಾಟಿಯಾ (44), ನಟಾಲಿ ಸೀವರ್ (36) ಸಾಥ್​ ನೀಡಿದರು. ಹೀಲಿ ಮ್ಯಾಥ್ಯೂಸ್​ ನಿರಾಸೆ ಮೂಡಿಸಿದರೆ, ಅಮೇಲಿಯಾ ಕೇರ್​, ಇಸಿ ವಾಂಗ್​ ಯಾರೂ ಸಹ ಅಬ್ಬರಿಸಲಿಲ್ಲ. ಟಾಪ್​ ಆರ್ಡರ್​​ ಬ್ಯಾಟರ್​​​ಗಳು ಅಬ್ಬರಿಸಿದರೆ, ಮಧ್ಯಮ ಕ್ರಮಾಂಕದ ಆಟಗಾರರು ದೊಡ್ಡ ಪೇರಿಸುವಲ್ಲಿ ವಿಫಲರಾದರು.

ಆ್ಯಶ್ಲೆ ಗಾರ್ಡ್ನರ್​​​​ 3 ವಿಕೆಟ್​​​​ ಪಡೆದು ಮುಂಬೈ ರನ್​ ವೇಗಕ್ಕೆ ಕಡಿವಾಣ ಹಾಕಿದರು. ಕಿಮ್​ ಗಾರ್ತ್​​, ಸ್ನೇಹ್​ ರಾಣಾ, ತನುಜ ಕನ್ವರ್​​ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಮುಂಬೈ ಇಂಡಿಯನ್ಸ್​ ವಿಕೆಟ್ ನಷ್ಟಕ್ಕೆ 162 ರನ್​​​ಗಳ​ ಸವಾಲಿನ ಮೊತ್ತವನ್ನೇ ಕಲೆ ಹಾಕಿತು.

ಈ ಗುರಿ ಬೆನ್ನತ್ತುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಗುಜರಾತ್​ ಜೈಂಟ್ಸ್​​​, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲೇ ಇಲ್ಲ. ಇನ್ನಿಂಗ್ಸ್​ ಆರಂಭದ ಮೊದಲ ಎಸೆತದಲ್ಲೇ ಡೇಂಜರಸ್​ ಸೋಫಿಯಾ ಡಂಕ್ಲಿ (0), ಔಟಾಗಿ ತಂಡದ ಹಿನ್ನಡೆಗೆ ಭಾರೀ ಕಾರಣರಾದರು. ಆಘಾತದ ನಡುವೆಯೂ ಬ್ಯಾಟರ್​​​​ಗಳು ಚೇತರಿಕೆ ನೀಡುವಲ್ಲಿ ವಿಫಲರಾದರು. ಸಬ್ಬಿನೇನಿ ಮೇಘನಾ (16), ಹರ್ಲೀನ್​ ಡಿಯೋಲ್​ (22), ಸದರ್ಲ್ಯಾಂಡ್​​​ (0), ಆ್ಯಶ್ಲೆ ಗಾರ್ಡ್ನರ್​​​​​ (8), ದಯಾಲನ್​ ಹೇಮಲತಾ (6), ನಾಯಕಿ ಸ್ನೆಹ್​ ರಾಣಾ (20) ಹೀಗೆ ಮುಂಬೈ ಬೌಲರ್​​​ಗಳ ಅಬ್ಬರದ ಮುಂದೆ ಯಾರೊಬ್ಬರೂ ಕ್ರೀಸ್​​​ ಕಚ್ಚಿ ನಿಲ್ಲುವ ಪ್ರಯತ್ನಕ್ಕೆ ಮುಂದಾಗಲಿಲ್ಲ.

ಬ್ಯಾಟಿಂಗ್​​ನಲ್ಲೂ​​ ಅದ್ಭುತ ಕೊಡುಗೆ ನೀಡಿದ ನಟಾಲಿ ಸೀವರ್​ ಮತ್ತು ಬೌಲಿಂಗ್​​ನಲ್ಲಿ ಅಬ್ಬರಿಸಿದ ಹೀಲಿ ಮ್ಯಾಥ್ಯೂಸ್​​​ ತಲಾ 3 ವಿಕೆಟ್​ ಪಡೆದು ಮಿಂಚಿದರು. ಅಮೇಲಿಯಾ ಕೇರ್​​ 2 ಮತ್ತು ಇಸೀ ವಾಂಗ್​ 1 ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ನಿಗದಿತ 20 ಓವರ್​​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 109 ರನ್​ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 55 ರನ್​ಗಳಿಂದ ಮುಂಬೈಗೆ ಶರಣಾಯಿತು.

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸುಷ್ಮಾ ವರ್ಮಾ, ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ ರಾಣಾ (ನಾಯಕಿ), ಮಾನ್ಸಿ ಜೋಶಿ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.